Royal Challengers Bangalore: ಲಕ್ನೋ ಅಬ್ಬರದ ನಡುವೆ 'ಓನ್ಲಿ ಆರ್‌ಸಿಬಿ' ಟ್ವಿಟರ್‌ನಲ್ಲಿ ಫುಲ್‌ ಟ್ರೆಂಡ್‌!

By Santosh Naik  |  First Published Apr 28, 2023, 10:23 PM IST

ಮೊಹಾಲಿಯಲ್ಲಿ ಪಂಜಾಬ್‌ ಬೌಲಿಂಗ್‌ ವಿಭಾಗವನ್ನು ಲಕ್ನೋ ಸೂಪರ್‌ ಜೈಂಟ್ಸ್‌ ಚೆಂಡಾಡಿದರೂ, ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಆಗಿದ್ದು ಮಾತ್ರ ಆರ್‌ಸಿಬಿ. ಓನ್ಲಿ ಆರ್‌ಸಿಬಿ ಎನ್ನುವ ಹ್ಯಾಶ್‌ಟ್ಯಾಗ್‌ನಲ್ಲಿ ಆರ್‌ಸಿಬಿ ಶುಕ್ರವಾರ ಟ್ರೆಂಡ್‌ ಆಗಿದೆ.
 


ಬೆಂಗಳೂರು (ಏ.28): ಮೊಹಾಲಿಯ ಪಂಜಾಬ್‌ ಕ್ರಿಕೆಟ್‌ ಸಂಸ್ಥೆ ಮೈದಾನದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್ ಅಕ್ಷರಶಃ ರುದ್ರನರ್ತನ ಮಾಡಿತು. ಕೇಬಲ 6 ರನ್‌ಗಳ ಅಂತರದಿಂದ ಐಪಿಎಲ್‌ನ ಗರಿಷ್ಠ ಸ್ಕೋರ್‌ ದಾಖಲೆಯನ್ನು ಸರಿಗಟ್ಟುವ ಸಾಧನೆಯಿಂದ ವಂಚಿತವಾಯಿತು. ನೆನಪಿರಲಿ.. ಲಕ್ನೋ ಸೂಪರ್‌ ಜೈಂಟ್ಸ್‌ ಬಾರಿಸಿದ 5 ವಿಕೆಟ್‌ಗೆ 257 ರನ್‌ ಐಪಿಎಲ್‌ ಇತಿಹಾಸದ 2ನೇ ಗರಿಷ್ಠ ಮೊತ್ತ. ಹಾಗಿದ್ದರೆ, ಮೊದಲ ಗರಿಷ್ಠ ಮೊತ್ತ ಯಾವುದು ಅನ್ನೋದು ಗೊತ್ತಾ? ಇದು ಆರ್‌ಸಿಬಿ ತಂಡದ ಇನ್ನಿಂಗ್ಸ್. 10 ವರ್ಷಗಳ ಹಿಂದೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪುಣೆ ವಾರಿಯರ್ಸ್‌ ಬೌಲರ್‌ಗಳನ್ನು ಚೆಂಡಾಡಿದ್ದ ಕ್ರಿಸ್‌ ಗೇಲ್‌ 175 ರನ್‌ ಸಿಡಿಸಿದ್ದರು. ಈ ಪಂದ್ಯದಲ್ಲಿ ಆರ್‌ಸಿಬಿ ಬಾರಿಸಿದ್ದ 5 ವಿಕೆಟ್‌ಗೆ 263 ರನ್‌ ಐಪಿಎಲ್‌ನ ಈವರೆಗಿನ ಗರಿಷ್ಠ ಮೊತ್ತ. ಇಂದಿನ ಲಕ್ನೋ ಇನ್ನಿಂಗ್ಸ್‌ವರೆಗೂ 2018ರಲ್ಲಿ ಗುಜರಾತ್‌ ಲಯನ್ಸ್‌ ವಿರುದ್ಧ ಆರ್‌ಸಿಬಿ ಬಾರಿಸಿದ 3 ವಿಕೆಟ್‌ಗೆ 248 ರನ್‌ 2ನೇ ಗರಿಷ್ಠ ಮೊತ್ತವಾಗಿತ್ತು. ಅದೀಗ ಮೂರನೇ ಸ್ಥಾನಕ್ಕೆ ಕುಸಿದಿದೆ. 2010ರಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಚೆಪಾಕ್‌ನಲ್ಲಿ ರಾಜಸ್ಥಾನ ವಿರುದ್ಧ 5 ವಿಕೆಟ್‌ಗೆ 246 ರನ್‌ ಬಾರಿಸಿದ್ದು, ನಾಲ್ಕನೇ ಸ್ಥಾನದಲ್ಲಿದ್ದರೆ, 2018ರಲ್ಲಿ ಕೆಕೆಆರ್‌ ಇಂದೋರ್‌ನಲ್ಲಿ ಪಂಜಾಬ್‌ ವಿರುದ್ಧ 6 ವಿಕೆಟ್‌ಗೆ 245 ರನ್‌ ಬಾರಿಸಿದ್ದು 5ನೇ ಸ್ಥಾನದಲ್ಲಿದೆ.

