ಈ ಸಲ ಐಪಿಎಲ್‌ನಲ್ಲಿ ಬ್ಯಾಟರ್‌ಗಳ ಆರ್ಭಟ: ಬೌಲರ್‌ಗಳು ಧೂಳೀಪಟ..!

By Suvarna News  |  First Published May 11, 2024, 3:03 PM IST

ಈ ಸಲದ IPLನಲ್ಲಿ ಬ್ಯಾಟರ್ಗಳು ರನ್ ಹೊಳೆಯನ್ನೇ ಹರಿಸ್ತಿದ್ದಾರೆ. ಯಾವುದೇ ಪಿಚ್ ಇರ್ಲಿ ಬ್ಯಾಟರ್ಗಳ ಮಾತ್ರ ಆರ್ಭಟಿಸುತ್ತಲೇ ಇದ್ದಾರೆ. ಅದರಲ್ಲೂ ಪವರ್ ಪ್ಲೇನಲ್ಲಿ ಬೌಂಡ್ರಿ-ಸಿಕ್ಸರ್ ಸುರಿಮಳೆಯಾಗ್ತಿವೆ. ಆರಂಭದಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ಬ್ಯಾಟರ್‌ಗಳು ಪವರ್ ಪ್ಲೇನಲ್ಲಿ ರನ್ ಹೊಡೆಯೋದನ್ನ ಕಲಿಸಿದ್ರು. ಉಳಿದ ಟೀಮ್ ಬ್ಯಾಟರ್ಸ್ ಅದನ್ನ ಕಂಟ್ಯೂನ್ಯೂ ಮಾಡ್ತಿದ್ದಾರೆ ಅಷ್ಟೆ.


ಬೆಂಗಳೂರು: ಈ ಸೀಸನ್ ಐಪಿಎಲ್‌ನಲ್ಲಿ ಬೌಲರ್‌ಗಳ ಎದುರು ಬ್ಯಾಟರ್ಸ್ ಆರ್ಭಟ ಜೋರಾಗಿದೆ. ಅದರಲ್ಲೂ ಪವರ್ ಪ್ಲೇನಲ್ಲಿ ಪವರ್ ಫುಲ್ ಬ್ಯಾಟಿಂಗ್ ಮಾಡ್ತಿದ್ದಾರೆ. ಕೆಲವರು ಬಿಗ್ ಇನ್ನಿಂಗ್ಸ್ ಆಡಿದ್ರೆ, ಇನ್ನು ಕೆಲವರು ಚಿಕ್ಕ ಚಿಕ್ಕ ಇನ್ನಿಂಗ್ಸ್ ಆಡಿ ಬೌಲರ್‌ಗಳಿಗೆ ಮಾರಕರಾಗಿದ್ದಾರೆ. 200ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟಿಂಗ್ ಮಾಡಿ ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದ್ದಾರೆ.

200ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್, ಬೌಲರ್ಸ್ ಧೂಳಿಪಟ..!

Tap to resize

Latest Videos

ಈ ಸಲದ IPLನಲ್ಲಿ ಬ್ಯಾಟರ್ಗಳು ರನ್ ಹೊಳೆಯನ್ನೇ ಹರಿಸ್ತಿದ್ದಾರೆ. ಯಾವುದೇ ಪಿಚ್ ಇರ್ಲಿ ಬ್ಯಾಟರ್ಗಳ ಮಾತ್ರ ಆರ್ಭಟಿಸುತ್ತಲೇ ಇದ್ದಾರೆ. ಅದರಲ್ಲೂ ಪವರ್ ಪ್ಲೇನಲ್ಲಿ ಬೌಂಡ್ರಿ-ಸಿಕ್ಸರ್ ಸುರಿಮಳೆಯಾಗ್ತಿವೆ. ಆರಂಭದಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ಬ್ಯಾಟರ್‌ಗಳು ಪವರ್ ಪ್ಲೇನಲ್ಲಿ ರನ್ ಹೊಡೆಯೋದನ್ನ ಕಲಿಸಿದ್ರು. ಉಳಿದ ಟೀಮ್ ಬ್ಯಾಟರ್ಸ್ ಅದನ್ನ ಕಂಟ್ಯೂನ್ಯೂ ಮಾಡ್ತಿದ್ದಾರೆ ಅಷ್ಟೆ. ಈ ಸೀಸನ್ನಲ್ಲಿ ಕೆಲ ಬ್ಯಾಟರ್ಸ್ 200 ಪ್ಲಸ್ ಸ್ಟ್ರೈಕ್ರೇಟ್ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. 200ರ ಸ್ಟ್ರೈಕ್ರೇಟ್ ಕನಿಷ್ಟ ನೂರು ರನ್ ಹೊಡೆದವರ ಆಟಗಾರರು ಇಲ್ಲಿದ್ದಾರೆ ನೋಡಿ.

