IPL 2023 ಎರಡನೇ ಪಂದ್ಯ ಮಳೆಗೆ ಆಹುತಿ, DLS ಮೂಲಕ ಕೆಕೆಆರ್ ವಿರುದ್ಧ ಪಂಜಾಬ್‌ಗೆ 7 ರನ್ ಗೆಲುವು!

By Suvarna NewsFirst Published Apr 1, 2023, 7:58 PM IST
Highlights

ಪಂಜಾಬ್ ಕಿಂಗ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಪಂದ್ಯ ರೋಚಕ ಘಟ್ಟ ತಲುಪುತ್ತಿದ್ದಂತೆ ಮಳೆ ಅಡ್ಡಿಯಾಗಿದೆ. ಹೀಗಾಗಿ ಡಕ್‌ವರ್ತ್ ಲೂಯಿಸ್ ನಿಯಮದ ಪ್ರಕಾರ ಗೆಲುವು ಘೋಷಿಸಲಾಗಿದೆ. ಕೇವಲ 7 ರನ್‌ಗಳ ಹಿನ್ನಡೆಯಲ್ಲಿದ್ದ ಕೆಕೆಆರ್ ನಿರಾಸೆ ಅನುಭವಿಸಿದರೆ, ಪಂಜಾಬ್ ಶುಭಾರಂಭ ಮಾಡಿದೆ.

ಮೊಹಾಲಿ(ಏ.01): ಐಪಿಎಲ್ 2023ರ ಎರಡನೇ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಪಂಜಾಬ್ ಕಿಂಗ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ನಡುವಿನ ರೋಚಕ ಪಂದ್ಯ ಮಳೆಯಿಂದ ಸ್ಥಗಿತೊಂಡಿತು. ಏಳು ಬೀಳಿನಿಂದ ಸಾಗುತ್ತಿದ್ಧ ಕೆಕೆಆರ್ ತಂಡದ ರನ್ ಚೇಸಿಂಗ್‌ಗೆ ಮಳೆರಾಯನೂ ಅಡ್ಡಿಯಾದ. 192 ರನ್ ಟಾರ್ಗೆಟ್ ಪಡೆದ ಕೆಕೆಆರ್ 16 ಓವರ್ ಮುಕ್ತಾಯಕ್ಕೆ 7 ವಿಕೆಟ್ ಕಳೆದುಕೊಂಡು 146 ರನ್ ಸಿಡಿಸಿತ್ತು. ಈ ವೇಳೆ ಮಳೆ ವಕ್ಕರಿಸಿತು. ಡಕ್ ವರ್ತ್ ನಿಯಮದನ್ವಯ ಕೆಕೆಆರ್ 7 ರನ್ ಹಿನ್ನಡೆ ಅನುಭವಿಸಿತ್ತು. ಕೆಲ ಹೊತ್ತು ಕಾದರೂ ಪಂದ್ಯ ಮತ್ತೆ ಆರಂಭಗೊಳ್ಳಲಿಲ್ಲ. ಹೀಗಾಗಿ ಡಕ್‌ವರ್ತ್ ನಿಯಮದ ಪ್ರಕಾರ ಪಂಜಾಬ್ ಕಿಂಗ್ಸ್ ರನ್ ಗೆಲುವು ದಾಖಲಿಸಿತು.

ಸ್ಪೋಟಕ ಬ್ಯಾಟಿಂಗ್ ಮೂಲಕ ಪಂಜಾಬ್ ಕಿಂಗ್ಸ್ 191 ರನ್ ಸಿಡಿಸಿತು. ಬೃಹತ್ ಮೊತ್ತ ಗುರಿ ಪಡೆದ ಕೋಲ್ಕತಾ ನೈಟ್ ರೈಡರ್ಸ್ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಮನ್ದೀಪ್ ಸಿಂಗ್ ಕೇವಲ 2 ರನ್ ಸಿಡಿಸಿ ಔಟಾದರು. ಇತ್ತ ಅನುಕುಲ್ ರಾಯ್ 4 ರನ್ ಸಿಡಿಸಿ ನಿರ್ಗಮಿಸಿದರು. 17 ರನ್‌ಗೆ ಕೆಕೆಆರ್ ಪ್ರಮುಖ 2 ವಿಕೆಟ್ ಕಳೆದುಕೊಂಡಿತು. ರಹೆಮಾನುಲ್ಲಾ ಗುರ್ಬಾಜ್ ಹಾಗೂ ವೆಂಕಟೇಶ್ ಅಯ್ಯರ್ ಜೊತೆಯಾಟದಿಂದ ಕೋಲ್ಕತಾ ಚೇತರಿಸಿಕೊಂಡಿತು. ಆದರೆ ನಥನ್ ಎಲ್ಲಿಸ್ ದಾಳಿಗೆ ಇವರ ಜೊತೆಯಾಟ ಮುರಿದು ಬಿತ್ತು. ಗುರ್ಬಾಜ್ 16 ಎಸೆತದಲ್ಲಿ 22 ರನ್ ಸಿಡಿಸಿ ನಿರ್ಗಮಿಸಿದರು.

