
ಪುಣೆ(ಏ.02): ಐಪಿಎಲ್ 2022 ಟೂರ್ನಿಯಲ್ಲಿ ಶುಭಾರಂಭ ಮಾಡಿರುವ ಗುಜರಾತ್ ಟೈಟಾನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಿದೆ. ಪುಣೆಯಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಡೆಲ್ಲಿ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ನಾಗರಕೋಟಿ ಬದಲು ಮುಸ್ತಾಫಿಜುರ್ ರಹೆಮಾನ್ ತಂಡ ಸೇರಿಕೊಂಡಿದ್ದಾರೆ. ಆದರೆ ಗುಜರಾತ್ ಟೈಟಾನ್ಸ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ 11
ಪೃಥ್ವಿ ಶಾ, ಟಿಮ್ ಸೈಫರ್ಟ್, ಮನ್ದೀಪ್ ಸಿಂಗ್, ರಿಶಬ್ ಪಂತ್(ನಾಯಕ), ಲಲಿತ್ ಯಾದವ್, ರೊವ್ಮನ್ ಪೊವೆಲ್, ಶಾರ್ದೂಲ್ ಠಾಕೂರ್, ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್, ಖಲೀಲ್ ಅಹಮ್ಮದ್, ಮುಸ್ತಫಿಜುರ್ ರೆಹಮಾನ್
IPL 2022 ಬರೋಬ್ಬರಿ 8 ಸಿಕ್ಸರ್, ರಸೆಲ್ ಅಬ್ಬರದಿಂದ ಕೆಕೆಆರ್‌ಗೆ ಭರ್ಜರಿ ಗೆಲುವು!
ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ 11
ಶುಭಮನ್ ಗಿಲ್, ಮ್ಯಾಥ್ಯೂ ವೇಟ್, ವಿಜಯ್ ಶಂಕರ್, ಹಾರ್ದಿಕ್ ಪಾಂಡ್ಯ(ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ಟಿವಾಟಿಯಾ, ಅಭಿನವ್ ಮನೋಹರ್, ರಶೀದ್ ಖಾನ್, ಲ್ಯೂಕಿ ಫರ್ಗ್ಯೂಸನ್, ವರುಣ್ ಅರೋನ್, ಮೊಹಮ್ಮದ್ ಶಮಿ
ಬೌಲಿಂಗ್ ಲೈನ್ ಬದಲಾವಣೆ ಮಾಡಿದ್ದೇವೆ. ಹೀಗಾಗಿ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದೇವೆ. ಅಲ್ಪ ಮೊತ್ತಕ್ಕೆ ಗುಜರಾತ್ ತಂಡವನ್ನು ಕಟ್ಟಿ ಹಾಕಿ ಚೇಸ್ ಮಾಡಲು ಸುಲಭವಾಗಲಿದೆ ಎಂದು ಟಾಸ್ ಗೆದ್ದ ಬಳಿಕ ನಾಯಕ ರಿಷಬ್ ಪಂತ್ ಹೇಳಿದ್ದಾರೆ.
IPL 2022 - ಬಾಲಿವುಡ್ ಬೆಡಗಿಯರ ಜೊತೆ ಕ್ರಿಕೆಟಿಗರ ಲವ್ ಆಫೇರ್ಸ್!
ಅಂಕಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 3ನೇ ಸ್ಥಾನದಲ್ಲಿದ್ದರೆ, ಗುಜರಾತ್ ಟೈಟಾನ್ಸ್ 4ನೇ ಸ್ಥಾನದಲ್ಲಿದೆ. ತಲಾ ಒಂದೊಂದು ಪಂದ್ಯ ಆಡಿರುವ ಉಭಯ ತಂಡಗಳು ಗೆಲುವು ಸಾಧಿಸಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ 4 ಗೆಲುವು ದಾಖಲಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತು. ಇತ್ತ ಲಖನೌ ಸೂಪರ್‌ಜೈಂಟ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ 5 ವಿಕೆಟ್ ಗೆಲುವು ದಾಖಲಿಸಿತ್ತು.
10 ತಂಡಗಳ ಪೈಪೋಟಿ ಕಾರಣ ಪ್ರತಿ ಪಂದ್ಯವೂ ಮುಖ್ಯವಾಗಿದೆ. ಹೀಗಾಗಿ ಇಂದಿನ ಹೋರಾಟ ಮತ್ತಷ್ಟು ರೋಚಕವಾಗಿರಲಿದೆ. ಉಭಯ ತಂಡಗಳು ಬಲಿಷ್ಠವಾಗಿದ್ದು, ಅತ್ಯುತ್ತಮ ಆಟಗಾರರನ್ನು ಹೊಂದಿದೆ.
