IPL 2023 ಗೌತಮ್ ಗಂಭೀರ್ ಭಾರತದ ದಿಗ್ಗಜ, ಅವರಿಂದ ಸಾಕಷ್ಟು ಕಲಿತಿದ್ದೇನೆ: ನವೀನ್-ಉಲ್-ಹಕ್‌

Published : May 25, 2023, 02:12 PM IST
IPL 2023 ಗೌತಮ್ ಗಂಭೀರ್ ಭಾರತದ ದಿಗ್ಗಜ, ಅವರಿಂದ ಸಾಕಷ್ಟು ಕಲಿತಿದ್ದೇನೆ: ನವೀನ್-ಉಲ್-ಹಕ್‌

ಸಾರಾಂಶ

ಐಪಿಎಲ್ ಎಲಿಮಿನೇಟರ್ ಹಂತದಲ್ಲೇ ಹೊರಬಿದ್ದ ಲಖನೌ ಸೂಪರ್ ಜೈಂಟ್ಸ್ ಗೌತಮ್ ಗಂಭೀರ್ ಪರ ಬ್ಯಾಟಿಂಗ್ ಮಾಡಿದ ಆಫ್ಘಾನ್ ವೇಗಿ ನವೀನ್ ಉಲ್ ಹಕ್‌ ನಾನು ಗಂಭೀರ್ ಅವರಿಂದ ಸಾಕಷ್ಟು ಕಲಿತಿದ್ದೇನೆ ಎಂದ ಲಖನೌ ವೇಗಿ

ಚೆನ್ನೈ(ಮೇ.25): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು ಲಖನೌ ಸೂಪರ್ ಜೈಂಟ್ಸ್ ತಂಡವು ಆಘಾತಕಾರಿ ಸೋಲು ಕಾಣುವ ಮೂಲಕ ತನ್ನ ಅಭಿಯಾನವನ್ನು ಮುಗಿಸಿದೆ. ಇನ್ನು ಏಕಾನ ಮೈದಾನದಲ್ಲಿ ಆರ್‌ಸಿಬಿ ಹಾಗೂ ಲಖನೌ ತಂಡಗಳ ನಡುವಿನ ಪಂದ್ಯದ ವೇಳೆ ಮೈದಾನದಲ್ಲಿಯೇ ವಿರಾಟ್ ಕೊಹ್ಲಿ ಹಾಗೂ ಲಖನೌ ವೇಗಿ ನವೀನ್-ಉಲ್-ಹಕ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಸಂದರ್ಭದಲ್ಲಿ ಗೌತಮ್ ಗಂಭೀರ್, ಆಫ್ವಾನ್ ಮೂಲದ ವೇಗಿ ನವೀನ್ ಉಲ್ ಹಕ್ ಬೆಂಬಲಕ್ಕೆ ನಿಂತಿದ್ದರು. ಇದಾದ ಬಳಿಕ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವೆಯೂ ಮಾತಿನ ಚಕಮಕಿ ನಡೆದಿತ್ತು. ಇದಾದ ಬಳಿಕ ಸೋಷಿಯಲ್ ಮೀಡಿಯದಲ್ಲೂ ನವೀನ್ ಉಲ್‌ ಹಕ್ ಹಾಗೂ ಗೌತಮ್ ಗಂಭೀರ್, ತೀರಾ ಕೆಳಮಟ್ಟದಲ್ಲಿ ವಿರಾಟ್ ಕೊಹ್ಲಿಯ ಕಾಲೆಳೆಯುವ ಯತ್ನ ನಡೆಸಿದ್ದರು.

