ಮುಂಬೈನಲ್ಲಿ ಪಾಂಡ್ಯ ಆಗಮನದಿಂದ ಅಂತರ್ಯುದ್ಧ..! ಕ್ಯಾಪ್ಟನ್ ಆಗೋ ಬುಮ್ರಾ ಕನಸು ನುಚ್ಚುನೂರಾಯ್ತಾ..?

By Suvarna News  |  First Published Nov 29, 2023, 1:46 PM IST

ಐಪಿಎಲ್ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ತಂಡದಲ್ಲಿ ಗೊಂದಲ ಸೃಷ್ಟಿಯಾಗಿದೆ. ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ, ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಒಂದು ಸ್ಟೋರಿ ಪೋಸ್ಟ್ ಮಾಡಿದ್ದಾರೆ. ಕೆಲವೊಮ್ಮೆ ಮೌನವೂ ಅತ್ಯುತ್ತಮ ಉತ್ತರವಾಗಿದೆ ಎಂದು ಬರೆದಿದ್ದಾರೆ. ಜೊತೆಗೆ ಮುಂಬೈ ಇಂಡಿಯನ್ಸ್ ಎಕ್ಸ್, ಇನ್‌ಸ್ಟಾಗ್ರಾಂ ಖಾತೆಯನ್ನು ಅನ್ಫಾಲೋ ಮಾಡಿದ್ದಾರೆ.


ಬೆಂಗಳೂರು(ನ.29) ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್‌ಗೆ ಕಮ್‌ಬ್ಯಾಕ್ ಮಾಡಿದ್ದು ಫ್ರಾಂಚೈಸಿಗಷ್ಟೇ ಖುಷಿ ವಿಷ್ಯ. ಫ್ಯಾನ್ಸ್ ಮತ್ತು ತಂಡದಲ್ಲಿರುವ ಕೆಲ ಆಟಗಾರರಿಗೆ ಅಸಮಾಧಾನ. ಪಾಂಡ್ಯ ಕಮ್‌ಬ್ಯಾಕ್ ಬಗ್ಗೆ ಒಬ್ಬ ಆಟಗಾರ ಸೈಲೆಂಟಾಗಿಯೇ ಫ್ರಾಂಚೈಸಿಗೆ ಗುಮ್ಮಿದ್ದಾನೆ. ಬೇರೆ ತಂಡ ಸೇರುವ ಮುನ್ಸೂಚನೆಯನ್ನೂ ನೀಡಿದ್ದಾನೆ. ಯಾರಾತ ಅನ್ನೋದನ್ನ ನೀವೇ ನೋಡಿ.

IPL ಆಟಗಾರರ ಟ್ರೇಡಿಂಗ್ ಮೂಲಕ ಗುಜರಾತ್ ಟೈಟನ್ಸ್ ತಂಡದಿಂದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ಪಾಲಾಗಿದ್ದಾರೆ.  ಪಾಂಡ್ಯ ಭವಿಷ್ಯದ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಎಂದೇ ಬಿಂಬಿಸಲಾಗ್ತಿದೆ. ಈಗ ಇದೇ ಮುಂಬೈ ಇಂಡಿಯನ್ಸ್‌ನಲ್ಲಿ ಅಂತರ್ಯುದ್ಧಕ್ಕೆ ಮುನ್ನುಡಿ ಬರೆಯುತ್ತಿದೆ. ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ಗೆ ಕಮ್ಬ್ಯಾಕ್ ಮಾಡಿದ ತಕ್ಷಣ ತಂಡದಲ್ಲಿದ್ದವರು ಅಸಮಾಧಾನ ಹೊರಹಾಕಿದ್ದಾರೆ. ಅದರಲ್ಲಿ ಮೊದಲನೆಯವರು ಜಸ್ಪ್ರೀತ್ ಬುಮ್ರಾ.