ರನ್‌ ಮಾತ್ರವಲ್ಲ ಬೌಂಡರಿ ಕೌಂಟ್‌ ಲೆಕ್ಕಾಚಾರದಲ್ಲೂ ಆರ್‌ಸಿಬಿಯ ದಾಖಲೆ ಮುರಿಯಲು ಲಕ್ನೋಗೆ ಸಾಧ್ಯವಾಗಿಲ್ಲ. ಪುಣೆ ವಿರುದ್ಧ ಆರ್‌ಸಿಬಿ, 21 ಬೌಂಡರಿ, 21 ಸಿಕ್ಸರ್‌ನೊಂದಿಗೆ 42 ಬೌಂಡರಿ ಸಾಧನೆ ಮಾಡಿದ್ದರೆ, ಲಕ್ನೋ ಸೂಪರ್‌ ಜೈಂಟ್ಸ್‌ 27 ಬೌಂಡರಿ, 14 ಸಿಕ್ಸರ್‌ಗಳೊಂದಿಗೆ 41 ಬೌಂಡರಿಗಳೊಂದಿಗೆ 2ನೇ ಸ್ಥಾನದಲ್ಲಿದೆ.  ಇದರ ಬೆನ್ನಲ್ಲಿಯೇ ಟ್ವಿಟರ್‌ನಲ್ಲಿ ಆರ್‌ಸಿಬಿಯ ಅಭಿಮಾನಿಗಳು 'ಓನ್ಲಿ ಆರ್‌ಸಿಬಿ' ಎನ್ನುವ ಹ್ಯಾಶ್‌ ಟ್ಯಾಗ್‌ನಲ್ಲಿ ಟ್ರೆಂಡ್‌ ಆರಂಭಿಸಿದ್ದು, ಕೆಲವೇ ಗಂಟೆಗಳಲ್ಲಿ ಸಾವಿರಾರು ಟ್ವೀಟ್‌ಗಳು ಇದರಲ್ಲಿ ದಾಖಲಾಗಿದೆ.

'263 ರನ್‌ ಬರಿ ದಾಖಲೆಯಲ್ಲ. ಇದನ್ನು ಆರ್‌ಸಿಬಿಯಿಂದ ಮಾತ್ರವೇ ಸಾಧ್ಯ ಹಾಗೂ ಆರ್‌ಸಿಬಿ ಮಾತ್ರವೇ ಬ್ರೇಕ್‌ ಮಾಡಲು ಸಾಧ್ಯ' ಎಂದು ಅಭಿಷೇಕ್‌ ಕುಮಾರ್‌ ಎನ್ನುವ ವ್ಯಕ್ತಿ ಆರ್‌ಸಿಬಿಯ ಅಂದಿನ ಪಂದ್ಯದ ಚಿತ್ರದೊಂದಿಗೆ ಪೋಸ್ಟ್‌ ಮಾಡಿದ್ದಾರೆ. 'ಒಂದೇ ಋತುವಿನಲ್ಲಿ ಕೊಹ್ಲಿಯ 973 ರನ್‌, ಒಂದೇ ಇನ್ನಿಂಗ್ಸ್‌ನಲ್ಲಿ 263 ರನ್‌ ಹಾಗೂ ಒಂದೇ ಇನ್ನಿಂಗ್ಸ್‌ನಲ್ಲಿ 49 ರನ್‌' ಇದು ಆರ್‌ಸಿಬಿಯ ದಾಖಲೆ. ಇದನ್ನೂ ಯಾರೂ ಬ್ರೇಕ್‌ ಮಾಡಲು ಸಾಧ್ಯವಿಲ್ಲ' ಎಂದು ಮತ್ತೊಬ್ಬರು ಬರೆದಿದ್ದಾರೆ.

'ಇಂದು ಪಂದ್ಯವಿರೋದು ಪಂಜಾಬ್‌ ಹಾಗೂ ಲಕ್ನೋ ತಂಡಗಳ ವಿರುದ್ಧ ಆದರೆ, ಟ್ರೆಂಡ್‌ ಆಗುತ್ತಿರುವುದು "ಓನ್ಲಿ ಆರ್‌ಸಿಬಿ' ಆರ್‌ಸಿಬಿಗೆ ಇರುವ ಕ್ರೇಜ್‌ಅನ್ನು ಯಾರಿಗೂ ಮ್ಯಾಚ್‌ ಮಾಡಲು ಸಾಧ್ಯವಿಲ್ಲ' ಎಂದು ಇನ್ನೊಬ್ಬರು ಬರೆದಿದ್ದಾರೆ.

