ನಾಯಕ ಧೋನಿಗೆ ಗೌರವ ನೀಡಿದ ಸರ್ ಜಡೇಜಾ ಟ್ರಿಬ್ಯೂಟ್, ಬದಲಾಯ್ತು ಡಿಪಿ!

By Suvarna NewsFirst Published May 30, 2023, 6:55 PM IST
Highlights

ಸಿಎಸ್‌ಕೆ ರೋಚಕ ಗೆಲುವಿನ ಮೂಲಕ ಐಪಿಎಲ್ 2023 ಚಾಂಪಿಯನ್ ಕಿರೀಟ ಅಲಂಕರಿಸಿದೆ. ರವೀಂದ್ರ ಜಡೇಜಾ ಹೋರಾಟದಿಂದ ಸಿಎಸ್‍ಕೆ ಗೆಲುವಿನ ಸಂಭ್ರಮ ಆಚರಿಸಿದೆ. ಈ ಗೆಲವನ್ನು ಧೋನಿಗೆ ಅರ್ಪಿಸಿದ ಜಡೇಜಾ ಇದೀಗ ನಾಯಕನಿಗೆ ಮತ್ತೊಂದು ಗೌರವ ಸಲ್ಲಿಸಿದ್ದಾರೆ. 

ಅಹಮ್ಮದಾಬಾದ್(ಮೇ.30): ಐಪಿಎಲ್ 2023 ಟೂರ್ನಿ ಫೈನಲ್ ಪಂದ್ಯದಲ್ಲಿ ಸಿಎಸ್‌ಕೆ ರೋಚಕ ಗೆಲುವಿನ ಮೂಲಕ ಟ್ರೋಫಿ ಗೆದ್ದುಕೊಂಡಿದೆ. ರವೀಂದ್ರ ಜಡೇಜಾ ಹೋರಾಟದಿಂದ ಸಿಎಸ್‌ಕೆ ಸಂಭ್ರಮ ಆಚರಿಸಿತು. ರವೀಂದ್ರ ಜಡೇಜಾ ಬೌಂಡರಿ ಬಾರಿಸುತ್ತಿದ್ದಂತೆ ಸಿಎಸ್‌ಕೆ ಆಟಗಾರರು ಮೈದಾನಕ್ಕಿಳಿದು ಸಂಭ್ರಮ ಆಚರಿಸಿದ್ದಾರೆ. ಇತ್ತ ನಾಯಕ ಧೋನಿ ಇದೇ ಮೊದಲ ಬಾರಿಗೆ ಸಂಭ್ರಮದಲ್ಲಿ ತೇಲಾಡಿದರು. ರವೀಂದ್ರ ಜಡೇಜಾ ಎತ್ತಿ ಭಾವುಕರಾದರು. ಇತ್ತ ಜಡೇಜಾ ಈ ಗೆಲುವನ್ನು ಧೋನಿಗೆ ಅರ್ಪಿಸಿದ್ದರು. ಇದೀಗ ರವೀಂದ್ರ ಜಡೇಜಾ ತಮ್ಮ ಇನ್‌ಸ್ಟಾಗ್ರಾಂ ಡಿಪಿ ಬದಲಿಸಿದ್ದಾರೆ. ಧೋನಿ ಎತ್ತಿಕೊಂಡಿರುವ ಫೋಟೋ ಹಾಕಿ ನಾಯಕನಿಗೆ ಗೌರವ ಸಲ್ಲಿಸಿದ್ದಾರೆ.

ಅಂತಿಮ ಎರಡು ಎಸೆತದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿಗೆ 10 ರನ್ ಅವ್ಯಕತೆ ಇತ್ತು. ಭರ್ಜರಿ ಸಿಕ್ಸರ್ ಸಿಡಿಸಿದ ರವೀಂದ್ರ ಜಡೇಜಾ ಕುತೂಹಲ ಮತ್ತಷ್ಟು ಹೆಚ್ಚಿಸಿದರು. ಅಂತಿಮ ಎಸೆತದಲ್ಲಿ ಬೌಂಡರಿ ಸಿಡಿಸಿ ಚೆನ್ನೈ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. ರವೀಂದ್ರ ಜಡೇಜಾ ಬೌಂಡರಿ ಸಿಡಿಸಿ ಸಂಭ್ರಮದೊಂದಿಗೆ ನೇರವಾಗಿ ಧೋನಿ ಬಳಿ ಓಡಿ ಬಂದಿದ್ದಾರೆ. ಇತ್ತ ಚೆನ್ನೇ ಅಭಿಮಾನಿಗಳು ಮೈದಾನಕ್ಕಿಳಿದು ಸಂಭ್ರಮ ಆಚರಿಸಿದ್ದಾರೆ.

ಫೈನಲ್ ಪಂದ್ಯಕ್ಕೂ ಮೊದಲೇ ಭಾವುಕರಾಗಿದ್ದ ಧೋನಿ, ಡಗೌಟ್‌ನಲ್ಲಿ ಕುಳಿತು ಸುಧಾರಿಸಿಕೊಂಡ MSD!

