IPL ಇತಿಹಾಸದ ಅತ್ಯಂತ ದುಬಾರಿ ಓವರ್ ಮಾಡಿದ ಆರ್ಶದೀಪ್‌ ಸಿಂಗ್..! ಮುರಿದ ಸ್ಟಂಪ್ಸ್‌ ಬೆಲೆ 48 ಲಕ್ಷ..!

By Naveen KodaseFirst Published Apr 24, 2023, 11:00 AM IST
Highlights

ಮುಂಬೈ ಇಂಡಿಯನ್ಸ್ ಎದುರು ಮಾರಕ ದಾಳಿ ನಡೆಸಿದ ಆರ್ಶದೀಪ್ ಸಿಂಗ್
ಮುಂಬೈ ಎದುರು ರೋಚಕ ಜಯ ಕಂಡ ಪಂಜಾಬ್ ಕಿಂಗ್ಸ್‌
ಐಪಿಎಲ್‌ನ ದುಬಾರಿ ಓವರ್‌ ಬೌಲಿಂಗ್ ಮಾಡಿದ ಎಡಗೈ ವೇಗಿ

ಮುಂಬೈ(ಏ.24): ಮುಂಬೈ ಇಂಡಿ​ಯನ್ಸ್‌ ವಿರು​ದ್ಧದ ಪಂದ್ಯದ ಕೊನೆ ಓವ​ರಲ್ಲಿ ಪಂಜಾಬ್‌ ವೇಗಿ ಆರ್ಶ​ದೀಪ್‌ ಸಿಂಗ್‌ ಎರಡು ಬಾರಿ ಸ್ಟಂಪ್‌ ಮುರಿದರು. ಇದರಿಂದಾಗಿ ಬಿಸಿಸಿಐಗೆ 48 ಲಕ್ಷ ರುಪಾಯಿ ಹೊರೆಯಾಯಿತು. ವೇಗಿ ಆರ್ಶದೀಪ್‌ ಸಿಂಗ್ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಓವರ್ ಮಾಡಿದ್ದಾರೆ..!

ವರದಿಗಳ ಪ್ರಕಾರ ಸ್ಟಂಪ್ಸ್‌ನ ಪೂರ್ತಿ ಸೆಟ್‌ ಅಂದರೆ ಕ್ಯಾಮೆರಾ ಅಳವಡಿಸಿರುವ ಒಂದು ಸ್ಟಂಪ್‌ ಜೊತೆ ಇನ್ನೆರಡು ಸ್ಟಂಪ್‌ಗಳು ಹಾಗೂ ಎಲ್‌ಇಡಿ ಬೇಲ್ಸ್‌ಗೆ 24 ಲಕ್ಷ ರು ಆಗುತ್ತದೆ. ಆರ್ಶದೀಪ್ ಸತತ 2 ಎಸೆತದಲ್ಲಿ ಸ್ಟಂಪ್‌ ಮುರಿದರು. ಒಂದು ಸ್ಟಂಪ್‌ ಮುರಿದರೂ ಇಡೀ ಸೆಟ್‌ ಬದಲಿಸಬೇಕಾಗುತ್ತದೆ. ಹೀಗಾಗಿ ಒಂದೇ ಓವರ್‌ನಲ್ಲಿ ಎರಡು ಬಾರಿ ಸ್ಟಂಪ್ಸ್‌ ಮುರಿದ ಆರ್ಶದೀಪ್, ಬಿಸಿಸಿಐಗೆ ಬರೋಬ್ಬರಿ 48 ಲಕ್ಷ ರುಪಾಯಿ ಹೊರೆಯಾಗುವಂತೆ ಮಾಡಿದರು.