ಕ್ರಿಕೆಟಿಗ ಶಿಖರ್​ ಧವನ್​ ಸಂಸಾರದಲ್ಲಿ Red Falg! ಸಂಬಂಧ ಉಳಿಸಿಕೊಳ್ಳುವಲ್ಲಿ ಫೇಲ್ ಆಗಿದ್ದೆಲ್ಲಿ?

ವೆಂಕಟೇಶ್ ಅಯ್ಯರ್ ಹಾಗೂ ನಾಯಕ ನಿತೀಶ್ ರಾಣಾ ಕೆಕೆಆರ್ ತಂಡಕ್ಕೆ ಆಸರೆಯಾದರು. ಆದರೆ ನಿತೀಶ್ ರಾಣಾ ಹೆಚ್ಚು ಹೊತ್ತು ಅಬರಿಸಲು ಸಾಧ್ಯವಾಗಲಿಲ್ಲ. 17 ಎಸೆತದಲ್ಲಿ 24 ರನ್ ಸಿಡಿಸಿ ರಾಣಾ ವಿಕೆಟ್ ಕೈಚೆಲ್ಲಿದರು. ಇದರ ಬೆನ್ನಲ್ಲೇ ರಿಂಕು ಸಿಂಗ್ ಕೇವಲ 4 ರನ್ ಸಿಡಿಸಿ ಔಟಾದರು. ಕೆಕೆಆರ್ ತಂಡಕ್ಕೆ ಆ್ಯಂಡ್ರೆ ರಸೆಲ್ ಪವರ್ ನೆರವಾಯಿತು. ರಸೆಲ್ ಸ್ಫೋಟಕ ಬ್ಯಾಟಿಂಗ್ ಮೂಲಕ ಕೆಕೆಆರ್ ತಂಡದ ಆತ್ಮವಿಶ್ವಾಸ ಹೆಚ್ಚಿಸಿದರು. 19 ಎಸೆತದಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ರಸೆಲ್ 35 ರನ್ ಸಿಡಿಸಿ ಔಟಾದರು. ಇತ್ತ ವೆಂಕಟೇಶ್ ಅಯ್ಯರ್ 28 ಎಸೆತದಲ್ಲಿ 34 ರನ್ ಸಿಡಿಸಿದರು.

ಶಾರ್ದೂಲ್ ಠಾಕೂರ್ ಹಾಗೂ ಸುನಿಲ್ ನರೈನ್ ಸಿಕ್ಸರ್ ಅಬ್ಬರ ಆರಂಭಿಸಿದ ಬೆನ್ನಲ್ಲೇ ಮಳೆ ವಕ್ಕರಿಸಿತು. ಈ ವೇಳೆ ಕೆಕೆಆರ್ 16 ಓವರ್‌ನಲ್ಲಿ 7 ವಿಕೆಟ್ ಕಳೆದುಕೊಂಡು 146 ರನ್ ಸಿಡಿಸಿತ್ತು. ಡಕ್‌ವರ್ತ್ ನಿಯಮದ ಪ್ರಕಾರ 7 ರನ್ ಹಿನ್ನಡೆಯಲ್ಲಿತ್ತು. ಆದರೆ ಪಂದ್ಯ ಮತ್ತೆ ಆರಂಭಿಸಲು ಮಳೆ ಅನುವು ಮಾಡಿಕೊಡಲಿಲ್ಲ. ಹೀಗಾಗಿ ಡಕ್‌ವರ್ತ್ ನಿಯಮದ ಅನ್ವಯ ಪಂಜಾಬ್ ಕಿಂಗ್ಸ್ 7 ರನ್ ಗೆಲುವು ಘೋಷಿಸಲಾಯಿತು. 

IPL 2023 ಎಂ ಎಸ್ ಧೋನಿ ಪಾದ ಮುಟ್ಟಿ ನಮಸ್ಕರಿಸಿದ ಗಾಯಕ ಅರಿಜಿತ್ ಸಿಂಗ್; ಧೋನಿ ಗಳಿಸಿದ್ದು ಇದೇ ಅಲ್ವಾ?

ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ಕಿಂಗ್ಸ್ 5 ವಿಕೆಟ್ ನಷ್ಟಕ್ಕೆ 191 ರನ್ ಸಿಡಿಸಿತ್ತು. ಭಾನುಕಾ ರಾಜಪಕ್ಸ್ 50 ರನ್ ಸಿಡಿಸಿದರೆ, ನಾಯಕ ಶಿಖರ್ ಧವನ್ 40 ರನ್ ಕಾಣಿಕೆ ನೀಡಿದ್ದರು. ಪ್ರಭಾಸಿಮ್ರನ್ 23, ಜಿತೀಶ್ ಶರ್ಮಾ 21 ರನ್, ಸಿಕಂದರ್ ರಾಜಾ 16 ರನ್ ಕಾಣಿಕೆ ನೀಡಿದರೆ, ಸ್ಯಾಮ್ ಕುರನ್ ಅಜೇಯ 26 ರನ್ ಸಿಡಿಸಿದರೆ, ಶಾರುಖ್ ಖಾನ್ 11 ರನ್ ಸಿಡಿಸಿದರು.

click me!