ಸೋಲಿನ ಬೆನ್ನಲ್ಲೇ ಲಖನೌಗೆ ಮತ್ತೆ ಶಾಕ್, ನಾಯಕ ರಾಹುಲ್ ಕೆಲ ಪಂದ್ಯಗಳಿಗೆ ಡೌಟ್..?

Published : May 02, 2023, 04:19 PM IST
ಸೋಲಿನ ಬೆನ್ನಲ್ಲೇ ಲಖನೌಗೆ ಮತ್ತೆ ಶಾಕ್, ನಾಯಕ ರಾಹುಲ್ ಕೆಲ ಪಂದ್ಯಗಳಿಗೆ ಡೌಟ್..?

ಸಾರಾಂಶ

ಆರ್‌ಸಿಬಿ ಎದುರು 18 ರನ್‌ನಿಂದ ಸೋತ ಬೆಂಗಳೂರು ಕ್ಷೇತ್ರರಕ್ಷಣೆ ವೇಳೆ ಗಾಯಗೊಂಡಿರುವ ಲಖನೌ ನಾಯಕ ರಾಹುಲ್ ಕೆಲವು ಪಂದ್ಯಗಳಿಗೆ ರಾಹುಲ್, ಉನಾದ್ಕತ್ ಅಲಭ್ಯರಾಗುವ ಸಾಧ್ಯತೆ

ಲಖನೌ(ಮೇ.02): ತವರಿನ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಎದುರು ಕೇವಲ 127 ರನ್‌ಗಳ ಸಾಧಾರಣ ಗುರಿ ಬೆನ್ನತ್ತಲು ವಿಫಲವಾಗಿ 18 ರನ್‌ಗಳಿಂದ ಸೋಲುಂಡಿರುವ ಲಖನೌ ಸೂಪರ್ ಜೈಂಟ್ಸ್‌ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ತಂಡದ ನಾಯಕ ಕೆ ಎಲ್ ರಾಹುಲ್ ಹಾಗೂ ಅನುಭವಿ ವೇಗಿ ಜಯದೇವ್ ಉನಾದ್ಕರ್, ಚೆನ್ನೈ ಸೂಪರ್ ಕಿಂಗ್ಸ್‌ ಸೇರಿದಂತೆ ಮುಂದಿನ ಕೆಲವು ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. 

ರಾಯಲ್ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ಪಂದ್ಯದಲ್ಲಿ ಫೀಲ್ಡಿಂಗ್‌ ವೇಳೆ ಲಖನೌ ತಂಡದ ನಾಯಕ ಕೆ.ಎ​ಲ್‌.​ರಾ​ಹುಲ್‌ ಸ್ನಾಯು​ಸೆ​ಳೆ​ತಕ್ಕೆ ಒಳ​ಗಾ​ಗಿದ್ದು, ಕೂಡಲೇ ಮೈದಾ​ನ​ದಿಂದ ಹೊರ​ನ​ಡೆ​ದಿ​ದ್ದಾರೆ. ಅವರ ಗಾಯದ ಪ್ರಮಾಣ ಎಷ್ಟಿದೆ ಎಂಬುದು ಇನ್ನಷ್ಟೇ ತಿಳಿ​ದು​ಬ​ರ​ಬೇ​ಕಿದೆ. ಗಾಯದ ಪ್ರಮಾ​ಣದ ಹೆಚ್ಚಿ​ದ್ದರೆ ಐಪಿ​ಎ​ಲ್‌ನ ಕೆಲ ಪಂದ್ಯ​ಗ​ಳಿಗೆ ಅಲ​ಭ್ಯ​ರಾ​ಗ​ಬ​ಹುದು ಎಂದು ಮಾಧ್ಯ​ಮ​ಗ​ಳಲ್ಲಿ ವರ​ದಿ​ಯಾ​ಗಿ​ದೆ.

ಇಲ್ಲಿನ ಏಕಾನ ಮೈದಾನದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 126 ರನ್ ಗಳಿಸಲಷ್ಟೇ ಶಕ್ತವಾಯಿತು. ಇನ್ನು ಸಾಧಾರಣ ಗುರಿ ಬೆನ್ನತ್ತಿದ ಲಖನೌ ತಂಡವು ಜೋಶ್ ಹೇಜಲ್‌ವುಡ್, ಕರ್ಣ್‌ ಶರ್ಮಾ ಹಾಗೂ ಸಿರಾಜ್ ಸಂಘಟಿತ ದಾಳಿಗೆ ತತ್ತರಿಸಿ 19.5 ಓವರ್‌ಗಳಲ್ಲಿ ಕೇವಲ 108 ರನ್‌ಗಳಿಗೆ ಸೋಲು ಕಾಣುವ ಮೂಲಕ ನಿರಾಸೆ ಅನುಭವಿಸಿತು.

