ಕ್ರಿಕೆಟ್ ಅಭಿಮಾನಿಗಳಿಗೆ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಭರಪೂರ ಮನೋರಂಜನೆ ನೀಡ್ತಿದೆ. ಅದರಲ್ಲೂ ಈ ಬಾರಿ ಬಂದಿರುವ ಹೈ ಸ್ಕೋರಿಂಗ್ ಪಂದ್ಯಗಳಲ್ಲಿ ಫೋರ್-ಸಿಕ್ಸರ್‌ಗಳ ಸುರಿಮಳೆಯೇ ಆಗಿದೆ. ಪ್ರತಿ ಪಂದ್ಯಗಳು ಕೂಡ ಜಿದ್ದಾಜಿದ್ದಿನ ಪೈಪೋಟಿಗೆ ಸಾಕ್ಷಿಯಾಗಿದ್ದು, ಕ್ಯಾಪ್ಟನ್ಸ್ ತೆಗೆದುಕೊಳ್ಳುವ ನಿರ್ಧಾರಗಳು ಅತ್ಯಂತ ಮಹತ್ವದ್ದಾಗಿರುತ್ತದೆ.
ಇಂಡಿಯನ್ ಪ್ರೀಮಿಯರ್ ಲೀಗ್. ಇಲ್ಲಿ ಯಶಸ್ಸು ಕಂಡವರಿಗಷ್ಟೇ ಬೆಲೆ. ಆಟಗಾರ ಆಗಿರಲಿ. ಕ್ಯಾಪ್ಟನ್ ಆಗಿರಲಿ.. ಸಕ್ಸಸ್ ಆಗ್ತಲೇ ಇರಬೇಕು. ಒಂದು ವರ್ಷ ವಿಫಲವಾದ್ರೂ ಅವರ ಸ್ಥಾನಕ್ಕೆ ಕುತ್ತು ಬರಲಿದೆ. ಈ ವರ್ಷ ತೀರ ಕಳಪೆ ಪ್ರದರ್ಶನ ನೀಡಿದ ಮೂರು ತಂಡದ ನಾಯಕರು, ನಾಯಕತ್ವ ಕಳೆದುಕೊಳ್ಳೋ ಭೀತಿಯಲ್ಲಿದ್ದಾರೆ. ಆ ತ್ರಿಮೂರ್ತಿಗಳು ಇವರೇ ನೋಡಿ
ಮುಂದಿನ ವರ್ಷ ಆಟಗಾರರಾಗಿಯೂ ಟೀಮ್‌ನಲ್ಲಿರೋದು ಡೌಟ್
ಕ್ರಿಕೆಟ್ ಅಭಿಮಾನಿಗಳಿಗೆ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಭರಪೂರ ಮನೋರಂಜನೆ ನೀಡ್ತಿದೆ. ಅದರಲ್ಲೂ ಈ ಬಾರಿ ಬಂದಿರುವ ಹೈ ಸ್ಕೋರಿಂಗ್ ಪಂದ್ಯಗಳಲ್ಲಿ ಫೋರ್-ಸಿಕ್ಸರ್‌ಗಳ ಸುರಿಮಳೆಯೇ ಆಗಿದೆ. ಪ್ರತಿ ಪಂದ್ಯಗಳು ಕೂಡ ಜಿದ್ದಾಜಿದ್ದಿನ ಪೈಪೋಟಿಗೆ ಸಾಕ್ಷಿಯಾಗಿದ್ದು, ಕ್ಯಾಪ್ಟನ್ಸ್ ತೆಗೆದುಕೊಳ್ಳುವ ನಿರ್ಧಾರಗಳು ಅತ್ಯಂತ ಮಹತ್ವದ್ದಾಗಿರುತ್ತದೆ. ತಂಡದ ಯಶಸ್ಸು ಮತ್ತು ವೈಫಲ್ಯದ ಹೊಣೆ ಸಂಪೂರ್ಣ ನಾಯಕನ ಮೇಲಿರುತ್ತದೆ.
ಮುಂಬೈನ ಸೋಲಿಸಿ ಅಧಿಕೃತವಾಗಿ ಪ್ಲೇ-ಆಫ್‌ಗೇರಲು ಕೋಲ್ಕತಾ ಕಾತರ!
