IPL 2023: ಶಮಿ ದಾಳಿಗೆ ಕುಸಿದ ಡೆಲ್ಲಿ ಕ್ಯಾಪಿಟಲ್ಸ್!

Published : May 02, 2023, 09:27 PM ISTUpdated : May 02, 2023, 10:31 PM IST
IPL 2023: ಶಮಿ ದಾಳಿಗೆ ಕುಸಿದ ಡೆಲ್ಲಿ ಕ್ಯಾಪಿಟಲ್ಸ್!

ಸಾರಾಂಶ

ಮೊಹಮದ್‌ ಶಮಿ ಮಾರಕ ದಾಳಿಯ ಮುಂದೆ ಮಂಕಾದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಗುಜರಾತ್‌ ಟೈಟಾನ್ಸ್ ತಂಡದ ಗೆಲುವಿಗೆ ಕೇವಲ 131 ರನ್‌ ಸವಾಲು ನೀಡಿದೆ.  

ಅಹಮದಾಬಾದ್‌ (ಮೇ.2): ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಅಗ್ರ ಕ್ರಮಾಂಕದ ಬ್ಯಾಟಿಂಗ್‌ ಮೇಲೆ ಬೌಲಿಂಗ್‌ನ ಬೆಂಕಿ ಚೆಂಡುಗಳನ್ನು ಮೊಹಮದ್‌ ಶಮಿ ಎಸೆದ ಕಾರಣ, ಸೋತು ಸುಣ್ಣವಾಗಿರುವ ಡೆಲ್ಲಿ ತಂಡ ಗುಜರಾತ್‌ ಟೈಟಾನ್ಸ್‌ ತಂಡದ ಗೆಲುವಿಗೆ ಸಾಧಾರಣ ಮೊತ್ತದ ಗುರಿ ನೀಡಿದೆ. ಶಮಿ ದಾಳಿಯ ಎದುರು ಕೇವಲ 23 ರನ್‌ಗೆ 5 ವಿಕೆಟ್‌ ಕಳೆದುಕೊಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೊನೆಯ ಹಂತದಲ್ಲಿ ಅಮಾನ್‌ ಹಕೀಮ್‌ ಖಾನ್‌ ಬಾರಿಸಿದ ಜವಾಬ್ದಾರಿಯುತ  51 ರನ್‌ಗಳ ಇನ್ನಿಂಗ್ಸ್‌ ನೆರವಿನಿಂದ 8 ವಿಕೆಟ್‌ಗೆ 130 ರನ್‌ ಕಲೆಹಾಕುವಲ್ಲಿ ಯಶಸ್ವಿಯಾಯಿತು.ಈಗಾಗಲೇ ಬರೋಬ್ಬರಿ 6 ಪಂದ್ಯಗಳಲ್ಲಿ ಸೋಲು ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇ ಆಫ್‌ ಜೀವಂತವಾಗಿರಿಸಿಕೊಳ್ಳಬೇಕಾದರೆ, ಮಿರಾಕಲ್‌ ಫಲಿತಾಂಶಗಳನ್ನು ದಾಖಲಿಸಬೇಕಾಗಿದೆ. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಮೊಹಮದ್‌ ಶಮಿ ಯಾವ ರೀತಿಯ ಆಘಾತ ನೀಡಿದ್ದರೆಂದರೆ, ಪವರ್‌ ಪ್ಲೇ ಮುಗಿಯುವ ವೇಳೆಗಾಗಲೇ ತಂಡದ ಅರ್ಧ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ ಸೇರಿದ್ದರು. ಇದರಿಂದಾಗಿ ಕನಿಷ್ಠ 100 ರನ್‌ಗಳ ಗಡಿ ದಾಟುವುದು ಕೂಡ ಡೆಲ್ಲಿ ತಂಡಕ್ಕೆ ಅಸಾಧ್ಯ ಎನಿಸಿತ್ತು. ಆದರೆ, ಇದನ್ನು ಸಾಧ್ಯ ಮಾಡಿರುವ ಅಮಾನ್‌ ಹಕೀಮ್‌ ಖಾನ್‌.

23 ರನ್‌ಗೆ 5 ವಿಕೆಟ್ ಕಳೆದುಕೊಂಡಿದ್ದ ಹಂತದಲ್ಲಿ ಜೊತೆಯಾದ ಅಕ್ಸರ್‌ ಪಟೇಲ್‌  (27 ರನ್‌, 30 ಎಸೆತ, 2 ಬೌಂಡರಿ, 1 ಸಿಕ್ಸರ್‌) ಹಾಗೂ ಅಕೀಮ್‌ ಖಾನ್‌ (51 ರನ್‌, 44 ಎಸೆತ, 3 ಬೌಂಡರಿ, 3 ಸಿಕ್ಸರ್‌)  ಅಮೂಲ್ಯ 50 ರನ್‌ಗಳ ಜೊತೆಯಾಟವಾಡಿದರು. ಇದು ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ದೊಡ್ ಮಟ್ಟದ ಚೇತರಿಕೆ ನೀಡಿತು. ಜವಾಬ್ದಾರಿಯುತ ಆಟವಾಡಿದ ಅಮಾನ್‌ ಖಾನ್‌, 19ನೇ ಓವರ್‌ನಲ್ಲಿ ಔಟಾಗುವ ವೇಳೆ ಡೆಲ್ಲಿ ಕ್ಯಾಪಿಟಲಲ್ಸ್‌ ಸಾಧಾರಣ ಗುರಿ ಮುಟ್ಟಿದ ಸಮಾಧಾನದಲ್ಲಿತ್ತು.

ಆರ್‌ಸಿಬಿ ಉತ್ತರದ ದಂಡಯಾತ್ರೆಯಲ್ಲಿ Delhi ಮುಂದಿನ ನಿಲ್ದಾಣ!

ಆಕರ್ಷಕ 50 ರನ್‌ ಜೊತೆಯಾಟವಾಡಿದ ಅಕ್ಸರ್‌ ಪಟೇಲ್‌ ಹಾಗೂ ಅಮಾನ್‌ ಖಾನ್‌ ಜೋಡಿಯನ್ನು 14ನೇ ಓವರ್‌ನಲ್ಲಿ ಮೋಹಿತ್‌ ಶರ್ಮ ಬೇರ್ಪಡಿಸಿದರು. ಆ ಬಳಿಕ ಅಮಾನ್‌ ಖಾನ್‌ಗೆ ಜೊತೆಯಾದ ರಿಪಲ್‌ ಪಟೇಲ್‌ 13 ಎಸೆತದಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್‌ ಇದ್ದ 23 ರನ್‌ ಬಾರಿಸಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದ್ದರು. ಪೀಟರ್‌ ಸಾಲ್ಟ್‌ (0) ಎದುರಿಸಿದ ಮೊದಲ ಎಸೆತದಲ್ಲೇ ಔಟಾದರೆ, ಡೇವಿಡ್‌ ವಾರ್ನರ್‌ (2), ಪ್ರಿಯಂ ಗರ್ಗ್‌ (10), ರಿಲ್ಲಿ ರೋಸೌ (8) ಹಾಗೂ ಮನೀಷ್‌ ಪಾಂಡೆ (1) ಅಲ್ಪ ಮೊತ್ತಕ್ಕೆ ಔಟಾದರು.  

ನೀನು ನನ್ನ ಕಾಲು ಧೂಳಿಗೆ ಸಮ: ಚರ್ಚೆಗೆ ಗ್ರಾಸವಾದ ವಿರಾಟ್ ಕೊಹ್ಲಿ ವರ್ತನೆ, ವಿಡಿಯೋ ವೈರಲ್

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?