IPL ಮಹಾಸಂಗ್ರಾಮಕ್ಕೆ ಕ್ಷಣಗಣನೆ: CSK-RCB ಮ್ಯಾಚ್‌ಗೆ ಲೋಕಲ್ ಹೀರೋ ಅಶ್ವಿನ್‌ಗೆ ಸಿಕ್ತಿಲ್ಲ ಟಿಕೆಟ್..!

By Naveen KodaseFirst Published Mar 21, 2024, 11:37 AM IST
Highlights

ಕ್ರಿಕೆಟ್ ಜಗತ್ತಿನ ಮೋಸ್ಟ್ ಕಲರ್ಫುಲ್ ಮತ್ತು ಶ್ರೀಮಂತ ಟೂರ್ನಿ IPL ಆರಂಭಕ್ಕೆ ಕೌಂಟ್ಡೌನ್ ಸ್ಟಾರ್ಟ್ ಆಗಿದೆ. ನಾಳೆಯಿಂದಲೇ IPL ಸೀಸನ್-17 ಶುರುವಾಗಲಿದೆ. 2 ತಿಂಗಳ ಕಾಲ ನಾನ್ಸ್ಟಾಪ್ ರಣರೋಚಕ ಕಾದಾಟ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾತರರಾಗಿದ್ದಾರೆ

ಚೆನ್ನೈ(ಮಾ.21): ನಾಳೆಯಿಂದ IPL ಹಂಗಾಮ ಶುರುವಾಗಲಿದೆ. ಮೊದಲ ಪಂದ್ಯದಲ್ಲಿ CSK-RCB ಮುಖಾಮುಖಿಯಾಗಲಿವೆ. ಇನ್ನು ಈ ಪಂದ್ಯದ ಕ್ರೇಝ್ ಎಷ್ಟರಮಟ್ಟಿಗೆ ಇದೆ ಅಂದ್ರೆ, ಟೀಮ್ ಇಂಡಿಯಾ ಆಟಗಾರನಿಗೆ ಟಿಕೆಟ್ ಸಿಗ್ತಿಲ್ಲ. ಈ ಆಟಗಾರ ಪ್ಲೀಸ್ ಟಿಕೆಟ್ ಕೊಡ್ಸಿ ಅಂತ ಅಭಿಮಾನಿಗಳನ್ನ  ಕೇಳಿದ್ದಾರೆ...? ಯಾರು ಆ ಆಟಗಾರ..? ಅಂತ ಹೇಳ್ತೀವಿ ಈ ಸ್ಟೋರಿ ನೋಡಿ..!

CSK-RCB ಮ್ಯಾಚ್‌ಗೆ ಸಿಕ್ಕಾಪಟ್ಟೆ ಕ್ರೇಝ್..! 

ಕ್ರಿಕೆಟ್ ಜಗತ್ತಿನ ಮೋಸ್ಟ್ ಕಲರ್ಫುಲ್ ಮತ್ತು ಶ್ರೀಮಂತ ಟೂರ್ನಿ IPL ಆರಂಭಕ್ಕೆ ಕೌಂಟ್ಡೌನ್ ಸ್ಟಾರ್ಟ್ ಆಗಿದೆ. ನಾಳೆಯಿಂದಲೇ IPL ಸೀಸನ್-17 ಶುರುವಾಗಲಿದೆ. 2 ತಿಂಗಳ ಕಾಲ ನಾನ್ಸ್ಟಾಪ್ ರಣರೋಚಕ ಕಾದಾಟ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾತರರಾಗಿದ್ದಾರೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ CSK ಮತ್ತು RCB ತಂಡಗಳು ಸೆಣಸಾಡಲಿವೆ. ಚೆನ್ನೈನ ಚೆಪಾಕ್ ಅಂಗಳ ಈ ಪಂದ್ಯಕ್ಕೆ ಸಾಕ್ಷಿಯಾಗಲಿದೆ.

ಶುಭ ಶುಕ್ರವಾರದಿಂದ ಐಪಿಎಲ್ ಕಲರವ ಶುರು: ಹಲವು ವಿಶೇಷಗಳಿಗೆ ಸಾಕ್ಷಿಯಾಗಲಿದೆ ಈ ಚುಟುಕು ಕ್ರಿಕೆಟ್ ಹಬ್ಬ..!

