ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ 'ಕನ್ನಡದ ನಂದಿನಿ'..? ಪ್ರಾಯೋಜಕತ್ವ ಪಡೆಯುವ ನಿರೀಕ್ಷೆಯಲ್ಲಿ KMF

By Kannadaprabha News  |  First Published Mar 21, 2024, 9:32 AM IST

ನಂದಿನಿ ಹೆಸರಿನಲ್ಲಿ ಡೈರಿ ಉತ್ಪನ್ನ ಮಾರಾಟ ಮಾಡುತ್ತಿರುವ ಕೆಎಂಎಫ್‌ ಈಗಾಗಲೇ ಟೆಂಡರ್‌ ಪ್ರಕಟಿಸಿದ್ದು, ಶೀಘ್ರದಲ್ಲೇ ಟಿ20 ವಿಶ್ವಕಪ್‌ನ ಒಂದು ಅಥವಾ ಒಂದಕ್ಕಿಂತ ಹೆಚ್ಚು ತಂಡಗಳ ಪ್ರಾಯೋಜಕತ್ವ ಪಡೆಯುವ ನಿರೀಕ್ಷೆಯಲ್ಲಿದೆ.


ಬೆಂಗಳೂರು: ಡೈರಿ ಉತ್ಪನ್ನಗಳ ಪ್ರಮುಖ ಮಾರಾಟ ಸಂಸ್ಥೆಯಾಗಿರುವ ಅಮುಲ್‌ ಜೊತೆಗಿನ ಪೈಪೋಟಿಯನ್ನು ಕ್ರಿಕೆಟ್‌ ಅಂಗಳಕ್ಕೂ ವಿಸ್ತರಿಸಲು ನಿರ್ಧರಿಸಿರುವ ಕರ್ನಾಟಕ ಹಾಲು ಮಹಾ ಮಂಡಳಿ(ಕೆಎಂಎಫ್‌) ಮುಂಬರುವ ಬಹುನಿರೀಕ್ಷಿತ ಟಿ20 ವಿಶ್ವಕಪ್‌ ತಂಡದ ಪ್ರಾಯೋಜಕತ್ವ ಪಡೆಯುವ ಗುರಿ ಇಟ್ಟುಕೊಂಡಿದೆ.

ನಂದಿನಿ ಹೆಸರಿನಲ್ಲಿ ಡೈರಿ ಉತ್ಪನ್ನ ಮಾರಾಟ ಮಾಡುತ್ತಿರುವ ಕೆಎಂಎಫ್‌ ಈಗಾಗಲೇ ಟೆಂಡರ್‌ ಪ್ರಕಟಿಸಿದ್ದು, ಶೀಘ್ರದಲ್ಲೇ ಟಿ20 ವಿಶ್ವಕಪ್‌ನ ಒಂದು ಅಥವಾ ಒಂದಕ್ಕಿಂತ ಹೆಚ್ಚು ತಂಡಗಳ ಪ್ರಾಯೋಜಕತ್ವ ಪಡೆಯುವ ನಿರೀಕ್ಷೆಯಲ್ಲಿದೆ. ಎಡಗೈ ಬ್ಯಾಟ್ಸ್‌ಮನ್‌ಗಳಿಗೆ ಬಲಗೈ ಮತ್ತು ಬಲಗೈ ಬ್ಯಾಟ್ಸ್‌ಮನ್‌ಗಳ ಎಡಗೈ ಮೇಲೆ ನಂದಿನಿ ಲೋಗೋ ಹಾಕಲು ಕೆಎಂಎಫ್ ಮುಂದಾಗಿದೆ. ಏಪ್ರಿಲ್‌ನಲ್ಲಿ ಟೆಂಡರ್‌ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ನೀತಿ ಸಂಹಿತೆ ಜಾರಿಗೆಯಾಗಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಅನುಮತಿ ಪಡೆದು ಟೆಂಡರ್‌ ಅಂತಿಮಗೊಳಿಸಲಿದ್ದೇವೆ ಎಂದು ಕೆಎಂಎಫ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Tap to resize

Latest Videos

ಸ್ವಿಸ್‌ ಓಪನ್: ಶ್ರೀಕಾಂತ್‌, ಸಿಂಧು, ಸೇನ್‌ ಶುಭಾರಂಭ

ಗುಜರಾತ್‌ನ ಅಮುಲ್‌ ಸಂಸ್ಥೆಯು 2011ರಿಂದಲೂ ಅಫ್ಘಾನಿಸ್ತಾನ, ನ್ಯೂಜಿಲೆಂಡ್‌, ದ.ಆಫ್ರಿಕಾ, ಶ್ರೀಲಂಕಾ ಸೇರಿದಂತೆ ಕೆಲ ತಂಡಗಳ ಪ್ರಾಯೋಜತ್ವಗಳನ್ನು ಪಡೆದಿದೆ. ಸದ್ಯ ಕೆಎಂಎಫ್‌ ಕೂಡಾ ಕ್ರಿಕೆಟ್‌ ಮೂಲಕ ನಂದಿನಿ ಲೋಗೋವನ್ನು ಪ್ರಚಾರ ಮಾಡಲು ಮುಂದಾಗಿದೆ.

ಶ್ರೇಯಾಂಕಗೆ ಒಂದೇ ದಿನ 15 ಲಕ್ಷ+ ಫಾಲೋವರ್ಸ್‌!

