* ಐಪಿಎಲ್‌ನಲ್ಲಿ ಮಿಂಚುತ್ತಿದ್ದಾರೆ ಮ್ಯಾಚ್ ಫಿನಿಶರ್ ಮಹೇಂದ್ರ ಸಿಂಗ್ ಧೋನಿ
* ಸದ್ಯಕ್ಕೆ ಐಪಿಎಲ್‌ನಿಂದ ನಿವೃತ್ತಿಯಾಗಲ್ಲ ಸಿಎಸ್‌ಕೆ ನಾಯಕ
* ಇನ್ನು ಕೆಲ ವರ್ಷ ಐಪಿಎಲ್ ಆಡಲಿದ್ದಾರೆ ಕ್ಯಾಪ್ಟನ್ ಕೂಲ್
ಬೆಂಗಳೂರು(ಮೇ.11): ದಿ ಮಾಸ್ಟರ್ ಮೈಂಡ್ ಎಂ.ಎಸ್ ಧೋನಿ (MS Dhoni) ಕಳೆದ ವರ್ಷ ಡೆಫಿನೇಟ್ಲಿ ನಾಟ್ ಎನ್ನುವ ಮೂಲಕ ಐಪಿಎಲ್ (IPL) ನಿವೃತ್ತಿ ಬಗೆಗಿನ ಗಾಸಿಪ್ಗೆ ಫುಲ್ ಸ್ಟಾಪ್ ಹಾಕಿದ್ರು. ಅಭಿಮಾನಿಗಳು ಒಂದು ಕ್ಷಣ ನಿಟ್ಟುಸಿರು ಬಿಟ್ಟಿದ್ರು. ಆದ್ರೆ ಮತ್ತೆ ಕರೆಕ್ಟಾಗಿ ಒಂದು ವರ್ಷ. ಮಹಿ ವಿದಾಯ ವಿಚಾರ ಮತ್ತೆ ಮುನ್ನಲೆಗೆ ಬಂತು. ಆಗ ಚಾಂಪಿಯನ್ ಕ್ಯಾಪ್ಟನ್ ಮತ್ತೆ ಹೇಳಿದ್ದು, ಡೆಫಿನೇಟ್ಲಿ ನಾಟ್. ಆದ್ರೆ ಈ ಸಲ ಒಂದು ಹೆಜ್ಜೆ ಮುಂದೆ ಹೋದ ಎಂಎಸ್ಡಿ ಮುಂದಿನ ಸೀಸನ್ನಲ್ಲಿ ಯೆಲ್ಲೋ ಜೆರ್ಸಿಯಲ್ಲಿ ಮತ್ತೆ ಆಡೇ ಆಡ್ತೀನಿ. ಆದ್ರೆ ಅದು ಯಾವ ಯೆಲ್ಲೋ ಜೆರ್ಸಿ ಅನ್ನೋದು ನಿಮಗೆ ಮುಂದೆ ಗೊತ್ತಾಗುತ್ತೆ ಅನ್ನುವ ಮೂಲಕ ಸಸ್ಪೆನ್ಸ್ ಕಾಯ್ದುಕೊಂಡ್ರು.
ಧೋನಿ ಹೀಗೆ ನಿಗೂಢ ಮಾತುಗಳನ್ನಾಡಿದ ಮೇಲೆ ಸಿಎಸ್‌ಕೆ ಫ್ಯಾನ್ಸ್ ಫುಲ್ ಕನ್ಫ್ಯೂಶನ್ನಲ್ಲಿದ್ದಾರೆ. ಯಾಕಂದ್ರೆ ಧೋನಿ ಮುಂದಿನ ವರ್ಷ ಯೆಲ್ಲೋ ಜೆರ್ಸಿಯಲ್ಲಿ ಕಾಣಿಸಿಕೊಳ್ತೀನಿ ಅಂದಿದ್ದಾರೆ. ಆದ್ರೆ ಅದು ಕ್ಯಾಪ್ಟನ್ ಆಗಿನಾ ಅಥವಾ ತಂಡದ ಮೆಂಟರ್ ಆಗಿನಾ ಅನ್ನೋ ಪ್ರಶ್ನೆ ಕಾಡ್ತಿದೆ. ವೀಕ್ಷಕರೇ ಮಹಿ ನಿವೃತ್ತಿ ಬಗ್ಗೆ ಏನೇ ಸಸ್ಪೆನ್ಸ್ ಟಾಕ್ಸ್ ಆಡಿಲ್ರಿ. ಅದರ ಬಗ್ಗೆ ನೀವು ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಯಾಕಂದ್ರೆ ಎಂಎಸ್ಡಿ 2023ನೇ ಐಪಿಎಲ್ ಅಷ್ಟೇ ಅಲ್ಲ, ಇನ್ನು ಕೆಲ ವರ್ಷ ಐಪಿಎಲ್ ಆಡಲಿದ್ದಾರೆ. ಅದಕ್ಕೆ ಮೂರು ರೀಸನ್ಸ್ ಇವೆ. ಆ ಕಾರಣಗಳನ್ನ ಒನ್ ಬೈ ಒನ್ ಹೇಳ್ತೀವಿ ನೋಡಿ.
