Latest Videos

IPL 2022 ಆರ್ ಅಶ್ವಿನ್, ಪಡಿಕ್ಕಲ್ ಹೋರಾಟ, ಡೆಲ್ಲಿ ತಂಡಕ್ಕೆ 161 ರನ್ ಗುರಿ!

By Suvarna NewsFirst Published May 11, 2022, 9:21 PM IST
Highlights
  • ದಿಟ್ಟ ಹೋರಾಟದ ಮೂಲಕ ಹಾಫ್ ಸೆಂಚುರಿ ಸಿಡಿಸಿದ ಆರ್ ಅಶ್ವಿನ್
  • ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ದೇವದತ್ ಪಡಿಕ್ಕಲ್
  • ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 160 ರನ್ ಸಿಡಿಸಿದ ರಾಜಸ್ಥಾನ ರಾಯಲ್ಸ್

ಮುಂಬೈ(ಮೇ.11): ಆರ್ ಅಶ್ವಿನ್ ಹಾಫ್ ಸೆಂಚುರಿ, ದೇವದತ್ ಪಡಿಕ್ಕಲ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ದಿಟ್ಟ ಹೋರಾಟ ನೀಡಿದೆ. ಆರಂಭಿಕರ ವಿಕೆಟ್ ಪತನದ ನಡುವೆಯೂ ರಾಜಸ್ಥಾನ ರಾಯಲ್ಸ್ 6 ವಿಕೆಟ್ ನಷ್ಟಕ್ಕೆ 160 ರನ್ ಸಿಡಿಸುವಲ್ಲಿ ಯಶಸ್ವಿಯಾಗಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ರಾಜಸ್ಥಾನ ರಾಯಲ್ಸ್ ನಿರೀಕ್ಷಿತ ಆರಂಭ ಸಿಗಲಿಲ್ಲ. ಶತಕದ ಮೂಲಕ ಅಬ್ಬರಿಸುತ್ತಿದ್ದ ಜೋಸ್ ಬಟ್ಲರ್ ಕೇವಲ 7 ರನ್ ಸಿಡಿಸಿ ಔಟಾದರು. ಮತ್ತೊರ್ವ ಆರಂಭಿಕ ಯಶಸ್ವಿ ಜೈಸ್ವಾಲ್ 19 ರನ್ ಸಿಡಿಸಿ ನಿರ್ಗಮಿಸಿದರು. 54 ರನ್‌ಗಳಿಗೆ ರಾಜಸ್ಥಾನ ರಾಯಲ್ಸ್ 2 ವಿಕೆಟ್ ಕಳೆದುಕೊಂಡಿತು.

ಸಂಕಷ್ಟದಲ್ಲಿರುವ ಸಿಎಸ್‌ಕೆಗೆ ಮತ್ತೊಂದು ಆಘಾತ, IPL 2022 ಟೂರ್ನಿಗೆ ಜಡೇಜಾ ಡೌಟ್!

ಆರ್ ಅಶ್ವಿನ್ ಹಾಗೂ ದೇವದತ್ ಪಡಿಕ್ಕಲ್ ಜೊತೆಯಾಟದಿಂದ ರಾಜಸ್ಥಾನ ರಾಯಲ್ಸ್ ಚೇತರಿಸಿಕೊಂಡಿತು. ಉತ್ತಮ ಹೋರಾಟ ನೀಡಿದ ಆರ್ ಅಶ್ವಿನ್ ಹಾಫ್ ಸೆಂಚುರಿ ಸಿಡಿಸಿ ಅಬ್ಬರಿಸಿದರು. ಅಶ್ವಿನ್ 38 ಎಸೆತದಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 50 ರನ್ ಸಿಡಿಸಿ ಔಟಾದರು.

ದೇವದತ್ ಪಡಿಕ್ಕಲ್ ಹೋರಾಟ ಮುಂದುವರಿಸಿದರು. ಆದರೆ ನಾಯಕ ಸಂಜು ಸ್ಯಾಮ್ಸನ್ ಕೇವಲ 6 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ರಿಯಾನ್ ಪರಾಗ್ 9 ರನ್ ಸಿಡಿಸಿ ನಿರಾಸೆ ಮೂಡಿಸಿದರು. ಇತ್ತ ಪಡಿಕ್ಕಲ್ 30 ಎಸೆತದಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 48 ರನ್ ಸಿಡಿಸಿ ಔಟಾದರು. 

ಈ 3 ಕಾರಣಕ್ಕಾಗಿಯಾದರೂ ಲೆಜೆಂಡ್​ ಧೋನಿಯ IPL ನಿವೃತ್ತಿ ಚಿಂತೆ ಬಿಟ್ಟುಬಿಡಿ..!