Probably the most expensive over:

Arshdeep Singh broke the middle stump twice - a set of LED stumps with Zing bails cost 30 Lakhs INR. pic.twitter.com/A0m0EHyGM8

— Mufaddal Vohra (@mufaddal_vohra)

Latest Videos

ಕೊನೆಯ ಓವರ್‌ನಲ್ಲಿ ಮುಂಬೈ ಇಂಡಿಯನ್ಸ್‌ ಗೆಲ್ಲಲು 16 ರನ್‌ಗಳ ಅಗತ್ಯವಿತ್ತು. ಕೊನೆಯ ಓವರ್‌ ಬೌಲಿಂಗ್ ಮಾಡುವ ಜವಾಬ್ದಾರಿ ಹೊತ್ತ ಆರ್ಶದೀಪ್ ಮೊದಲ ಎಸೆತದಲ್ಲಿ ಟಿಮ್ ಡೇವಿಡ್‌ಗೆ ಒಂದು ರನ್ ನೀಡಿದರು. ಇನ್ನು ಎರಡನೇ ಎಸೆತದಲ್ಲಿ ಯಾವುದೇ ರನ್‌ ನೀಡಲಿಲ್ಲ. ಮೂರನೇ ಎಸೆತದಲ್ಲಿ ತಿಲಕ್ ವರ್ಮಾ ಅವರನ್ನು ಕ್ಲೀನ್ ಬೌಲ್ಡ್ ಆಯಿತು. ಆಗ ವಿಕೆಟ್ ಮುರಿದು ಹೋಯಿತು. ಇನ್ನು ಮರು ಎಸೆತದಲ್ಲಿ ನೆಹಲ್ ವಡೇರಾ ಅವರನ್ನು ಅದೇ ರೀತಿ ಕ್ಲೀನ್ ಬೌಲ್ಡ್‌ ಮಾಡಿ, ಮತ್ತೊಮ್ಮೆ ವಿಕೆಟ್ ಮುರಿದು ಹಾಕಿದರು. ಇನ್ನು 5 ಎಸೆತದಲ್ಲಿ ಯಾವುದೇ ರನ್ ನೀಡಲಿಲ್ಲ. ಕೊನೆಯ ಎಸೆತದಲ್ಲಿ ಆರ್ಚರ್‌ ಕೇವಲ ರನ್ ಗಳಿಸಿದರು. ಕೊನೆಯ ಓವರ್‌ನಲ್ಲಿ ಆರ್ಶದೀಪ್ ಕೇವಲ 2 ರನ್ ನೀಡಿ 2 ವಿಕೆಟ್ ಕಬಳಿಸುವ ಮೂಲಕ ಪಂಜಾಬ್‌ಗೆ ರೋಚಕ ಗೆಲುವು ತಂದುಕೊಟ್ಟರು.

ಡೇವಿಡ್ ವೀಸಾ ಐಪಿ​ಎಲ್‌ನಲ್ಲಿ ಆಡಿದ ನಮೀ​ಬಿಯಾದ ಮೊದ​ಲಿಗ!

ಕೋಲ್ಕ​ತಾ(ಏ.24): ಚೆನ್ನೈ ಸೂಪರ್‌ ಕಿಂಗ್‌್ಸ ವಿರುದ್ಧ ಭಾನು​ವಾರ ಕೋಲ್ಕತಾ ಪರ ಕಣ​ಕ್ಕಿ​ಳಿದ ಡೇವಿಡ್‌ ವೀಸಾ ಐಪಿ​ಎ​ಲ್‌​ನಲ್ಲಿ ಆಡಿದ ಮೊದಲ ನಮೀ​ಬಿಯಾ ಆಟ​ಗಾರ ಎನಿ​ಸಿ​ಕೊಂಡರು. ಹಾಗಂತ ವೀಸಾ ಐಪಿ​ಎ​ಲ್‌​ನಲ್ಲಿ ಆಡಿದ್ದು ಇದೇ ಮೊದಲಲ್ಲ. ಅವರು ಆರ್‌​ಸಿಬಿ ಪರ 2015ರಲ್ಲಿ 14, 2016ರಲ್ಲಿ 1 ಪಂದ್ಯ​ವ​ನ್ನಾ​ಡಿ​ದ್ದರು. ಆದರೆ ಆ ವೇಳೆ ಅವರು ದಕ್ಷಿಣ ಆ​ಫ್ರಿಕಾ ತಂಡ​ವನ್ನು ಪ್ರತಿ​ನಿ​ಧಿ​ಸು​ತ್ತಿ​ದ್ದರು.

