ಈ ಬಾರಿಯ IPLನಲ್ಲಿ ನಾಯಕರುಗಳದ್ದೇ ಪ್ಲಾಫ್​ ಶೋ..!

Published : Apr 15, 2022, 06:13 PM IST
ಈ ಬಾರಿಯ IPLನಲ್ಲಿ ನಾಯಕರುಗಳದ್ದೇ ಪ್ಲಾಫ್​ ಶೋ..!

ಸಾರಾಂಶ

* ಪ್ರಸಕ್ತ ಆವೃತ್ತಿಯ ಐಪಿಎಲ್‌ನಲ್ಲಿ ಕ್ಯಾಪ್ಟನ್ಸ್ ಫೇಲ್‌ * ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿರುವ ಬಹುತೇಕ ನಾಯಕರು * *  10 ಕ್ಯಾಪ್ಟನ್ಸ್​​​ ಪೈಕಿ, 9 ತಂಡದ ನಾಯಕರುಗಳು ಬ್ಯಾಟಿಂಗ್​​​​ನಲ್ಲಿ ಎಡವುತ್ತಿದ್ದಾರೆ.   

ಮುಂಬೈ(ಏ.15): 10 ತಂಡಗಳ ಕಾದಾಟದಿಂದ ಪ್ರಸಕ್ತ ಐಪಿಎಲ್​​​ ಭಾರೀ ಕುತೂಹಲ ಕೆರಳಿಸಿದೆ. ಈವರೆಗೆ ನಡೆದ 25 ಪಂದ್ಯಗಳು ಕೌತುಕತೆ ಉಳಿಸಿಕೊಂಡಿವೆ. ಮುಂದಿನ ಪಂದ್ಯಗಳು ಮತ್ತಷ್ಟು ರೋಚಕವಾಗಿರಲಿವೆ. 15ನೇ ಐಪಿಎಲ್ ಆವೃತ್ತಿ ಏನೋ  ಕ್ರಿಕೆಟ್ ಪ್ರೇಮಿಗಳ ಭರಪೂರ ಮನರಂಜನೆ ಒದಗಿಸುವಲ್ಲಿ ಸಕ್ಸಸ್​​​ ಕಾಣ್ತಿದೆ. ಆದ್ರೆ ಕ್ಯಾಪ್ಟನ್ಸ್ ಆಟದ ವಿಚಾರಕ್ಕೆ ಬಂದ್ರೆ ಎಲ್ಲವೂ ಉಲ್ಟಾ ಆಗಿದೆ. 10 ಕ್ಯಾಪ್ಟನ್ಸ್​​​ ಪೈಕಿ, 9 ತಂಡದ ನಾಯಕರುಗಳು ಬ್ಯಾಟಿಂಗ್​​​​ನಲ್ಲಿ ಎಡವುತ್ತಿದ್ದಾರೆ. ಇವರಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬರ್ತಿಲ್ಲ. ಫ್ರಾಂಚೈಸಿಗಳು ತಮ್ಮ ಮೇಲಿಟ್ಟಿದ್ದ ನಂಬಿಕೆಯನ್ನ ಉಳಿಸಿಕೊಳ್ಳುವಲ್ಲಿ ಫೇಲಾಗಿದ್ದಾರೆ. 

ಹೊಸ ಕ್ಯಾಪ್ಟನ್​​ ಪಾಂಡೆ ಕಮಾಲ್​​​.. ರಾಹುಲ್​ ಫೇಲ್​​..: 
ಹೊಸ ಫ್ರಾಂಚೈಸಿಗಳ ನಾಯಕರಾದ ಕೆಎಲ್ ರಾಹುಲ್ ಮತ್ತು ಹಾರ್ದಿಕ್​ ಪಾಂಡ್ಯ ತಂಡ ಮುನ್ನಡೆಸುವಲ್ಲಿ ಯಶಸ್ವಿ ಕಂಡಿದ್ದಾರೆ ನಿಜ. ಆದ್ರೆ ಬ್ಯಾಟಿಂಗ್​​​​ನಲ್ಲಿ ಲಕ್ನೋ ತಂಡದ ಕ್ಯಾಪ್ಟನ್​ ಕಳಪೆ ಆಟವಾಡ್ತಿದ್ದಾರೆ. 5 ಇನ್ನಿಂಗ್ಸ್​​ಗಳಲ್ಲಿ ಒಂದು ಅರ್ಧಶತಕವಷ್ಟೇ ಬಾರಿಸಿದ್ದಾರೆ. ಕಳೆದ ಬಾರಿಯಂತೆ ಈ ಸಲ ರನ್​​ ಹರಿದು ಬರ್ತಿಲ್ಲ. ಆದ್ರೆ ಗುಜರಾತ್ ಕ್ಯಾಪ್ಟನ್ ಹಾರ್ದಿಕ್​​​ ಪಾಂಡ್ಯ 140 ರನ್​​ ಗಳಿಸಿದ್ದಾರೆ. ಒಂದು ಅರ್ಧಶತಕ ಸಹಿತ 3 ವಿಕೆಟ್​ ಕಬಳಿಸಿ ಮಿಂಚಿದ್ದಾರೆ. ಇವರು 40 ಪ್ಲಸ್​ ಎವರೇಜ್​​ನಲ್ಲಿ ಬ್ಯಾಟ್ ಬೀಸಿದ್ದಾರೆ.

