ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ರಿಷಭ್ ಪಂತ್ ಅವರನ್ನು ಒಂದು ಪಂದ್ಯದ ಮಟ್ಟಿಗೆ ಬಿಸಿಸಿಐ ನಿಷೇಧಿಸಿದೆ. ಇದು ಡೆಲ್ಲಿ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಹೌದು, ಡೆಲ್ಲಿ ತಂಡವು ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಳ್ಳಬೇಕಿದ್ದರೇ, ಪಂತ್ ಉಪಸ್ಥಿತಿ ಅನಿವಾರ್ಯ ಎನಿಸಿದೆ.
ಬೆಂಗಳೂರು: 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪ್ಲೇ ಆಫ್‌ಗೇರಲು ಸಾಕಷ್ಟು ಹೋರಾಟ ನಡೆಸುತ್ತಿದೆ. ಮೇ 12ರಂದು ಬೆಂಗಳೂರಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆರ್‌ಸಿಬಿ ಎದುರು ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾಗಿದೆ. ಆರ್‌ಸಿಬಿ ಎದುರಿನ ಸೋಲು/ಗೆಲುವು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ಲೇ ಆಫ್ ಹಣೆಬರಹವನ್ನು ನಿರ್ಧರಿಸಲಿದೆ.
ಹೀಗಿರುವಾಗಲೇ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ರಿಷಭ್ ಪಂತ್ ಅವರನ್ನು ಒಂದು ಪಂದ್ಯದ ಮಟ್ಟಿಗೆ ಬಿಸಿಸಿಐ ನಿಷೇಧಿಸಿದೆ. ಇದು ಡೆಲ್ಲಿ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಹೌದು, ಡೆಲ್ಲಿ ತಂಡವು ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಳ್ಳಬೇಕಿದ್ದರೇ, ಪಂತ್ ಉಪಸ್ಥಿತಿ ಅನಿವಾರ್ಯ ಎನಿಸಿದೆ. ಸದ್ಯ ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 12 ಪಂದ್ಯಗಳನ್ನಾಡಿ ತಲಾ 6 ಗೆಲುವು ಹಾಗೂ ಸೋಲು ಸಹಿತ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.
undefined
ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 17ನೇ ಆವೃತ್ತಿಯ ಐಪಿಎಲ್ ಟೂರ್ನಿಯ 56ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು ನಿಧಾನಗತಿಯ ಬೌಲಿಂಗ್ ಮಾಡುವ ಮೂಲಕ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿತ್ತು. ಹೀಗಾಗಿ ಟೂರ್ನಿಯಲ್ಲಿ ಪಂತ್ ಪಡೆ ಮೂರನೇ ಇದೇ ತಪ್ಪು ಮಾಡಿದ್ದರಿಂದ ನಾಯಕ ರಿಷಭ್ ಪಂತ್‌ಗೆ 30 ಲಕ್ಷ ರುಪಾಯಿ ದಂಡ ಹಾಗೂ ಒಂದು ಪಂದ್ಯದ ಮಟ್ಟಿಗೆ ನಿಷೇಧ ಹೇರಲಾಗಿದೆ.
IPL Breaking: ಬ್ಯಾನ್ ಆಗುವ ಭೀತಿಯಲ್ಲಿದ್ದಾರೆ ಈ ಐವರು ಕ್ರಿಕೆಟಿಗರು...!
"ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ 17ನೇ ಆವೃತ್ತಿಯ ಐಪಿಎಲ್ ಟೂರ್ನಿಯ 56ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಿಧಾಗತಿಯಲ್ಲಿ ಬೌಲಿಂಗ್ ಮಾಡುವ ಮೂಲಕ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದೆ. ಹೀಗಾಗಿ ಪಂತ್‌ಗೆ ದಂಡ ಹಾಗೂ ನಿಷೇಧದ ಶಿಕ್ಷೆ ವಿಧಿಸಲಾಗಿದೆ" ಎಂದು ಐಪಿಎಲ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
JUST IN🚨🚨
Rishabh Pant has been suspended for one match and fined INR 30 Lakh for DC's over-rate offence in the match against RR. pic.twitter.com/lwjwQ1goWM
"ಇದು ಡೆಲ್ಲಿ ಕ್ಯಾಪಿಟಲ್ಸ್ ತಂಡವು ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮೂರನೇ ಬಾರಿಗೆ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದರಿಂದ ನಾಯಕ ರಿಷಭ್ ಪಂತ್‌ಗೆ 30 ಲಕ್ಷ ರುಪಾಯಿ ದಂಡ ಹಾಗೂ ಒಂದು ಪಂದ್ಯದ ಮಟ್ಟಿಗೆ ನಿಷೇಧ ಹೇರಲಾಗಿದೆ. ಇದೇ ವೇಳೆ ಇಂಪ್ಯಾಕ್ಟ್ ಆಟಗಾರ ಸೇರಿದಂತೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಡುವ ಹನ್ನೊಂದರ ಬಳಗದ ಪ್ರತಿಯೊಬ್ಬ ಆಟಗಾರರಿಗೆ 12 ಲಕ್ಷ ರುಪಾಯಿ/ ಪಂದ್ಯದ ಸಂಭಾವನೆಯ 50% ಇವುಗಳಲ್ಲಿ ಯಾವುದು ಕಡಿಮೆಯೋ ಅಷ್ಟನ್ನು ದಂಡದ ರೂಪದಲ್ಲಿ ತೆರಬೇಕು" ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಬ್ಯಾನ್ ಆಗುವುದರಿಂದ ಕೊನೆ ಕ್ಷಣದಲ್ಲಿ ಬಚಾವಾದ ರಿಷಭ್ ಪಂತ್..! ಆದರೂ ಆತಂಕ ತಪ್ಪಿದ್ದಲ್ಲ
ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 8ರ ಪ್ರಕಾರ, ಮ್ಯಾಚ್ ರೆಫ್ರಿ ತೀರ್ಮಾನ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಅದರಂತೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಬಿಸಿಸಿಐ ಓಂಬಡ್ಸ್‌ಮನ್ ಬಳಿ ಮೇಲ್ಮನವಿ ಸಲ್ಲಿಸಿತ್ತು. ಇದಾದ ಬಳಿಕ ಬಿಸಿಸಿಐ ಓಂಬಡ್ಸ್‌ಮನ್ ವರ್ಚುವಲ್ ಮಾತುಕತೆ ನಡೆಸಿದ ಬಳಿಕ ಮ್ಯಾಚ್ ರೆಫ್ರಿ ತೀರ್ಮಾನವನ್ನು ಎತ್ತಿಹಿಡಿಯಿತು" ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಮೊದಲು ಡೆಲ್ಲಿ ಕ್ಯಾಪಿಟಲ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ಎದುರು ನಿಧಾನಗತಿಯ ಬೌಲಿಂಗ್ ಮಾಡಿತ್ತು. ಆಗ ನಾಯಕ ಪಂತ್ 12 ಲಕ್ಷ ರುಪಾಯಿ ದಂಡ ತೆತ್ತಿದ್ದರು. ಇದಾದ ಬಳಿಕ ಏಪ್ರಿಲ್ 04ರಂದು ವೈಜಾಗ್‌ನಲ್ಲಿ ನಡೆದ ಕೋಲ್ಕತಾ ನೈಟ್ ರೈಡರ್ಸ್ ಎದುರಿನ ಪಂದ್ಯದ ವೇಳೆ ಎರಡನೇ ಬಾರಿಗೆ ನಿಧಾನಗತಿಯ ಬೌಲಿಂಗ್ ಮಾಡಿದ ತಪ್ಪಿಗೆ 24 ಲಕ್ಷ ರುಪಾಯಿ ದಂಡ ಕಟ್ಟಿದ್ದರು.