IPL 2022 'ಕೊನೇ ಪ್ಲೇಸ್ ಅಲ್ಲಿ ಇರೋಕೆ ಲಾಯಕ್ಕು ನೀವು..' ಗೇಲಿ ಮಾಡಲು ಹೋಗಿ ತಾವೇ ತಮಾಷೆಯಾದ ರಾಜಸ್ಥಾನ ರಾಯಲ್ಸ್!

Published : Mar 26, 2022, 04:25 PM ISTUpdated : Mar 26, 2022, 04:27 PM IST
IPL 2022 'ಕೊನೇ ಪ್ಲೇಸ್ ಅಲ್ಲಿ ಇರೋಕೆ ಲಾಯಕ್ಕು ನೀವು..' ಗೇಲಿ ಮಾಡಲು ಹೋಗಿ ತಾವೇ ತಮಾಷೆಯಾದ ರಾಜಸ್ಥಾನ ರಾಯಲ್ಸ್!

ಸಾರಾಂಶ

ಸಂಜು ಸ್ಯಾಮ್ಸನ್ ಟ್ವೀಟ್ ಕುರಿತಾಗಿ ಎದ್ದ ವಿವಾದ, ಇದೆಲ್ಲಾ ಕೇವಲ ತಮಾಷೆ ಎಂದ ರಾಜಸ್ಥಾನ ಟೀಮ್ ರಾಜಸ್ಥಾನ ರಾಯಲ್ಸ್ ಟೀಮ್ ನ ಸೋಷಿಯಲ್ ಮೀಡಿಯಾ ಟೀಮ್ ಬಗ್ಗೆ ಅಭಿಮಾನಿಗಳ ಆಕ್ರೋಶ ಸ್ಯಾಮ್ಸನ್ ಕುರಿತಾಗಿ ಪ್ರಕಟಿಸಿದ್ದ ಪೋಸ್ಟ್ ಅನ್ನು ಡಿಲೀಟ್ ಮಾಡಿದ ರಾಜಸ್ಥಾನ್ ಟೀಮ್

