ಆರ್‌ಸಿಬಿ vs ಕೆಕೆಆರ್ ಟಾಸ್ ವೇಳೆ ಗೊಂದಲ, ನಾಯಕ ನಿತೀಶ್ ರಾಣಾ ಆಕ್ರೋಶ!

Published : Apr 06, 2023, 08:25 PM IST
ಆರ್‌ಸಿಬಿ vs ಕೆಕೆಆರ್ ಟಾಸ್ ವೇಳೆ ಗೊಂದಲ, ನಾಯಕ ನಿತೀಶ್ ರಾಣಾ ಆಕ್ರೋಶ!

ಸಾರಾಂಶ

ಆರ್‌ಸಿಬಿ ಹಾಗೂ ಕೆಕೆಆರ್ ನಡುವಿನ ಐಪಿಎಲ್ ಪಂದ್ಯದ ಆರಂಭದಲ್ಲೇ ಕೆಲ ಗೊಂದಲ ನಡೆದಿದೆ. ಟಾಸ್ ವೇಳೆ ರೆಫ್ರಿ, ನಿತೀಶ್ ರಾಣಾ ಟಾಸ್ ಗೆದ್ದಿದ್ದಾರೆ ಎಂದರೆ, ನಿರೂಪಕ ಸಂಜಯ್ ಮಂಜ್ರೇಕರ್ ಫಾಫ್ ಡುಪ್ಲೆಸಿಸ್ ಎಂದಿದ್ದಾರೆ. ಕೊನೆಗೆ ಆರ್‌ಸಿಬಿ ನಾಯಕ ಟಾಸ್ ಗೆದ್ದಿದ್ದಾರೆ ಎಂದು ಘೋಷಿಸಲಾಗಿದೆ. ಇದು ನಿತೀಶ್ ರಾಣಾ ಆಕ್ರೋಶಕ್ಕೆ ಕಾರಣವಾಗಿದೆ.  

ಕೋಲ್ಕತಾ(ಏ.06): ಐಪಿಎಲ್ 2023ರ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಟಾಸ್ ವೇಳೆ ಗೊಂದಲ ಏರ್ಪಟ್ಟ ಘಟನೆ ನಜೆದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತಾ ನೈಟ್ ರೈಡರ್ಸ್ ಪಂದ್ಯದ ಟಾಸ್‌ಗಾಗಿ ನಾಯಕರು ಸಜ್ಜಾಗಿದ್ದರು. ಈ ವೇಳೆ ಟಾಸ್ ಯಾರು ಗೆದ್ದಿದ್ದಾರೆ ಅನ್ನೋ ಗೊಂದಲವಾಗಿದೆ. ಕೊನೆಗೆ ಆರ್‌ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಟಾಸ್ ಗೆದ್ದಿದ್ದಾರೆ ಎಂದು ಘೋಷಿಸಲಾಯಿತು. ಇದು ಕೆಕೆಆರ್ ನಾಯಕ ನಿತೀಶ್ ರಾಣಾ ಆಕ್ರೋಶಕ್ಕೆ ಕಾರಣಾಗಿದೆ. ಇಷ್ಟೇ ಅಲ್ಲ ಸಾಮಾಜಿಕ ಜಾಲತಾಣದಲ್ಲಿ ಐಪಿಎಲ್ ವಿರುದ್ಧವೇ ಟೀಕೆಗಳು ಕೇಳಿಬಂದಿದೆ.

9ನೇ ಲೀಗ್ ಪಂದ್ಯದಲ್ಲಿ ಟಾಸ್‌ಗಾಗಿ ಆರ್‌ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಹಾಗೂ ಕೆಕೆಆರ್ ನಾಯಕ ನಿತೀಶ್ ರಾಣ ಸಜ್ಜಾಗಿದ್ದರು. ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ಎಲ್ಲರ ಪರಿಚಯ ಮಾಡಿದರು. ಇದರ ಬೆನ್ನಲ್ಲಿ ನಿತೀಶ್ ರಾಣಾ ನಾಣ್ಯ ಚಿಮ್ಮಿಸಿದರು. ರೆಫ್ರಿ ನಾಣ್ಯ ನೋಡಿ ಕೆಕೆಆರ್ ಟಾಸ್ ಗೆದ್ದಿದೆ ಎಂದಿದ್ದಾರೆ. ಇದೇ ವೇಳೆ ಫಾಫ್ ಡುಪ್ಲೆಸಿಸ್, ನಾನು ಹೆಡ್ ಎಂದು ಕರೆ ನೀಡಿದ್ದೆ . ಇದಕ್ಕೆ ಸಂಜಯ್ ಮಂಜ್ರೇಕರ್ ಕೂಡ ಧನಿಗೂಡಿಸಿದ್ದಾರೆ. ಫಾಫ್ ಹೆಡ್ಸ್ ಕಾಲ್ ಮಾಡಿದ್ದಾರೆ. ಹಾಗಾಗಿ ಟಾಸ್ ಆರ್‌ಸಿಬಿ ಗೆದ್ದುಕೊಂಡಿದೆ ಎಂದಿದ್ದಾರೆ.