Latest Videos

undefined

ಐಪಿಎಲ್ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ತಂಡದಲ್ಲಿ ಗೊಂದಲ ಸೃಷ್ಟಿಯಾಗಿದೆ. ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ, ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಒಂದು ಸ್ಟೋರಿ ಪೋಸ್ಟ್ ಮಾಡಿದ್ದಾರೆ. ಕೆಲವೊಮ್ಮೆ ಮೌನವೂ ಅತ್ಯುತ್ತಮ ಉತ್ತರವಾಗಿದೆ ಎಂದು ಬರೆದಿದ್ದಾರೆ. ಜೊತೆಗೆ ಮುಂಬೈ ಇಂಡಿಯನ್ಸ್ ಎಕ್ಸ್, ಇನ್‌ಸ್ಟಾಗ್ರಾಂ ಖಾತೆಯನ್ನು ಅನ್ಫಾಲೋ ಮಾಡಿದ್ದಾರೆ. ಮುಂಬೈ ಇಂಡಿಯನ್ಸ್‌ಗೆ ಪಾಂಡ್ಯ ವಾಪಾಸ್ ಆದ್ಮೇಲೆ ಬುಮ್ರಾ ಈ ರೀತಿ ಮಾಡಿದ್ದಾರೆ ಅಂತ ಈ ಎರಡಕ್ಕೂ ಲಿಂಕ್ ಮಾಡ್ತಿದ್ದಾರೆ ಫ್ಯಾನ್ಸ್.

'ಕಳೆದ ಮೂರು ವರ್ಷದಲ್ಲಿ...': RCB ತಂಡದಿಂದ ಹೊರಬಿದ್ದ ಬೆನ್ನಲ್ಲೇ ಭಾವನಾತ್ಮಕ ಸಂದೇಶ ರವಾನಿಸಿದ ಹರ್ಷಲ್ ಪಟೇಲ್

ರೋಹಿತ್ ಬಳಿಕ ಕ್ಯಾಪ್ಟನ್ ಆಗೋ ಬುಮ್ರಾ ಕನಸು ನುಚ್ಚುನೂರಾಯ್ತಾ?

ಸದ್ಯ ಮುಂಬೈ ಇಂಡಿಯನ್ಸ್‌ಗೆ ರೋಹಿತ್ ಶರ್ಮಾ ನಾಯಕ. ಮುಂದಿನ ಐಪಿಎಲ್ನಲ್ಲೂ ಅವರೇ ಮುಂಬೈ ತಂಡವನ್ನ ಲೀಡ್ ಮಾಡಲಿದ್ದಾರೆ. ರೋಹಿತ್ ಬಳಿಕ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಆಗಲು ಜಸ್ಪ್ರೀತ್ ಬುಮ್ರಾ ರೇಸ್ನಲ್ಲಿದ್ದರು. ಅದ್ರೀಗ ಪಾಂಡ್ಯ ಆಗಮನದಿಂದ ಬುಮ್ರಾ ಕನಸು ನುಚ್ಚುನೂರಾಗಿದೆ. ರೋಹಿತ್ ಬಳಿಕ ಪಾಂಡ್ಯನೇ ಮುಂಬೈ ಕ್ಯಾಪ್ಟನ್ ಅನ್ನೋದು ಗುಟ್ಟಾಗಿ ಏನು ಉಳಿದಿಲ್ಲ. ಅಲ್ಲಿಗೆ ಮುಂಬೈ ಕ್ಯಾಪ್ಟನ್ ಆಗೋ ಬುಮ್ರಾ ಆಸೆಗೆ ಫ್ರಾಂಚೈಸಿ ತಣ್ಣೀತು ಎರಚಿದ್ದಾರೆ. ಇದೇ ಸಿಟ್ಟಿನಲ್ಲಿ ಬುಮ್ರಾ, ಪೋಸ್ಟರ್ ಪೋಸ್ಟ್ ಮಾಡಿ ಮುಂಬೈ ಇಂಡಿಯನ್ಸ್ ತಂಡವನ್ನ ಅನ್ಫಾಲೋ ಮಾಡಿದ್ದಾರೆ. ಸೈಲೆಂಟಾಗಿಯೇ ಫ್ರಾಂಚೈಸಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಆರ್ಸಿಬಿಯನ್ನ ಫಾಲೋ ಮಾಡಿ, ರೆಡ್ ಆರ್ಮಿ ಪಡೆ ಸೇರ್ತಾರಾ ಅನ್ನೋ ಸುದ್ದಿಯನ್ನೂ ಹರಿದುಬಿಟ್ಟಿದ್ದಾರೆ.

ವಿಶ್ವಕಪ್ ಸೋತ ಭಾರತದ ವಿರುದ್ದವೇ ಘೋಷಣೆ ಕೂಗಿದ 7 ಕಾಶ್ಮೀರ ಯೂನಿವರ್ಸಿಟಿ ವಿದ್ಯಾರ್ಥಿಗಳು ಅರೆಸ್ಟ್..!