ಜಾಕ್ ಫ್ರೇಸರ್ ಮ್ಯಾಕ್ಗರ್ಕ್ ಸ್ಟ್ರೇಕ್ರೇಟ್ 235

ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿರುವ ಆಸ್ಟ್ರೇಲಿಯಾ ಓಪನರ್ ಜಾಕ್ ಫ್ರೇಸರ್ ಮ್ಯಾಕ್ಗರ್ಕ್, ಈ ಸೀಸನ್ ಐಪಿಎಲ್ನಲ್ಲಿ ಬೌಲರ್ಗಳ ಪಾಲಿಗೆ ನಿಜಕ್ಕೂ ಸಿಂಹಸ್ವಪ್ನವಾಗಿ ಕಾಡ್ತಿದ್ದಾರೆ. 7 ಮ್ಯಾಚ್ನಲ್ಲಿ 235ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟಿಂಗ್ ಮಾಡಿ, 309 ರನ್ ಕೊಳ್ಳೆ ಹೊಡೆದಿದ್ದಾರೆ. ಮೂರು ಹಾಫ್ ಸೆಂಚುರಿಗಳನ್ನೂ ಬಾರಿಸಿದ್ದಾರೆ. ಮೊದಲ ಬಾಲ್ನಿಂದಲೇ ಚಾರ್ಜ್ ಮಾಡೋದು ಇವರ ಗುಣ. ಪ್ರತಿ ಬಾಲನ್ನು ಬೌಂಡ್ರಿ-ಸಿಕ್ಸರ್ ಹೊಡೆಯಲು ಯತ್ನಿಸುತ್ತಾರೆ. ಅದರಲ್ಲಿ ಸಕ್ಸಸ್ ಸಹ ಆಗಿದ್ದಾರೆ. ಹಾಗಾಗಿ ಈ ಸಲದ ಐಪಿಎಲ್ನಲ್ಲಿ ಗರಿಷ್ಠ 100 ರನ್ ಹೊಡೆದು, ಗರಿಷ್ಠ ಸ್ಟ್ರೇಕ್ರೇಟ್ ಹೊಂದಿರುವ ಆಟಗಾರರ ಲಿಸ್ಟ್ನಲ್ಲಿ ಟಾಪ್ನಲ್ಲಿದ್ದಾರೆ.

ನಾಯಕತ್ವ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಈ ಮೂವರು ಕ್ಯಾಪ್ಟನ್ಸ್..!

224ರ ಸ್ಟ್ರೈಕ್ರೇಟ್ನಲ್ಲಿ ಧೋನಿ ಬ್ಯಾಟಿಂಗ್ 

ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ನಾಯಕ ಎಂ ಎಸ್ ಧೋನಿ, ಆರಂಭದ 9 ಇನ್ನಿಂಗ್ಸ್ನಲ್ಲಿ 7 ಇನ್ನಿಂಗ್ಸ್ನಲ್ಲಿ ಔಟಾಗದೆ ಉಳಿದಿದ್ದಾರೆ. ಮಹಿ 42ನೇ ವಯಸ್ಸಿನಲ್ಲಿ 224ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟಿಂಗ್ ಮಾಡಿ, 110 ರನ್ ಹೊಡೆದಿದ್ದಾರೆ. ಒಂದೂ ಅರ್ಧಶತಕ ಹೊಡೆದಿಲ್ಲ. ಅವರ ಗರಿಷ್ಠ ಸ್ಕೋರ್ 37. ಆದ್ರೆ ಕೊನೆ ಎರಡು ಓವರ್ನಲ್ಲಿ ಬ್ಯಾಟಿಂಗ್ ಮಾಡಿರುವ ಧೋನಿ, 37, 20, 28 ಹೀಗೆ ಚಿಕ್ಕ ಚಿಕ್ಕ ಇನ್ನಿಂಗ್ಸ್ ಆಡಿದ್ದು, ಕಮ್ಮಿ ಬಾಲ್ನಲ್ಲಿ ಈ ರನ್ ಬಂದಿವೆ. ಹಾಗಾಗಿ ಅವರ ಸ್ಟ್ರೈಕ್ರೇಟ್ ಬರೋಬ್ಬರಿ 224 ಇದೆ.

ಹೆಡ್ನಿಂದ ಕಲಿತು, ಹೆಡ್ನನ್ನೇ ಮೀರಿಸಿದ ಅಭಿ..!

ಸನ್ ರೈಸರ್ಸ್ ಹೈದ್ರಾಬಾದ್ ತಂಡ ಈ ಸಲ ಐಪಿಎಲ್ನಲ್ಲಿ ಪವರ್ ಪ್ಲೇನಲ್ಲಿ ಹೆಚ್ಚು ರನ್ ಹೊಡೆದ ದಾಖಲೆ ಬರೆದಿದೆ. ಅದಕ್ಕೆ ಕಾರಣ ಟ್ರಾವಿಸ್ ಹೆಡ್. ಆದ್ರೆ ಇದೇ ಹೆಡ್ ನೋಡಿ ಹೊಡಿಬಡಿ ಆಟ ಕಲಿತ ಅಭಿಷೇಕ್ ಶರ್ಮಾ, ಈಗ ಹೆಡ್ಗಿಂತ ಹೆಚ್ಚು ಸ್ಟ್ರೈಕ್ರೇಟ್ ಹೊಂದಿದ್ದಾರೆ. ಓಪನರ್ ಅಭಿಷೇಕ್, 12 ಪಂದ್ಯಗಳಿಂದ 205ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟಿಂಗ್ ಮಾಡಿ, 401 ರನ್ ಬಾರಿಸಿದ್ದಾರೆ. 2 ಅರ್ಧಶತಕ ದಾಖಲಿಸಿದ್ದಾರೆ. ಆದ್ರೆ ಹೆಚ್ಚು ಚಿಕ್ಕ ಚಿಕ್ಕ ಇನ್ನಿಂಗ್ಸ್ ಆಡಿ ಹೈದ್ರಾಬಾದ್‌ಗೆ ನೆರವಾಗಿದ್ದಾರೆ.

