ಕಿಡ್ನಿ ಕಾಯಿಲೆಯ ನಡುವೆಯೂ ಕ್ರಿಕೆಟ್‌ ಕನಸನ್ನು ಸಾಕಾರ ಮಾಡಿಕೊಂಡ ಆಟಗಾರ, ಈತ ಆರ್‌ಸಿಬಿ ಪ್ಲೇಯರ್‌!

By Santosh Naik  |  First Published Apr 10, 2024, 8:31 PM IST

ಒಂದು ಕಾಲದಲ್ಲಿ ಈತ ಹೆಚ್ಚೆಂದರೆ 12 ವರ್ಷ ಬದುಕಬಹುದು ಎಂದು ಸ್ವತಃ ವೈದ್ಯರೇ ಹೇಳಿದ್ದರು. ಆದರೆ, ವೈದ್ಯರ ನಿರೀಕ್ಷೆಗೂ ಮೀರಿದ ಆತ ತನ್ನ ಕ್ರಿಕೆಟ್‌ ಬದುಕನ್ನು ಸಾಕಾರಗೊಳಿಸಿಕೊಂಡಿದ್ದಾರೆ. ಈ ಕ್ರಿಕೆಟಿಗ ಹಾಲಿ ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಪರವಾಗಿ ಆಡುತ್ತಿದ್ದಾರೆ.


ಬೆಂಗಳೂರು (ಏ.10): ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಹಾಲಿ ಆವೃತ್ತಿಯ ಐಪಿಎಲ್‌ನಲ್ಲಿ ಕೆಟ್ಟ ಫಾರ್ಮ್‌ನಲ್ಲಿದೆ. ಆದರೆ, ಕೆಲವು ಆಟಗಾರರು ಮಾತ್ರ ತಮ್ಮ ನಿರೀಕ್ಷೆಗೂ ಮೀರಿ ನಿರ್ವಹಣೆ ತೋರುತ್ತಿದ್ದಾರೆ. ಆಲ್ರೌಂಡರ್‌ ಕ್ಯಾಮರೂನ್‌ ಗ್ರೀನ್‌ ಆರ್‌ಸಿಬಿ ತಂಡಕ್ಕೆ ದೊಡ್ಡ ಮೊತ್ತಕ್ಕೆ ಮುಂಬೈ ಇಂಡಿಯನ್ಸ್‌ಗೆ ಸೇರ್ಪಡೆಗೊಂಡಿದ್ದಾರೆ. ಆರ್‌ಸಿಬಿಯಲ್ಲಿ ಅವರ ನೈಜ ಆಟವಿನ್ನೂ ಬರದೇ ಇದ್ದರೂ, ಟೀಮ್‌ ಮ್ಯಾನೇಜ್‌ಮೆಂಟ್‌ ಮಾತ್ರ ಇವರ ಸಾಮರ್ಥ್ಯದ ಬಗ್ಗೆ ವಿಶ್ವಾಸವಿಟ್ಟಿದೆ. ಆದರೆ, ನಿಮಗೆ ಗೊತ್ತಿರದ ವಿಚಾರ ಏನೆಂದರೆ, 24 ವರ್ಷದ ಕ್ಯಾಮರೂನ್‌ ಗ್ರೀನ್‌ಗೆ ಒಂದು ಕಾಲದಲ್ಲಿ ವೈದ್ಯರು ನಿಮ್ಮ ಆಯಸ್ಸು ಕೇವಲ 12 ವರ್ಷ ಎಂದಿದ್ದರಂತೆ. ಹೌದು, ತೀರಾ ಅಪರೂಪದ ಕ್ರಾನಿಕ್‌ ಕಿಡ್ನಿ ಡಿಸೀಸ್‌ (ಸಿಡಿಕೆ) ಕಾಯಿಲೆಯಿಂದ ಬಳಲುತ್ತಿರುವ ಕ್ಯಾಮರೂನ್‌ ಗ್ರೀನ್‌ಗೆ ಇದಕ್ಕೆ ಪರಿಹಾರವೇ ಇಲ್ಲ ಎನ್ನುವುದು ಗೊತ್ತಿದೆ. ಆದರೆ, ಇರುವಷ್ಟು ದಿನ ತನ್ನ ಅತ್ಯುತ್ತಮ ನಿರ್ವಹಣೆಯನ್ನು ತಂಡಕ್ಕಾಗಿ ನೀಡಬೇಕು ಎಂದು ಬಯಸಿದ್ದಾರೆ. ಕ್ಯಾಮರೂನ್‌ ಗ್ರೀನ್‌ ಅವರಿಗೆ ದೀಘರ್ಕಾಲದಿಂದ ಮೂತ್ರಪಿಂಡದ ಕಾಯಿಲೆಯಿದೆ. ಹಾಗಿದ್ದರೂ ಅವರು ಕ್ರಿಕೆಟ್‌ನಲ್ಲಿ ಯಶಸ್ಸು ಕಾಣಲು ಕಾರಣ ಅವರು ಪಾಲಿಸುವ ಆಹಾರ ಹಾಗೂ ದಿನಚರಿ.

