
ಬೆಂಗಳೂರು (ಏ.26): ಪಂಜಾಬ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳ ವಿರುದ್ಧ ಸತತ ಎರಡು ಪಂದ್ಯಗಳ ಗೆಲುವಿನ ಬಳಿಕ ವಿಶ್ವಾಸದಲ್ಲಿರುವ ಆರ್‌ಸಿಬಿ ತಂಡ ಬುಧವಾರದ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದ್ದು, ಟಾಸ್ ಗೆದ್ದಿರುವ ಆರ್‌ಸಿಬಿ ತಂಡ ಮೊದಲು ಬೌಲಿಂಗ್ ಮಾಡುವ ನಿರ್ಧಾರ ಮಾಡಿದೆ. ಸತತ ಮೂರನೇ ಪಂದ್ಯಕ್ಕೆ ವಿರಾಟ್ ಕೊಹ್ಲಿ ತಂಡದ ನಾಯಕರಾಗಿದ್ದಾರೆ. ನಾವು ಮೊದಲು ಬೌಲಿಂಗ್ ಮಾಡಬೇಕೆಂದು ನಿರ್ಧಾರ ಮಾಡಿದ್ದೇವೆ. ಇದರಲ್ಲಿ ಆಲೋಚನೆ ಮಾಡುವಂಥದ್ದು ಏನೂ ಇಲ್ಲ. ಚಿನ್ನಸ್ವಾಮಿಯಲ್ಲಿ ಇದು ಸಂಜೆಯ ಪಂದ್ಯ. ಇಲ್ಲಿ ನಾವು ಉತ್ತಮವಾಗಿ ಚೇಸ್ ಮಾಡಿದ್ದೇವೆ. ಹಂಗಾಮಿ ನಾಯಕ ಸ್ಥಾನದಲ್ಲಿ ನಿಲ್ಲುವುದು ಅಪರೂಪದ ಅನುಭವ. ತಂಡ ಆಡುತ್ತಿರುವು ರೀತಿಗೆ ಖುಷಿ ಇದೆ. ಎಂಜಾಯ್ ಮಾಡಿಕೊಂಡು ಆಡುತ್ತಿದ್ದಾರೆ. ಫಾಫ್ ಡು ಪ್ಲೆಸಿಸ್ ಮತ್ತೊಮ್ಮೆ ಇಂಪ್ಯಾಕ್ಟ್ ಪ್ಲೇಯರ್ ರೋಲ್‌ನಲ್ಲಿ ಆಡುತ್ತಿದ್ದಾರೆ. ಮುಂದಿನ ಪಂದ್ಯದ ವೇಳೆಗೆ ಅವರು ನಾಯಕ ಸ್ಥಾನಕ್ಕೆ ವಾಪಸಾಗಬಹುದು. ಪಿಚ್ ಬಹಳ ಅದ್ಭುತವಾಗಿದೆ. ಎಂದಿನಂತೆ ಇರುವ ಪಿಚ್ ಇದಾಗಿದೆ ಎಂದು ಪಂದ್ಯದ ಟಾಸ್ ವೇಳೆ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ (ಪ್ಲೇಯಿಂಗ್ XI): ಎನ್ ಜಗದೀಸನ್(ವಿ.ಕೀ), ಜೇಸನ್ ರಾಯ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ(ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೈನ್, ಡೇವಿಡ್ ವೈಸ್, ವೈಭವ್ ಅರೋರಾ, ಉಮೇಶ್ ಯಾದವ್, ವರುಣ್ ಚಕ್ರವರ್ತಿ
RCB ಎದುರಿನ ಪಂದ್ಯಕ್ಕೂ ಮುನ್ನ ವಾರ್ನಿಂಗ್ ಕೊಟ್ಟ KKR ಕೋಚ್ ಚಂದ್ರಕಾಂತ್ ಪಂಡಿತ್..!
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ XI): ವಿರಾಟ್ ಕೊಹ್ಲಿ (ನಾಯಕ), ಶಹಬಾಜ್ ಅಹ್ಮದ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್ (ವಿ.ಕೀ), ಸುಯಶ್ ಪ್ರಭುದೇಸಾಯಿ, ವನಿಂದು ಹಸರಂಗ, ಡೇವಿಡ್ ವಿಲ್ಲಿ, ವಿಜಯ್‌ಕುಮಾರ್ ವೈಶಾಕ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್
IPL 2023 ಆರ್‌ಸಿಬಿ ಪಂದ್ಯದ ನಡುವೆ ಮೋದಿ ಸುನಾಮಿ, ಗಮನಸೆಳೆದ ಬೊಮ್ಮಾಯಿ ಟಿಶರ್ಟ್!
ಟೂರ್ನಿಯ 2ನೇ ಹಂತ ಈಗ ಆರಂಭವಾಗಿದೆ. ಇದು ನಮಗೆ ಪ್ರಮುಖ ಪಂದ್ಯ. ನಾವು ಕೆಲವೊಂದು ಉತ್ತಮ ಪಂದ್ಯಗಳನ್ನು ಆಡಿದ್ದೆವು. ಕೆಲವು ಪಂದ್ಯಗಳಲ್ಲಿ ಕೆಟ್ಟದಾಗಿ ಆಡಿದ್ದೇವೆ. ಈಗ ಅದೆಲ್ಲವನ್ನೂ ಮರೆತು ಹೋರಾಡುವ ಸಮಯ. ಒಗ್ಗಟ್ಟಾಗಿ ನಾವು ಹೋರಾಟ ಮಾಡಿದರೆ, ಫಲಿತಾಂಶ ನಮ್ಮ ಪರವಾಗಿ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ. ಕಳೆದ ಪಂದ್ಯಗಳಲ್ಲಿ ಕೆಲವೊಂದು ಬದಲಾವಣೆ ಮಾಡುವುದು ಅನಿವಾರ್ಯವಾಗಿತ್ತು. ಶಾರ್ದೂಲ್ ಠಾಕೂರ್ ಹಾಗೂ ಗುರ್ಬಾಜ್ ಸಿಂಗ್ ಗಾಯಗೊಂಡಿದ್ದಾರೆ. ಕಳೆದ ಪಂದ್ಯದ ತಂಡದಿಂದ ಬಂದು ಬದಲಾವಣೆ ಮಾಡಲಾಗಿದ್ದು, ಕುಲ್ವಂತ್ ಬದಲಿಗೆ ವೈಭವ್ ಅರೋರಾ ಸ್ಥಾನ ಪಡೆದಿದ್ದಾರೆ ಎಂದು ಟಾಸ್ ವೇಳೆ ಕೆಕೆಆರ್ ತಂಡದ ನಾಯಕ ನಿತೀಶ್ ರಾಣಾ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.