ದಿಗ್ಗಜ ತಂಡದ ಕ್ಯಾಪ್ಟನ್ಸ್​​​ಗಳಿಂದ ಕಳಪೆ ಆಟ: 
5 ಬಾರಿ ಕಪ್ ಗೆಲ್ಲಿಸಿಕೊಟ್ಟಿರೋ ರೋಹಿತ್​ ಶರ್ಮಾ ಕ್ಯಾಪ್ಟನ್ ಜೊತೆ ಆಟಗಾರರಾಗಿಯೂ ಫೇಲಾಗಿದ್ದಾರೆ. 5 ಪಂದ್ಯವಾಡಿ ಜಸ್ಟ್​ 101 ರನ್​ ಗಳಿಸಿದ್ದಾರೆ. ಇವರ ಕ್ಯಾಪ್ಟನ್ಸಿಯಲ್ಲಿ ಮುಂಬೈ ಸತತ ಸೋಲುಂಡಿದೆ. ಇನ್ನು ನಾಲ್ಕು ಸೋಲಿನ ಬಳಿಕ ಚೆನ್ನೈ ಕೊನೆಗೂ ಗೆಲುವಿನ ಲಯಕ್ಕೆ ಮರಳಿದೆ. ಆದ್ರೆ ತಂಡದ ಕ್ಯಾಪ್ಟನ್​ ಜಡ್ಡು ಮಾತ್ರ ಬ್ಯಾಟಿಂಗ್​​ನಲ್ಲಿ ಫಾರ್ಮ್​ಗೆ ಮರಳಿಲ್ಲ. ಈವರೆಗೆ ಬರೀ 66 ರನ್​​​​​ ಗಳಿಸಿದ್ದಾರೆ. ಕ್ಯಾಪ್ಟನ್ಸ್​  ಪೈಕಿ ಜಡ್ಡುನೇ ತೀರ ನಿರಾಸೆ ಮೂಡಿಸಿದ್ದಾರೆ. 

ಡೆಲ್ಲಿ, ಹೈದ್ರಾಬಾದ್ ಕ್ಯಾಪ್ಟನ್​​​ಗಳದ್ದು ಅದೇ ರಾಗ ಅದೇ ಹಾಡು: 
ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಕ್ಯಾಪ್ಟನ್ ರಿಷಬ್​​ ಪಂತ್​ರಿಂದ ಈವರೆಗೆ ಒಂದು ಬಿಗ್​ ಇನ್ನಿಂಗ್ಸ್ ಮೂಡಿ ಬಂದಿಲ್ಲ. ನಾಲ್ಕು ಪಂದ್ಯಗಳಲ್ಲಿ ಕ್ರಮವಾಗಿ 27, 39,43 ಹಾಗೂ 1 ರನ್​ ಗಳಿಸಿದ್ದಾರೆ. ಪ್ಲೇ ಆಫ್​​ ಪ್ರವೇಶದ ದೃಷ್ಟಿಯಿಂದ ಪಂತ್​ ಅಬ್ಬರ ಅನಿವಾರ್ಯ. ಇನ್ನೊಂದೆಡೆ ಅನುಭವಿ ಕ್ಯಾಪ್ಟನ್ ಕೇನ್ ವಿಲಿಯಮ್ಸನ್​​​ ನಸೀಬು ಕೆಟ್ಟಿದೆ. ಆಡಿದ ಕೊನೆ ಪಂದ್ಯದ 57 ರನ್​ ಈವರೆಗಿನ ಬೆಸ್ಟ್ ಆಗಿದೆ. ಇನ್ನು ನಾಯಕರಾಗಿ ಹ್ಯಾಟ್ರಿಕ್ ಸೋಲುಂಡಿದ್ರು. ಬಳಿಕ ತಂಡ ಎಚ್ಚೆತ್ತುಕೊಂಡಿದೆ.

IPL 2022: ಸನ್‌ರೈಸರ್ಸ್ ಪರ ವಾಷಿಂಗ್ಟನ್ ಸುಂದರ್ ಸ್ಥಾನ ತುಂಬೋರು ಯಾರು..?