Tap to resize

Latest Videos

2016ರ ಮೇ 18 ರಂದು ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಕೇವಲ 15 ಓವರ್‌ಗಳಲ್ಲಿ 211 ರನ್‌ ಬಾರಿಸಿದ್ದನ್ನು ನೆನಪಿಸಿಕೊಂಡಿರುವ ಇನ್ನೊಬ್ಬ ವ್ಯಕ್ತಿ. ಹಾಗೇನಾದರೂ ಆ ಪಂದ್ಯದಲ್ಲಿ ಆರ್‌ಸಿಬಿ 20 ಓವರ್‌ ಆಡಿದ್ದರೆ ಖಂಡಿತಾ 263 ರನ್‌ ದಾಖಲೆಯನ್ನೂ ಪುಡಿಮಾಡುತ್ತಿತ್ತು ಎಂದು ಬರೆದಿದ್ದಾರೆ.

263 is unbreakable, Only RCB can break this! 🥵🔥
Gayle Storm. pic.twitter.com/UTqkGpfRtw

— Royals Cricket 🇮🇳 (@ImHimanshu_Raj)

IPL 2023: ಪಂಜಾಬ್‌ ಬೌಲಿಂಗ್‌ಅನ್ನು ಚೆಂಡಾಡಿದ ಲಕ್ನೋ, RCB ದಾಖಲೆ ಸೇಫ್‌!

'ದೇವರೆ ತುಂಬಾ ಥ್ಯಾಂಕ್ಸ್‌. ಆರ್‌ಸಿಬಿಯ 263 ರನ್‌ ಸೇಫ್‌. ಈ ದಾಖಲೆಯನ್ನು ಆರ್‌ಸಿಬಿ ಮಾತ್ರವೇ ಬ್ರೇಕ್‌ ಮಾಡಲು ಸಾಧ್ಯ' ಎಂದು ಚಿನ್ಮಯ್‌ ಎನ್ನುವವರು ಬರೆದುಕೊಂಡಿದ್ದಾರೆ. ಐಪಿಎಲ್‌ನಲ್ಲಿ ದಾಖಲೆ ಬರೆಯುವುದಾಗಲಿ, ದಾಖಲೆ ಮುರಿಯುವುದಾಗಲಿ ಆರ್‌ಸಿಬಿಯಿಂದ ಮಾತ್ರವೇ ಸಾಧ್ಯ ಎಂದು ಇನ್ನೊಬ್ಬ ಅಭಿಮಾನಿ ಟ್ವೀಟ್‌ ಮಾಡಿದ್ದಾರೆ.

ಕೊಹ್ಲಿ 'ಸ್ಲೋ' ಬ್ಯಾಟಿಂಗ್‌ ಕೆಣಕಿದ ಮುಂಬೈ ಪೊಲೀಸ್‌ಗೆ ಬೆಂಗಳೂರು ಪೊಲೀಸ್‌ ಖಡಕ್‌ ಉತ್ತರ, ಆದರೆ ಒಂದಿದೆ ಟ್ವಿಸ್ಟು!

ಆರ್‌ಸಿಬಿ 263 ರನ್‌ಗಳಿಗೆ 10 ವರ್ಷವಾಗಿದೆ ಹಾಗಿದ್ದರೂ ಈವರೆಗೂ ಯಾವುದೇ ತಂಡವಾಗಲಿ ಇದನ್ನು ಚೇಸ್‌ ಮಾಡಲು ಸಾಧ್ಯವಾಗಿಲ್ಲ. ಆರ್‌ಸಿಬಿಯ ಫ್ಯಾನ್ಸ್‌ ಮಾತ್ರವೇ ಇದನ್ನೂ ಫೀಲ್‌ ಮಾಡಲು ಸಾಧ್ಯ ಎಂದು ಅರವಿಂದ್‌ ಎನ್ನುವ ಫ್ಯಾನ್‌ ಬರೆದುಕೊಂಡಿದ್ದಾರೆ. ನಿಮ್ಮ ಗರಿಷ್ಠ ಸ್ಕೋರ್‌ಗಿಂತ ನಮ್ಮ ಗರಿಷ್ಠ ಸ್ಕೋರ್‌ ಚರ್ಚೆ ಆಗ್ತಿದೆ ಎಂದಾದರೆ, ನಮ್ಮ ಟೀಮ್‌ನ ಕ್ರೇಜ್‌ ನೆನಪಿಸಿಕೊಳ್ಳಿ ಎಂದು ಗಂಭಿರ್‌ಗೆ ಉತ್ತರ ನೀಡುವಂತೆ ಆರ್‌ಸಿಬಿ ಫ್ಯಾನ್‌ ಒಬ್ಬರು ಬರೆದಿದ್ದಾರೆ.

click me!