
ಮುಂಬೈ(ಏ.15): ಐಪಿಎಲ್ 2022 ಟೂರ್ನಿಯ 25ನೇ ಲೀಗ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಸನ್‌ರೈಸರ್ಸ್ ಹೈದರಾಬಾದ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೈದರಾಬಾದ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಸುಂದರ್ ಬದಲು ಜೆ ಸುಚಿತ್ ತಂಡ ಸೇರಿಕೊಂಡಿದ್ದಾರೆ.
ಕೋಲ್ಕತಾ ತಂಡದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಗಾಯಗೊಂಡಿರುವ ಕಾರಣ ಮೂರು ಪ್ರಮುಖ ಬದಲಾವಣೆಗಳಾಗಿವೆ. ಆ್ಯರೋನ್ ಫಿಂಚ್, ಅಮನ್ ಖಾನ್, ಶೆಲ್ಡಾನ್ ಜಾಕ್ಸನ್ ತಂಡ ಸೇರಿಕೊಂಡಿದ್ದಾರೆ.
ಸನ್‌ರೈಸರ್ಸ್ ಹೈದರಾಬಾಗ್ ಪ್ಲೇಯಿಂಗ್ 11
ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್(ನಾಯಕ), ರಾಹುಲ್ ತ್ರಿಪಾಠಿ, ನಿಕೋಲಸ್ ಪೂರನ್, ಆ್ಯಡಿನ್ ಮಕ್ರಮ್, ಶಶಾಂಕ್ ಸಿಂಗ್, ಜೆ ಸುಚಿತ್, ಭವನೇಶ್ವರ್ ಕುಮಾರ್, ಮ್ಯಾಕ್ರೋ ಜಾನ್ಸನ್, ಉಮ್ರಾನ್ ಮಲಿಕ್, ಟಿ ನಟರಾಜನ್
IPL 2022 ಅಂದು ಸಿಎಸ್ಕೆಗೆ ವಿಲನ್, ಇಂದು ಚೆನ್ನೈ ಹೀರೋ..!
ಕೋಲ್ಕತಾ ನೈಟ್ ರೈಡರ್ಸ್ ಪ್ಲೇಯಿಂಗ್ 11
ಆ್ಯರೋನ್ ಫಿಂಚ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್(ನಾಯಕ), ನಿತೀಶ್ ರಾನಾ, ಆ್ಯಂಡ್ರೆ ರಸೆಲ್, ಶೆಲ್ಡಾನ್ ಜಾಕ್ಸನ್, ಪ್ಯಾಟ್ ಕಮಿನ್ಸ್, ಸುನಿಲ್ ನರೈನನ್, ಉಮೇಶ್ ಯಾದವ್, ಹಕೀಮ್ ಖಾನ್, ವರುಣ್ ಚಕ್ರವರ್ತಿ
ಮುಂಬೈನ ಬ್ರೇಬೋರ್ನ್ ಕ್ರೀಡಾಂಗಣ ಬ್ಯಾಟಿಂಗ್‌ಗೆ ಹೆಚ್ಚು ನೆರವು ನೀಡುವ ಪಂದ್ಯವಾಗಿದೆ. ಈ ಆವೃತ್ತಿಯಲ್ಲಿ ಆಡಿದ 5 ಪಂದ್ಯಗಳಲ್ಲಿ 4 ಪಂದ್ಯಗಳಲ್ಲಿ ಚೇಸಿಂಗ್ ತಂಡ ಗೆಲುವು ದಾಖಲಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 180 ರನ್ ಸ್ಕೋರ್ ಡಿಫೆಂಡ್ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇಲ್ಲಿನ ಮೊದಲ ಇನ್ನಿಂಗ್ಸ್ ಕಡಿಮೆ ಸ್ಕೋರ್ 177 ರನ್.