ಕೆ ಎಲ್ ರಾಹುಲ್, ಆರ್‌ಸಿಬಿ ಎದುರಿನ ಪಂದ್ಯದಲ್ಲಿ ಕ್ಷೇತ್ರರಕ್ಷಣೆ ಮಾಡುವಾಗ ಅವರ ಬಲ ತೊಡೆಗೆ ಗಂಭೀರವಾಗಿ ಗಾಯವಾಗಿತ್ತು. ಆ ಬಳಿಕ ಮೈದಾನ ತೊರೆದಿದ್ದ ರಾಹುಲ್, ಅನಿವಾರ್ಯ ಪರಿಸ್ಥಿತಿಯಲ್ಲಿ 11ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದಿದ್ದರು. ಆದರೆ ರಾಹುಲ್ ಒಂದೇ ಒಂದು ರನ್ ಓಡಲು ಸಾಧ್ಯವಾಗಿರಲಿಲ್ಲ. ಇನ್ನು ಲಖನೌ ಸೂಪರ್ ಜೈಂಟ್ಸ್‌ ತಂಡದ ಅನುಭವಿ ವೇಗಿ ಜಯದೇವ್ ಉನಾದ್ಕತ್, ಭಾನುವಾರ ನೆಟ್ಸ್‌ನಲ್ಲಿ ಅಭ್ಯಾಸ ನಡೆಸುವ ವೇಳೆ ಜಾರಿಬಿದ್ದು, ಬಲವಾದ ಪೆಟ್ಟು ತಿಂದಿದ್ದಾರೆ. 

'ಯಾವುದಕ್ಕೆ ಅರ್ಹವೋ ಅದನ್ನೇ ಪಡೆಯುತ್ತೀಯ': ಮತ್ತೆ ಕಿಂಗ್ ಕೊಹ್ಲಿಯನ್ನು ಕೆಣಕಿದ ನವೀನ್ ಉಲ್ ಹಕ್‌..!

ಕನ್ನಡಿಗ ಕೆ ಎಲ್ ರಾಹುಲ್‌, ಪಂಜಾಬ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ವಿರುದ್ದದ ಪಂದ್ಯಗಳನ್ನು ಹೊರತುಪಡಿಸಿದರೆ ಉಳಿದ್ಯಾವ ತಂಡಗಳ ವಿರುದ್ದವೂ ಸ್ಥಿರ ಪ್ರದರ್ಶನ ತೋರಲು ವಿಫಲವಾಗಿದ್ದಾರೆ. ಲಖನೌ ಪರ ಕೈಲ್ ಮೇಯರ್ಸ್‌, ನಿಕೋಲಸ್ ಫೂರನ್, ಮಾರ್ಕಸ್ ಸ್ಟೋನಿಸ್ ಹಾಗೂ ಕೃನಾಲ್ ಪಾಂಡ್ಯ ಅವರಂತಹ ಆಟಗಾರರು ಅದ್ಭುತ ಪ್ರದರ್ಶನ ತೋರುವ ಮೂಲಕ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಪಂಜಾಬ್ ಕಿಂಗ್ಸ್ ಎದುರು ಲಖನೌ ಸೂಪರ್ ಜೈಂಟ್ಸ್‌ ತಂಡವು 5 ವಿಕೆಟ್ ಕಳೆದುಕೊಂಡು 257 ರನ್ ಚಚ್ಚಿತ್ತು. ಆದರೆ ಆರ್‌ಸಿಬಿ ಎದುರು 127 ರನ್ ಗಳಿಸಲು ಪರದಾಡಿತ್ತು. 

ಈ ಸೋಲಿನೊಂದಿಗೆ ಲಖನೌ ಸೂಪರ್ ಜೈಂಟ್ಸ್‌ ತಂಡವು 10 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದಿದೆ. ಇದೀಗ ಮೇ 03ರಂದು ಲಖನೌ ತಂಡವು ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಎದುರು ಸೆಣಸಾಡಲಿದೆ. ಉಭಯ ತಂಡಗಳು ತಲಾ 10 ಅಂಕಗಳಿಸಿದ್ದು, ಪ್ಲೇ ಆಫ್‌ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ಉಭಯ ತಂಡಗಳಿಗೆ ಗೆಲುವು ಸಾಕಷ್ಟು ಮಹತ್ವದ್ದೆನಿಸಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

IPL Mini Auction 2026: 1355 ಆಟಗಾರರಲ್ಲಿ 350 ಪ್ಲೇಯರ್ಸ್ ಶಾರ್ಟ್‌ಲಿಸ್ಟ್! ಇಲ್ಲಿದೆ ಹರಾಜಿನ ಕಂಪ್ಲೀಟ್ ಡೀಟೈಲ್ಸ್
ಸಡನ್ನಾಗಿ ಸೋಶಿಯಲ್‌ ಮೀಡಿಯಾದಲ್ಲಿ ಸನ್ನಿ ಲಿಯೋನ್‌ ಫೋಟೋ ಹಂಚಿಕೊಂಡ ಅಶ್ವಿನ್‌, ಇದಕ್ಕಿದೆ ಐಪಿಎಲ್ ಲಿಂಕ್‌!