RCB ಪ್ಲೇ ಆಫ್ ಮಾತ್ರವಲ್ಲ 3ನೇ ಸ್ಥಾನಕ್ಕೂ ಲಗ್ಗೆಯಿಡಬಹುದು..! ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಡೀಟೈಲ್ಸ್

ಟ್ರಾವಿಸ್ ಹೆಡ್ 201 ಸ್ಟ್ರೈಕ್ರೇಟ್

ಹೈದ್ರಾಬಾದ್ ಓಪನರ್ ಟ್ರಾವಿಸ್ ಹೆಡ್, ಈ ಸಲದ ಐಪಿಎಲ್ನಲ್ಲಿ ಹೊಡಿಬಡಿ ಆಟಕ್ಕೆ ಮುನ್ನುಡಿ ಬರೆದವರು. ಹೆಡ್, 11 ಪಂದ್ಯಗಳಿಂದ 201ರ ಸ್ಟ್ರೈಕ್ರೇಟ್ನಲ್ಲಿ 533 ರನ್ ಕೊಳ್ಳೆ ಹೊಡೆದಿದ್ದಾರೆ. 1 ಶತಕ, 4 ಅರ್ಧಶತಕಗಳಿವೆ. ಪವರ್ ಪ್ಲೇನಲ್ಲಿ ಪವರ್ ಫುಲ್ ಬ್ಯಾಟಿಂಗ್ ಮಾಡುವ ಟ್ರಾವಿಸ್, ಬರೀ ಬೌಂಡ್ರಿ-ಸಿಕ್ಸರ್ಗಳನ್ನ ಸಿಡಿಸ್ತಾರೆ. ಮೊನ್ನೆ ಲಕ್ನೋ ತಂಡವನ್ನ ಧೂಳಿಪಟ ಮಾಡಿದ್ದು ಇದೇ ಅಭಿ ಮತ್ತು ಹೆಡ್.

ಸ್ಟ್ರೈಕ್‌ರೇಟ್‌ನಲ್ಲಿ ಸಿಂಗ್ ಈಸ್ ಕಿಂಗ್

ಕೋಲ್ಕತಾ ನೈಟ್ ರೈಡರ್ಸ್‌ ತಂಡ ಪಾಯಿಂಟ್ ಟೇಬಲ್ನಲ್ಲಿ ಟಾಪ್ನಲ್ಲಿದೆ. ಇದಕ್ಕೆ ರಮಣ್ದೀಪ್ ಸಿಂಗ್ ಕೊಡುಗೆಯೂ ಇದೆ. 11 ಪಂದ್ಯಗಳಲ್ಲಿ 8 ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡಿರುವ ಸಿಂಗ್, 4ರಲ್ಲಿ ನಾಟೌಟ್. 200ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟಿಂಗ್ ಮಾಡಿ, 108 ರನ್ ಹೊಡೆದಿದ್ದಾರೆ. ಟಾಪ್ ಆರ್ಡರ್ ಬ್ಯಾಟರ್ಸ್, ಉತ್ತಮವಾಗಿ ಆಡುತ್ತಿರುವುದರಿಂದ ಸಿಂಗ್‌ಗೆ ಹೆಚ್ಚಾಗಿ ಬ್ಯಾಟಿಂಗ್ ಮಾಡಲು ಅವಕಾಶ ಸಿಕ್ಕಿಲ್ಲ. ಹಾಗಾಗಿ ಚಿಕ್ಕ ಚಿಕ್ಕ ಇನ್ನಿಂಗ್ಸ್ನಲ್ಲಿ ಭರ್ಜರಿಯಾಗಿ ಬ್ಯಾಟಿಂಗ್ ಮಾಡಿದ್ದಾರೆ. ಒಟ್ನಲ್ಲಿ ಟಿ20 ಕ್ರಿಕೆಟ್ನಲ್ಲಿ 200ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟಿಂಗ್ ಮಾಡಬಹುದು ಅನ್ನೋದನ್ನ ಈ ಐವರು ತೋರಿಸಿಕೊಟ್ಟಿದ್ದಾರೆ. ಐವರಲ್ಲಿ ಮೂವರು ಭಾರತೀಯರು ಇರುವುದು ವಿಶೇಷ.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್

click me!