ಕೋಲ್ಕತಾ ನೈಟ್ ರೈಡರ್ಸ್ ತಂಡ ಐಪಿಎಲ್ ಪಾಯಿಂಟ್ಸ್ ಟೇಬಲ್‌ನಲ್ಲಿ 2ನೇ ಸ್ಥಾನದಲ್ಲಿದೆ. 5 ಪಂದ್ಯದಲ್ಲಿ 3 ಗೆಲುವು ಸಾಧಿಸಿದೆ. ಇನ್ನು ಎದುರಾಳಿ ಸನ್‌ರೈರ್ಸ್ ಹೈದರಾಬಾದ್ 4ರಲ್ಲಿ 2 ಗೆಲುವು ಸಾಧಿಸಿ 8ನೇ ಸ್ಥಾನದಲ್ಲಿದೆ. ಸನ್‌ರೈಸರ್ಸ್ ಆರಂಭಿಕ 2 ಪಂದ್ಯಗಳಲ್ಲಿ ಮುಗ್ಗರಿಸಿತ್ತು. ಆದರೆ ನಂತರದ 2 ಪಂದ್ಯಗಳನ್ನೂ ಗೆದ್ದುಕೊಂಡಿದೆ.
ಈ ಬಾರಿಯ IPLನಲ್ಲಿ ನಾಯಕರುಗಳದ್ದೇ ಪ್ಲಾಫ್ ಶೋ..!
ಐಪಿಎಲ್ ಅಂಕಪಟ್ಟಿ 2022
ಐಪಿಎಲ್ ಟೂರ್ನಿಯಲ್ಲಿ 24 ಲೀಗ್ ಪಂದ್ಯಗಲ್ಲಿ 10 ತಂಡಗಳು ಕಠಿಣ ಹೋರಾಟ ನೀಡಿದೆ. ಇದರಲ್ಲಿ ಗುಜರಾತ್ ಟೈಟಾನ್ಸ್ 5 ಪಂದ್ಯಗಳ ಪೈಕಿ 4ರಲ್ಲಿ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದೆ. ಇನ್ನು ಕೋಲ್ಕತಾ ನೈಟ್ ರೈಡರ್ಸ್ ತಂಡ 5 ಪಂದ್ಯಗಳಲ್ಲಿ 3 ಗೆಲುವು ಸಾಧಿಸಿದೆ. ಈ ಮೂಲಕ 2ನೇ ಸ್ಥಾನ ಅಲಂಕರಿಸಿದೆ. ರಾಜಸ್ಥಾನ ರಾಯಲ್ಸ್ 5 ಪಂದ್ಯದಲ್ಲಿ 3 ಗೆಲುವು ದಾಖಲಿಸುವ ಮೂಲಕ ಮೂರನೇ ಸ್ಥಾನದಲ್ಲಿದೆ. ನಾಲ್ಕನೇ ಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್ 5 ಪಂದ್ಯಗಳಲ್ಲಿ 3 ಪಂದ್ಯಗಲ್ಲಿ ಗೆಲುವು ಸಾಧಿಸಿದೆ. ಇನ್ನು ಲಖನೌ ಸೂಪರ್ ಜೈಂಟ್ಸ್ 5 ಪಂದ್ಯದಲ್ಲಿ 3 ಪಂದ್ಯದಲ್ಲಿ ಗೆಲುವು ದಾಖಲಿಸಿ, 5ನೇ ಸ್ಥಾನದಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 5 ಪಂದ್ಯಗಳಲ್ಲಿ 3 ಗೆಲುವು 2 ಸೋಲಿನೊಂದಿಗೆ 6ನೇ ಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ 4 ಪಂದ್ಯಗಳನ್ನು ಆಡಿದ್ದು 2 ಗೆಲುವು ಸಾಧಿಸಿದೆ. ಈ ಮೂಲಕ 7ನೇ ಸ್ಥಾನ ಅಲಂಕರಿಸಿದೆ. ಸನ್‌ರೈಸರ್ಸ್ ಹೈದರಾಬಾದ್ 8ನೇ ಸ್ಥಾನದಲ್ಲಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ ಕಂಡ 5 ಪಂದ್ಯಗಲ್ಲಿ ಒಂದು ಗೆಲುವು ಕಂಡಿದೆ. ಹೀಗಾಗಿ 9ನೇ ಸ್ಥಾನದಲ್ಲಿದೆ. ಇನ್ನು ಮುಂಬೈ ಇಂಡಿಯನ್ಸ್ 5 ಪಂದ್ಯಗಳನ್ನು ಸೋತು 10ನೇ ಸ್ಥಾನದಲ್ಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.