ಪ್ರತಿಯೊಬ್ಬರು ತಮ್ಮ ತಂಡದ ಆಟಗಾರರನ್ನು ಬೆಂಬಲಿಸುತ್ತಾರೆ. ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಗೌತಮ್ ಗಂಭೀರ್ ಅವರಿಂದ ತಾವು ಸಾಕಷ್ಟು ಕಲಿತಿದ್ದಾಗಿ ನವೀನ್ ಉಲ್ ಹಕ್ ಹೇಳಿದ್ದಾರೆ. "ಮೆಂಟರ್, ಕೋಚ್, ಆಟಗಾರರು ಅಥವಾ ಇನ್ಯಾರೇ ಆಗಿರಲಿ. ನಾನು ಮೈದಾನದಲ್ಲಿ ಸಹ ಆಟಗಾರರ ಜತೆಗೆ ನಿಲ್ಲುತ್ತೇನೆ, ನಾನು ಇದನ್ನು ಪ್ರತಿಯೊಬ್ಬರಿಂದಲೂ ನಿರೀಕ್ಷಿಸುತ್ತೇನೆ ಎಂದು ಮುಂಬೈ ಇಂಡಿಯನ್ಸ್ ಎದುರು ಸೋಲಿನ ಬಳಿಕ ಪ್ರೆಸ್ ಕಾನ್ಫರೆನ್ಸ್‌ನಲ್ಲಿ ನವೀನ್‌ ಉಲ್ ಹಕ್ ಹೇಳಿದ್ದಾರೆ.

"ಗೌತಮ್ ಗಂಭೀರ್ ಅವರೊಬ್ಬ ಭಾರತದ ದಿಗ್ಗಜ ಆಟಗಾರರಾಗಿದ್ದಾರೆ. ಅವರಿಗೆ ಭಾರತೀಯರು ಒಳ್ಳೆಯ ಗೌರವ ನೀಡುತ್ತಾರೆ. ಅವರು ಭಾರತ ಕ್ರಿಕೆಟ್‌ಗೆ ಸಾಕಷ್ಟು ಒಳ್ಳೆಯ ಕೊಡುಗೆಯನ್ನು ನೀಡಿದ್ದಾರೆ. ಓರ್ವ ಮೆಂಟರ್, ಓರ್ವ ಕೋಚ್‌, ಓರ್ವ ಕ್ರಿಕೆಟ್‌ ದಿಗ್ಗಜನಾಗಿರುವ ಗೌತಮ್‌ ಗಂಭೀರ್ ಅವರನ್ನು ನಾನು ಕೂಡಾ ಗೌರವದಿಂದ ಕಾಣುತ್ತೇನೆ. ಅವರಿಂದ ನಾನು ಸಾಕಷ್ಟು ವಿಷಯಗಳನ್ನು ಕಲಿತುಕೊಂಡಿದ್ದೇನೆ" ಎಂದು ನವೀನ್ ಉಲ್ ಹಕ್ ಹೇಳಿದ್ದಾರೆ.

ಕ್ವಾಲಿ​ಫೈ​​ಯರ್‌-2ಗೆ ಮುಂಬೈ, ಲಖ​ನೌ ಮನೆ​ಗೆ!

ಚೆನ್ನೈ: ಸತತ 2 ಸೋಲಿ​ನೊಂದಿಗೆ 16ನೇ ಆವೃತ್ತಿ ಐಪಿ​ಎ​ಲ್‌ಗೆ ಕಾಲಿ​ರಿ​ಸಿದ್ದ 5 ಬಾರಿಯ ಚಾಂಪಿ​ಯ​ನ್‌ ಮುಂಬೈ ಇಂಡಿ​ಯನ್ಸ್‌ ಕ್ವಾಲಿ​ಫೈ​ಯ​ರ್‌-2ಗೆ ಕಾಲಿ​ಟ್ಟಿದ್ದು, 6ನೇ ಪ್ರಶಸ್ತಿ ಗೆಲ್ಲುವ ಹಾದಿ​ಯಲ್ಲಿ ಮತ್ತೊಂದು ಹೆಜ್ಜೆ ಮುಂದಿ​ಟ್ಟಿದೆ. ಬುಧ​ವಾರ ಲಖನೌ ಸೂಪ​ರ್‌​ಜೈಂಟ್ಸ್‌ ವಿರು​ದ್ಧದ ಎಲಿ​ಮಿ​ನೇ​ಟರ್‌ ಪಂದ್ಯ​ದಲ್ಲಿ ರೋಹಿತ್‌ ಪಡೆ 81 ರನ್‌ ಭರ್ಜರಿ ಗೆಲುವು ಸಾಧಿ​ಸಿತು. ಲಖನೌ ಸತತ 2ನೇ ಬಾರಿಯೂ ಎಲಿ​ಮಿ​ನೇ​ಟ​ರ್‌​ನಲ್ಲಿ ಅಭಿ​ಯಾನ ಕೊನೆ​ಗೊ​ಳಿ​ಸಿತು.

