'22 ಪ್ಲೇಯರ್‌ ಮಾತ್ರವೇ ಆಡ್ತಿಲ್ಲ..' ಐಪಿಎಲ್‌ ಫೈನಲ್‌ ಟೈಮ್‌ನಲ್ಲಿ 'ಕಾಂಡಮ್‌' ಬೇಡಿಕೆ ಟ್ರೋಲ್‌ ಮಾಡಿದ ಸ್ವಿಗ್ಗಿ!

By Santosh Naik  |  First Published May 30, 2023, 5:39 PM IST

ಐಪಿಎಲ್‌ 2023 ಫೈನಲ್‌ ಟೈಮ್‌ನಲ್ಲಿ 'ಕಾಂಡಮ್‌'ಗೆ ಇದ್ದ ಬೇಡಿಕೆಯ ಕುರಿತಾಗಿ ಸ್ವಿಗ್ಗಿ ಮಾಡಿದ್ದ ಟ್ವೀಟ್‌ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಕೆಲವರು ಈ ಟ್ವೀಟ್‌ಅನ್ನು 'ಎಪಿಕ್‌' ಎಂದು ಕರೆದಿದ್ದಾರೆ.


ಬೆಂಗಳೂರು (ಮೇ. 30): ಈ ಬಾರಿಯ ಐಪಿಎಲ್‌ ಫೈನಲ್‌ ಮತ್ತೊಮ್ಮೆ ರೋಚಕ ಅಂತ್ಯದೊಂದಿಗೆ ಕೊನೆಯಾಗಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಕೊನೆಯ ಎರಡು ಎಸೆತಗಳಲ್ಲಿ ವೇಕಿದ್ದ 10 ರನ್‌ಗಳನ್ನು ಬಾರಿಸುವ ಮೂಲಕ ಗುಜರಾತ್‌ ಟೈಟಾನ್ಸ್‌ ವಿರುದ್ಧ ಗೆಲುವು ಕಂಡಿತ್ತು. ರವೀಂದ್ರ ಜಡೇಜಾ ಕೊನೆಯ ಎರಡು ಎಸೆತಗಳ ಆಟ, ಎಂಎಸ್‌ ಧೋನಿ ಲೈಟ್ನಿಂಗ್‌ ವೇಗದಲ್ಲಿ ಮಾಡಿದ ಆಕರ್ಷಕ ಸ್ಟಂಪಿಂಗ್‌, ಸಾಯಿ ಸುದರ್ಶನ್‌ ಅವರ ಅತ್ಯಾಕರ್ಷಕ ಬ್ಯಾಟಿಂಗ್‌ ಇವೆಲ್ಲವೂ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಅದರೊಂದಿಗೆ ಚಾಂಪಿಯನ್‌ ಚೆನ್ನೈ ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಈ ಎಲ್ಲದರ ನಡುವೆ ಫುಡ್‌ ಅಗ್ರಿಗೇಟರ್‌ ಅಪ್ಲಿಕೇಶನ್‌ ಸ್ವಿಗ್ಗಿ ಮಾಡಿರುವ ಟ್ವೀಟ್‌, ನೆಟ್ಟಿಗರ ರಂಜನೆಗೆ ಕಾರಣವಾಗಿದೆ. ಸ್ವಿಗ್ಗಿ ಇನ್ಸ್ಟಾಮಾರ್ಟ್‌ ಮೂಲಕ ಕೆಲವೇ ನಿಮಿಷಗಳಲ್ಲಿ ಆರ್ಡರ್‌ಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಆದರೆ, ಐಪಿಎಲ್‌ ಫೈನಲ್‌ ಟೈಮ್‌ನಲ್ಲಿ ಪಂದ್ಯದ ಬಗ್ಗೆಯಾಗಲಿ, ಆಟಗಾರರ ಬಗ್ಗೆಯಾಗಲಿ ಟ್ವೀಟ್‌ ಮಾಡಿಲ್ಲ. ಆದರೆ, ಐಪಿಎಲ್‌ ಟೈಮ್‌ನಲ್ಲಿ ಕಾಂಡಮ್‌ಗೆ ಇದ್ದ ಬೇಡಿಕೆಯ ಕುರಿತಾಗಿ ಮಾಡಿರುವ ಟ್ವೀಟ್‌ ವೈರಲ್‌ ಆಗಿದೆ. ಟ್ವೀಟ್‌ ಮಾಡಿದ್ದು ಮಾತ್ರವಲ್ಲದೆ, ಕಾಂಡಮ್‌ನ ಪ್ರಖ್ಯಾತ ಉತ್ಪಾದಕರಾಗಿರುವ ಡ್ಯುರೆಕ್ಸ್‌ ಕಂಪನಿಯನ್ನೂ ತನ್ನ ಪೋಸ್ಟ್‌ನಲ್ಲಿ ಟ್ಯಾಗ್‌ ಮಾಡಿದೆ.