ಕ್ಯಾಮರೂನ್ ಗ್ರೀನ್ ಅವರು ಆರ್‌ಸಿಬಿ ತಂಡದ ಮುಖ್ಯ ಚೆಫ್‌ ಸಹಾಯದಿಂದ ವಿಶೇಷ ಆಹಾರವನ್ನು ತೆಗೆದುಕೊಳ್ಳುತ್ತಿದ್ದಾರೆ. ಸಾಮಾನ್ಯವಾಗಿ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವ ಜನರಿಗೆ ಆಹಾರದ ಆಯ್ಕೆಗಳು ಬಹಳ ಸೀಮಿತವೂ ಆಗಿದೆ. ಆದರೆ, ಟೂರ್ನಿಯ ವೇಳೆ ತಮ್ಮ ಫಿಟ್‌ಸೆನ್‌ ಕಾಯ್ದುಕೊಳ್ಳಲು ಫ್ರಾಂಚೈಸಿ ವಹಿಸುತ್ತಿರುವ ಶ್ರಮದ ಬಗ್ಗೆ ಕ್ಯಾಮರೂನ್‌ ಗ್ರೀನ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Tap to resize

Latest Videos

ವಿಶೇಷವಾಗಿ ಭಾರತದಲ್ಲಿ ನನಗೆ ಸವಾಲು. ನನ್ನ ಕಂಡೀಷನ್‌ಗೆ ಇಲ್ಲಿನ ಆಹಾರದ ಆಯ್ಕೆಗಳು ಕೂಡ ಬಹಳ ಸೀಮಿತ. ನನ್ನ ದೇಹಕ್ಕೆ ಅಗತ್ಯವಾಗಿರುವ ಉಪ್ಪು ಹಾಗೂ ಪ್ರೋಟೀನ್‌ಅನ್ನು ನಾನು ನೋಡಿಕೊಳ್ಳಬೇಕು. ಕ್ರಿಕೆಟ್‌ನ ಸಮಯದಲ್ಲಿ ಇವುಗಳನ್ನು ಬಹಳ ಕನಿಷ್ಠವಾಗಿ ಇಟ್ಟುಕೊಳ್ಳಬೇಕು. ನಾನು ನನ್ನ ಉಪ್ಪಿನ ಪ್ರಮಾಣವನ್ನು ಸ್ವಲ್ಪ ಹೆಚ್ಚಿಸಬಹುದು ಏಕೆಂದರೆ ನನಗೆ ಕ್ರಿಕೆಟ್ ಆಡಲು ಇದು ಅಗತ್ಯವಾಗಿರುತ್ತದೆ. ಹಾಗಾಗಿ ಇದು ಸ್ವಲ್ಪ ಸವಾಲಿನ ಸಂಗತಿಯಾಗಿದೆ, ಸ್ವಲ್ಪ ಬದಲಾಗುತ್ತಿರುವ ಆಹಾರಕ್ರಮವಾಗಿದೆ, ನಾನು ಮೈದಾನದಲ್ಲಿ ಪ್ರದರ್ಶನ ನೀಡಲು ಬಯಸುವ ಕಾರಣ ನಾನು ಸಾಕಷ್ಟು ಕಟ್ಟುನಿಟ್ಟಾಗಿರಬೇಕು. ಆದರೆ ನಾನು ನನ್ನನ್ನು ನೋಡಿಕೊಳ್ಳದಿದ್ದಲ್ಲಿ ದೀರ್ಘಕಾಲೀನ ಆರೋಗ್ಯದ ಅಪಾಯಗಳ ಬಗ್ಗೆ ಯೋಚಿಸಬೇಕಾಗಿದೆ" ಎಂದು ಕ್ಯಾಮರೂನ್ ಗ್ರೀನ್ ತಿಳಿಸಿದ್ದಾರೆ.

