ಮುಂಬೈನ ಸೋಲಿಸಿ ಅಧಿಕೃತವಾಗಿ ಪ್ಲೇ-ಆಫ್‌ಗೇರಲು ಕೋಲ್ಕತಾ ಕಾತರ!

By Kannadaprabha News  |  First Published May 11, 2024, 1:04 PM IST

ಕೋಲ್ಕತಾ ಈ ವರೆಗೆ 11 ಪಂದ್ಯಗಳನ್ನಾಡಿದ್ದು, 8ರಲ್ಲಿ ಗೆಲುವು ಸಾಧಿಸಿದೆ. 16 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿರುವ ತಂಡ ಉತ್ತಮ ನೆಟ್‌ರನ್‌ ರೇಟ್‌ ಕೂಡಾ ಹೊಂದಿದ್ದು, ಪ್ಲೇ-ಆಫ್‌ಗೇರುವುದು ಬಹುತೇಕ ಖಚಿತ.


ಕೋಲ್ಕತಾ(ಮೇ.11):17ನೇ ಆವೃತ್ತಿ ಐಪಿಎಲ್‌ನಲ್ಲಿ ಪ್ಲೇ-ಆಫ್‌ ಸ್ಥಾನ ಬಹುತೇಕ ಖಚಿತಪಡಿಸಿಕೊಂಡಿರುವ 2 ಬಾರಿ ಚಾಂಪಿಯನ್‌ ಪ್ಲೇ-ಆಫ್ ಕೋಲ್ಕತಾ ನೈಟ್‌ ರೈಡರ್ಸ್‌ ಶನಿವಾರ ಮುಂಬೈ ಇಂಡಿಯನ್ಸ್‌ ವಿರುದ್ಧ ಸೆಣಸಾಡಲಿದೆ. ಕೋಲ್ಕತಾ ಗೆದ್ದರೆ ಪ್ಲೇ-ಆಫ್‌ಗೆ ಅಧಿಕೃತವಾಗಿ ಪ್ರವೇಶಿಸಲಿದ್ದು, ಅಗ್ರ-2ರಲ್ಲೇ ಉಳಿದುಕೊಳ್ಳಲಿದೆ.

ಕೋಲ್ಕತಾ ಈ ವರೆಗೆ 11 ಪಂದ್ಯಗಳನ್ನಾಡಿದ್ದು, 8ರಲ್ಲಿ ಗೆಲುವು ಸಾಧಿಸಿದೆ. 16 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿರುವ ತಂಡ ಉತ್ತಮ ನೆಟ್‌ರನ್‌ ರೇಟ್‌ ಕೂಡಾ ಹೊಂದಿದ್ದು, ಪ್ಲೇ-ಆಫ್‌ಗೇರುವುದು ಬಹುತೇಕ ಖಚಿತ.

Tap to resize

Latest Videos

ಐಪಿಎಲ್‌ನಿಂದ ಇಂಪಾಕ್ ಆಟಗಾರ ನಿಯಮ ಕೈಬಿಡುವ ಬಗ್ಗೆ ಜಯ್ ಶಾ ಸುಳಿವು!

ಒಂದಿಬ್ಬರನ್ನು ನೆಚ್ಚಿಕೊಳ್ಳದೆ ಸಂಘಟಿತವಾಗಿ ಆಡಿ ಪಂದ್ಯ ಗೆಲ್ಲುವುದು ತಂಡದ ಪ್ಲಸ್‌ ಪಾಯಿಂಟ್‌. ಏಕಾಂಗಿಯಾಗಿ ಪಂದ್ಯ ಗೆಲ್ಲಿಸಬಲ್ಲ ಸಾಮರ್ಥ್ಯವಿರುವ ಹಲವು ಆಟಗಾರರು ತಂಡದಲ್ಲಿದ್ದಾರೆ. ನಾಕೌಟ್‌ಗೂ ಮುನ್ನ ಪ್ರದರ್ಶನವನ್ನು ಮತ್ತಷ್ಟು ಉತ್ತಮಗೊಳಿಸುವುದು ತಂಡದ ಮುಂದಿರುವ ಗುರಿ.

ಅತ್ತ 5 ಬಾರಿ ಚಾಂಪಿಯನ್‌ ಮುಂಬೈ 12ರಲ್ಲಿ ಕೇವಲ 4 ಪಂದ್ಯಗಳನ್ನು ಗೆದ್ದಿದ್ದು, ನಾಕೌಟ್‌ನಿಂದ ಅಧಿಕೃತವಾಗಿ ಹೊರಬಿದ್ದಿದೆ. ಕೋಲ್ಕತಾ ವಿರುದ್ಧದ ಮೊದಲ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳುವುದರ ಜೊತೆಗೆ ಇನ್ನುಳಿದ 2 ಪಂದ್ಯಗಳನ್ನೂ ಗೆದ್ದು ಅಂಕಪಟ್ಟಿಯಲ್ಲಿ ಮೇಲೇರುವುದು ತಂಡದ ಮುಂದಿರುವ ಗುರಿ. ಟಿ20 ವಿಶ್ವಕಪ್‌ಗೂ ಮುನ್ನ ರೋಹಿತ್‌, ಹಾರ್ದಿಕ್‌, ಸೂರ್ಯ ಲಯ ಕಂಡುಕೊಳ್ಳಬೇಕಾದ ಅಗತ್ಯವಿದೆ.

RCB ಪ್ಲೇ ಆಫ್ ಮಾತ್ರವಲ್ಲ 3ನೇ ಸ್ಥಾನಕ್ಕೂ ಲಗ್ಗೆಯಿಡಬಹುದು..! ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಡೀಟೈಲ್ಸ್

ಒಟ್ಟು ಮುಖಾಮುಖಿ: 33

ಕೋಲ್ಕತಾ: 10

ಮುಂಬೈ: 23

ಸಂಭವನೀಯ ಆಟಗಾರರ ಪಟ್ಟಿ

ಕೋಲ್ಕತಾ: ಫಿಲ್ ಸಾಲ್ಟ್‌, ಸುನಿಲ್ ನರೈನ್‌, ಅಂಗಕೃಷ್ ರಘುವಂಶಿ, ಶ್ರೇಯಸ್‌ ಅಯ್ಯರ್(ನಾಯಕ), ವೆಂಕಟೇಶ್‌ ಅಯ್ಯರ್, ರಿಂಕು ಸಿಂಗ್, ಆಂಡ್ರೆ ರಸೆಲ್‌, ರಮನ್‌ದೀಪ್‌ ಸಿಂಗ್, ಮಿಚೆಲ್ ಸ್ಟಾರ್ಕ್‌, ವರುಣ್‌ ಚಕ್ರವರ್ತಿ, ಹರ್ಷಿತ್‌ ರಾಣಾ.

ಮುಂಬೈ: ಇಶಾನ್‌ ಕಿಶನ್, ರೋಹಿತ್‌ ಶರ್ಮಾ, ನಮನ್‌, ಸೂರ್ಯಕುಮಾರ್ ಯಾದವ್, ತಿಲಕ್‌ ವರ್ಮಾ, ಹಾರ್ದಿಕ್‌ ಪಾಂಡ್ಯ(ನಾಯಕ), ಟಿಮ್ ಡೇವಿಡ್‌, ಅನ್ಶುಲ್‌, ಪೀಯೂಸ್ ಚಾವ್ಲಾ, ಜಸ್ಪ್ರೀತ್ ಬುಮ್ರಾ, ನುವಾನ್ ತುಷಾರ.

ಪಂದ್ಯ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ

click me!