IPL 2023: ಹಾಲಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ಗೆ ಬಲಾಢ್ಯ ರಾಯಲ್ಸ್‌ ಸವಾಲು

By Naveen KodaseFirst Published Apr 16, 2023, 1:12 PM IST
Highlights

ಸೂಪರ್ ಸಂಡೇ ಎರಡನೇ ಪಂದ್ಯದಲ್ಲಿ ಗುಜರಾತ್-ರಾಜಸ್ಥಾನ ಫೈಟ್
ಬಲಿಷ್ಠ ತಂಡಗಳ ನಡುವಿನ ಕಾದಾಟಕ್ಕೆ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯ
ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕಾಗಿ ಉಭಯ ತಂಡಗಳ ನಡುವೆ ಪೈಪೋಟಿ

ಅಹ​ಮ​ದಾ​ಬಾ​ದ್‌(ಏ.16): ಕಳೆದ ಆವೃತ್ತಿ ಐಪಿ​ಎ​ಲ್‌ ಫೈನ​ಲ್‌​ನಲ್ಲಿ ಮುಖಾ​ಮುಖಿ​ಯಾ​ಗಿದ್ದ ಗುಜ​ರಾತ್‌ ಟೈಟಾನ್ಸ್‌ ಹಾಗೂ ರಾಜ​ಸ್ಥಾನ ರಾಯಲ್ಸ್‌ ತಂಡ​ಗಳು ಈ ಬಾರಿ ಮತ್ತೆ ಅಹ​ಮ​ದಾ​ಬಾ​ದ್‌​ನಲ್ಲಿ ಪರ​ಸ್ಪರ ಸೆಣ​ಸಾ​ಡ​ಲಿದ್ದು, ಗೆದ್ದು ಅಗ್ರ​ಸ್ಥಾ​ನ​ಕ್ಕೇ​ರಲು ಉಭಯ ತಂಡ​ಗಳೂ ಕಾಯು​ತ್ತಿವೆ. ಸ್ಫೋಟಕ ಬ್ಯಾಟ​ರ್‌​ಗಳು, ಮಾರಕ ವೇಗಿ​ಗಳು, ತಜ್ಞ ಸ್ಪಿನ್ನ​ರ್‌​ಗಳು ಎರಡೂ ತಂಡ​ಗ​ಳ​ಲ್ಲಿದ್ದು, ಟೂರ್ನಿಯ ಬಲಿಷ್ಠ ತಂಡ​ಗಳ ನಡುವೆ ಭಾರೀ ಪೈಪೋಟಿ ನಿರೀ​ಕ್ಷಿ​ಸ​ಲಾ​ಗಿದೆ. ಎರಡೂ ತಂಡ​ಗಳು 4ನೇ ಜಯದ ಮೇಲೆ ಕಣ್ಣಿ​ಟ್ಟಿ​ವೆ.

ಎರಡೂ ತಂಡಗಳು ಮೇಲ್ನೋಟಕ್ಕೆ ಸಾಕಷ್ಟು ಬಲಿಷ್ಠವಾಗಿಯೇ ಗುರುತಿಸಿಕೊಂಡಿವೆ. ಗುಜರಾತ್ ಟೈಟಾನ್ಸ್‌ ತಂಡದ ಎಲ್ಲ ಆಟಗಾರರು ಸಂಘಟಿತ ಪ್ರದರ್ಶನ ತೋರುತ್ತಿರುವುದು ತಂಡದ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ. ಗುಜರಾತ್ ಟೈಟಾನ್ಸ್‌ ತಂಡವು ಬ್ಯಾಟಿಂಗ್‌ನಲ್ಲಿ ವೃದ್ದಿಮಾನ್ ಸಾಹ, ಶುಭ್‌ಮನ್‌ ಗಿಲ್‌, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ, ಡೇವಿಡ್ ಮಿಲ್ಲರ್ ಅವರನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ. ಇನ್ನು ಆಲ್ರೌಂಡರ್‌ ರಾಹುಲ್ ತೆವಾಟಿಯಾ ಹಾಗೂ ವಿಜಯ್‌ ಶಂಕರ್‌ ಕೂಡಾ ಮಿಂಚುತ್ತಿರುವುದು ತಂಡ ಅತ್ಮವಿಶ್ವಾಸದಿಂದ ಬೀಗುವಂತೆ ಮಾಡಿದೆ. ಇನ್ನು ಬೌಲರ್‌ಗಳಾದ ರಶೀದ್ ಖಾನ್‌, ಮೊಹಮ್ಮದ್ ಶಮಿ, ಅಲ್ಜೆರಿ ಜೋಸೆಫ್‌ ಹಾಗೂ ಜೋಶ್ವಾ ಲಿಟ್ಲ್‌ ಇದೀಗ ರಾಜಸ್ಥಾನ ರಾಯಲ್ಸ್‌ ಬ್ಯಾಟರ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ.

