
ಹೈದರಾಬಾದ್(ಏ.24): ಐಪಿಎಲ್ 2023 ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದೆ. ಇಂದು ಈ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ 11
ಡೇವಿಡ್ ವಾರ್ನರ್(ನಾಯಕ), ಫಿಲಿಪ್ ಸಾಲ್ಟ್, ಮಿಚೆಲ್ ಮಾರ್ಶ್, ಮನೀಶ್ ಪಾಂಡೆ, ಸರ್ಫರಾಜ್ ಖಾನ್, ಅಕ್ಸರ್ ಪಟೇಲ್, ಅಮನ್ ಹಕೀಮ್ ಖಾನ್, ರಿಪಲ್ ಪಟೇಲ್, ಅನ್ರಿಚ್ ನೊರ್ಜೆ, ಕುಲ್ದೀಪ್ ಯಾದವ್, ಇಶಾಂತ್ ಶರ್ಮಾ
IPL ಇತಿಹಾಸದ ಅತ್ಯಂತ ದುಬಾರಿ ಓವರ್ ಮಾಡಿದ ಆರ್ಶದೀಪ್ ಸಿಂಗ್..! ಮುರಿದ ಸ್ಟಂಪ್ಸ್ ಬೆಲೆ 48 ಲಕ್ಷ..!
ಸನ್‌ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ 11
ಅಭಿಷೇಕ್ ಶರ್ಮಾ, ಹ್ಯಾರಿ ಬ್ರೂಕ್, ಆ್ಯಡಿನ ಮರ್ಕ್ರಮ್(ನಾಯಕ), ಮಯಾಂಕ್ ಅಗರ್ವಾಲ್, ಹೆನ್ರಿಚ್ ಕಲ್ಸೀನ್, ಮಾರ್ಕೋ ಜಾನ್ಸೆನ್, ವಾಶಿಂಗ್ಟನ್ ಸುಂದರ್, ಮಯಾಂಕ್ ಮಾರ್ಕಂಡೆ, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಉಮ್ರಾನ್ ಮಲಿಕ್
ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಅಂದರೆ 10ನೇ ಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಆಡಿದ 6 ಪಂದ್ಯದಲ್ಲಿ ಕೇವಲ 1 ಗೆಲುವು ದಾಖಲಿಸಿದ್ದರೆ, 5 ಸೋಲು ಕಂಡಿದೆ. ಸನ್‌ರೈಸರ್ಸ್ ಹೈದರಾಬಾದ್ ಡೆಲ್ಲಿಗಿಂತ ಒಂದು ಸ್ಥಾನ ಮೇಲಿದೆ. ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್ 6 ಪಂದ್ಯದಲ್ಲಿ 2 ಗೆಲುವು ದಾಖಲಿಸಿದ್ದರೆ, 4 ಸೋಲು ಕಂಡಿದೆ.
IPL 2023 ಆರ್‌ಸಿಬಿ ಪಂದ್ಯದ ನಡುವೆ ಮೋದಿ ಸುನಾಮಿ, ಗಮನಸೆಳೆದ ಬೊಮ್ಮಾಯಿ ಟಿಶರ್ಟ್!
ಅಂಕಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಸ್ಥಾನ: ಕಳೆದ ವರ್ಷ ಕಳಪೆ ಪ್ರದರ್ಶನದೊಂದಿಗೆ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿ ಬಾಕಿಯಾಗಿದ್ದನ್ನೇ ಸವಾಲಾಗಿ ಸ್ವೀಕರಿಸಿದಂತಿರುವ ಚೆನ್ನೈ ಸೂಪರ್ ಕಿಂಗ್‌್ಸ ಈ ಬಾರಿ ಹಲವು ಸಮಸ್ಯೆಗಳನ್ನು ಮೆಟ್ಟಿನಿಂತು ಅಬ್ಬರಿಸುತ್ತಿದೆ. ಭಾನುವಾರ ಸ್ಫೋಟಕ ಬ್ಯಾಟಿಂಗ್, ಶಿಸ್ತುಬದ್ಧ ದಾಳಿ ಪ್ರದರ್ಶಿಸಿದ ಚೆನ್ನೈ, ಕೋಲ್ಕತಾವನ್ನು ಅದರ ತವರಿನಲ್ಲೇ 49 ರನ್ಗಳಿಂದ ಮಣಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ತಂಡ ಸಂಯೋಜನೆಯಲ್ಲಿ ಮತ್ತೆ ಎಡವಿದ ಕೋಲ್ಕತಾ ಸತತ 4ನೇ ಸೋಲುಂಡು 8ನೇ ಸ್ಥಾನದಲ್ಲೇ ಬಾಕಿಯಾಯಿತು.
ಡೆಲ್ಲಿ ತಂಡಕ್ಕೆ ಕಮಲೇಶ್ ಬದಲು ಪ್ರಿಯಂ ಗರ್ಗ್
ಗಾಯಗೊಂಡು 16ನೇ ಆವೃತ್ತಿಯ ಐಪಿಎಲ್ನಿಂದ ಹೊರಬಿದ್ದ ವೇಗಿ ಕಮಲೇಶ್ ನಾಗರಕೋಟಿ ಬದಲು ಡೆಲ್ಲಿ ಕ್ಯಾಪಿಟಲ್ಸ್ ತಂಡ ಭಾರತ ಅಂಡರ್-19 ತಂಡದ ಮಾಜಿ ನಾಯಕ ಪ್ರಿಯಂ ಗಗ್‌ರ್ ಅವರನ್ನು ಸೇರಿಸಿಕೊಂಡಿದೆ. ಆಟಗಾರರ ಹರಾಜಿನಲ್ಲಿ ಬಿಕರಿಯಾಗದ ಪ್ರಿಯಂ ಅವರನ್ನು ತಂಡ ಮೂಲಬೆಲೆ 20 ಲಕ್ಷ ರು.ಗೆ ಖರೀದಿಸಿದೆ. 2020ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದ ಪ್ರಿಯಂ ಕಳೆದ 3 ಆವೃತ್ತಿಗಳಲ್ಲಿ ಒಟ್ಟು 21 ಪಂದ್ಯಗಳನ್ನಾಡಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.