
ಬೆಂಗಳೂರು(ಏ.01): ಐಪಿಎಲ್ 2023 ಟೂರ್ನಿ ಆರಂಭಗೊಂಡಿದೆ. ಆದರೆ ಆರ್‌ಸಿಬಿ ತನ್ನ ಮೊದಲ ಪಂದ್ಯವನ್ನು ಎಪ್ರಿಲ್ 2 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲಿದೆ. ಈ ಬಾರಿಯೂ ಅಭಿಮಾನಿಗಳು ಈ ಸಲ ಕಪ್ ನಮ್ದೆ ಅಭಿಯಾನ ಆರಂಭಿಸಿದ್ದಾರೆ. ಈ ಹಿಂದಿನ ಆವೃತ್ತಿಗಳಲ್ಲಿ ಈ ಸಲ ಕಪ್ ನಮ್ದೆಅಭಿಯಾನ ಮಾಡಿದರೂ ಕಪ್ ಮಾತ್ರ ಕೈಗೆಟುಕಲಿಲ್ಲ. ಇದೀಗ ಮೊದಲ ಪಂದ್ಯಕ್ಕೆ ಆರ್‌ಸಿಬಿ ಭಾರಿ ಸಿದ್ಧತೆ ನಡೆಸಿದೆ. ಆದರೆ ನಾಯಕ ಪಾಫ್ ಡುಪ್ಲಸಿಸ್ ಆರ್‌ಸಿಬಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಈ ಸಲ ಕಪ್ ನಹಿ ಎಂದಿದ್ದಾರೆ. ಈ ವಿಡಿಯೋ ಇದೀಗ ಬಾರಿ ವೈರಲ್ ಆಗಿದೆ. ನೀವು ಶಾಕ್ ಆಗಬೇಡಿ. ಡುಪ್ಲಸಿಸ್ ಈ ಸಲ ಕಪ್ ನಮ್ದೆ ಎಂದು ಹೇಳುವ ಬದಲು ಈ ಸಲ ಕಪ್ ನಹಿ ಎಂದಿದ್ದಾರೆ. ಡುಪ್ಲಸಿಸ್ ಈ ಮಾತು ಹೇಳುತ್ತಿದ್ದಂತೆ ಪಕ್ಕದಲ್ಲಿದ್ದ ವಿರಾಟ್ ಕೊಹ್ಲಿ ನಕ್ಕು ನೀರಾಗಿದ್ದಾರೆ.
ಬೆಂಗಳೂರಿನಲ್ಲಿರುವ ಆರ್‌ಸಿಬಿ ತಂಡ ಅಭ್ಯಾಸ, ಕಾರ್ಯಕ್ರಮದಲ್ಲಿ ಬ್ಯೂಸಿಯಾಗಿದೆ. ಹೀಗೆ ಕಾರ್ಯಕ್ರಮವ ಒಂದರಲ್ಲಿ ಸಂವಾದ ಆಯೋಜಿಸಲಾಗಿತ್ತು. ಈ ವೇಳೆ ಆರ್‌ಸಿಬಿಯ ಜನಪ್ರಿಯ ಆಂದೋಲನ ಈ ಸಲ ಕಪ್ ನಮ್ದೆ ಪ್ರಶ್ನೆ ಗೂಗ್ಲಿ ರೀತಿಯಲ್ಲಿ ಬಂದಿತ್ತು. ಇತ್ತ ವಿರಾಟ್ ಕೊಹ್ಲಿ ಈ ಸಲ ಕಪ್ ನಮ್ದೆ ಎಂದು ಮೆಲ್ಲನೇ ಡುಪ್ಲಸಿಸ್ ಕಿವಿಯಲ್ಲಿ ಹೇಳಿದ್ದಾರೆ. ಇದನ್ನೇ ಪುನರುಚ್ಚರಿಸಲು ಹೇಳಿದ್ದಾರೆ. ಆದರೆ ಕನ್ನಡ ಶಬ್ದದ ಕುರಿತು ಹೆಚ್ಚು ಕೇಳದ ಡುಪ್ಲಸಿಸ್‌ಗೆ ನಮ್ದೆ ಶಬ್ದ ನಹಿ ಎಂದು ಕೇಳಿಸಿದೆ. ಹೀಗಾಗಿ ಮೈಕ್ ಪಡೆದು ಈ ಸಲ ಕಪ್ ನಹಿ ಎಂದಿದ್ದಾರೆ.
10ನೇ ಕ್ಲಾಸ್ ಅಂಕಪಟ್ಟಿ ಹಂಚಿಕೊಂಡ ಕೊಹ್ಲಿ! ವಿರಾಟ್ SSLC ಯಲ್ಲಿ ಪಡೆದ ಸ್ಕೋರ್ ಎಷ್ಟು?
