IPL 2023 ಲಖನೌ ವಿರುದ್ದ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್, ತಂಡದಲ್ಲಿ ಯಾರಿಗೆ ಸ್ಥಾನ?

Published : Apr 01, 2023, 07:16 PM ISTUpdated : Apr 01, 2023, 07:45 PM IST
IPL 2023 ಲಖನೌ ವಿರುದ್ದ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್, ತಂಡದಲ್ಲಿ ಯಾರಿಗೆ ಸ್ಥಾನ?

ಸಾರಾಂಶ

ಐಪಿಎಲ್ ಟೂರ್ನಿಯ 3ನೇ ಪಂದ್ಯದಲ್ಲಿ ಲಖನೌ ಹಾಗೂ ಡೆಲ್ಲಿ ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ತಂಡದಲ್ಲಿ ಯಾರಿಗೆ ಸ್ಥಾನ ಸಿಕ್ಕಿದೆ?

ಲಖನೌ(ಏ.01): ಐಪಿಎಲ್ 2023 ಟೂರ್ನಿಯ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ನಡುವಿನ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ನಾಯಕರಾದ ಡೇವಿಡ್ ವಾರ್ನರ್ ಹಾಗೂ ಕೆಎಲ್ ರಾಹುಲ್ ಹೋರಾಟಕ್ಕಾಗಿ ಅಭಿಮಾನಿಗಳು ಕಾದುಕುಳಿತಿದ್ದಾರೆ. 

ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ 11
ಡೇವಿಡ್ ವಾರ್ನರ್(ನಾಯಕ), ಪೃಥ್ವಿ ಶಾ, ಮಿಚೆಲ್ ಮಾರ್ಶ್, ರೀಲೆ ರೊಸೊ, ಸರ್ಫರಾಜ್ ಖಾನ್, ರೊಮ್ಮಾನ್ ಪೊವೆಲ್, ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್, ಚೇತನ್ ಸಕಾರಿಯಾ, ಖಲೀಲ್ ಅಹಮ್ಮದ್, ಮುಕೇಶ್ ಕುಮಾರ್ 

IPL 2023: ಆರ್‌ಸಿಬಿ ಪಂದ್ಯ ಹಿನ್ನೆಲೆ ಬಿಎಂಟಿಸಿ ಹಾಗೂ ಮೆಟ್ರೋ ಅವಧಿ ವಿಸ್ತರಣೆ

ಲಖನೌ ಸೂಪರ್ ಜೈಂಟ್ಸ್ ಪ್ಲೇಯಿಂಗ್ 11
ಕೆಎಲ್ ರಾಹುಲ್(ನಾಯಕ), ಕೈಲ್ ಮೆಯರ್ಸ್, ಮಾರ್ಕಸ್ ಸ್ಟೊಯ್ನಿಸ್, ದೀಪಕ್ ಹೂಡ, ಕ್ರುನಾಲ್ ಪಾಂಡ್ಯ, ನಿಕೋಲಸ್ ಪೂರನ್, ಆಯುಷ್ ಬದೋನಿ, ಮಾರ್ಕ್ ವುಡ್,ಜಯದೇವ್ ಉನಾದ್ಕಟ್, ರವಿ ಬಿಶ್ನೋಯ್, ಆವೇಶ್ ಖಾನ್

ಟಾಸ್ ಗೆದ್ದ ಮಾತನಾಡಿದ ಡೇವಿಡ್ ವಾರ್ನರ್, ಮೊದಲು ಬೌಲಿಂಗ್ ಮಾಡಿ ಲಖನೌ ತಂಡವನ್ನು ಕಟ್ಟಿಹಾಕುವ ಪ್ರಯತ್ನ ಮಾಡುತ್ತೇವೆ. ಈ ಮೂಲಕ ಪ್ಲಾನ್ ಪ್ರಕಾರ ಚೇಸಿಂಗ್ ಮಾಡಲು ಸಾಧ್ಯವಾಗಲಿದೆ. ಇಂಪಾಕ್ಟ್ ಪ್ಲೇಯರ್ ನಿಯಮದಲ್ಲಿ ನನಗೆ ಕೆಲ ಗೊಂದಲವಿದೆ. ಆದರೆ ಮತ್ತೆ ಐಪಿಎಲ್‌ಗೆ ಮರಳಿರುವುದು ಸಂತಸವಾಗಿದೆ. ಅತ್ಯುತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ ಎಂದರು.