ನವದೆಹಲಿ: ಡಬ್ಲ್ಯುಪಿಎಲ್‌ನಲ್ಲಿ ಆರ್‌ಸಿಬಿ ತಂಡ ಚಾಂಪಿಯನ್‌ ಆದ ಕೇವಲ 2 ದಿನಗಳಲ್ಲಿ ಕರ್ನಾಟಕದ ತಾರಾ ಆಟಗಾರ್ತಿ ಶ್ರೇಯಾಂಕ ಪಾಟೀಲ್‌ರ ಇನ್‌ಸ್ಟಾಗ್ರಾಂ ಹಿಂಬಾಲಕರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಡಬ್ಲ್ಯುಪಿಎಲ್‌ನಲ್ಲಿ ಅಭೂತಪೂರ್ವ ಪ್ರದರ್ಶನ ನೀಡುವ ಮೂಲಕ ಯುವ ಜನರ ಮನಸ್ಸು ಗೆದ್ದಿರುವ 21ರ ಶ್ರೇಯಾಂಕ ಒಂದೇ ದಿನದಲ್ಲಿ 15 ಲಕ್ಷಕ್ಕೂ ಹೆಚ್ಚು ಹೊಸ ಫಾಲೋವರ್ಸ್‌ಗಳನ್ನು ಪಡೆದಿದ್ದು, ಸದ್ಯ ಇನ್‌ಸ್ಟಾದಲ್ಲಿ 21 ಲಕ್ಷ ಹಿಂಬಾಲಕರನ್ನು ಹೊಂದಿದ್ದಾರೆ. ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಕೂಡಾ ಇಷ್ಟೇ ಸಂಖ್ಯೆಯ ಹಿಂಬಾಲಕರನ್ನು ಹೊಂದಿದ್ದಾರೆ. ಆರ್‌ಸಿಬಿ ನಾಯಕಿ ಸ್ಮೃತಿ ಮಂಧನಾಗೆ 1.06 ಕೋಟಿ ಫಾಲೋವರ್ಸ್‌ಗಳಿದ್ದಾರೆ.

'ದಯವಿಟ್ಟು ನನಗೆ ಹಾಗೆ ಕರೀಬೇಡಿ, ಮುಜುಗರ ಆಗುತ್ತೆ': ವಿರಾಟ್ ಕೊಹ್ಲಿ ಹೀಗಂದಿದ್ದೇಕೆ..?

RCB FanBase Is UnReal 🥵

A 21 Year, 2 Season Old Girl Is Having Insane Growth Than The Captain Of So Called Paid “Big One Family”

Note : Got More Than 1.3 Million Followers In Last 24 Hours

Range Matters 💪🏼 pic.twitter.com/V2PGbDPvOa

— Adheera (@adheeraeditz)

ಇನ್ನು, ತಮ್ಮ ಐಕಾನ್‌ ವಿರಾಟ್‌ ಕೊಹ್ಲಿ ಅವರನ್ನು ಭೇಟಿಯಾದ ಬಗ್ಗೆ ಶ್ರೇಯಾಂಕ ಸಾಮಾಜಿಕ ತಾಣದಲ್ಲಿ ಖುಷಿ ವ್ಯಕ್ತಪಡಿಸಿದ್ದಾರೆ. ತಾವು ವಿರಾಟ್‌ ಕೊಹ್ಲಿ ಜೊತೆ ನಿಂತಿರುವ ಫೋಟೋವನ್ನೂ ಶೇರ್‌ ಮಾಡಿದ್ದಾರೆ.

ಕೆ.ಎಲ್‌.ರಾಹುಲ್‌ ಫಿಟ್‌: ಪೂರ್ಣ ಐಪಿಎಲ್‌ಗೆ ಲಭ್ಯ

ನವದೆಹಲಿ: ಭಾರತದ ತಾರಾ ಕ್ರಿಕೆಟಿಗ ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿದ್ದು, 17ನೇ ಆವೃತ್ತಿ ಐಪಿಎಲ್‌ನ ಆರಂಭದಿಂದಲೇ ಲಖನೌ ತಂಡದ ಪರ ಕಣಕ್ಕಿಳಿಯದ್ದಾರೆ. ಆದರೆ ಮೊದಲ ಕೆಲ ಪಂದ್ಯಗಳಿಗೆ ಅವರು ವಿಕೆಟ್‌ ಕೀಪರ್‌ ಆಗಿ ಆಡುವುದಿಲ್ಲ ಎಂದು ತಿಳಿದುಬಂದಿದೆ. ಇಂಗ್ಲೆಂಡ್‌ ವಿರುದ್ಧ ಮೊದಲ ಟೆಸ್ಟ್‌ ಪಂದ್ಯದ ವೇಳೆ ಸ್ನಾಯುಸೆಳೆತಕ್ಕೆ ಒಳಗಾಗಿದ್ದ ರಾಹುಲ್‌ ಬಳಿಕ ಬೆಂಗಳೂರಿನ ಎನ್‌ಸಿಎಗೆ ಪುನಶ್ಚೇತನ ಶಿಬಿರಕ್ಕೆ ಹಾಜರಾಗಿದ್ದರು. ಸದ್ಯ ಅವರಿಗೆ ಎನ್‌ಸಿಎ ನಿರಾಕ್ಷೇಪಣಾ ಪತ್ರ ನೀಡಿದ್ದು, ಐಪಿಎಲ್‌ನಲ್ಲಿ ಆಡಲು ಸಜ್ಜಾಗಿದ್ದಾರೆ. ಲಖನೌ ಮಾ.24ಕ್ಕೆ ರಾಜಸ್ಥಾನ ವಿರುದ್ಧ ಮೊದಲ ಪಂದ್ಯವಾಡಲಿದೆ.
 

click me!