ರವೀಂದ್ರ ಜಡೇಜಾ ತನ್ನ ಬಳಿ ಬರುತ್ತಿದ್ದಂತೆ ಧೋನಿ ಎತ್ತಿಕೊಂಡು ಸಂಭ್ರಮಿಸಿದರು. ಇದೇ ವೇಳೆ ಧೋನಿ ಭಾವುಕರಾದರು. ಆದರೆ ಅಷ್ಟೇ ವೇಗದಲ್ಲಿ ನಿಯಂತ್ರಿಸಿಕೊಂಡ ಧೋನಿ ಬಳಿಕ ಎಲ್ಲರಿಗೂ ಹಸ್ತಲಾಘವ ಮಾಡಿದರು. ರವೀಂದ್ರ ಜಡೇಜಾ ಎತ್ತಿಕೊಂಡ ಈ ಕ್ಷಣ ಅಭಿಮಾನಿಗಳ ಪಾಲಿಗೂ ಭಾವುಕ ಕ್ಷಣವಾಗಿತ್ತು. ಇದೇ ಕ್ಷಣದ ಫೋಟೋವನ್ನುಜಡೇಜಾ ಡಿಪಿಯಾಗಿ ಹಾಕಿಕೊಂಡಿದ್ದಾರೆ. 

ಧೋನಿ ಹಾಗೂ ಜಡೇಜಾ ನಡುವೆ ಶೀತಲ ಸಮರ ನಡೆಯುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿದ್ದ ಬೆನ್ನಲ್ಲೇ ಜಡೇಜಾ ನಡೆ ಇದೀಗ ಎಲ್ಲಾ ಉಹಾಪೋಹಗಳಿಗೆ ಅಂತ್ಯಹಾಡಿದೆ. ಇದಕ್ಕೂ ಮೊದಲು ಜಡೇಜಾ ಮಹತ್ವದ ಟ್ವೀಟ್ ಮೂಲಕ ಸಂದೇಶ ರವಾನಿಸಿದ್ದರು. ಇದು ಒನ್ ಅಂಡ್ ಒನ್ಲಿ ಮಹೀ ಭಾಯಿಗಾಗಿ. ನಿಮಗಾಗಿ ಏನು ಬೇಕಾದರು ಮಾಡುತ್ತೇನೆ ಎಂದು ಟ್ವೀಟ್ ಮಾಡಿದ್ದರು. ಇದೀಗ ಡಿಪಿ ಬದಲಿಸಿ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

'IPL ನಿವೃತ್ತಿ ಹೇಳಲು ಸರಿಯಾದ ಸಮಯ, ಆದರೆ..?' ರಿಟೈರ್‌ಮೆಂಟ್ ಬಗ್ಗೆ ಧೋನಿ ಅಚ್ಚರಿಯ ಮಾತು..!

ಈ ಬಾರಿಯ ಐಪಿಎಲ್ ಫೈನಲ್ ಪಂದ್ಯ ಹಲವು ಅಡೆತಡೆಗಳನ್ನು ಎದುರಿಸಿತ್ತು. ಮೊದಲ ದಿನ ಮಳೆಯಿಂದ ಪಂದ್ಯ ರದ್ದಾಗಿತ್ತು. ಮೀಸಲು ದಿನದಲ್ಲಿ ಗುಜರಾತ್ ಬ್ಯಾಟಿಂಗ್ ಬಳಿಕ ಮತ್ತೆ ಸುರಿದ ಮಳೆಯಿಂದ ಪಂದ್ಯ ಸ್ಥಗಿತಗೊಂಡಿತ್ತು. ಹೀಗಾಗಿ ಪಂದ್ಯ ಮತ್ತೆ ವಿಳಂಬವಾಗಿ ಆರಂಭಗೊಂಡಿತು. ತಡರಾತ್ರಿ, ಮಧ್ಯರಾತ್ರಿ, ಬೆಳಗಿನ ಜಾವದವರೆಗೂ ಪಂದ್ಯ ನಡೆದಿತ್ತು.  ಐಪಿಎಲ್‌ ಫೈನಲ್‌ ಆರಂಭಗೊಂಡಿದ್ದು ಮೇ 28ರಂದು ಶನಿವಾರ. ಆದರೆ ಪಂದ್ಯ ಮುಗಿದಿದ್ದು ಮೇ 30ರ ಸೋಮವಾರ. 16ನೇ ಆವೃತ್ತಿಯ ಐಪಿಎಲ್‌ನ ವಿಜೇತರು ಯಾರು ಎನ್ನುವುದನ್ನು ತಿಳಿದುಕೊಳ್ಳಲು ಅಭಿಮಾನಿಗಳು ಬರೋಬ್ಬರಿ 30 ಗಂಟೆಗಳಿಗೂ ಹೆಚ್ಚು ಕಾಲ ಕಾಯಬೇಕಾಯಿತು. 2020-21ರಲ್ಲಿ ಅಹಮದಾಬಾದ್‌ನಲ್ಲೇ ನಡೆದಿದ್ದ ಭಾರತ-ಇಂಗ್ಲೆಂಡ್‌ ನಡುವಿನ ಟೆಸ್ಟ್‌ ಪಂದ್ಯ ಎರಡು ದಿನಗಳೊಳಗೆ (29.5 ಗಂಟೆ) ಮುಗಿದಿತ್ತು.
 

click me!