ಈಗಾಗ್ಲೇ RCB ಆಟಗಾರರು ಚೆನ್ನೈ ತಲುಪಿ, ಅಭ್ಯಾಸ ಆರಂಭಿಸಿದ್ದಾರೆ. ಮತ್ತೊಂದೆಡೆ ಈ ಬಿಗ್ಮ್ಯಾಚ್ ಟಿಕೆಟ್ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಆನ್ಲೈನ್ನಲ್ಲಿ ಟಿಕೆಟ್ಗಳು ಹಾಟ್‌ಕೇಕ್ ನಂತೆ ಸೋಲ್ಡ್ ಔಟ್ ಆಗಿವೆ. ಎಷ್ಟರಮಟ್ಟಿಗೆ ಅಂದ್ರೆ, ಟೀಂ ಇಂಡಿಯಾ ಆಟಗಾರ, ಚೆನ್ನೈ ಬಾಯ್ ಆರ್. ಅಶ್ವಿನ್‌ಗೇನೆ ಟಿಕೆಟ್ ಸಿಕ್ತಿಲ್ಲ. 

CSK-RCB ಮ್ಯಾಚ್ ನಡುವಿನ IPL ಆರಂಭಿಕ ಪಂದ್ಯದ ಟಿಕೆಟ್ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ನನ್ನ ಮಕ್ಕಳು ಉದ್ಘಾಟನಾ ಸಮಾರಂಭ ಮತ್ತು ಮ್ಯಾಚ್ ನೋಡಲು ಬೇಕು ಅಂತಿದ್ದಾರೆ. ಪ್ಲೀಸ್ ಯಾರಾದ್ರೂ ಸಹಾಯ ಮಾಡಿ ಅಂತ ಅಶ್ವಿನ್ ಟ್ವೀಟ್ ಮಾಡಿ, ಚೆನ್ನೈ ಸೂಪರ್ ಕಿಂಗ್ಸ್ನ ಟ್ಯಾಗ್ ಮಾಡಿದ್ದಾರೆ. 

'ದಯವಿಟ್ಟು ನನಗೆ ಹಾಗೆ ಕರೀಬೇಡಿ, ಮುಜುಗರ ಆಗುತ್ತೆ': ವಿರಾಟ್ ಕೊಹ್ಲಿ ಹೀಗಂದಿದ್ದೇಕೆ..?

ಮಹಿರಾಟ್ ಸಂಗಮ ಕಣ್ತುಂಬಿಕೊಳ್ಳಲು ಕಾತರ..! 

ಯೆಸ್, 2019ರ ನಂತರ ಚೆನ್ನೈನಲ್ಲಿ CSK- RCB  ಮ್ಯಾಚ್ ನಡೀತಿದೆ. ಇನ್ನು ಕೊಹ್ಲಿ 5 ವರ್ಷಗಳ ನಂತರ ಚೆನ್ನೈನಲ್ಲಿ ಬ್ಯಾಟ್ ಬೀಸಲು ರೆಡಿಯಾಗಿದ್ದಾರೆ. ಮತ್ತೊಂದೆಡೆ ಧೋನಿಗೆ ಇದೇ ಲಾಸ್ಟ್ ಐಪಿಎಲ್ ಅನ್ನೋ ಮಾತುಗಳು ಕೇಳಿಬರ್ತಿವೆ. ಇದೇ ನಿಜವಾದ್ರೆ, ಮಹಿರಾಟ್ ಅಂದ್ರೆ, ವಿರಾಟ್ ಹಾಗೂ ಧೋನಿ ಆನ್ಫೀಲ್ಡ್ನಲ್ಲಿ ಮತ್ತೆ ಒಟ್ಟಿಗೆ ಕಾಣೋದಿಲ್ಲ. ಇದರಿಂದ ಈ ಇಬ್ಬರು ಅಭಿಮಾನಿಗಳು ಮಹಿರಾಟ್ ಸಂಗಮ ಕಣ್ತುಂಬಿಕೊಳ್ಳಲು ಕಾದು ಕುಳಿತಿದ್ದಾರೆ. 

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್
 

click me!