ರಾತ್ರಿ 8.43ಕ್ಕೆ ಟ್ವೀಟ್‌ ಮಾಡಿರುವ ಸ್ವಿಗ್ಗಿ, 'ಇಲ್ಲಿಯವರೆಗೂ ಸ್ವಿಗ್ಗಿ ಇನ್ಸ್ಟಾಮಾರ್ಟ್‌ ಮೂಲಕ 2423 ಕಾಂಡಮ್‌ಗಳನ್ನು ಆರ್ಡರ್‌ ಮಾಡಿದವರಿಗೆ ತಲುಪಿಸಲಾಗಿದೆ. ಬಹುಶಃ ಇಂದು ರಾತ್ರಿ ಕೇವಲ 22 ಪ್ಲೇಯರ್‌ಗಳು ಮಾತ್ರವೇ ಆಡೋದಿಲ್ಲ ಅನ್ನೋದು ಗೊತ್ತಾಗ್ತಿದೆ' ಎಂದು ಬರೆದಿದ್ದಲ್ಲದೆ, ಅದಕ್ಕೆ ಅಚ್ಚರಿಯ ಕಣ್ಣುಗಳ ಇಮೋಜಿಯನ್ನು ಬಳಸಿ, ಡ್ಯುರೆಕ್ಸ್‌ ಇಂಡಿಯಾಗೆ ಟ್ಯಾಗ್‌ ಮಾಡಿ ಟ್ವೀಟ್‌ ಮಾಡಿದೆ.

ಸ್ವಿಗ್ಗಿ ಮಾಡಿರುವ ಈ ಟ್ವೀಟ್‌ಗೆ ಈವರೆಗೂ 89 ಲಕ್ಷ ವೀವ್ಸ್‌ಗಳು ಬಂದಿದ್ದರೆ, 1494 ಮಂದಿ ರೀಟ್ವೀಟ್‌ ಮಾಡಿದ್ದಾರೆ. 307 ಕೋಟ್‌ ಟ್ವೀಟ್‌ಗಳು ಬಂದಿದ್ದು,  ಅಂದಾಜು 10 ಸಾವಿರ ಲೈಕ್ಸ್‌, 371 ಬುಕ್‌ ಮಾರ್ಕ್‌ ದಾಖಲಾಗಿದೆ. ಅದರೊಂದಿಗೆ ಲೆಕ್ಕವಿಲ್ಲದಷ್ಟು ಕಾಮೆಂಟ್‌ಗಳೂ ಬಂದಿವೆ.

2423 condoms have been delivered via so far, looks like there are more than 22 players playing tonight 👀

— Swiggy (@Swiggy)

ಮೈದಾನದಲ್ಲೇ ಜಡೇಜಾ ಕಾಲಿಗೆ ನಮಸ್ಕರಿಸಿದ ಪತ್ನಿ, ಶಾಸಕಿ ರಿವಾಬಾ ಜಡೇಜಾ!