IPL 2023 ಕೋಲ್ಕತಾ ವಿರುದ್ಧ ಟಾಸ್ ಗೆದ್ದ ಆರ್‌ಸಿಬಿ, ತಂಡದಲ್ಲಿ 1 ಬದಲಾವಣೆ!

ಇತ್ತ ಮ್ಯಾಚ್ ರೆಫ್ರಿ ಸುಮ್ಮನಾಗಿದ್ದಾರೆ. ಆದರೆ ಈ ಬೆಳವಣಿಗೆ ನಿತೀಶ್ ರಾಣಾ ಆಕ್ರೋಶಕ್ಕೆ ಕಾರಣವಾಗಿದೆ. ಕೆಕೆಆರ್ ಟಾಸ್ ಗೆದ್ದು ಆರ್‌ಸಿಬಿಗೆ ಹೇಗೆ ನೀಡಲಾಗಿದೆ ಅನ್ನೋ ಆಕ್ರೋಶ ಸಾಮಾಜಿಕ ಜಾಲತಾಣದಲ್ಲೂ ವ್ಯಕ್ತವಾಗಿದೆ. ನಿತೀಶ್ ರಾಣಾ ತಮ್ಮ ಅಸಮಾಧಾನವನ್ನು ಮೈದಾನದಲ್ಲಿ ಹೊರಹಾಕಿದ್ದಾರೆ. ಇತ್ತ ಫಾಫ್ ಸಂಭ್ರಮದಿಂದ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. 

 

 

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಕೆಲವರು ಪಂದ್ಯದ ಟಾಸ್ ಯಾರು ಗೆಲ್ಲಬೇಕು ಅನ್ನೋದು ಮೊದಲೇ ನಿರ್ಧಾರವಾಗಿರುತ್ತದೆ ಎಂದು ಟೀಕಿಸಿದ್ದಾರೆ. 

ಈ ಬಾರಿ IPL ಕಪ್ ಗೆಲ್ಲುವ ತಂಡದ ಬಗ್ಗೆ ಭವಿಷ್ಯ ನುಡಿದ ಎಬಿ ಡಿವಿಲಿಯರ್ಸ್‌..! ಆರ್‌ಸಿಬಿ ಅಲ್ಲವೆಂದ ಎಬಿಡಿ

ಆರ್‌ಸಿಬಿ ಪ್ಲೇಯಿಂಗ್ 11
ವಿರಾಟ್ ಕೊಹ್ಲಿ, ಫಾಫ್ ಡುಪ್ಲಸಿಸ್(ನಾಯಕ), ದಿನೇಶ್ ಕಾರ್ತಿಕ್, ಗ್ಲೆನ್ ಮ್ಯಾಕ್ಸ್‌ವೆಲ್, ಮೆಚೆಲ್ ಬ್ರೆಸ್‌ವೆಲ್, ಶಹಬಾಜ್ ಅಹಮ್ಮದ್, ಡೇವಿಡ್ ವಿಲೆ, ಕರಣ್ ಶರ್ಮಾ, ಹರ್ಷಲ್ ಪಟೇಲ್, ಅಕಾಶ್ ದೀಪ್, ಮೊಹಮ್ಮದ್ ಸಿರಾಜ್ 

ಕೆಕೆಆರ್ ಪ್ಲೇಯಿಂಗ್ 11
ಮನ್ದೀಪ್ ಸಿಂಗ್, ರಹಮಾನುಲ್ಹಾ ಗುರ್ಬಾಜ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ(ನಾಯಕ), ರಿಂಕು ಸಿಂಗ್, ಆ್ಯಂಡ್ರೆ ರಸೆಲ್, ಶಾರ್ದೂಲ್ ಠಾಕೂರ್, ಸುನಿಲ್ ನರೈನ್, ಟಿಮ್ ಸೌಥಿ, ಉಮೇಶ್ ಯಾದವ್, ವರುಣ್ ಚಕ್ರವರ್ತಿ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿಜಯ್ ಹಜಾರೆ ಟ್ರೋಫಿ: ರಿಷಭ್ ಪಂತ್ ಮತ್ತೆ ಫೇಲ್ ಆದ್ರೂ ಡೆಲ್ಲಿಗೆ ಹ್ಯಾಟ್ರಿಕ್ ಗೆಲುವು
ವಿಜಯ್ ಹಜಾರೆ ಟ್ರೋಫಿ: ತಮಿಳುನಾಡು ತಂಡವನ್ನು ಬಗ್ಗುಬಡಿದ ಕರ್ನಾಟಕ; ನಮ್ಮ ರಾಜ್ಯಕ್ಕೆ ಹ್ಯಾಟ್ರಿಕ್ ಜಯಭೇರಿ