
ಪುಣೆ(ಏ.29): ಇಂದು IPLನಲ್ಲಿ ಸ್ನೇಹಿತರ ಸವಾಲ್. ಇವರು ನಿನ್ನೆ ಮೊನ್ನೆ ಫ್ರೆಂಡ್ಸ್ ಆದವರಲ್ಲ. ಅಂಡರ್-13ನಿಂದ ಜೊತೆಯಾಗಿಯೇ ಆಡಿಕೊಂಡು ಬಂದವರು. ಜೊತೆಯಾಗಿಯೇ ಇನ್ನಿಂಗ್ಸ್ ಆರಂಭಿಸಿದವರು. ಹೌದು, ಅಂಡರ್-13, ಅಂಡರ್-19, ಕರ್ನಾಟಕ, IPL ಮತ್ತು ಟೀಂ ಇಂಡಿಯಾ (Team India) ಹೀಗೆ ಐದು ಟೀಂಗಳಿಗೆ ಇವರೇ ಓಪನರ್ಸ್. ಆದರೆ ಸಮಯ ಕೈ ಕೊಟ್ಟಿರೋದ್ರಿಂದ ಇಂದು ಎದುರು ಬದುರಾಗಿದ್ದಾರೆ. ಅವರೇ KL ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ (Mayank Agarwal).
ರಾಹುಲ್-ಮಯಾಂಕ್ ಕಾಳಗದಲ್ಲಿ ಗೆಲ್ಲೋರ್ಯಾರು:
ಇಂದು ಐಪಿಎಲ್ನ 42ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (Punjab Kings) ಮತ್ತು ಲಖನೌ ಸೂಪರ್ ಜೈಂಟ್ಸ್ (Lucknow Supergiants) ಮುಖಾಮುಖಿಯಾಗ್ತಿವೆ. ಪಂಜಾಬ್ಗೆ ಮಯಾಂಕ್, ಲಖನೌಗೆ ರಾಹುಲ್ ನಾಯಕ. ಸುಮಾರು 15 ವರ್ಷಗಳಿಂದ ಜೊತೆಯಾಗಿ ಇನ್ನಿಂಗ್ಸ್ ಆರಂಭಿಸಿದ್ದ ಈ ಜೋಡಿ, ಇಂದು ಮಾತ್ರ ಎದುರು ಬದುರಾಗ್ತಿದೆ. ಕಳೆದ ಮೂರು ವರ್ಷ ಪಂಜಾಬ್ ಕಿಂಗ್ಸ್ ತಂಡದಲ್ಲೇ ಇನ್ನಿಂಗ್ಸ್ ಆರಂಭಿಸ್ತಿದ್ದ ಜೋಡಿ, ಇಂದು ಬದ್ಧ ವೈರಿಗಳಾಗಿ ಕಾದಾಡೋ ಸ್ಥಿತಿ ಬಂದಿದೆ. ಭಾರತ ಟೆಸ್ಟ್ ತಂಡದ ಓಪನರ್ಸ್ ಕೂಡ ಇದೇ ಜೋಡಿ. ಹಾಗಾಗಿಯೇ ಪುಣೆಯಲ್ಲಿ ಇಂದು ಬಿಗ್ ಫೈಟ್ ನಿರೀಕ್ಷಿಸಲಾಗಿದೆ.
ಕನ್ನಡಿಗರಿಗೆ ಕನ್ನಡಿಗರೇ ಸವಾಲು:
ಪಂಜಾಬ್ ಕಿಂಗ್ಸ್ 8 ಪಂದ್ಯಗಳಲ್ಲಿ ನಾಲ್ಕು ಗೆದ್ದು ನಾಲ್ಕು ಸೋತಿದ್ದರೆ, ಲಖನೌ 8ರಲ್ಲಿ ಐದು ಗೆದ್ದು, ನಾಲ್ಕು ಸೋತಿದೆ. ಹಾಗಾಗಿ ಎರಡು ತಂಡಗಳು ಇಂದು ಗೆಲ್ಲೋ ಒತ್ತಡದಲ್ಲಿವೆ. ಇಂದು ಪಂಜಾಬ್-ಲಖನೌ ಕದನ ಅನ್ನೋದಕ್ಕಿಂತ ಕನ್ನಡಿಗ ನಡುವಿನ ಕದನ ಅಂದರೆ ಸೂಕ್ತ. ಎರಡು ಟೀಮ್ಸ್ ಕ್ಯಾಪ್ಟನ್ಗಳು ಕರ್ನಾಟಕದವರು. ಪಂಜಾಬ್ ಕೋಚ್ ಕೋಚ್ ಸಹ ಕನ್ನಡಿಗ ಅನಿಲ್ ಕುಂಬ್ಳೆ (Anil Kumble). ಲಖನೌದಲ್ಲಿ ರಾಹುಲ್ ಜೊತೆ ಮನೀಶ್ ಪಾಂಡೆ (Manish Pandey) ಮತ್ತು ಕೆ. ಗೌತಮ್ ಇದ್ದಾರೆ. ಹೀಗಾಗಿ ಇದು ಕನ್ನಡಿಗ ಕದನವಾಗಿ ಮಾರ್ಪಟ್ಟಿದೆ.
