IPL 2023: ಕೊನೇ ಎಸೆತದಲ್ಲಿ ಗೆಲುವು ಕಂಡ ಕೆಕೆಆರ್‌!

Published : May 08, 2023, 11:53 PM IST
IPL 2023: ಕೊನೇ ಎಸೆತದಲ್ಲಿ ಗೆಲುವು ಕಂಡ ಕೆಕೆಆರ್‌!

ಸಾರಾಂಶ

ಅಂತಿಮ ಎಸೆತದಲ್ಲಿ ಗೆಲುವಿಗೆ 2 ರನ್ ಬೇಕಿದ್ದಾಗ ಆರ್ಶ್‌ದೀಪ್‌ ಸಿಂಗ್‌ ಹಾಕಿದ ಫುಲ್‌ಟಾಸ್‌ ಎಸೆತ ಪಂಜಾಬ್‌ನ ಅತ್ಯಂತ ಕೊನೆಯ ಹಂತದ ಪ್ರಯತ್ನವನ್ನು ಹಾಳುಗೆಡವಿತು. ಈ ಎಸೆತದಲ್ಲಿ ಚೆಂಡನ್ನು ಬೌಂಡರಿಗಟ್ಟಿದ ರಿಂಕು ಸಿಂಗ್‌ ಮತ್ತೊಮ್ಮೆ ಕೆಕೆಆರ್‌ ತಂಡದ ಗೆಲುವಿನ ಹೀರೋ ಎನಿಸಿದರು.

ಕೋಲ್ಕತ್ತಾ (ಮೇ.8): ಬಹುಶಃ ಆರ್ಶ್‌ದೀಪ್‌ ಪಂದ್ಯದ ಕಟ್ಟಕಡೆಯ ಎಸೆತವನ್ನು ಇನ್ನಷ್ಟು ಜಾಣ್ಮೆಯಿಂದ ಎಸೆದಿದ್ದರೆ, ಕನಿಷ್ ಪಂಜಾಬ್‌ ಕಿಂಗ್ಸ್ ತಂಡಕ್ಕೆ ಪಂದ್ಯದಲ್ಲಿ ಟೈ ಮಾಡಿಕೊಳ್ಳುವ ಅವಕಾಶವಾದರೂ ಸಿಗುತ್ತಿತ್ತು. ಆದರೆ, ಸೆಟ್‌ ಆಗಿರುವ ಬ್ಯಾಟ್ಸ್‌ಮನ್‌ಗೆ ಫುಲ್‌ಟಾಸ್‌ ಎಸೆದ ಆರ್ಶ್‌ದೀಪ್‌ ಸಿಂಗ್‌ ಅಲ್ಲಿಯವರೆಗೂ ಮಾಡಿದ ತಮ್ಮದೇ ಪ್ರಯತ್ನವನ್ನು ಹಾಳುಗೆಡವಿದರು. ಕೊನೆಯ ಎಸೆತದಲ್ಲಿ ಗೆಲುವಿಗೆ 2 ರನ್‌ ಬೇಕಿದ್ದ ಹಂತದಲ್ಲಿ ರಿಂಕಿ ಸಿಂಗ್‌ ಫುಟ್‌ಟಾಸ್ ಆಗಿ ಬಂದ ಚೆಂಡನ್ನು ಬೌಂಡರಿಗಟ್ಟಿ ಕೆಕೆಆರ್‌ ತಂಡದ ಗೆಲುವಿನ ಹೀರೋ ಎನಿಸಿದರು. ಪಂಜಾಬ್‌ ಕಿಂಗ್ಸ್‌ ವಿರುದ್ಧದ ಐದು ವಿಕೆಟ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಪ್ರಗತಿ ಕಂಡ ಕೆಕೆಆರ್‌ 10 ಅಂಕದೊಂದಿಗೆ ಐದನೇ ಸ್ಥಾನಕ್ಕೇರಿದರೆ, ಇಷ್ಟೇ ಅಂಕ ಹೊಂದಿರುವ ಆರ್‌ಸಿಬಿ ತಂಡ, ರನ್‌ರೇಟ್‌ ಆಧಾರದಲ್ಲಿ ಆರನೇ ಸ್ಥಾನಕ್ಕೆ ಕುಸಿಯಿತು. ಗೆಲುವಿಗೆ 180 ರನ್‌ ಬೆನ್ನಟ್ಟಿದ ಕೆಕೆಆರ್‌ ತಂಡ 5 ವಿಕೆಟ್‌ಗೆ 182 ರನ್‌ ಸಿಡಿಸುವ ಮೂಲಕ ಲೀಗ್‌ನಲ್ಲಿ ತನ್ನ 5ನೇ ಗೆಲುವನ್ನು ಕೋಲ್ಕತ್ತ ನೈಟ್‌ ರೈಡರ್ಸ್‌ ದಾಖಲು ಮಾಡಿತು.

ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್‌ ಕಿಂಗ್ಸ್‌ ತಂಡ ನಾಯಕ ಶಿಖರ್‌ ಧವನ್‌ (57ರನ್‌, 47 ಎಸೆತ, 9 ಬೌಂಡರಿ, 1 ಸಿಕ್ಸರ್‌) ಹಾಗೂ ಇನ್ನಿಂಗ್ಸ್‌ನ ಕೊನೆಯಲ್ಲಿ ಶಾರುಖ್‌ ಖಾನ್‌ (21 ರನ್‌, 8 ಎಸೆತ, 3 ಬೌಂಡರಿ, 1 ಸಿಕ್ಸರ್‌) ನೆರವಿನಿಂದ 7 ವಿಕೆಟ್‌ಗೆ 179 ರನ್‌ ಪೇರಿಸಿತು. ವರುಣ್‌ ಚಕ್ರವರ್ತಿ ತಮ್ಮ 4 ಓವರ್‌ಗಳ ಕೋಟಾದಲ್ಲಿ 26 ರನ್‌ಗೆ 3 ವಿಕೆಟ್‌ ಉರುಳಿಸಿ ಪಂಜಾಬ್‌ ಕಿಂಗ್ಸ್‌ ತಂಡದ ಅಬ್ಬರಕ್ಕೆ ನಿಯಂತ್ರಣ ಹೇರಿದರು. ಪ್ರತಿಯಾಗಿ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡ ನಾಯಕ ನಿತೀಶ್‌ ರಾಣಾ (51ರನ್‌, 38 ಎಸೆತ, 6 ಬೌಂಡರಿ, 1 ಸಿಕ್ಸರ್‌) ಹಾಗೂ ಆಂಡ್ರೆ ರಸೆಲ್‌ (42 ರನ್‌, 23 ಎಸೆತ, 3 ಬೌಂಡರಿ, 3 ಸಿಕ್ಸರ್‌) ಇನ್ನಿಂಗ್ಸ್‌ ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 182 ರನ್‌ ಸಿಡಿಸಿ ಗೆಲುವು ಕಂಡಿತು.

ಕೊನೇ ಎರಡು ಓವರ್‌ಗಳಲ್ಲಿ ಕೆಕೆಆರ್‌ ತಂಡದ ಗೆಲುವಿಗೆ 26 ರನ್‌ ಬೇಕಿದ್ದವು. ಈ ಹಂತದಲ್ಲಿ ಪಂಜಾಬ್‌ ಕಿಂಗ್ಸ್‌ ಇನ್ನಷ್ಟು ಎಚ್ಚರಿಕೆಯ ದಾಳಿ ನಡೆಸಿದ್ದರೆ, ಗೆಲುವು ಖಂಡಿತಾ ಸಾಧ್ಯವಿತ್ತು.ಆದರೆ, ಸ್ಯಾಮ್‌ ಕರ್ರನ್‌ ಎಸೆದ 19ನೇ ಓವರ್‌ನಲ್ಲಿ ಆಂಡ್ರೆ ರಸೆಲ್‌ ಮೂರು ಅಬ್ಬರದ ಸಿಕ್ಸರ್‌ಗಳೊಂದಿಗೆ 20 ರನ್‌ ದೋಚಿದ್ದು, ಇಡೀ ಪಂಜಾಬ್‌ ಕಿಂಗ್ಸ್‌ ತಂಡದ ಪ್ಲ್ಯಾನ್‌ಅನ್ನು ಉಲ್ಟಾ ಮಾಡಿತು. ಇದರಿಂದಾಗಿ ಕೊನೇ ಓವರ್‌ನಲ್ಲಿ ಕೆಕೆಆರ್‌ ಗೆಲುವಿಗೆ 6 ರನ್‌ ಬೇಕಿದ್ದರೆ, ಈ ಮೊತ್ತವನ್ನು ರಕ್ಷಣೆ ಮಾಡುವ ಜವಾಬ್ದಾರಿ ಆರ್ಶ್‌ದೀಪ್‌ ಹೆಗಲಿಗೇರಿತು.

