IPL 2022 ಸನ್‌ರೈಸರ್ಸ್‌ ಹೈದರಾಬಾದ್‌ಗಿಂದು ಲಖನೌ ಸೂಪರ್‌ಜೈಂಟ್ಸ್ ಸವಾಲು..!

Published : Apr 04, 2022, 07:23 AM ISTUpdated : Apr 04, 2022, 09:56 AM IST
IPL 2022 ಸನ್‌ರೈಸರ್ಸ್‌ ಹೈದರಾಬಾದ್‌ಗಿಂದು ಲಖನೌ ಸೂಪರ್‌ಜೈಂಟ್ಸ್ ಸವಾಲು..!

ಸಾರಾಂಶ

* ಲಖನೌ ತಂಡಕ್ಕಿಂದು ಸನ್‌ರೈಸರ್ಸ್ ಸವಾಲು * ಗೆಲುವಿನ ಖಾತೆ ತೆರೆಯಲು ಎದುರು ನೋಡುತ್ತಿದೆ ಕೇನ್ ವಿಲಿಯಮ್ಸನ್‌ ಪಡೆ * ಗೆಲುವಿನ ಲಯ ಮುಂದುವರೆಸಲು ಎದುರು ನೋಡುತ್ತಿದೆ ರಾಹುಲ್ ಬಳಗ

ನವಿ ಮುಂಬೈ(ಏ.04): ಐಪಿಎಲ್‌ನಲ್ಲಿ (IPL 2022) ಸೋಲಿನ ಆರಂಭ ಪಡೆದಿದ್ದ ಲಖನೌ ಸೂಪರ್‌ಜೈಂಟ್ಸ್‌ (Lucknow Super Giants) ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಜಯದ ಲಯ ಕಂಡುಕೊಂಡಿದೆ. ಸೋಮವಾರ ನಡೆಯಲಿರುವ ಪಂದ್ಯದಲ್ಲಿ ಸನ್‌ರೈಸ​ರ್ಸ್‌ ಹೈದರಾಬಾದ್‌ ತಂಡವನ್ನು ಸೋಲಿಸಿ ತನ್ನ ಲಯ ಕಾಯ್ದುಕೊಳ್ಳಲು ಕೆ.ಎಲ್‌.ರಾಹುಲ್‌ ಪಡೆ ಎದುರು ನೋಡುತ್ತಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಡಿವೈ ಪಾಟೀಲ್ ಮೈದಾನ ಆತಿಥ್ಯವನ್ನು ವಹಿಸಿದೆ.

ಮೊದಲ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿದ್ದ ಸನ್‌ರೈಸ​ರ್ಸ್ ಹೈದರಾಬಾದ್‌ (Sunrisers Hyderabad), ಲಖನೌ ಸೂಪರ್ ಜೈಂಟ್ಸ್‌ ತಂಡದ ಬಲಿಷ್ಠ ಬ್ಯಾಟಿಂಗ್‌ ಪಡೆಯನ್ನು ಕಟ್ಟಿಹಾಕಿದರಷ್ಟೇ ಗೆಲ್ಲಲು ಸಾಧ್ಯ. ನಾಯಕ ಕೆ.ಎಲ್ ರಾಹುಲ್‌ (KL Rahul), ಕ್ವಿಂಟನ್ ಡಿ ಕಾಕ್‌, ಎವಿನ್‌ ಲೆವಿಸ್‌, ದೀಪಕ್‌ ಹೂಡಾ, ಆಯುಷ್‌ ಬದೋನಿಯಂತಹ ಟಿ20 ತಜ್ಞ ಬ್ಯಾಟರ್‌ಗಳ ಬಲ ತಂಡಕ್ಕಿದೆ. ತಂಡದ ಬೌಲಿಂಗ್‌ ಪಡೆಯೂ ಉತ್ತಮವಾಗಿದೆ. ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡವು ಮೊದಲು ಬ್ಯಾಟಿಂಗ್ 210 ರನ್ ಗಳಿಸಿದ್ದರೂ ಸಹಾ, ಆ ಗುರಿಯನ್ನು ಯಶಸ್ವಿಯಾಗಿ ತಲುಪುವಲ್ಲಿ ಲಖನೌ ಸೂಪರ್ ಜೈಂಟ್ಸ್‌ ತಂಡವು ಸಫಲವಾಗಿತ್ತು. ಕ್ವಿಂಟನ್ ಡಿ ಕಾಕ್, ಎವಿನ್ ಲೆವಿಸ್ ಭರ್ಜರಿ ಫಾರ್ಮ್‌ನಲ್ಲಿರುವುದು ಲಖನೌ ತಂಡದ ಆತ್ಮವಿಶ್ವಾಸವನ್ನು ಹೆಚ್ಚುವಂತೆ ಮಾಡಿದೆ. 