ಐಪಿಎಲ್‌ನಲ್ಲಿ ತಂಡಗಳು ನೀಡಿರುವ ಪ್ರದರ್ಶನಗಳ ಆಧಾರದ ಮೇರೆಗೆ ಈ ಬಾರಿ ಟೂರ್ನಿ ಮುಗಿದ ಬೆನ್ನಲ್ಲೇ ಕೆಲವರು ನಾಯಕತ್ವ ಕಳೆದುಕೊಳ್ಳಲಿದ್ದಾರೆ. ಪ್ರಮುಖವಾಗಿ ಮೂರು ದೈತ್ಯ ತಂಡಗಳ ನಾಯಕರ ಮೇಲೆ ಈ ಸಲ ಭಾರಿ ಒತ್ತಡ ಎದುರಾಗಿದೆ. ಮುಂದಿನ ಐಪಿಎಲ್ ಟೂರ್ನಿಗೂ ಮುನ್ನ ಮೆಗಾ ಆಕ್ಷನ್ ನಡೆಯಲಿದೆ. ಹೀಗಾಗಿ ಬಹುತೇಕ ಎಲ್ಲ ಆಟಗಾರರನ್ನು ಹರಾಜಿಗೆ ಬಿಟ್ಟು ಹೊಸ ತಂಡಗಳನ್ನು ಕಟ್ಟಲು ಫ್ರಾಂಚೈಸಿ ಮುಂದಾಗಲಿವೆ. ಈ ಮೂರು ಟೀಮ್ಸ್, ನಾಯಕರನ್ನೂ ಹರಾಜಿಗೆ ಬಿಡಲಿದ್ದಾರೆ.
ಗಾಯಾಳುವಾಗಿಯೇ ಐಪಿಎಲ್‌ನಿಂದ ನಿರ್ಗಮಿಸ್ತಾರಾ ಧವನ್..?
ಐಪಿಎಲ್ ಇತಿಹಾಸದ ಅತ್ಯಂತ ಯಶಸ್ವಿ ಬ್ಯಾಟರ್‌ಗಳಲ್ಲಿ ಒಬ್ಬರಾಗಿರುವ ಶಿಖರ್ ಧವನ್, ಪಂಜಾಬ್ ಕಿಂಗ್ಸ್ ತಂಡದ ಕ್ಯಾಪ್ಟನ್ಸಿ ಕಳೆದುಕೊಳ್ಳುವುದು ಬಹುತೇಕ ಖಚಿತ. ಈ ಸಲ ಐದು ಪಂದ್ಯಗಳಲ್ಲಿ ಪಂಜಾಬ್ ತಂಡವನ್ನ ಲೀಡ್ ಮಾಡಿದ್ದ ಗಬ್ಬರ್ ಸಿಂಗ್, ಇಂಜುರಿಯಾಗಿ ಆಡ್ತಿಲ್ಲ. ಇಂಜುರಿ ಜೊತೆ ಮುಂದಿನ ವರ್ಷ ಐಪಿಎಲ್ ವೇಳೆಗೆ ಧವನ್‌ಗೆ 39 ವರ್ಷವಾಗಿರುತ್ತದೆ. ಫಿಟ್ನೆಸ್ ಮತ್ತು ಫಾರ್ಮ್ ದೃಷ್ಟಿಯಿಂದ ಶಿಖರ್ ಅವರನ್ನ ಕೈ ಬಿಡುವ ಸಾಧ್ಯತೆ ದಟ್ಟವಾಗಿದೆ. ಕಳೆದ ವರ್ಷ ಐಪಿಎಲ್ ಬಳಿಕ ಧವನ್ ಆಡ್ತಿರೋದು ಈ ಸಲ ಐಪಿಎಲ್‌ನಲ್ಲಿ ಮಾತ್ರ. ಈ ಮಧ್ಯೆ ಡೊಮೆಸ್ಟಿಕ್ ಕ್ರಿಕೆಟ್ ಸಹ ಆಡಿಲ್ಲ. ಪಂಜಾಬ್ ಕಿಂಗ್ಸ್ ಕೈ ಬಿಡುವುದಕ್ಕೂ ಮುನ್ನವೇ ಗಬ್ಬರ್ ಸಿಂಗ್ ಕ್ರಿಕೆಟ್ನಿಂದ ನಿವೃತ್ತಿಯಾದ್ರೂ ಆಶ್ವರ್ಯವಿಲ್ಲ.
RCB ಪ್ಲೇ ಆಫ್ ಮಾತ್ರವಲ್ಲ 3ನೇ ಸ್ಥಾನಕ್ಕೂ ಲಗ್ಗೆಯಿಡಬಹುದು..! ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಡೀಟೈಲ್ಸ್
ಫಾಫ್ ಡು ಪ್ಲೆಸಿಸ್ ಫಿಟ್ ಇದ್ದರೂ ಫಾರ್ಮ್ ಇಲ್ಲ, ವಯಸ್ಸೂ ಇಲ್ಲ..!