ರೀಸನ್ ನಂ.1 - ಧೋನಿ ಈಗಲೂ ಫುಲ್ ಫಿಟ್ ಆ್ಯಂಡ್ ಫೈನ್:
ಕ್ರಿಕೆಟರ್ಸ್ ಸುದೀರ್ಘ ಕಾಲ ಆಡಬೇಕಂದ್ರೆ ಫಿಟ್ನೆಸ್ ತುಂಬಾ ಮುಖ್ಯ. ಧೋನಿ ಈ ವಿಚಾರದಲ್ಲಿ ಒಂದು ಹೆಜ್ಜೆ ಮುಂದಿದ್ದಾರೆ. 40 ಹರೆಯದಲ್ಲೂ 20ರ ಯಂಗಸ್ಟರ್ಸ್ನಂತೆ ಫಿಟ್ನೆಸ್ ಕಾಯ್ದುಕೊಂಡಿದ್ದಾರೆ. ಡೆಲ್ಲಿ ವಿರುದ್ಧ ಪಂದ್ಯದಲ್ಲಿ ಅದನ್ನ ಪ್ರೂವ್ ಮಾಡಿದ್ರು. ಕೊನೆ ಓವರ್ನಲ್ಲಿ 1 ರನ್ ಕದಿಯುವ ಬದಲಿ ವೇಗವಾಗಿ ಓಡಿ ಎರಡೆರಡು ರನ್ ಕಲೆಹಾಕಿದ್ರು. ಜೊತೆ ಕೀಪಿಂಗ್ನಲ್ಲೂ ಅದೇ ಚುರುಕುತನವಿದೆ. ಹೀಗಾಗಿ ಫಿಟ್ ಆಂಡ್ ಫೈನ್ ಧೋನಿ ಇನ್ನು ಕೆಲ ವರ್ಷ ಐಪಿಎಲ್ ಆಡೋದನ್ನ ಅಲ್ಲಗಳೆಯುವಂತಿಲ್ಲ.
ರೀಸನ್ ನಂ. 2- ಈಗಲೂ ಪೇಸ್ ಹಿಟ್ಟರ್:
ಧೋನಿಗೆ ಫಾಸ್ಟ್ ಬೌಲರ್ಸ್ ದಂಡಿಸೋದು ಅಂದ್ರೆ ತುಂಬಾನೇ ಇಷ್ಟ. ಈಗಲೂ ಅದೇ ರಿದಮ್ ಉಳಿಸಿಕೊಂಡಿದ್ದಾರೆ. ಸ್ಲಾಗ್ ಓವರ್ಗಳಲ್ಲಿ ವೇಗಿಗಳನ್ನ ಡೆಸ್ಟ್ರಾಯ್ ಮಾಡ್ತಿದ್ದಾರೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಅದನ್ನ ಸಾಬೀತು ಪಡಿಸಿದ್ರು. ಜಯದೇವ್ ಉನಾದ್ಕತ್ರ ಒಂದೇ ಓವರ್ನಲ್ಲಿ 16 ರನ್ ಸಿಡಿಸಿ ಸಿಎಸ್ಕೆಗೆ ರೋಚಕ ಗೆಲುವಿಗೆ ಕಾರಣರಾಗಿದ್ರು. ಸೋ ಇಂತಹ ಪೇಸ್ ಹಿಟ್ಟರ್ ಮುಂದಿನ ಬಾರಿ ಹೇಗೆ ನಿವೃತ್ತಿ ಕೊಡಲು ಸಾಧ್ಯ.
ಡೆಲ್ಲಿ ಎದುರಿನ ಪಂದ್ಯದ ವೇಳೆ ಧೋನಿ ಬ್ಯಾಟ್ ಕಚ್ಚಿದ್ದೇಕೆ..? ಈ ಬಗ್ಗೆ ಅಮಿತ್ ಮಿಶ್ರಾ ಹೇಳಿದ್ದೇನು..?
ರೀಸನ್ ನಂ. 3- ಸಿಎಸ್ಕೆಗೆ MSD ಕ್ಯಾಪ್ಟನ್ಸಿ ಅಗತ್ಯ:
ಭವಿಷ್ಯ ನಾಯಕನನ್ನ ರೆಡಿ ಮಾಡಲು ಹೋಗಿ ಸಿಎಸ್‌ಕೆ ಈಗಾಗ್ಲೇ ಕೈ ಸುಟ್ಟುಕೊಂಡಿದೆ. ಜಡ್ಡು ಬಳಿಕ ಧೋನಿನೇ ಮತ್ತೆ ಸಿಎಸ್ಕೆಯನ್ನ (Chennai Super Kings) ಮುನ್ನಡೆಸ್ತಿದ್ದಾರೆ. ಒಂದು ವೇಳೆ ಮಹಿ ನಿವೃತ್ತಿ ಕೊಟ್ರೆ ಸಿಎಸ್‌ಕೆ ಹಳ್ಳ ಹಿಡಿಯಲಿದೆ. ಹೀಗಾಗಿ ಇನ್ನಷ್ಟು ವರ್ಷ ತಂಡವನ್ನ ಮುನ್ನಡೆಸುವ ಅಗತ್ಯವಿದೆ. ಫೈನಲಿ ಮೇಲಿನ ರೀಸನ್ಸ್ ನೋಡಿದ ಮೇಲೆ ಈಗ ನೀವೇ ಹೇಳಿ ಧೋನಿ ಮುಂದಿನ ವರ್ಷ ಐಪಿಎಲ್ಗೆ ಗುಡ್ ಬೈ ಹೇಳ್ತಾರಾ? ಇಲ್ಲ ಇನ್ನಷ್ಟು ವರ್ಷ ಮುಂದುವರಿತಾರಾ ಅನ್ನೋದನ್ನ.