ಸ್ವಿಗ್ಗಿಯ ಪೋಸ್ಟ್‌ಗೆ ಬಂದಿರೋ ಕಾಮೆಂಟ್‌ಗಳು:
ಒಬ್ಬ ವ್ಯಕ್ತಿ ಥಂಬ್ಸ್‌ಅಪ್‌ ಇಮೋಜಿಯೊಂದಿಗೆ 'ಇದು ಸ್ವಿಗ್ಗಿಯ ರಿಯಲ್‌ ಲೆವಲ್‌' ಎಂದು ಟ್ವೀಟ್‌ ಮಾಡಿದ್ದಾರೆ. 'ಈ ಅಂಕಿಅಂಶಗಳನ್ನು ನೋಡಿಕೊಂಡು ಸಿಂಗಲ್ಸ್‌ಗಳು ಮನೆಯ ಯಾವುದೋ ಮೂಲೆಯಲ್ಲಿ ಅಳುತ್ತಿರಬಹುದು' ಎಂದು ತಮಾಷೆ ಮಾಡಿದ್ದಾರೆ. 'ನನಗೆ 22 ಪ್ಲೇಯರ್‌ಗಳ ಬಗ್ಗೆ ಗೊತ್ತಿಲ್ಲ. ಆದರೆ, ಉಳಿದ 2423 ಮಂದಿ ಮಾತ್ರ ಬಹಳ ಸೇಫ್‌ ಆಗಿ ಆಡುತ್ತಿದ್ದಾರೆ' ಎಂದು ಬರೆದಿದ್ದಾರೆ. 'ಬಹುಶಃ ಸ್ವಿಗ್ಗಿಗೆ ಬಂದಿರುವ ಶೇ.90ರಷ್ಟು ಆರ್ಡರ್‌ಗಳ ಅಹಮದಾಬಾದ್‌ನಿಂದಲೇ ಬಂದಿರಬೇಕು. ವಾತಾವರಣ ನೋಡಿ ಮೂಡ್‌ ಬಂದಿರುವ ಸಾಧ್ಯತೆ ಇದೆ.ಮ್ಯಾಚ್‌ ಹ್ಯಾಪಿ ಎಂಡಿಗ್‌ ಆಗದೇ ಇದ್ರೇನು, ಮನೆಯಲ್ಲಿ ಹ್ಯಾಪಿ ಎಂಡಿಂಗ್‌ ಆಗಿರಲಿ' ಎಂದು ಇನ್ನೊಬ್ಬರು ಬರೆದಿದ್ದಾರೆ.

Tap to resize

Latest Videos

ಸೋಶಿಯಲ್‌ ಮೀಡಿಯಾ 'ಕ್ರೋಮಿಂಗ್‌' ಟ್ರೆಂಡ್‌ಗೆ ಬಲಿಯಾದ 13 ವರ್ಷದ ಬಾಲಕಿ

ಭವಿಷ್ಯದ ಡೆಲಿವರಿಗಳನ್ನು ನಿಲ್ಲಿಸಲು ಸ್ವಿಗ್ಗಿ ಈಗ ಡೆಲಿವರಿ ಮಾಡುತ್ತಿದೆ ಎಂದು ಇನ್ನೊಬ್ಬರು ಜೋಕ್‌ ಮಾಡಿದ್ದರೆ, ನಾನು ಫುಡ್‌ ಆರ್ಡರ್‌ ಮಾಡುವ ಯೋಚನೆಯನ್ನೇ ಸ್ವಿಗ್ಗಿ ಈಗ ಬದಲಾಯಿಸಿದೆ ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ. 'ಕಾಂಡಮ್‌ಗಳು ಲೀಕ್‌ ಪ್ರೂಪ್‌ ಆಗಿರಲಿ ಸ್ವಿಗ್ಗಿ, ಈ ಸ್ಟೇಡಿಯಂ ರೀತಿ ಎಲ್ಲಾ ಕಡೆ ಲೀಕ್‌ ಆಗ್ತಿದ್ದರೆ ಕಷ್ಟ' ಎಂದು ಮಳೆನೀರು ಬೀಳುತ್ತಿರುವ ಅಹಮಾದಾಬದ್‌ ಸ್ಟೇಡಿಯಂನ ಚಿತ್ರ ಹಾಕಿ ಟ್ವೀಟ್‌ ಮಾಡಿದ್ದಾರೆ.

click me!