ದಕ್ಷಿಣ ಆಪ್ರಿಕಾದ ಫಾಫ್ ಡು ಪ್ಲೆಸಿಸ್, ಕಳೆದ ಮೂರು ವರ್ಷದಿಂದ RCB ತಂಡವನ್ನು ಮುನ್ನಡೆಸುತ್ತಿದ್ದಾರೆ. ಆದರೆ, ತಂಡಕ್ಕೆ ಟ್ರೋಫಿ ಗೆದ್ದುಕೊಡಲು ಸಾಧ್ಯವಾಗಿಲ್ಲ. 2022ರಲ್ಲಿ ಪ್ಲೇ ಆಫ್‌ಗೆ ಮುನ್ನಡೆಸಿದ್ದಷ್ಟೇ ಫಾಫ್ ಕ್ಯಾಪ್ಟನ್ಸಿಯಲ್ಲಿ ಸಿಕ್ಕ ಯಶಸ್ಸು. ಇನ್ನು ವೈಯಕ್ತಿಕವಾಗಿಯೂ ಫಾಫ್ ಉತ್ತಮ ಪ್ರದರ್ಶನ ನೀಡಿಲ್ಲ. ಅವರಿಂದ ಬಂದಿರುವುದು ಜಸ್ಟ್ ಮೂರು ಹಾಫ್ ಸೆಂಚುರಿ ಮಾತ್ರ. ಮಹತ್ವದ ಪಂದ್ಯಗಳಲ್ಲಿ ಕೈ ಕೊಟ್ಟಿದ್ದಾರೆ. ಸತತ ಸೋಲುಗಳನ್ನ ಕಂಡ RCBಯನ್ನ ಗೆಲುವಿನತ್ತ ಮುಖ ಮಾಡಿಸಲು ಅವರಿಂದ ಆಗಲಿಲ್ಲ. ಹೀಗಾಗಿ RCB ತಂಡದಲ್ಲಿ ಫಾಫ್ ಕ್ಯಾಪ್ಟನ್ಸಿಗೆ ಇದೇ ಕಡೇ ಆವೃತ್ತಿ ಆಗುವ ಸಾಧ್ಯತೆ ಇದೆ.
ಸಹ ಆಟಗಾರರ ವಿರೋಧ, ಪಾಂಡ್ಯಗೆ ಕ್ಯಾಪ್ಟನ್ಸಿ ಕುತ್ತು..?
ಐದು ಐಪಿಎಲ್ ಟ್ರೋಫಿ ಗೆಲ್ಲಿಸಿಕೊಟ್ಟ ಯಶಸ್ವಿ ನಾಯಕ ರೋಹಿತ್ ಶರ್ಮಾ ಅವರನ್ನ ಹಠಾತ್ತನೆ ಕೆಳಗಿಳಿಸಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಗೆ ಕ್ಯಾಪ್ಟನ್ಸಿ ಕೊಟ್ಟಿದ್ದೇ ಮುಂಬೈ ಇಂಡಿಯನ್ಸ್‌ಗೆ ಮುಳುವಾಯಿತು. ಐದು ಬಾರಿಯ ಚಾಂಪಿಯನ್ಸ್ ಮುಂಬೈ, ಈ ಬಾರಿ ಆಡಿದ 12 ಪಂದ್ಯಗಳಲ್ಲಿ ಕೇವಲ 4 ಜಯದೊಂದಿಗೆ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದು, ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಾಗಿದೆ. ಇದರ ಬೆನ್ನಲ್ಲೇ ಹಾರ್ದಿಕ್ ಕ್ಯಾಪ್ಟನ್ಸಿ ಬಗ್ಗೆ ಅಸಮಾಧಾನದ ಅಲೆ ಎದ್ದಿದೆ. ಪಾಂಡ್ಯ ತೆಗೆದುಕೊಂಡ ಹಲವು ನಿರ್ಧಾರಗಳಿಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಮುಂದಿನ ಐಪಿಎಲ್ ಟೂರ್ನಿಗೆ ಕೆಲ ಸೀನಿಯರ್ ಪ್ಲೇಯರ್ಸ್ ಮುಂಬೈ ಇಂಡಿಯನ್ಸ್ ತೊರೆಯುವ ಸಾಧ್ಯತೆ ಇದ್ದು, ಪಾಂಡ್ಯ ಕ್ಯಾಪ್ಟನ್ಸಿಗೂ ಮುಂಬೈ ಫ್ರಾಂಚೈಸಿ ಅಂತ್ಯ ಹಾಡಿದರೆ ಅಚ್ಚರಿಯೇನಿಲ್ಲ.
ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್