'ಹೆಂಡತಿ ಜತೆಗಿದ್ದರೇ..': ಆ್ಯಂಡ್ರೆ ರಸೆಲ್ ಪತ್ನಿಯ ಬಗ್ಗೆ ನಿಮಗೆ ಗೊತ್ತಿರದ ಇಂಟ್ರೆಸ್ಟಿಂಗ್ ಸಂಗತಿಗಳಿವು..!

ಮೊದಲ ಎಸೆತದಲ್ಲಿ ರಸೆಲ್‌ ರನ್‌ ಬಾರಿಸಲು ವಿಫಲರಾದರೆ, 2 ಹಾಗೂ 3ನೇ ಎಸೆತದಲ್ಲಿ ರಸೆಲ್‌ ಹಾಗೂ ರಿಂಕು ತಲಾ ಒಂದೊಂದು ರನ್‌ ಬಾರಿಸಿದರು. ಮೂರನೇ ಎಸೆತದಲ್ಲಿ ರಸೆಲ್‌ ಎರಡು ರನ್‌ಗಳಿಸುವ ಮೂಲಕ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು. ಆದರೆ, 5ನೇ ಎಸೆತದಲ್ಲಿ ರಸೆಲ್‌ರನ್ನು ಪೆವಿಲಿಯನ್‌ಗಟ್ಟು ಮೂಲಕ ಆರ್ಶ್‌ದೀಪ್‌ ಪಂಜಾಬ್‌ಗೆ ಸಣ್ಣ ಆಸೆ ನೀಡಿದ್ದರು. ಕೊನೇ ಎಸೆತದಲ್ಲಿ 2 ರನ್‌ ಬೇಕಿದ್ದಾಗ, ಸೊಂಟದ ಮಟ್ಟಕ್ಕೆ ಫುಲ್‌ಟಾಸ್‌ ಎಸೆತವನ್ನು ಆರ್ಶ್‌ದೀಪ್‌ ಎಸೆದರು. ಇದನ್ನು ಡೀಪ್‌ ಬ್ಯಾಕ್‌ವರ್ಡ್‌ ಸ್ಕ್ವೇರ್‌ ಲೆಗ್‌ನಲ್ಲಿ ಫ್ಲಿಕ್‌ ಮಾಡಿದ ರಿಂಕಿ ತಂಡಕ್ಕೆ ಗೆಲುವು ನೀಡಿದರು.10 ಎಸೆತಗಳಲ್ಲಿ 2 ಬೌಂಡರಿ,  1 ಸಿಕ್ಸರ್‌ನೊಂದಿಗೆ21 ರನ್‌ ಬಾರಿಸಿ ರಿಂಕು ಅಜೇಯವಾಗುಳಿದರು.

ಕೊಹ್ಲಿ vs ರೋಹಿತ್: ಈ ಐಪಿಎಲ್‌ನಲ್ಲಿ ಯಾರ ಪ್ರದರ್ಶನ ಹೇಗಿದೆ?

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಚೇರ್ ಮೇಲೆ ಕೂತು ಹೋಮ ಹವನ ಮಾಡಿದ ಶ್ರೇಯಸ್ ಅಯ್ಯರ್, ಸನಾತನಿಯೋ, ಅಲ್ವೋ ಚರ್ಚೆ!
ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನ ಆಸೀಸ್‌, ಆಫ್ಘನ್‌ಗೆ ಟಿ20 ಪಂದ್ಯಗಳೇ ಇಲ್ಲ! ಯಾಕೆ?