ಪಾಂಡ್ಯ ಬರುವುದು ರೋಹಿತ್ಗೂ ಗೊತ್ತಿರಲಿಲ್ಲವಂತೆ..!

ಹೌದು, ಪಾಂಡ್ಯನನ್ನ ಮುಂಬೈ ಇಂಡಿಯನ್ಸ್ಗೆ ವಾಪಾಸ್ ಕರೆಸಿಕೊಳ್ಳುವುದು ನಾಯಕ ರೋಹಿತ್ ಶರ್ಮಾಗೂ ಗೊತ್ತಿರಲಿಲ್ಲವಂತೆ. ಫ್ರಾಂಚೈಸಿ, ಎಲ್ಲವನ್ನೂ ಸಿಕ್ರೇಟಾಗಿ ಅಪರೇಟ್ ಮಾಡಿದೆ. ಮುಂಬೈ ಪಾಂಡ್ಯ ಕಮ್ಬ್ಯಾಕ್ ಅನ್ನೋ ಸುದ್ದಿ ಮಾದ್ಯಮದಲ್ಲಿ ಬಂದ್ಮೇಲೆ ರೋಹಿತ್ಗೂ ಶಾಕ್ ಆಗಿದೆಯಂತೆ. ತನ್ನ ಸ್ಥಾನಕ್ಕೆ ಕುತ್ತು ಬಂತು ಅನ್ನೋದು ಅವರ ಅಳಲು.

ಬುಮ್ರಾಗೆ ಮಾತ್ರವಲ್ಲ, ಸೂರ್ಯಕುಮಾರ್ಗೂ ನಿರಾಸೆಯಾಗಿದೆ. ಸದ್ಯ ಆಸ್ಟ್ರೇಲಿಯಾ ಸರಣಿಯಲ್ಲಿ ಭಾರತ ಟಿ20 ತಂಡವನ್ನ ಲೀಡ್ ಮಾಡ್ತಿರೋ ಸೂರ್ಯಕುಮಾರ್ ಯಾದವ್, ಮುಂಬೈ ಇಂಡಿಯನ್ಸ್ ನಾಯಕನಾಗಲು ಕನಸು ಕಂಡಿದ್ದರು. ಒಮ್ಮೆಯಾದ್ರೂ ಮುಂಬೈ ಟೀಮ್ ಲೀಡ್ ಮಾಡ್ಬೇಕು ಅನ್ನೋದು ಅವರ ಕನಸಾಗಿತ್ತು. ಆದ್ರೆ ಈಗ ಅವರ ಕನಸು ಸಹ ನುಚ್ಚುನೂರಾಗಿದೆ.

2024ರ ಐಪಿಎಲ್ನಲ್ಲಿ ಮುುಂಬೈಗೆ ಪಾಂಡ್ಯನೇ ನಾಯಕ?

ಯೆಸ್, ಗುಜರಾತ್ ಟೈಟನ್ಸ್ ನಾಯಕತ್ವ ಬಿಟ್ಟು ಮುಂಬೈ ಇಂಡಿಯನ್ಸ್ಗೆ ಬಂದರೋ ಹಾರ್ದಿಕ್ ಪಾಂಡ್ಯ ಕೇವಲ ದುಡ್ಡಿಗಾಗಿ ಮಾತ್ರ ಬಂದಿಲ್ಲ. ದೊಡ್ಡ ಆಫರ್ ನೀಡಿದಕ್ಕೆ ಬಂದಿದ್ದಾರೆ. ಆ ಬಿಗ್ ಆಫರೇ ಕ್ಯಾಪ್ಟನ್. ಹೌದು, 2024ರ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಪಾಂಡ್ಯ ನಾಯಕನಾದ್ರೂ  ಆಶ್ಚರ್ಯವಿಲ್ಲ ಅಂತ ಹೇಳಲಾಗ್ತಿದೆ. ಒಟ್ನಲ್ಲಿ ಫ್ರಾಂಚೈಸಿ ಲೀಗ್ನಲ್ಲಿ ಯಾವಾಗ ಏನ್ ಬೇಕಾದ್ರೂ ಆಗ್ಬಹುದು.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್
 

click me!