ಕ್ರಿಕೆಟಿಗ ಶಿಖರ್​ ಧವನ್​ ಸಂಸಾರದಲ್ಲಿ Red Falg! ಸಂಬಂಧ ಉಳಿಸಿಕೊಳ್ಳುವಲ್ಲಿ ಫೇಲ್ ಆಗಿದ್ದೆಲ್ಲಿ?

ಡೆಲ್ಲಿ ತಂಡಕ್ಕೆ ಡೇವಿಡ್‌ ವಾರ್ನರ್‌ ನಾಯಕನಾಗಿ ನೇಮಕಗೊಂಡಿದ್ದು, ಇತ್ತೀಚೆಗೆ ಭಾರತ ವಿರುದ್ಧ ಸರಣಿಯಲ್ಲಿ ಸಿಡಿಲಬ್ಬರದ ಆಟವಾಡಿದ ಮಾಷ್‌ರ್‍ ಮೇಲೆ ತಂಡ ಹೆಚ್ಚಾಗಿ ಅವಲಂಬಿತಗೊಂಡಿದೆ. ಪೃಥ್ವಿ ಶಾ, ಮನೀಶ್‌ ಪಾಂಡೆ, ರೋವ್ಮನ್‌ ಪೋವೆಲ್‌, ರೈಲಿ ರುಸ್ಸೌ ತಂಡದ ಬ್ಯಾಟಿಂಗ್‌ ಆಧಾರಸ್ತಂಭವೆನಿಸಿದ್ದಾರೆ. ಸರ್ಫರಾಜ್‌ ಖಾನ್‌ ಈ ಬಾರಿ ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆ ಇದ್ದು, ವಿಕೆಟ್‌ ಕೀಪರ್‌-ಬ್ಯಾಟರ್‌ ಆಗಿ ಆಡಲಿದ್ದಾರೆ ಎನ್ನಲಾಗುತ್ತಿದೆ.ಮತ್ತೊಂದೆಡೆ ಲಖನೌ ತನ್ನ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಂಡರೆ ಯಾವುದೇ ಎದುರಾಳಿಗಳನ್ನು ಮಣಿಸುವ ಸಾಮರ್ಥ್ಯ ಹೊಂದಿದೆ.

ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ಇದುವರೆಗೆ 2 ಬಾರಿ ಮುಖಾಮುಖಿಯಾಗಿದೆ. ಎರಡೂ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ಗೆಲುವು ದಾಖಲಿಸಿದೆ. ಲಖನೌನಲ್ಲಿ 6 ಅಂ.ರಾ.ಟಿ20 ಪಂದ್ಯ ನಡೆದಿದ್ದು, 5ರಲ್ಲಿ ಮೊದಲು ಬ್ಯಾಟ್‌ ಮಾಡಿದ ತಂಡ ಗೆದ್ದಿದೆ. ಇಲ್ಲಿ ದೊಡ್ಡ ಮೊತ್ತ ದಾಖಲಾದ ಉದಾಹರಣೆ ಕಡಿಮೆ. ಟಾಸ್‌ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಹೆಚ್ಚು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌
ಕುಲ್ದೀಪ್-ಪ್ರಸಿದ್ದ್ ಮಾರಕ ದಾಳಿ; ಏಕದಿನ ಸರಣಿ ಗೆಲ್ಲಲು ಭಾರತಕ್ಕೆ ಸ್ಪರ್ಧಾತ್ಮಕ ಗುರಿ