IPL 2022 ಗಿಲ್ ಸ್ಫೋಟಕ ಬ್ಯಾಟಿಂಗ್, ಡೆಲ್ಲಿ ತಂಡಕ್ಕೆ 172 ರನ್ ಟಾರ್ಗೆಟ್!

By Suvarna News  |  First Published Apr 2, 2022, 9:18 PM IST
  • ಡೆಲ್ಲಿ ಕ್ಯಾಪಿಟಲ್ಸ್ vs ಗುಜರಾತ್ ಟೈಟಾನ್ಸ್ ಪಂದ್ಯ
  • ಡೆಲ್ಲಿ ತಂಡಕ್ಕೆ 172 ರನ್ ಟಾರ್ಗೆಟ್ ನೀಡಿದ ಗುಜರಾತ್
  • ಶುಭ್‌ಮನ್ ಗಿಲ್ ಸ್ಫೋಟಕ ಬ್ಯಾಟಿಂಗ್

ಪುಣೆ(ಏ.02): ಗುಜರಾತ್ ಟೈಟಾನ್ಸ್ (Gujarat Titans) ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ನಡುವಿನ ಹೋರಾಟ ಆರಂಭದಲ್ಲೇ ತೀವ್ರ ಕುತೂಲಹಕ್ಕೆ ಕಾರಣವಾಗಿದೆ. ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಶುಭ್‌ಮನ್ ಗಿಲ್ (Shubman Gill) 16 ರನ್‌ಗಳಿಂದ ಶತಕ ಮಿಸ್ ಮಾಡಿಕೊಂಡರು. 46 ಎಸೆತದಲ್ಲಿ 84 ರನ್ ಸಿಡಿಸುವ ಮೂಲಕ ಗುಜರಾತ್ ಟೈಟಾನ್ಸ್ 6 ವಿಕೆಟ್ ನಷ್ಟಕ್ಕೆ 171 ರನ್ ಸಿಡಿಸಿದೆ. 

ಐಪಿಎಲ್ 2022 ಟೂರ್ನಿಯ ಮೊದಲ ಶತಕ ಸಿಡಿಸಿದ ಹೆಗ್ಗಳಿಕೆಗೆ ರಾಜಸ್ಥಾನ ರಾಯಲ್ಸ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಪಾತ್ರರಾಗಿದ್ದಾರೆ. ಮುಂಬೈ ವಿರುದ್ಧ ಬಟ್ಲರ್(Jose buttler) ಸೆಂಚುರಿ ಸಿಡಿಸಿ ಮಿಂಚಿದರು. ನಂತರ ಪಂದ್ಯದಲ್ಲಿ ಗಿಲ್ ಸೆಂಚುರಿ ಸಿಡಿಸುವ ಸೂಚನೆ ನೀಡಿದ್ದರು. ಆದರೆ ಖಲೀಲ್ ಅಹಮ್ಮದ್ ಎಸೆತದಲ್ಲಿ ವಿಕೆಟ್ ಕೈಚೆಲ್ಲಿ ನಿರಾಸೆ ಅನುಭವಿಸಿದರು.

Tap to resize

Latest Videos

IPL 2022 ಚಾಹಲ್ ಗೆ ಹ್ಯಾಟ್ರಿಕ್ ತಪ್ಪಿಸಿದ ಕರುಣ್, ಮುಂಬೈಗೆ ಸೋಲಿನ ಗಿಫ್ಟ್ ನೀಡಿದ ರಾಯಲ್ಸ್!

ಡೆಲ್ಲಿ ತಂಡ ಸೇರಿಕೊಂಡ ಮುಸ್ತಫಿಜುರ್ ಆರಂಭದಲ್ಲೇ ಮಾರಕ ದಾಳಿ ಸಂಘಟಿಸಿದರು. ಪರಿಣಾಮ ಮಾಥ್ಯೂ ವೇಡ್ ಕೇವಲ 1 ರನ್ ಸಿಡಿಸಿ ಪೆವಿಲಿಯನ್ ಸೇರಿಕೊಂಡರು. ಮೊದಲ ಓವರ್‌ನ ಮೂರನೇ ಎಸೆತದಲ್ಲೇ ಗುಜರಾತ್ ಟೈಟಾನ್ಸ್ ಮೊದಲ ವಿಕೆಟ್ ಕಳೆದುಕೊಂಡು ಆತಂಕ ಎದುರಿಸಿತು. ಆದರೆ ಶುಭಮನ್ ಗಿಲ್ ಬ್ಯಾಟಿಂಗ್ ಗುಜರಾತ್ ತಂಡಕ್ಕೆ ನೆರವಾಯಿತು.