Latest Videos

ಇನ್ನೊಂದೆಡೆ ಕಳೆದ ಆವೃತ್ತಿಯ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ ಎದುರಿನ ಸೋಲಿಗೆ ಸೇಡು ತೀರಿಸಿಕೊಳ್ಳಲು ರಾಜಸ್ಥಾನ ರಾಯಲ್ಸ್ ತಂಡವು ಎದುರು ನೋಡುತ್ತಿದೆ. ಕಳೆದ ಆವೃತ್ತಿಯ ಮೂರು ಮುಖಾಮುಖಿಯಲ್ಲೂ ಗುಜರಾತ್ ಟೈಟಾನ್ಸ್ ಎದುರು ರಾಜಸ್ಥಾನ ರಾಯಲ್ಸ್‌ ಸೋಲು ಅನುಭವಿಸಿತ್ತು. ಇದೀಗ ರಾಜಸ್ಥಾನ ರಾಯಲ್ಸ್ ಹಳೆ ಸೋಲಿನ ಲೆಕ್ಕ ಚುಕ್ತಾ ಮಾಡಲು ಎದುರು ನೋಡುತ್ತಿದೆ.

IPL 2023 ಮುಂಬೈ ಇಂಡಿಯನ್ಸ್‌​ಗೆ ಬಲಿಷ್ಠ ಕೋಲ್ಕತಾ ನೈಟ್ ರೈಡರ್ಸ್‌ ಸವಾ​ಲು

ರಾಜಸ್ಥಾನ ರಾಯಲ್ಸ್ ಪರ ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್‌, ಸಂಜು ಸ್ಯಾಮ್ಸನ್‌, ದೇವದತ್ ಪಡಿಕ್ಕಲ್‌, ಶಿಮ್ರೊನ್ ಹೆಟ್ಮೇಯರ್ ಸ್ಪೋಟಕ ಬ್ಯಾಟಿಂಗ್ ನಡೆಸುವ ಕ್ಷಮತೆಯಿದೆ. ಇನ್ನು ರವಿಚಂದ್ರನ್ ಅಶ್ವಿನ್, ಜೇಸನ್ ಹೋಲ್ಡರ್ ಆಲ್ರೌಂಡರ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಇನ್ನು ಟ್ರೆಂಟ್‌ ಬೌಲ್ಟ್, ಕುಲ್ದೀಪ್ ಸೆನ್‌, ಸಂದೀಪ್ ಶರ್ಮಾ ಹಾಗೂ ಯುಜುವೇಂದ್ರ ಚಹಲ್‌ ಜವಾಬ್ದಾರಿಯುತ ಪ್ರದರ್ಶನ ತೋರಲು ಎದುರು ನೋಡುತ್ತಿದೆ

ಒಟ್ಟು ಮುಖಾಮುಖಿ: 03

ಗುಜರಾತ್‌: 03

ರಾಜ​ಸ್ಥಾ​ನ: 00

ಸಂಭವನೀಯ ಆಟಗಾರರ ಪಟ್ಟಿ

ಗುಜರಾತ್‌ ಟೈಟಾನ್ಸ್: ವೃದ್ದಿಮಾನ್ ಸಾಹ, ಶುಭ್‌ಮನ್‌ ಗಿಲ್‌, ಸಾಯಿ ಸುದರ್ಶನ್‌, ಹಾರ್ದಿಕ್‌ ಪಾಂಡ್ಯ(ನಾಯಕ), ಡೇವಿಡ್ ಮಿಲ್ಲರ್‌, ರಾಹುಲ್ ತೆವಾಟಿಯಾ, ರಶೀದ್‌ ಖಾನ್, ಜೋಶ್ವಾ ಲಿಟ್ಲ್‌, ಅಲ್ಜಾರಿ ಜೋಸೆಫ್‌ ಜೋಸೆಫ್‌, ಮೋಹಿ​ತ್‌ ಶರ್ಮಾ, ಮೊಹಮ್ಮದ್ ಶಮಿ.

ರಾಜ​ಸ್ಥಾ​ನ ರಾಯಲ್ಸ್: ಜೈಸ್ವಾಲ್‌: ಜೋಸ್ ಬಟ್ಲರ್‌, ಸಂಜು ಸ್ಯಾಮ್ಸನ್‌​(​ನಾ​ಯ​ಕ), ಶಿಮ್ರೊನ್ ಹೆಟ್ಮೇಯರ್ ಹೆಟ್ಮೇ​ಯರ್‌, ರಿಯಾನ್‌ ಪರಾಗ್, ಧೃವ್‌ ಜುರೆಲ್‌, ಜೇಸನ್ ಹೋಲ್ಡರ್‌, ರವಿಚಂದ್ರನ್ ಅಶ್ವಿನ್‌, ಟ್ರೆಂಟ್‌ ಬೌಲ್ಟ್‌, ಸಂದೀ​ಪ್‌ ಶರ್ಮಾ, ಯುಜುವೇಂದ್ರ ಚಹ​ಲ್‌.

ಪಂದ್ಯ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌/ಜಿಯೋ ಸಿನಿಮಾ

click me!