ರಸಿ ವ್ಯಾಂಡರ್ ಡೆಸನ್ ಅಜೇಯ 12 ರನ್ ಹಾಗೂ ಟ್ರೆಂಟ್ ಬೋಲ್ಟ್ ಅಜೇಯ 3 ಸಿಡಿಸಿದರು. ಈ ಮೂಲಕ ರಾಜಸ್ಥಾನ ರಾಯಲ್ಸ್ 6 ವಿಕೆಟ್ ನಷ್ಟಕ್ಕೆ 160 ರನ್ ಸಿಡಿಸಿತು. 

ಕೋವಿಡ್‌: ತನಿಖೆಗೆ ಮುಂದಾದ ಬಿಸಿಸಿಐ
ಐಪಿಎಲ್‌ನ ಡೆಲ್ಲಿ ತಂಡದಲ್ಲಿ ಪದೇ ಪದೇ ಕೋವಿಡ್‌ ಪತ್ತೆಯಾಗುತ್ತಿರುವುದರಿಂದ ಅಸಮಾಧಾನಗೊಂಡಿರುವ ಬಿಸಿಸಿಐ, ಲೋಪ ಪತ್ತೆ ಹಚ್ಚಲು ತನಿಖೆಗೆ ಮುಂದಾಗಿದೆ ಎಂದು ವರದಿಯಾಗಿದೆ. ಕಳೆದ ತಿಂಗಳು ಇಬ್ಬರು ಆಟಗಾರರು ಸೇರಿದಂತೆ ತಂಡದ ಹಲವರಲ್ಲಿ ಸೋಂಕು ಕಾಣಿಸಿತ್ತು. ಬಳಿಕ ಎಲ್ಲಾ ಆಟಗಾರರು ಐಸೋಲೇಷನ್‌ಗೆ ಒಳಗಾಗಿದ್ದರು. ಭಾನುವಾರ ತಂಡದ ನೆಟ್‌ ಬೌಲರ್‌ಗೆ ಸೋಂಕು ಕಾಣಿಸಿಕೊಂಡಿದ್ದರಿಂದ ತಂಡವನ್ನು ಕೆಲ ಕಾಲ ಐಸೋಲೇಷನ್‌ನಲ್ಲಿ ಇರಿಸಲಾಗಿತ್ತು. ಬಯೋಬಬಲ್‌ನಲ್ಲಿದ್ದರೂ ತಂಡದ ಆಟಗಾರರು, ಹೋಟೆಲ್‌ ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡಿರುವುದನ್ನು ಬಿಸಿಸಿಐ ಗಂಭೀರವಾಗಿ ಪರಿಗಣಿಸಿದ್ದು, ಇದರಿಂದ ಐಪಿಎಲ್‌ ಬ್ರ್ಯಾಂಡ್‌ಗೆ ಧಕ್ಕೆಯಾಗಲಿದೆ ಎಂಬ ಆತಂಕದಿಂದ ತನಿಖೆ ನಡೆಸಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಗಾಯಾಳು ಮಿಲ್ಸ್‌ ಐಪಿಎಲ್‌ನಿಂದ ಔಟ್‌
ಇಂಗ್ಲೆಂಡ್‌ ವೇಗಿ ಟೈಮಲ್‌ ಮಿಲ್ಸ್‌ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದು 15ನೇ ಆವೃತ್ತಿಯ ಐಪಿಎಲ್‌ನಿಂದ ಹೊರಬಿದ್ದಿದ್ದಾರೆ. ಅವರು ಬದಲು ಮುಂಬೈ ಇಂಡಿಯನ್ಸ್‌ ತಂಡ ದಕ್ಷಿಣ ಆಫ್ರಿಕಾದ 21 ವರ್ಷದ ವಿಕೆಟ್‌ ಕೀಪರ್‌-ಬ್ಯಾಟರ್‌ ಟ್ರಿಸ್ಟನ್‌ ಸ್ಟಬ್ಸ್‌ರನ್ನು ಸೇರಿಸಿಕೊಂಡಿದೆ. ಸ್ಟಬ್ಸ್‌ 17 ಟಿ20 ಪಂದ್ಯಗಳನ್ನು ಆಡಿದ್ದು 506 ರನ್‌ ಗಳಿಸಿದ್ದಾರೆ. 3 ಅರ್ಧಶತಕ ಬಾರಿಸಿರುವ ಅವರ ಸ್ಟೆ್ರೖಕ್‌ ರೇಟ್‌ 157.14 ಇದೆ.
 

click me!