ಗಿಲ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರೆ, ವಿಜಯ್ ಶಂಕರ್ ನಿಧಾನಗತಿಯಲ್ಲಿ ಬ್ಯಾಟ್ ಬೀಸಿದರು. ವಿಜಯಶಂಕರ್ 20 ಎಸೆತದಲ್ಲಿ 13 ರನ್ ಸಿಡಿಸಿ ಔಟಾದರು. ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಗಿಲ್ ಜೊತೆಯಾಟದಲ್ಲಿ ಉತ್ತಮ ರನ್ ಹರಿದು ಬಂತು.

IPL 2022 ಬರೋಬ್ಬರಿ 8 ಸಿಕ್ಸರ್, ರಸೆಲ್ ಅಬ್ಬರದಿಂದ ಕೆಕೆಆರ್‌ಗೆ ಭರ್ಜರಿ ಗೆಲುವು!

ದಿಟ್ಟ ಹೋರಾಟ ನೀಡಿದ ಗಿಲ್ 32 ಎಸೆತದಲ್ಲಿ ಅರ್ಧಶತಕ ಸಿಡಿಸಿದರು. ಇದು ಗಿಲ್ 11ನೇ ಐಪಿಎಲ್ ಅರ್ಧಶತಕವಾಗಿದೆ. ಹಾರ್ದಿಕ್ ಪಾಂಡ್ಯ 27 ಎಸೆತದಲ್ಲಿ 4 ಬೌಂಡರಿ  ಮೂಲಕ 31 ರನ್ ಸಿಡಿಸಿ ಔಟಾದರು. ಆದರೆ ಗಿಲ್ ಬ್ಯಾಟಿಂಗ್ ಪ್ರದರ್ಶನ ಡೆಲ್ಲಿ ತಂಡಕ್ಕೆ ಸವಾಲಾಗಿ ಪರಿಣಮಿಸಿತು. ಗಿಲ್ 46 ಎಸೆತದಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ ಮೂಲಕ 84 ರನ್ ಸಿಡಿಸಿ ಔಟಾದರು.

ರಾಹುಲ್ ಟಿವಾಟಿಯಾ 8 ಎಸೆತದಲ್ಲಿ 1 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 14 ರನ್ ಸಿಡಿಸಿ ಔಟಾದರು. ಡೇವಿಡ್ ಮಿಲ್ಲರ್ ಅಂತಿಮ ಹಂತದಲ್ಲಿ ದಿಟ್ಟ ಹೋರಾಟ ನೀಡಿದರು. ಮಿಲ್ಲರ್ ಅಜೇಯ 20 ರನ್ ಸಿಡಿದರು. ಗುಜರಾತ್ ಟೈಟಾನ್ಸ್ 6 ವಿಕೆಟ್ ನಷ್ಟಕ್ಕೆ 171 ರನ್ ಸಿಡಿಸಿತು.

72 ರನ್ ಟಾರ್ಗೆಟ್ ಪಡೆದಿರುವ ಡೆಲ್ಲಿ ಕ್ಯಾಪಿಟಲ್ಸ್ ಚೇಸಿಂಗ್ ಮಾಡುವ ವಿಶ್ವಾಸದಲ್ಲಿದೆ. ಇತ್ತ ಗುಜರಾತ್ ಬೌಲಿಂಗ್ ನಲ್ಲೂ ಬಲಿಷ್ಠವಾಗಿದ್ದು, ರೋಚಕ ಹೋರಾಟ ಏರ್ಪಡಲಿದೆ.

ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ 11
ಪೃಥ್ವಿ ಶಾ, ಟಿಮ್ ಸೈಫರ್ಟ್, ಮನ್ದೀಪ್ ಸಿಂಗ್, ರಿಶಬ್ ಪಂತ್(ನಾಯಕ), ಲಲಿತ್ ಯಾದವ್, ರೊವ್ಮನ್ ಪೊವೆಲ್, ಶಾರ್ದೂಲ್ ಠಾಕೂರ್, ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್, ಖಲೀಲ್ ಅಹಮ್ಮದ್, ಮುಸ್ತಫಿಜುರ್ ರೆಹಮಾನ್

ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ 11
ಶುಭಮನ್‌ ಗಿಲ್, ಮ್ಯಾಥ್ಯೂ ವೇಟ್, ವಿಜಯ್ ಶಂಕರ್, ಹಾರ್ದಿಕ್ ಪಾಂಡ್ಯ(ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ಟಿವಾಟಿಯಾ, ಅಭಿನವ್ ಮನೋಹರ್, ರಶೀದ್ ಖಾನ್, ಲ್ಯೂಕಿ ಫರ್ಗ್ಯೂಸನ್, ವರುಣ್ ಅರೋನ್, ಮೊಹಮ್ಮದ್ ಶಮಿ

click me!