IPL 2023: ಕೊನೇ ಓವರ್‌ನಲ್ಲಿ 16 ರನ್‌ ರಕ್ಷಿಸಿಕೊಂಡ ಆರ್ಶ್‌ದೀಪ್‌, ಪಂಜಾಜ್‌ಗೆ ವಿಜಯದೀಪ!

2021ರಲ್ಲಿ ನಮೀ​ಬಿಯಾ ತಂಡ ಸೇರ್ಪ​ಡೆ​ಗೊಂಡ ವೀಸಾ ಟಿ20 ವಿಶ್ವಕಪ್‌ನಲ್ಲೂ ಆ ತಂಡದ ಪರ ಆಡಿದ್ದರು. ಈ ಆವೃತ್ತಿಯ ಐಪಿ​ಎ​ಲ್‌ಗೂ ಮುನ್ನ ನಡೆದ ಆಟ​ಗಾ​ರರ ಹರಾ​ಜಿ​ನಲ್ಲಿ ಅವರು ಕೋಲ್ಕತಾ ತಂಡಕ್ಕೆ 1 ಕೋಟಿ ರು.ಗೆ ಬಿಕ​ರಿ​ಯಾ​ಗಿ​ದ್ದ​ರು. ಇದೇ ವೇಳೆ ನಮೀಬಿಯಾ ಐಪಿಎಲ್‌ನಲ್ಲಿ ಪ್ರಾತಿನಿಧ್ಯ ಪಡೆದ 15ನೇ ದೇಶ ಎನಿಸಿಕೊಂಡಿತು.

ಡೆ​ಲ್ಲಿ ತಂಡಕ್ಕೆ ಕಮಲೇಶ್‌ ಬದಲು ಪ್ರಿಯಂ ಗರ್ಗ್‌

ನವ​ದೆ​ಹ​ಲಿ: ಗಾಯ​ಗೊಂಡು 16ನೇ ಆವೃ​ತ್ತಿಯ ಐಪಿ​ಎ​ಲ್‌​ನಿಂದ ಹೊರ​ಬಿದ್ದ ವೇಗಿ ಕಮಲೇಶ್‌ ನಾಗ​ರ​ಕೋಟಿ ಬದಲು ಡೆಲ್ಲಿ ಕ್ಯಾಪಿ​ಟಲ್ಸ್‌ ತಂಡ ಭಾರತ ಅಂಡ​ರ್‌-19 ತಂಡದ ಮಾಜಿ ನಾಯಕ ಪ್ರಿಯಂ ಗರ್ಗ್‌ ಅವ​ರನ್ನು ಸೇರಿ​ಸಿ​ಕೊಂಡಿದೆ. ಆಟ​ಗಾ​ರರ ಹರಾ​ಜಿ​ನಲ್ಲಿ ಬಿಕರಿಯಾಗದ ಪ್ರಿಯಂ ಅವ​ರನ್ನು ತಂಡ ಮೂಲ​ಬೆಲೆ 20 ಲಕ್ಷ ರು.ಗೆ ಖರೀದಿಸಿದೆ. 2020ರಲ್ಲಿ ಸನ್‌​ರೈ​ಸ​ರ್ಸ್‌ ಹೈದ​ರಾ​ಬಾದ್‌ ತಂಡದಲ್ಲಿದ್ದ ಪ್ರಿಯಂ ಕಳೆದ 3 ಆವೃ​ತ್ತಿ​ಗ​ಳಲ್ಲಿ ಒಟ್ಟು 21 ಪಂದ್ಯ​ಗ​ಳ​ನ್ನಾ​ಡಿ​ದ್ದರು.

click me!