IPLನಲ್ಲಿ ಹಲ್ಚಲ್ ಎಬ್ಬಿಸಿದ ‘ಜಮ್ಮು ಎಕ್ಸ್ಪ್ರೆಸ್’ ಉಮ್ರಾನ್ ಮಲಿಕ್..!
ಲಖನೌಗೆ ನಾಯಕನೇ ಬಲ:
ಲಖನೌ ಟೀಂ ಅಸ್ಥಿರ ಪ್ರದರ್ಶನ ನೀಡುತ್ತಿದೆ. ನಾಯಕ ರಾಹುಲ್ ಕ್ಲಿಕ್ ಆದ್ರೆ ಮಾತ್ರ ಲಖನೌಗೆ ಜಯ ಅನ್ನೋ ಸ್ಥಿತಿ ಬಂದೋದಗಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ಎರಡು ಶತಕ ಬಾರಿಸಿ ಎರಡು ಪಂದ್ಯವನ್ನೂ ಗೆಲ್ಲಿಸಿದ್ದರು ರಾಹುಲ್. ಮಿಡ್ಲ್ ಆರ್ಡರ್ ದುರ್ಬಲವಾಗಿರುವುದು ಲಖನೌ ದೌರ್ಬಲ್ಯ. ಇದೊಂದು ಸ್ಟ್ರಾಂಗ್ ಆದ್ರೆ ಲಖನೌ ಮತ್ತಷ್ಟು ಬಲಿಷ್ಠವಾಗಿ ಕಾಣಲಿದೆ. ಕನ್ನಡಿಗ ಮನೀಶ್ ಪಾಂಡೆ ಮತ್ತು ಕ್ವಿಂಟಕ್ ಡಿ ಕಾಕ್ ನಿರೀಕ್ಷಿತ ಆಟ ಆಡ್ತಿಲ್ಲ. ಆಲ್ರೌಂಡರ್ಸ್ ಲಖನೌ ಬಲ. ಇಂದು ಸಾಂಘಿಕ ಪ್ರದರ್ಶನ ನೀಡಿದ್ರೆ, ಪಾಯಿಂಟ್ ಟೇಬಲ್ನಲ್ಲಿ ಮೇಲೇಳಲಿದೆ.
ಪಂಜಾಬ್ಗೆ ಗಬ್ಬರ್ ಸಿಂಗ್ ಟ್ರಂಪ್ಕಾರ್ಡ್:
ಪಂಜಾಬ್ ಸ್ಥಿತಿ ಲಖನೌಗಿಂತ ಏನೂ ಭಿನ್ನವಾಗಿಲ್ಲ. ಅಸ್ಥಿರ ಪ್ರದರ್ಶನ ನೀಡಿಕೊಂಡು ಬರುತ್ತಿರುವುದರಿಂದಲೇ ಇಂದು ಗೆಲ್ಲಬೇಕಾದ ಒತ್ತಡದಲ್ಲಿರೋದು. ಕ್ಯಾಪ್ಟನ್ ಆದ್ಮೇಲೆ ಮಯಾಂಕ್ ಅಗರ್‌ವಾಲ್ ಆಟ ಯಾಕೋ ಮಂಕಾಗಿದೆ. ಆದ್ರೆ ಶಿಖರ್ ಧವನ್ (Shikhar Dhawan) ಆರ್ಭಟಿಸುತ್ತಿರುವುದು ಪಂಜಾಬ್ ಗೆಲುವಿಗೆ ಕಾರಣವಾಗ್ತಿದೆ. ಲಿಯಾಮ್ ಲಿವಿಂಗ್ಸ್ಟೋನ್ ಪಂಜಾಬ್ ಸ್ಟ್ರೆಂಥ್. ಬೌಲಿಂಗ್ನಲ್ಲಿ ಕಗಿಸೋ ರಬಾಡ ಇರೋದ್ರಿಂದ ಪಂಜಾಬ್ ಬಲಿಷ್ಠವಾಗಿ ಕಾಣ್ತಿದೆ. ಒಟ್ನಲ್ಲಿ ಸ್ನೇಹಿತರ ಸವಾಲ್ನಲ್ಲಿ ಗೆಲ್ಲೋರ್ಯಾರು ಅನ್ನೋದು ಮಾತ್ರ ತೀವ್ರ ಕುತೂಹಲ ಕೆರಳಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.