IPL 2023 ಐಪಿಎಲ್ ಟೂರ್ನಿಯಲ್ಲಿ ದಾಖಲೆ, ಮುಂಬೈ ವಿರುದ್ಧ ಸೆಂಚುರಿ ಸಿಡಿಸಿದ ಜೈಸ್ವಾಲ್!

By Suvarna NewsFirst Published Apr 30, 2023, 9:40 PM IST
Highlights

ಮುಂಬೈ ಇಂಡಿಯನ್ಸ್ ವಿರುದ್ದ 21ರ ಹರೆಯದ ಯಶಸ್ವಿ ಜೈಸ್ವಾಲ್ ಭರ್ಜರಿ ಸೆಂಚುರಿ ಸಿಡಿಸಿ ಅಬ್ಬರಿಸಿದ್ದಾರೆ. ಈ ಮೂಲಕ ಹಲವು ದಾಖಲೆ ನಿರ್ಮಿಸಿದ್ದಾರೆ. ಜೈಸ್ವಾಲ್ ನಿರ್ಮಿಸಿದ ದಾಖಲೆ, ಮುಂಬೈ ವಿರುದ್ದ ರಾಜಸ್ಥಾನದ ಅಬ್ಬರದ ಬ್ಯಾಟಿಂಗ್ ಮಾಹಿತಿ ಇಲ್ಲಿದೆ.

ವಾಂಖೆಡೆ(ಏ.30): ರಾಜಸ್ಥಾನ ರಾಯಲ್ಸ್ ತಂಡದ 21ರ ಹರೆಯದ ಯಶಸ್ವಿ ಜೈಸ್ವಾಲ್ ಅಬ್ಬರಕ್ಕೆ ಮುಂಬೈ ಇಂಡಿಯನ್ಸ್  ಬೆಚ್ಚಿ ಬಿದ್ದಿದೆ. ಸಿಕ್ಸರ್, ಬೌಂಡರಿ ಮೂಲಕವೇ ಮುಂಬೈ ಬೌಲರ್ಸ್ ಬೆವರಿಳಿಸಿದ್ದಾರೆ. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಜೈಸ್ವಾಲ್ 53 ಎಸೆತದಲ್ಲಿ ಸೆಂಚುರಿ ದಾಖಲಿಸಿದ್ದಾರೆ. ಈ ಮೂಲಕ ಐಪಿಎಲ್ ಟೂರ್ನಿಯಲ್ಲಿ ಶತಕ ಸಿಡಿಸಿದ 4ನೇ ಕಿರಿಯ ಆಟಗಾರ ಅನ್ನೋ ಹೆಗ್ಗಳಿಕಗೆ ಪಾತ್ರರಾಗಿದ್ದಾರೆ.

ಐಪಿಎಲ್ ಟೂರ್ನಿಯಲ್ಲಿ ಸೆಂಚುರಿ ಸಿಡಿಸಿದ ಕಿರಿಯರು
ಮನೀಶ್ ಪಾಂಡೆ(ಆರ್‌ಸಿಬಿ), 19 ವರ್ಷ, 253 ದಿನ (2009)
ರಿಷಬ್ ಪಂತ್(ಡಿಸಿ) 20 ವರ್ಷ, 218 ದಿನ(2018)
ದೇವದತ್ ಪಡಿಕ್ಕಲ್(ಆರ್‌ಸಿಬಿ) 20 ವರ್ಷ, 289 ದಿನ(2021)
ಯಶಸ್ವಿ ಜೈಸ್ವಾಲ್(ಆರ್‌ಆರ್) 21 ವರ್ಷ, 123 ದಿನ(2023)
ಸಂಜು ಸ್ಯಾಮ್ಸನ್(ಆರ್‌ಆರ್) 22 ದಿನ, 151 ದಿನ(2017)

Latest Videos

IPL 2023 ಅಂತಿಮ ಎಸೆತದಲ್ಲಿ 3 ರನ್, ಪಂಜಾಬ್ ದಡ ಸೇರಿಸಿ ಹೀರೋ ಆದ ಸಿಕಂದರ್ ರಾಜಾ!