ಇನ್ನುಆರ್‌ಸಿಬಿ ಟೀಮ್‌ ನನಗೆ ಮಾಡುತ್ತಿರುವ ಸಹಾಯವನ್ನು ನೆನಪಿಸಿಕೊಳ್ಳಲೇಬೇಕಿದೆ. ಇಲ್ಲಿನ ಚೆಫ್‌ ಜೊತೆ ನಾನಿ ನಿತ್ಯ ಸಂಪರ್ಕದಲ್ಲಿರುತ್ತೇನೆ. ನನ್ನ ಸ್ಪೆಷಲ್‌ ಡಯಟ್‌ಅನ್ನು ಅವರೇ ಪ್ಲ್ಯಾನ್ ಮಾಡುತ್ತಾರೆ. ನನಗೆ ಏನು ಅಗತ್ಯವಿದೆಯೋ ಅಷ್ಟೇ ಪ್ರಮಾಣದಲ್ಲಿ ಆಹಾರ ತೆಗೆದುಕೊಳ್ಳುತ್ತೇವೆ. ಸರಿಯಾದ ಪ್ರೋಟೀನ್‌ ಇರುವಂಥ ಆಹಾರವನ್ನು ಮಾತ್ರವೇ ಸೇವಿಸುವ ಕಾರಣ ಕ್ರಿಕೆಟ್‌ಅನ್ನು ನಿರಾತಂಕವಾಗಿ ಆಡಲು ಸಾಧ್ಯವಾಗುತ್ತದೆ. ಉಪ್ಪಿನ ಪ್ರಮಾಣ ದೇಹಕ್ಕೆ ಅಗತ್ಯವಿರುವಷ್ಟು ಮಾತ್ರವೇ ತೆಗೆದುಕೊಳ್ಳುತ್ತೇನೆ. ಇಲ್ಲಿಯವರೆಗೂ ಫ್ರಾಂಚೈಸಿ ನನ್ನನ್ನು ಚೆನ್ನಾಗಿ ನೋಡಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ. ಆಲ್‌ರೌಂಡರ್ ಅವರು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸಲು ಕೆಲಸ ಮಾಡುತ್ತಿದ್ದು, ಬೆಂಗಳೂರಿನಲ್ಲಿ ತಮ್ಮ ಉದ್ದೇಶವನ್ನು ಹೆಚ್ಚಿಸಲು ಇತ್ತೀಚೆಗೆ ಬೆಂಗಳೂರು ಕಿಡ್ನಿ ಫೌಂಡೇಶನ್‌ಗೆ ಭೇಟಿ ನೀಡಿದರು.

ಮುಂದಿನ 10 ವರ್ಷದಲ್ಲಿ 3 ಬಾರಿ ಫೈನಲ್‌ ಆಡಲಿದೆ ಆರ್‌ಸಿಬಿ, ಒಮ್ಮೆ ಚಾಂಪಿಯನ್‌, ಪ್ರೆಡಿಕ್ಟ್‌ ಮಾಡಿದ AI

ಬೆಂಗಳೂರು ಕಿಡ್ನಿ ಫೌಂಡೇಷನ್‌ಗೆ ಹೋಗಲು ಸಮಯ ಸಿಕ್ಕಿದ್ದಕ್ಕೆ ಅದೃಷ್ಟ ಪಡೆದಿದ್ದೆ. ಕೆಲವು ಉತ್ತಮ ಸಮಯ ಅಲ್ಲಿ ಕಳೆದೆ. ಫೌಂಡೇಷನ್‌ಅನ್ನು ನಡೆಸುತ್ತಿರುವ ರೀತಿಯ ಬಗ್ಗೆ ಪ್ರಭಾವಿತನಾಗಿದ್ದೇನೆ. ತುಂಬಾ ಅದ್ಭುತವಾದ ಸಿಬ್ಬಂದಿಗಳು ಇಲ್ಲಿದ್ದಾರೆ. ಕೆಲವು ರೋಗಿಗಳನ್ನು ಕೂಡ ಭೇಟಿ ಮಾಡಿ ಅವರೊಂದಿಗೆ ಮಾತುಕತೆ ನಡೆಸಿದೆ. ಇಲ್ಲಿನ ಕೆಲವರು ಪ್ರತಿದಿನ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದಾರೆ. ಅವರ ದಿನದ ಹೆಚ್ಚಿನ ಸಮಯವನ್ನು ಅದಕ್ಕಾಗಿ ಮೀಸಲಿಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಆರ್‌ಸಿಬಿ ತಂಡ ಗುರುವಾರ ಮುಂಬೈನಲ್ಲಿ ಮುಂಬೈ ಇಂಡಿಯನ್ಸ್‌ ತಂಡವನ್ನು ಎದುರಿಸಲಿದ್ದು, ಏಪ್ರಿಲ್‌ 15 ರಂದು ತವರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ಎದುರಿಸಲಿದೆ.

ಕೊಹ್ಲಿ, ರೋಹಿತ್‌ ಶರ್ಮ ಅಲ್ಲ, ಭಾರತದ ಈ ಸ್ಟಾರ್‌ ಜಗತ್ತಿನ 'Most Valuable Cricketer' ಎಂದ ದಿನೇಶ್‌ ಕಾರ್ತಿಕ್‌!

 

click me!