ಕಳೆದ ಪಂದ್ಯದಲ್ಲಿ ಬಲಿಷ್ಠ ಡೆಲ್ಲಿ ವಿರುದ್ಧ ಲಭಿಸಿದ 6 ವಿಕೆಟ್ ಗೆಲುವು ತಂಡದ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದ್ದು, ಮತ್ತೊಂದು ಜಯದೊಂದಿಗೆ ಅಗ್ರಸ್ಥಾನದಲ್ಲೇ ಮುಂದುವರಿಯುವ ತವಕದಲ್ಲಿದೆ. ಅತ್ತ ಬಿಹಾರ ಆಡಿರುವ 3 ಪಂದ್ಯಗಳಲ್ಲಿ 2ರಲ್ಲಿ ಸೋತಿದ್ದು, ಮತ್ತೊಂದು ಪಂದ್ಯ ರದ್ದಾಗಿದೆ. ಕೇವಲ 2 ಅಂಕ ಸಂಪಾದಿಸಿರುವ ಬಿಹಾರ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.
ಅಹಮದಾಬಾದ್(ನ.29): ವಿಜಯ್ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ ಸತತ 4ನೇ ಗೆಲುವಿನ ನಿರೀಕ್ಷೆಯಲ್ಲಿರುವ ಕರ್ನಾಟಕ, ಬುಧವಾರ ಬಿಹಾರ ವಿರುದ್ಧ ಸೆಣಸಲಿದೆ. ‘ಸಿ’ ಗುಂಪಿನಲ್ಲಿರುವ ರಾಜ್ಯ ತಂಡ ಟೂರ್ನಿಯಲ್ಲಿ 3 ಪಂದ್ಯಗಳನ್ನಾಡಿದ್ದು, ಹ್ಯಾಟ್ರಿಕ್ ಜಯದೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ.
ಕಳೆದ ಪಂದ್ಯದಲ್ಲಿ ಬಲಿಷ್ಠ ಡೆಲ್ಲಿ ವಿರುದ್ಧ ಲಭಿಸಿದ 6 ವಿಕೆಟ್ ಗೆಲುವು ತಂಡದ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದ್ದು, ಮತ್ತೊಂದು ಜಯದೊಂದಿಗೆ ಅಗ್ರಸ್ಥಾನದಲ್ಲೇ ಮುಂದುವರಿಯುವ ತವಕದಲ್ಲಿದೆ. ಅತ್ತ ಬಿಹಾರ ಆಡಿರುವ 3 ಪಂದ್ಯಗಳಲ್ಲಿ 2ರಲ್ಲಿ ಸೋತಿದ್ದು, ಮತ್ತೊಂದು ಪಂದ್ಯ ರದ್ದಾಗಿದೆ. ಕೇವಲ 2 ಅಂಕ ಸಂಪಾದಿಸಿರುವ ಬಿಹಾರ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಕರ್ನಾಟಕಕ್ಕೆ ಆಘಾತ ನೀಡಿ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆಯುವ ನಿರೀಕ್ಷೆಯಲ್ಲಿದೆ.
'ಕಳೆದ ಮೂರು ವರ್ಷದಲ್ಲಿ...': RCB ತಂಡದಿಂದ ಹೊರಬಿದ್ದ ಬೆನ್ನಲ್ಲೇ ಭಾವನಾತ್ಮಕ ಸಂದೇಶ ರವಾನಿಸಿದ ಹರ್ಷಲ್ ಪಟೇಲ್
ಪಂದ್ಯ: ಬೆಳಗ್ಗೆ 9ಕ್ಕೆ
ಕಿವೀಸ್ ಟೆಸ್ಟ್: ಮೊದಲ ದಿನ ಬಾಂಗ್ಲಾದೇಶ 310/9
ಸೈಲೆಟ್(ಬಾಂಗ್ಲಾದೇಶ): ನ್ಯೂಜಿಲೆಂಡ್ ವಿರುದ್ಧದ ಆರಂಭಿಕ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಮೊತ್ತ ಕಲೆಹಾಕಿದೆ. ಮೊದಲ ದಿನದಂತ್ಯಕ್ಕೆ ಆತಿಥೇಯ ತಂಡ 85 ಓವರ್‌ಗಳಲ್ಲಿ 9 ವಿಕೆಟ್‌ಗೆ 310 ರನ್ ಗಳಿಸಿದೆ. ಆರಂಭಿಕ ಬ್ಯಾಟರ್ ಮಹ್ಮೂದುಲ್ ಹಸನ್ 86 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು. 180 ರನ್‌ಗೆ 2 ವಿಕೆಟ್ ಕಳೆದುಕೊಂಡಿದ್ದ ಬಾಂಗ್ಲಾ, ಬಳಿಕ ದಿಢೀರ್ ಕುಸಿತ ಕಂಡಿತು. ನಜ್ಮುಲ್ 37, ಮೋಮಿನುಲ್ ಹಕ್ 37 ರನ್ ಸಿಡಿಸಿದರು. ಗ್ಲೆನ್ ಫಿಲಿಪ್ಸ್ 53ಕ್ಕೆ 4, ಜೇಮಿಸನ್ ಹಾಗೂ ಏಜಾಜ್ ಪಟೇಲ್ ತಲಾ 2 ವಿಕೆಟ್ ಕಿತ್ತರು.
ವಿಶ್ವಕಪ್ ಫೈನಲ್‌ನಲ್ಲಿ ಕೊಹ್ಲಿ ಔಟ್ ಮಾಡಿದ್ದು ಸಾಯುವ ಕೊನೆಯ ಕ್ಷಣದವರೆಗೂ ನೆನಪಿರುತ್ತೆ: ಪ್ಯಾಟ್ ಕಮಿನ್ಸ್
ಇಂದು ಭಾರತ-ಇಂಗ್ಲೆಂಡ್ ಮೊದಲ ಮಹಿಳಾ ಟಿ20
ಮುಂಬೈ: ಭಾರತ ‘ಎ’ ಹಾಗೂ ಇಂಗ್ಲೆಂಡ್ ‘ಎ’ ಮಹಿಳಾ ತಂಡಗಳ ನಡುವಿನ 3 ಪಂದ್ಯಗಳ ಟಿ20 ಸರಣಿ ಬುಧವಾರ ಆರಂಭಗೊಳ್ಳಲಿದ್ದು, ಆತಿಥೇಯ ತಂಡ ಶುಭಾರಂಭ ಮಾಡಲು ಎದುರು ನೋಡುತ್ತಿದೆ. ಸರಣಿಯ 3 ಪಂದ್ಯಗಳಿಗೂ ವಾಂಖೇಡೆ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಭಾರತ ತಂಡವನ್ನು ಕೇರಳದ ಮಿನ್ನು ಮಾನಿ ಮುನ್ನಡೆಸಲಿದ್ದು, ಶ್ರೇಯಾಂಕ ಪಾಟೀಲ್ ಸೇರಿ ಕರ್ನಾಟಕದ ನಾಲ್ವರು ತಂಡದಲ್ಲಿದ್ದಾರೆ. ಸರಣಿಯ 2ನೇ ಹಾಗೂ 3ನೇ ಪಂದ್ಯ ಕ್ರಮವಾಗಿ ಡಿ.1 ಮತ್ತು 3ರಂದು ನಿಗದಿಯಾಗಿವೆ.