ಡುಪ್ಲೆಸಿಸ್ ಈ ಸಲ ಕಪ್ ನಹಿ ಎಂದು ಹೇಳುತ್ತಿದ್ದಂತೆ ವಿರಾಟ್ ಕೊಹ್ಲಿಗೆ ನಗು ತಡೆಯಲು ಸಾಧ್ಯವಾಗಲಿಲ್ಲ. ಎದ್ದು ಬಿದ್ದು ಕೊಹ್ಲಿ ನಕ್ಕಿದ್ದಾರೆ. ಇತ್ತ ಕಾರ್ಯಕ್ರಮದಲ್ಲಿದ್ದ ಎಲ್ಲರೂ ಒಂದೇ ಸಮನೆ ನಕ್ಕಿದ್ದಾರೆ. ಇದೇ ವೇಳೆ ಈ ಸಲ ಕಮ್ ನಮ್ದೆ ಎಂದು ತಿಳಿ ಹೇಳಲಾಗಿದೆ. ಸ್ವತಃ ಡುಪ್ಲಸಿಸ್‌ಗೂ ನಗು ತಡೆಯಲು ಸಾಧ್ಯವಾಗಲಿಲ್ಲ.
ಡುಪ್ಲೆಸಿಸ್ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಲವು ಪ್ರತಿಕ್ರಿಯೆ ನೀಡಿದ್ದಾರೆ. ಇಷ್ಟು ವರ್ಷ ಈ ಸಲ ಕಪ್ ನಮ್ದೆ ಎಂದು ಅಭಿಮಾನಿಗಳು ಹೇಳುತ್ತಿದ್ದರು. ಈ ಬಾರಿ ಆರ್‌ಸಿಬಿ ನಾಯಕನೇ ಕಪ್ ನಹಿ ಎಂದಿದ್ದಾರೆ. ಹೀಗಾಗಿ ಈಗಲೇ ರಿಸಲ್ಟ್ ಊಹಿಸಬಹುದು ಎಂದಿದ್ದಾರೆ. ಇಷ್ಟು ಆತ್ಮವಿಶ್ವಾಸದಿಂದ ಯಾವ ನಾಯಕನೂ ಹೇಳಿಲ್ಲ. ಅದು ತಪ್ಪಿ ಹೇಳಿದ್ದಲ್ಲ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಡುಪ್ಲಸಿಸ್ ಹೃದಯದಿಂದ ಮಾತನಾಡಿದ್ದಾರೆ ಎಂದು ಕೆಲವರು ಟ್ರೋಲ್ ಮಾಡಿದ್ದಾರೆ.
ನಮಸ್ಕಾರ ಬೆಂಗಳೂರು, ಎಂಜಾಯ್ ಮಾಡಿ, ಓಡು ಗುರು: ವಿರಾಟ್ ಕೊಹ್ಲಿ ಕನ್ನಡ ಪ್ರೀತಿಗೆ ಫ್ಯಾನ್ಸ್ ಫಿದಾ..!
ಇತ್ತ ಆರ್‌ಸಿಬಿ ಅಭಿಮಾನಿಗಳು, ನಾಯಕನ ಕಪ್ ನಹಿ ಎಂದಿದ್ದಾರೆ. ಕನ್ನಡ ಶಬ್ದ ಗೊತ್ತಿಲ್ಲದ ಕಾರಣ ತಪ್ಪಾಗಿ ಹೇಳಿದ್ದಾರೆ. ಆದರೆ ಈ ಸಲ ಕಪ್ ನಮ್ದೆ ಎಂದಿದ್ದಾರೆ. ಇಷ್ಟೇ ಅಲ್ಲ ಗೆಲ್ಲಲಿ ಸೋಲಲಿ, ನಾವು ಆರ್‌ಸಿಬಿ ಅಭಿಮಾನಿಗಳು, ಟ್ರೋಫಿ ಇಲ್ಲದಿದ್ದರೂ ನಮ್ಮ ತಂಡ ನಮ್ಮ ಹೆಮ್ಮೆ ಎಂದು ಕಮೆಂಟ್ ಮಾಡಿದ್ದಾರೆ.
ಆರ್‌ಸಿಬಿ ತನ್ನ ಮೊದಲ ಪಂದ್ಯವನ್ನು ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯ ಇದೀಗ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಕಾರಣ ಬೆಂಗಳೂರಿನ ಕ್ರೀಡಾಂಗಣ ರೋಹಿತ್ ಶರ್ಮಾ ಅಚ್ಚು ಮೆಚ್ಚಿನ ಕ್ರೀಡಾಂಗಣ. ಹೀಗಾಗಿ ರೋಚಕ ಹೋರಾಟಕ್ಕೆ ಸಾಕ್ಷಿಯಾಗಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.