ಬೆಂಗಳೂರು (ಮಾ. 26): ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) ಇಂದು ಮುಂಬೈನಲ್ಲಿ (Mumbai) ಆರಂಭವಾಗಲಿದೆ. ಆದರೆ, ಟೂರ್ನಿ ಆರಂಭಕ್ಕೂ ಮುನ್ನವೇ ರಾಜಸ್ಥಾನ ರಾಯಲ್ಸ್  (Rajasthan Royals) ತಂಡ ಕೆಟ್ಟ ಕಾರಣಗಳಿಂದಾಗಿ ಸುದ್ದಿಯಾಗಿದೆ. ಸೋಷಿಯಲ್ ಮೀಡಿಯಾ (Social Media) ಪೋಸ್ಟ್ ಗಳಲ್ಲಿ ತಮ್ಮ ತಮಾಷೆಯ ಪೋಸ್ಟ್ ಗಳಿಂದ ರಾಜಸ್ಥಾನ ರಾಯಲ್ಸ್ ಜನಪ್ರಿಯವಾಗಿದ್ದರೂ. ಈ ಬಾರಿ ಐಪಿಎಲ್ ಹರಾಜಿನ (IPL Auction 2022) ಬಳಿಕ ಮಾಡಿರುವ ಕೆಲವೊಂದು ಗಿಮಿಕ್ ಗಳಿಗೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ತನ್ನ ಟ್ವಿಟರ್ ಖಾತೆಯಿಂದ ಸಂಜು ಸ್ಯಾಮ್ಸನ್ (Sanju Samson) ರನ್ನು ಗೇಲಿ ಮಾಡುವಂಥ ಪೋಸ್ಟ್ ವೊಂದನ್ನು ರಾಜಸ್ಥಾನ ರಾಯಲ್ಸ್ ತಂಡ ಟ್ವೀಟ್ ಮಾಡಿತ್ತು. ಇದರ ಬೆನ್ನಲ್ಲಿಯೇ ಇದಕ್ಕೆ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಖಾರವಾಗಿ ಪ್ರತಿಕ್ರಿಯಿಸಿದ್ದರು. ಟೀಮ್ ಬಸ್ ನಲ್ಲಿ ಕುಳಿತುಕೊಂಡಿದ್ದ ಸಂಜು ಸ್ಯಾಮ್ಸನ್ ರನ್ನು ಟ್ವಿಟರ್ ಎಡಿಟ್ಸ್ ಮೂಲಕ ತಲೆಗೆ ಟವಲ್ ಕಟ್ಟಿಕೊಂಡಂತೆ ಚಿತ್ರಿಸಲಾಗಿತ್ತು" ಇದಕ್ಕೆ ಕ್ಯಾ ಕೂಬ್ ಲಗ್ತೇ ಹೋ (ಎಷ್ಟು ಚೆನ್ನಾಗಿ ಕಾಣ್ತಿದ್ದೀರಿ)" ಎಂದು ಟ್ವೀಟ್ ಮಾಡಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಸಂಜು ಸ್ಯಾಮ್ಸನ್, "ಫ್ರೆಂಡ್ಸ್ ಗಳು ಈ ಥರ ಪೋಸ್ಟ್ ಮಾಡಿದ್ರೆ ಒಕೆ. ಆದರೆ, ವೃತ್ತೊರ ಟೀಮ್ ಗಳು ಈ ಥರ ಪೋಸ್ಟ್ ಮಾಡಬಾರದು" ಎಂದು ಬರೆದಿದ್ದರು. ಒಟ್ಟಾರೆ ಅವರ ಟ್ವೀಟ್ ನಲ್ಲಿ ತಮ್ಮ ಚಿತ್ರವನ್ನು ಪ್ರಕಟಿಸಿದ್ದಕ್ಕೆ ಬೇಸರ ತೋಡಿಕೊಂಡಿದ್ದು ವ್ಯಕ್ತವಾಗಿತ್ತು. ಸ್ಯಾಮ್ಸನ್ ಅವರ ಟ್ವೀಟ್ ಗೆ ಬೆಂಬಲಿಸಿ ಇನ್ನೂ ಹಲವರು ರಾಜಸ್ಥಾನ ರಾಯಲ್ಸ್ ತಂಡದ ಟ್ವಿಟರ್ ಆಡ್ಮಿನ್ ಗೆ ಬೈದಿದ್ದರು.


ವಿಷಯ ಇಲ್ಲಿಗೆ ಬಿಟ್ಟಿದ್ದರೆ, ರಾಜಸ್ಥಾನ ರಾಯಲ್ಸ್ ತಂಡ ತಮಾಷೆ ಆಗುತ್ತಿರಲಿಲ್ಲ.  ಕೆಲ ಹೊತ್ತಿನ ಬಳಿಕ ಇನ್ನೊಂದು ಟ್ವೀಟ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡ, ಸಂಜು ಸ್ಯಾಮ್ಸನ್ ಕುರಿತಾಗಿ ಮಾಡಿದ ಟ್ವೀಟ್ ಬಗ್ಗೆ ದೂರುಗಳು ಬಂದ ಹಿನ್ನಲೆಯಲ್ಲಿ ಸೋಷಿಯಲ್ ಮೀಡಿಯಾ ಟೀಮ್ ಅಡ್ಮಿನ್ ಅನ್ನು ವಜಾ ಮಾಡಿದ್ದೇವೆ ಎಂದು ಅದರಲ್ಲಿ ಹೇಳಲಾಗಿತ್ತು. ಅಡ್ಮಿನ್ ಅನ್ನು ವಜಾ ಮಾಡಿದ ಕುರಿತಾಗಿ ಹೇಳಿದ ವಿಡಿಯೋದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರರಾದ ಜೋಸ್ ಬಟ್ಲರ್, ಆರ್.ಅಶ್ವಿನ್, ಬೌಲಿಂಗ್ ಕೋಚ್ ಲಸಿತ್ ಮಾಲಿಂಗ, ಕುಮಾರ ಸಂಗಕ್ಕರ ಕೂಡ ಅಡ್ಮಿನ್ ಗೆ ಬೈದು ಹೊರಕಳಿಸುತ್ತಿರುವ ಅಂಶವನ್ನು ಹೊಂದಿತ್ತು. ರಾಜಸ್ಥಾನ ರಾಯಲ್ಸ್ ತಂಡದ ಹೊರಬಿದ್ದಿರುವ ಅಡ್ಮಿನ್ ನ ಕೊನೆಯ ಪೋಸ್ಟ್ ಎಂದೂ ಹೇಳಲಾಗಿತ್ತು. ಇದರ ಬೆನ್ನಲ್ಲಿಯೇ ಕೆಲವರು ಇದನ್ನು ಗಂಭೀರ ಎಂದು ತಿಳಿದುಕೊಂಡು, ಸಂಜು ಸ್ಯಾಮ್ಸನ್ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಒಂದು ಸಣ್ಣ ತಮಾಷೆಯ ಟ್ವೀಟ್ ಅನ್ನು ಸಹಿಸಿಕೊಳ್ಳದ ವ್ಯಕ್ತಿ ಎಂದು ಆಕ್ರೋಶ ಹೊರಹಾಕಿದ್ದರು.