IPL 2023 ಧೋನಿ-ಜಡೇಜಾ ನಡುವೆ ಮತ್ತೆ ಒಡ​ಕು? ತಂಡ ತೊರೆಯುತ್ತಾರಾ ಜಡ್ಡು?

ಚೆನ್ನೈನ ಕ್ರೀಡಾಂಗ​ಣ​ದಲ್ಲಿ ಚೇಸಿಂಗ್‌ ಕಷ್ಟ​ವಾ​ಗ​ಲಿದೆ ಎಂದ​ರಿ​ತಿದ್ದ ರೋಹಿತ್‌, ಮೊದಲು ಬ್ಯಾಟ್‌ ಮಾಡುವ ನಿರ್ಧಾರ ಕೈಗೊಂಡರು. ನಾಯ​ಕನ ಆಯ್ಕೆ ಸಮ​ರ್ಥಿ​ಸಿ​ಕೊ​ಳ್ಳು​ವಂತೆ ಬ್ಯಾಟ್‌ ಬೀಸಿದ ಮುಂಬೈ 8 ವಿಕೆ​ಟ್‌ಗೆ 182 ರನ್‌ ಕಲೆ​ಹಾ​ಕಿತು. ಬಳಿಕ ಆಕಾಶ್‌ ಮಧ್ವಾ​ಲ್‌ ಮಾರಕ ದಾಳಿಗೆ ತತ್ತ​ರಿ​ಸಿದ ಲಖ​ನೌ 16.3 ಓವ​ರಲ್ಲಿ 101 ರನ್‌ಗೆ ಸರ್ವ​ಪ​ತನ ಕಂಡಿತು.

4 ಓವರ್‌ ಮುಕ್ತಾ​ಯಕ್ಕೂ ಮುನ್ನವೇ ಆರಂಭಿ​ಕ​ರನ್ನು ಕಳೆ​ದು​ಕೊಂಡ ತಂಡಕ್ಕೆ ಗೆಲು​ವಿನ ಭರ​ವಸೆ ಮೂಡಿ​ಸಿದ್ದು ಮಾರ್ಕಸ್‌ ಸ್ಟೋಯ್ನಿಸ್‌. ಆದರೆ ಇತ​ರರು ತಂಡದ ಕೈಹಿ​ಡಿ​ಯ​ಲಿಲ್ಲ. ಹೂಡಾ ಜೊತೆ ಓಡುವಾಗ ಗೊಂದಲಕ್ಕೆ ಸಿಲುಕಿ ಸ್ಟೋಯ್ನಿಸ್‌(27 ಎಸೆತದಲ್ಲಿ 40 ರನ್‌) ರನೌಟ್‌ ಆದರು. 3.3 ಓವರ್‌ನಲ್ಲಿ 5 ರನ್‌ಗೆ 5 ವಿಕೆಟ್‌ ಆಕಾಶ್‌ ಲಖನೌ ತಂಡದ ದಿಕ್ಕೆ

ನಾಳೆ ಕ್ವಾಲಿ​ಫೈ​ಯ​ರ್‌-2

ಕ್ವಾಲಿ​ಫೈ​ಯರ್‌-1ರಲ್ಲಿ ಚೆನ್ನೈ ವಿರುದ್ಧ ಸೋತ ಗುಜ​ರಾತ್‌ ಹಾಗೂ ಮುಂಬೈ ತಂಡ​ಗಳು ಶುಕ್ರ​ವಾರ ಅಹ​ಮ​ದಾ​ಬಾ​ದ್‌​ನಲ್ಲಿ ಕ್ವಾಲಿ​ಫೈ​ಯ​ರ್‌-2ರಲ್ಲಿ ಮುಖಾ​ಮುಖಿ​ಯಾ​ಗ​ಲಿವೆ. ಗೆಲ್ಲುವ ತಂಡ ಭಾನು​ವಾರ ಚೆನ್ನೈ ವಿರುದ್ಧ ಫೈನಲ್‌ನಲ್ಲಿ ಆಡ​ಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಂಗಳೂರಲ್ಲಿ ಐಪಿಎಲ್‌ ನಡೆಸಲು ಸಂಪುಟ ಅಸ್ತು
ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!