ನಿರೀಕ್ಷೆ ಹುಸಿಗೊಳಿಸಿದ ಶ್ರೇಯಸ್​​- ಮಯಾಂಕ್​​​:
ಮೊದಲ ಬಾರಿ ಪಂಜಾಬ್​​​​​​​​​​ ತಂಡ ಮುನ್ನಡೆಸ್ತಿರೋ ಮಯಾಂಕ್​​ ಅಗರ್ವಾಲ್​​ ಕೂಡ ಬ್ಯಾಟಿಂಗ್​​ನಲ್ಲಿ ಜಾದು ಮಾಡ್ತಿಲ್ಲ. ಮುಂಬೈ ವಿರುದ್ಧ ಅರ್ಧಶತಕ ಬಿಟ್ರೆ, ಉಳಿದ ನಾಲ್ಕು ಪಂದ್ಯಗಳಿಂದ 42 ರನ್​​ ಕಲೆ ಹಾಕಿದ್ದಾರೆ. ಇನ್ನು ಕೆಕೆಆರ್​ ಕ್ಯಾಪ್ಟನ್​​​ ಶ್ರೇಯಸ್ ಕಥೆ ಏನೂ ಮಯಾಂಕ್​ಗಿಂತ ಭಿನ್ನವಾಗಿಲ್ಲ. ಇವರು ಒಂದು ಅರ್ಧಶತಕ ಸೇರಿ ಒಟ್ಟು 133 ರನ್​​ ಬಾರಿಸಿದ್ದಾರೆ. ಈವರೆಗೆ ಅಸಲಿ ಖದರ್ ತೋರಿಸಿಲ್ಲ.

ಪ್ಲಾಫ್​ ಆದ್ರು ಡುಪ್ಲೆಸಿಸ್​​​-ಸ್ಯಾಮ್ಸನ್​ : 
ಹೌದು, ಆರ್​​ಸಿಬಿ ತಂಡದ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​ ಕೂಡ ಫ್ಲಾಫ್ ಆಗಿದ್ದಾರೆ. ಮೊದಲ ಪಂದ್ಯದ 88 ರನ್​ ಬಿಟ್ರೆ, ಉಳಿದ ನಾಲ್ಕು ಪಂದ್ಯಗಳಲ್ಲಿ ಕೈ ಕೊಟ್ಟಿದ್ದಾರೆ. 31.1ರ ಎವರೇಜ್​​ನಲ್ಲಿ ಬ್ಯಾಟ್​ ಬೀಸಿರೋ ಇವರು ಸ್ಥಿರ ಪ್ರದರ್ಶನ ನೀಡಬೇಕಿದೆ. ಇನ್ನು ರಾಜಸ್ಥಾನ ತಂಡದ ಐಪಿಎಲ್​​​ನಲ್ಲಿ ರಾಯಲ್​ ಆಟವಾಡ್ತಿದೆ. ಆದ್ರೆ ಕ್ಯಾಪ್ಟನ್ ತದ್ವಿರುದ್ಧ ಪ್ರದರ್ಶನ ನೀಡ್ತಿದ್ದಾರೆ. 5 ಪಂದ್ಯಗಳಿಂದ 105 ರನ್​​​ ಕಲೆಹಾಕಿದ್ದಾರೆ. ಬಿಗ್ ಇನ್ನಿಂಗ್ಸ್ ಮರೆಯಾಗಿದೆ. 

ಆರಂಭಿಕ ಪಂದ್ಯಗಳಲ್ಲಿ ಫೇಲಾಗಿರೋ ಒಂಭತ್ತು ಕ್ಯಾಪ್ಟನ್ಸ್​​​​, ಮುಂದಿನ ಪಂದ್ಯಗಳಲ್ಲಾದ್ರು ಬಿಗ್​ ಇನ್ನಿಂಗ್ಸ್ ಆಡಿ ತಂಡಕ್ಕೆ ನೆರವಾಗಲಿ. ಹಾಗಾಗಬೇಕಾದ್ದಲ್ಲಿ ಒತ್ತಡ ಮೆಟ್ಟಿನಿಂತು ಬ್ಯಾಟ್ ಬೀಸಬೇಕಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಂತಾರಾಷ್ಟ್ರೀಯ ಟಿ20ಯಲ್ಲಿ ಆಲ್ರೌಂಡರ್ ಆಗಿ ಅಪರೂಪದಲ್ಲೇ ಅಪರೂಪದ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ!
U19 Asia Cup ವೈಭವ್ ಸೂರ್ಯವಂಶಿ ದ್ವಿಶತಕ ಜಸ್ಟ್‌ ಮಿಸ್; ಉದ್ಘಾಟನಾ ಪಂದ್ಯದಲ್ಲೇ ಬೃಹತ್ ಮೊತ್ತ ಗಳಿಸಿದ ಭಾರತ!