ಅಂಕಪಟ್ಟಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಮೊದಲ ಸ್ಥಾನದಲ್ಲಿದೆ. ಪಂಜಾಬ್ ಕಿಂಗ್ಸ್ ವಿರುದ್ಧದ ಗೆಲುವಿನೊಂದಿಗೆ ಕೆಕೆಆರ್ ಮೊದಲ ಸ್ಥಾನಕ್ಕೇರಿತು ‘ಸಿಕ್ಸರ್ ಮಷಿನ್’ ಆ್ಯಂಡ್ರೆ ರಸೆಲ್ ಸಿಡಿದೆದ್ದ ದಿನ ಎದುರಾಳಿಗಳಿಗೆ ಉಳಿಗಾಲವಿಲ್ಲ. ಅವರ ಆರ್ಭಟಕ್ಕೆ ಎದುರಾಳಿಗಳು ನಲುಗಿ ಹೋದ ಅನೇಕ ಪ್ರಸಂಗಗಳಿಗೆ ಐಪಿಎಲ್ ಸಾಕ್ಷಿಯಾಗಿದೆ. ರಸೆಲ್‌ರಿಂದ ಚಚ್ಚಿಸಿಕೊಳ್ಳುವ ಸರದಿ ಶುಕ್ರವಾರ ಪಂಜಾಬ್ ಕಿಂಗ್‌್ಸ ತಂಡದ್ದಾಗಿತ್ತು. ಅವರ ಸಿಕ್ಸರ್ ಹಬ್ಬ ಕೆಕೆಆರ್, 33 ಎಸೆತ ಬಾಕಿ ಇರುವಂತೆ 6 ವಿಕೆಟ್ ಗೆಲುವು ಸಾಧಿಸಲು ನೆರವಾಯಿತು. ಈ ಜಯದೊಂದಿಗೆ ಶ್ರೇಯಸ್ ಅಯ್ಯರ್‌ರ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಆರ್‌ಸಿಬಿ ವಿರುದ್ಧ ಮೊದಲ ಪಂದ್ಯದಲ್ಲಿ 206 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿದ್ದ ಪಂಜಾಬ್ ಕಿಂಗ್‌್ಸ, ಉಮೇಶ್ ಯಾದವ್‌ರ ಮಾರಕ ದಾಳಿಗೆ ಸಿಲುಕಿ 18.2 ಓವರಲ್ಲಿ ಕೇವಲ 138 ರನ್‌ಗೆ ಆಲೌಟ್ ಆಯಿತು. ಸುಲಭ ಗುರಿ ಬೆನ್ನತ್ತಲು ಇಳಿದ ಕೆಕೆಆರ್, ಶ್ರೇಯಸ್‌ರ ಆಕರ್ಷಕ ಇನ್ನಿಂಗ್‌್ಸನ ಹೊರತಾಗಿಯೂ 51 ರನ್‌ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಈ ಹಂತದಲ್ಲಿ ಸ್ಯಾಮ್ ಬಿಲ್ಲಿಂಗ್‌್ಸ ಜೊತೆ ಕ್ರೀಸ್ ಹಂಚಿಕೊಂಡ ರಸೆಲ್, ಪಂಜಾಬ್ ಬೌಲರ್‌ಗಳನ್ನು ಮನಬಂದಂತೆ ಚಚ್ಚಿದರು. ಅವರ ಬ್ಯಾಟ್‌ಗೆ ಸಿಕ್ಕ ಚೆಂಡು ಮೈದಾನದ ಮೂಲೆಮೂಲೆಗೆ ಪ್ರಯಾಣಿಸಿತು. 26 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ರಸೆಲ್, ಕೇವಲ 31 ಎಸೆತಗಳಲ್ಲಿ 2 ಬೌಂಡರಿ, 8 ಸಿಕ್ಸರ್‌ಗಳೊಂದಿಗೆ ಔಟಾಗದೆ 70 ರನ್ ಸಿಡಿಸಿದರು. ಬಿಲ್ಲಿಂಗ್‌್ಸ ಔಟಾಗದೆ 24 ರನ್ ಗಳಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.