ಆದರೆ, ಶನಿವಾರ ಬೆಳಗ್ಗೆ ಟ್ವೀಟ್ ಮಾಡಿದ ರಾಜಸ್ಥಾನ ರಾಯಲ್ಸ್, ಶುಕ್ರವಾರ ಆದ ಇಡೀ ಘಟನೆ ತಮಾಷೆ ಎಂದು ಹೇಳಿತ್ತು. ಹೀಗೆ ಪೋಸ್ಟ್ ಮಾಡಿದ ಬೆನ್ನಲ್ಲಿಯೇ ರಾಜಸ್ಥಾನ ರಾಯಲ್ಸ್ ತಂಡದ ಮೇಲೆ ಮುಗಿಬಿದ್ದ ಕ್ರಿಕೆಟ್ ಅಭಿಮಾನಿಗಳು ವೈರೆಟಿ ವೆರೈಟಿಯಾಗಿ ಬೈದಿದ್ದಾರೆ. ನಿಮ್ಮ ತಂಡದ ಮೇಲೆ ಗಮನ ಇರುವಂತೆ ಮಾಡುವ ಕುರಿತಾಗಿ ಇದ್ದ ಪಬ್ಲಿಸಿಟಿ ಸ್ಟಂಟ್ ಇದು ಎಂದು ಕಿಡಿಕಾರಿದ್ದಾರೆ. "

ಟಾಮಿ (@kernel7812) ಎನ್ನುವ ಅಭಿಮಾನಿ, "ನೀವು ಐಪಿಎಲ್ ನಲ್ಲಿ ಇರುವ ಜೋಕರ್ ಗಳು ಎನ್ನುವುದನ್ನು ಸಾಬೀತುಪಡಿಸುತ್ತಿದ್ದಾರೆ. ಅಟೆನ್ಷನ್ ತೆಗೆದುಕೊಳ್ಳೋದಕ್ಕೆ ಎಂಥಾ ಚೀಪ್ ಟ್ರಿಕ್. ಸಂಜು ಸ್ಯಾಮ್ಸನ್ ಕುರಿತಾಗಿ ಸುಖಾ ಸುಮ್ಮನೆ ದ್ವೇಷ ಹರಡಿದ್ದೀರಿ' ಎಂದು ಬರೆದಿದ್ದಾರೆ.


ಇನ್ನು ಜಿಯಾಸ್ (@SpaMonza16), ಸಂಜು ಸ್ಯಾಮ್ಸನ್ ನಿಮ್ಮ ಗೇಲಿಗಾಗಿ ಎಷ್ಟು ದ್ವೇಷ ಎದುರಿಸಿದ್ದಾರೆ ಎನ್ನುವುದು ನಿಮಗೆ ಗೊತ್ತೇ? ಕ್ರಿಕೆಟ್ ಬಗ್ಗೆ ಗಮನ ನೀಡಿ, ಇದು ಕೂಲ್ ಆಗಿ ಇರಲಿಲ್ಲ' ಎಂದು ಬರೆದಿದ್ದರೆ, ದೀಪಕ್ ಗೋಯಲ್ (@tgifuriouspanda) ಎನ್ನುವ ವ್ಯಕ್ತಿ, "ನಿಮ್ಮ ತಂಡದ ಮೇಲಿದ್ದ ಎಲ್ಲಾ ಗೌರವ ಕಡಿಮೆ ಆಗಿದೆ. ಕೊನೇ ಪ್ಲೇಸ್ ಬರೋಕೆ ಲಾಯಕ್ಕು ನೀವು' ಎಂದಿದ್ದಾರೆ.

