ದಿನೇಶ್ ಕಾರ್ತಿಕ್ ಡಕೌಟ್, ರೋಹಿತ್ ಶರ್ಮಾ ದಾಖಲೆ ಮುರಿದ RCB ವಿಕೆಟ್ ಕೀಪರ್!

By Suvarna NewsFirst Published Apr 15, 2023, 9:49 PM IST
Highlights

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್‌ಸಿಬಿ ಗೆಲುವು ದಾಖಲಿಸಿ ಸಂಭ್ರಮಿಸಿದೆ. ಆರ್‌ಸಿಬಿ ಸೋಲಿನಿಂದ ಹೊರಬಂದಿದೆ. ಆದರೆ ಆರ್‌ಸಿಬಿ ಕೆಲ ಸಮಸ್ಯೆಗಳಲ್ಲಿ ದಿನೇಶ್ ಕಾರ್ತಿಕ್ ಕಳಪೆ ಫಾರ್ಮ್ ಪ್ರಮುಖವಾಗಿದೆ. ಇಂದು ಕಾರ್ತಿಕ್ ಡಕೌಟ್ ಆಗಿದ್ದಾರೆ. ರನ್ ಖಾತೆ ತೆರೆಯದಿದ್ದರೂ, ರೋಹಿತ್ ಶರ್ಮಾ ಅನಗತ್ಯ ದಾಖಲೆ ಪುಡಿ ಮಾಡಿದ್ದಾರೆ.

ಬೆಂಗಳೂರು(ಏ.15): ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ಬಳಿಕ ಆರ್‌ಸಿಬಿ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಟ್ರೋಲ್ ಆಗಿದ್ದಾರೆ. ಡೆಲ್ಲಿ ವಿರುದ್ಧ ದಿನೇಶ್ ಕಾರ್ತಿಕ್ ಬಂದು ಹೋಗಿದ್ದೇ ಗೊತ್ತಾಗಿಲ್ಲ. ಕಾರಣ ದಿನೇಶ್ ಕಾರ್ತಿಕ್ ಡಕೌಟ್ ಆಗಿದ್ದಾರೆ. ಕ್ರೀಸ್‌ಗೆ ಬಂದ ಬೆನ್ನಲ್ಲೇ ಕ್ಯಾಚ್ ನೀಡಿ ಹೊರನಡೆದರು. ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ಬಾರಿ ಶೂನ್ಯಕ್ಕೆ ಔಟಾದ ಪಟ್ಟಿಯಲ್ಲಿ ದಿನೇಶ್ ಕಾರ್ತಿಕ್ , ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಅನಗತ್ಯ ದಾಖಲೆ ಮುರಿದಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ದಿನೇಶ್ ಕಾರ್ತಿಕ್ 15 ಬಾರಿ ಡಕೌಟ್ ಆಗಿದ್ದಾರೆ.

ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ಬಾರಿ ಶೂನ್ಯಕ್ಕೆ ಔಟಾದ ಪಟ್ಟಿಯಲ್ಲಿ ಮನ್ದೀಪ್ ಸಿಂಗ್ ಹಾಗೂ ದಿನೇಶ್ ಕಾರ್ತಿಕ್ ಮೊದಲ ಸ್ಥಾನ ಹಂಚಿಕೊಂಡಿದ್ದಾರೆ. ಇನ್ನು ರೋಹಿತ್ ಶರ್ಮಾ 14 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಡಕೌಟ್ ಆದರೂ ದಿನೇಶ್ ಕಾರ್ತಿಕ್ ದಾಖಲೆ ಬರೆದಿದ್ದಾರೆ ಎಂದು ಟ್ರೋಲ್ ಆಗಿದ್ದಾರೆ.

ಕೊಹ್ಲಿ ಗಂಗೂಲಿ ಜಟಾಪಟಿ ಬಹಿರಂಗ, ಗುರಾಯಿಸಿ, ಶೇಕ್‌ಹ್ಯಾಂಡ್ ಮಾಡದೇ ತೆರಳಿದ ವಿರಾಟ್!

ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ಡಕೌಟ್
ಮನ್ದೀಪ್ ಸಿಂಗ್: 15
ದಿನೇಶ್ ಕಾರ್ತಿಕ್: 15
ರೋಹಿತ್ ಶರ್ಮಾ: 14
ಸುನಿಲ್ ನರೈನ್: 14

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ದಿನೇಶ್ ಕಾರ್ತಿಕ್ ಪ್ರತಿ ಪಂದ್ಯದಲ್ಲಿ ಹಿನ್ನಡೆ ಅನುಭವಿಸಿದ್ದಾರೆ. 2023ರ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ 13 ಬಾರಿ ಶೂನ್ಯಕ್ಕೆ ಔಟಾಗಿದ್ದರು. ಆದರೆ ಈ ಟೂರ್ನಿಯಲ್ಲಿ 2 ಬಾರಿ ಡಕೌಟ್ ಆಗುವ ಮೂಲಕ ನಿರಾಸೆ ಅನುಭವಿಸಿದ್ದಾರೆ. ಇಷ್ಟೇ ಅಲ್ಲ ಆಡಿದ ನಾಲ್ಕು ಪಂದ್ಯಗಳಲ್ಲಿ ಕಾರ್ತಿಕ್ ಸೈಲೆಂಟ್ ಆಗಿದ್ದಾರೆ.

IPL 2023 ಆರ್‌ಸಿಬಿ ಸೋಲಿನ ಅನಿಷ್ಠ ದೂರಮಾಡಿದ ಕನ್ನಡಿಗ ವೈಶಾಕ್‌..!

ಐಪಿಎಲ್ 2023 ಟೂರ್ನಿಯಲ್ಲಿ ದಿನೇಶ್ ಕಾರ್ತಿಕ್ 
ಮೊದಲ ಪಂದ್ಯ: 0 ರನ್ (3 ಎಸೆತ)
ಎರಡನೇ ಪಂದ್ಯ: 9 ರನ್(8 ಎಸೆತ)
ಮೂರನೇ ಪಂದ್ಯ: 1 ರನ್* ( 1 ಎಸೆತ)
ನಾಲ್ಕನೇ ಪಂದ್ಯ: 0 ರನ್(1 ಎಸೆತ)

2023ರ ಐಪಿಎಲ್ ಟೂರ್ನಿಯಲ್ಲಿ ಕಾರ್ತಿಕ್ 4 ಪಂದ್ಯದಿಂದ 10 ರನ್ ಸಿಡಿಸಿದ್ದಾರೆ. ಕಳೆದೆರಡು ಆವೃತ್ತಿಯಲ್ಲಿ ದಿನೇಶ್ ಕಾರ್ತಿಕ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. 2022ರ ಟೂರ್ನಿಯಲ್ಲಿ ಕಾರ್ತಿಕ್ 16 ಪಂದ್ಯದಿಂದ 330 ರನ್ ಸಿಡಿಸಿದ್ದರು. ಐಪಿಎಲ್ ಟೂರ್ನಿಯಲ್ಲಿ ದಿನೇಶ್ ಕಾರ್ತಿಕ್ 233 ಪಂದ್ಯ ಆಡಿದ್ದಾರೆ. ಒಟ್ಟು 4,386 ರನ್ ಸಿಡಿಸಿದ್ದಾರೆ. ಅಜೇಯ 97 ರನ್ ಕಾರ್ತಿಕ್ ಬೆಸ್ಟ್ ಸ್ಕೋರ್. 20 ಅರ್ಧಶತಕ ಸಿಡಿಸಿದ್ದಾರೆ.

click me!