ಸೆಂಚುರಿ ಬಳಿಕವೂ ಜೈಸ್ವಾಲ್ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿದರು. ಜೈಸ್ವಾಲ್ 62 ಎಸೆತದಲ್ಲಿ 8 ಸಿಕ್ಸರ್ ಹಾಗೂ 16 ಬೌಂಡರಿ ಮೂಲಕ 124 ರನ್ ಸಿಡಿಸಿ ಔಟಾದರು. ಜೈಸ್ವಾಲ್ ಅಬ್ಬರದ ಬ್ಯಾಟಿಂಗ್ ರಾಜಸ್ಥಾನ ರಾಯಲ್ಸ್ ತಂಡದ ಬೃಹತ್ ಮೊತ್ತಕ್ಕೆ ಕಾರಣವಾಯಿತು. ಅನ್‌ಕ್ಯಾಪ್ ಪ್ಲೇಯರ್ ಐಪಿಎಲ್ ಟೂರ್ನಿಯಲ್ಲಿ ಸಿಡಿಸಿದ ಬೃಹತ್ ಸ್ಕೋರ್ ಅನ್ನೋ ದಾಖಲೆಯನ್ನು ಜೈಸ್ವಾಲ್ ನಿರ್ಮಿಸಿದ್ದಾರೆ.

ಐಪಿಎಲ್ ಟೂರ್ನಿಯಲ್ಲಿ ಅನ್‌ಕ್ಯಾಪ್ ಪ್ಲೇಯರ್ ಸಿಡಿಸಿದ ಗರಿಷ್ಠ ವೈಯುಕ್ತಿ ಸ್ಕೋರ್  ದಾಖಲೆ
124 ರನ್, ಯಶಸ್ವಿ ಜೈಸ್ವಾಲ್(ಆರ್‌ಆರ್ vs ಮುಂಬೈ ಇಂಡಿಯನ್ಸ್) 2023
120* ರನ್, ಪೌಲ್ ವಾಲ್ತಟಿ(ಪಂಜಾಬ್ vs ಚೆನ್ನೈ) 2011
115  ರನ್, ಶಾನ್ ಮಾರ್ಶ್(ಪಂಜಾಬ್ vs ರಾಜಸ್ಥಾನ)2008)
114* ರನ್, ಮನೀಶ್ ಪಾಂಡೆ(ಬೆಂಗಳೂರು vs ಡೆಕ್ಕನ್ )2009)

ರಾಜಸ್ಥಾನ ರಾಯಲ್ಸ್ ಗೆಲವಿನಲ್ಲಿ ಪ್ರಮುಖ ರೂವಾರಿಯಾಗುತ್ತಿರುವ ಜೈಸ್ವಾಲ್, ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಮೂಲಕ ಅಬ್ಬರಿಸುತ್ತಿದ್ದಾರೆ. 

ಯಶಸ್ವಿ ಜೈಸ್ವಾಲ್ ಕಳೆದ 4 ಪಂದ್ಯದ ಪ್ರದರ್ಶನ
124ರನ್ ರನ್,vs ಮುಂಬೈ 
77 ರನ್ vs ಚೆನ್ನೈ
47 ರನ್ vs ಬೆಂಗಳೂರು
44 ರನ್ vs ಲಖನೌ 

IPL 2023: ಬರೋಬ್ಬರಿ 458 ರನ್‌ ದಾಖಲಾದ ಪಂದ್ಯದಲ್ಲಿ ಲಕ್ನೋ ಸೂಪರ್‌ ವಿನ್‌!

ಯಶಸ್ವಿ ಜೈಸ್ವಾಲ್ ಏಕಾಂಗಿ ಹೋರಾಟದಿಂದ ರಾಜಸ್ಥಾನ ರಾಯಲ್ಸ್ 7 ವಿಕೆಟ್ ನಷ್ಟಕ್ಕೆ 212 ರನ್ ಸಿಡಿಸಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ ವಿರುದ್ದ ರಾಜಸ್ಥಾನ ರಾಯಲ್ಸ್ ಗರಿಷ್ಠ ಸ್ಕೋರ್ ಸಿಡಿಸಿದ ದಾಖಲೆ ಬರೆದಿದೆ.

ಮುಂಬೈಇಂಡಿಯನ್ಸ್ ವಿರುದ್ಧ ರಾಜಸ್ಥಾನ ಗರಿಷ್ಠ ಸ್ಕೋರ್
212/7, ವಾಂಖೆಡೆ ಕ್ರೀಡಾಂಗಣ,2023
193/8 - ಡಿವೈ ಪಾಟೀಲ್ ಕ್ರೀಡಾಂಗಣ, 2022
189/4 - ವಾಂಖೆಡೆ ಕ್ರೀಡಾಂಗಣ, 2014
179/3 - ಜೈಪುರು ಕ್ರೀಡಾಂಗಣ, 2013

click me!