IPL 2022: ಕ್ರಿಕೆಟ್ ಹಬ್ಬಕ್ಕೆ ಜಿಯೋ ಹೊಸ ಪ್ಲ್ಯಾನ್: ಐಪಿಎಲ್ ಫ್ಯಾನ್ಸ್‌ಗೆ ಬಂಪರ್ ಆಫರ್!

ಶ್ರುತಿಕಾ ಗಾಯಕ್ವಾಡ್ (@Shrutika_45_) ಹೆಸರಿನ ಅಭಿಮಾನಿ, "ಎಲ್ಲರೂ ಸೇರಿ ಜನರನ್ನು ಮೂರ್ಖರನ್ನಾಗಿ ಮಾಡಲು ಹೊರಟಿದ್ದೀರಿ. ಗೇಲಿಗಳನ್ನೇ ಮಾಡ್ಕೊಂಡಿರಿ' ಎಂದಿದ್ದಾರೆ. ವಿವೇಕ್ ಎನ್ನುವ ವ್ಯಕ್ತಿ, "ಇದರಿಂದ ಟ್ರೋಫಿ ಗೆಲ್ಲೋದಕ್ಕೆ ಆಗಲ್ಲ, ಗೇಲಿಗಳನ್ನೇ ಮಾಡೋ ಷೋಗಳಿಗೆ ಹೋಗ್ಬಹುದು' ಎಂದಿದ್ದಾರೆ.

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿವೆ ಹಲವು ವಿಶೇಷತೆಗಳು..!

ಕ್ರಿಕೆಟ್ ಏನಾದ್ರೂ ಆಡುವ ಟೈಮ್ ಇದ್ಯಾ? ಅಥವಾ ರೀಲ್ಸ್ ಗಳನ್ನು ಮಾಡೋ ಪ್ಲ್ಯಾನ್ ಏನಾದ್ರೂ ಇದ್ಯಾ ಎಂದು ಮೊಹಮದ್ ದಾನಿಶ್ ಎನ್ನುವ ವ್ಯಕ್ತಿ ಬರೆದಿದ್ದರೆ, ರಾಕ್ ಸ್ಟಾರ್ (@RockstarMK11) ಎನ್ನುವ ಫ್ಯಾನ್, "ಅಡ್ಮಿನ್ ಇಂದು ಟೂರ್ನಿ ಆರಂಭ. ಈ ಟೈಮ್ ನಲ್ಲಿ ಪ್ರಾಂಕ್ ಮಾಡಬಾರದಿತ್ತು. ತುಂಬಾ ದ್ವೇಷ ಎದುರಾಗುತ್ತೆ' ಎಂದು ಸಮಾಧಾನ ಮಾಡಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

2025ರಲ್ಲಿ ಪಾಕಿಸ್ತಾನಿಯರು ಗೂಗಲ್‌ ಸರ್ಚ್‌ನಲ್ಲಿ ಹುಡುಕಿದ್ದು ಟೀಂ ಇಂಡಿಯಾದ ಈ ಆಟಗಾರನನ್ನು! ಆದ್ರೆ ಅದು ಕೊಹ್ಲಿ, ರೋಹಿತ್ ಅಲ್ಲ!
IPL Mini Auction 2026: 1355 ಆಟಗಾರರಲ್ಲಿ 350 ಪ್ಲೇಯರ್ಸ್ ಶಾರ್ಟ್‌ಲಿಸ್ಟ್! ಇಲ್ಲಿದೆ ಹರಾಜಿನ ಕಂಪ್ಲೀಟ್ ಡೀಟೈಲ್ಸ್