ಮತ್ತೊಂದೆಡೆ ಸನ್‌ರೈಸ​ರ್ಸ್‌ ಬ್ಯಾಟಿಂಗ್‌ ನಾಯಕ ಕೇನ್‌ ವಿಲಿಯಮ್ಸನ್‌ (Kane Williamson) ಮೇಲೆ ಹೆಚ್ಚು ಅವಲಂಬಿತಗೊಂಡಿದೆ. ರಾಹುಲ್‌ ತ್ರಿಪಾಠಿ (Rahul Tripathi), ನಿಕೋಲಸ್‌ ಪೂರನ್‌, ಅಬ್ದುಲ್‌ ಸಮದ್‌, ಅಭಿಷೇಕ್‌ ಶರ್ಮಾ ನಾಯಕನಿಗೆ ಬೆಂಬಲ ನೀಡಬೇಕು. ಬೌಲಿಂಗ್‌ನಲ್ಲಿ ಅನುಭವಿ ಭುವನೇಶ್ವರ್‌ ಕುಮಾರ್, ಟಿ ನಟರಾಜನ್‌, ವಾಷಿಂಗ್ಟನ್‌ ಸುಂದರ್‌, ರೊಮಾರಿಯೋ ಶೆಫರ್ಡ್‌ ಬಲ ತಂಡಕ್ಕಿದೆ. ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರಿದ್ದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು ಈ ಬಾರಿಯಾದರೂ ತನ್ನ ಸಾಮರ್ಥ್ಯಕ್ಕೆ ತಕ್ಕಂತ ಪ್ರದರ್ಶನ ತೋರುತ್ತಾ ಎನ್ನುವುದನ್ನು ಕಾದು ನೋಡಬೇಕಾಗಿದೆ. 

IPL 2022 ಕೆಎಲ್ ರಾಹುಲ್ ಆಯ್ತು, ಮಯಾಂಕ್ ಟೀಮ್ ಮೇಲೂ ಸೋತ ಚೆನ್ನೈ ಸೂಪರ್ ಕಿಂಗ್ಸ್!

ಸದ್ಯ ಕೆ.ಎಲ್. ರಾಹುಲ್ ನೇತೃತ್ವದ ಲಖನೌ ಸೂಪರ್ ಜೈಂಟ್ಸ್ ತಂಡವು ಆಡಿದ ಎರಡು ಪಂದ್ಯಗಳ ಪೈಕಿ ಒಂದು ಗೆಲುವು ಹಾಗೂ ಒಂದು ಸೋಲಿನೊಂದಿಗೆ ಎರಡು ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಇನ್ನೊಂದೆಡೆ 2016ರ ಐಪಿಎಲ್ ಚಾಂಪಿಯನ್ ಸನ್‌ರೈಸರ್ಸ್ ಹೈದರಾಬಾದ್ ತಂಡವು ಆಡಿದ ಏಕೈಕ ಪಂದ್ಯದಲ್ಲಿ ಸೋಲು ಕಂಡಿದ್ದು, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದು, ಇಂದು ಗೆಲುವಿನ ಖಾತೆ ತೆರೆಯಲು ಎದುರು ನೋಡುತ್ತಿದೆ.

ಸಂಭವನೀಯ ಆಟಗಾರರ ಪಟ್ಟಿ

ಲಖನೌ: ಕೆ.ಎಲ್ ರಾಹುಲ್‌(ನಾಯಕ), ಕ್ವಿಂಟನ್ ಡಿ ಕಾಕ್‌, ಮನೀಶ್‌ ಪಾಂಡೆ, ಎವಿನ್ ಲೆವಿಸ್‌, ದೀಪಕ್ ಹೂಡಾ, ಆಯುಷ್ ಬದೋನಿ, ಕೃನಾಲ್ ಪಾಂಡ್ಯ‌, ದುಸ್ಮಂತ್ ಚಮೀರ, ಆ್ಯಂಡ್ರೂ ಟೈ, ರವಿ ಬಿಷ್ಣೋಯ್‌, ಆವೇಶ್ ಖಾನ್‌.

ಹೈದರಾಬಾದ್‌: ಕೇನ್ ವಿಲಿಯಮ್ಸನ್‌(ನಾಯಕ), ಅಭಿಷೇಕ್ ಶರ್ಮಾ‌, ರಾಹುಲ್ ತ್ರಿಪಾಠಿ, ನಿಕೋಲಸ್ ಪೂರನ್‌, ಏಯ್ಡನ್ ಮಾರ್ಕ್ರಮ್‌, ಅಬ್ದುಲ್ ಸಮದ್‌, ರೊಮ್ಯಾರಿಯೊ ಶೆಫರ್ಡ್‌, ವಾಷಿಂಗ್ಟನ್ ಸುಂದರ್‌, ಭುವನೇಶ್ವರ್ ಕುಮಾರ್‌, ಉಮ್ರಾನ್ ಮಲಿಕ್‌, ಟಿ ನಟರಾಜನ್‌.

ಸ್ಥಳ: ನವಿ ಮುಂಬೈಡಿ.ವೈ.ಪಾಟೀಲ್‌ ಕ್ರೀಡಾಂಗಣ 
ಪಂದ್ಯ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಂಗಳೂರಲ್ಲಿ ಐಪಿಎಲ್‌ ನಡೆಸಲು ಸಂಪುಟ ಅಸ್ತು
ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!