
ಕ್ರೈಸ್ಟ್‌ಚರ್ಚ್(ಏ.04): ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ (ICC Women's World Cup) 2017ರ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ 71 ರನ್‌ಗಳ ಅಧಿಕಾರಯುತ ಗೆಲುವು ಸಾಧಿಸಿದ ಆಸ್ಪ್ರೇಲಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರೊಂದಿಗೆ 7ನೇ ಬಾರಿಗೆ ಟ್ರೋಫಿ ಗೆದ್ದು ಸಂಭ್ರಮಿಸಿದೆ. 2017ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ವಿರುದ್ಧ ಸೋತು ಹೊರಬಿದ್ದ ಆಸ್ಪ್ರೇಲಿಯಾ ಆ ಬಳಿಕ ಮುಂದಿನ ವಿಶ್ವಕಪ್‌ಗೆ ಸಿದ್ಧಗೊಂಡ ರೀತಿ ಯಾವುದೇ ತಂಡಕ್ಕಾದರೂ ಮಾದರಿ.
ಆಸ್ಪ್ರೇಲಿಯಾ (Australian Women's Cricket) ತನ್ನ ತಂಡದ ಬದಲಿ ಆಟಗಾರ್ತಿಯರಿಗೆ ಬದಲಿ ಆಟಗಾರ್ತಿಯರನ್ನು ಸಿದ್ಧಗೊಳಿಸಿತು. ಅಂದರೆ ಯಾವುದೇ ಆಟಗಾರ್ತಿ ಗಾಯ ಅಥವಾ ಇನ್ನಿತರ ಕಾರಣಗಳಿಂದ ಹೊರಬಿದ್ದರೂ ಅದರಿಂದ ತಂಡದ ಮೇಲೆ ನಕಾರಾತ್ಮಕ ಪರಿಣಾಮ ಬೀರದಂತೆ ಎಚ್ಚರ ವಹಿಸಿತು. ಸೋಫಿ ಮೊಲಿನ್ಯೂ ಹಾಗೂ ವೇರ್‌ಹ್ಯಾಮ್ ಗಾಯಗೊಂಡು ಹೊರಬಿದ್ದಾಗ ಅವರ ಜಾಗವನ್ನು ಆ್ಯಲಾನಾ ಕಿಂಗ್ ಸಮರ್ಥವಾಗಿ ತುಂಬಿದರು. ವ್ಲೇಮಿನಿಕ್ ಅನುಪಸ್ಥಿತಿಯನ್ನು ಡಾರ್ಚಿ ಬ್ರೌನ್ ಆಡಿದರು. ತಾರಾ ಆಲ್ರೌಂಡರ್ ಎಲೈಸಿ ಪೆರ್ರಿ ಇಲ್ಲದಿದ್ದಾಗ ತಹಿಲಾ ಮೆಗ್ರಾಥ್ ಜವಾಬ್ದಾರಿ ನಿಭಾಯಿಸಿದರು. ಮೆಗ್ರಾಥ್‌ಗೆ ಬದಲಿ ಆಟಗಾರ್ತಿಯರಾಗಿ ಆ್ಯನಾಬೆಲ್ ಸದರ್‌ಲೆಂಡ್, ನಿಕೋಲಾ ಕೇರಿಯನ್ನು ತಂಡ ತಯಾರು ಮಾಡಿತು.
ಜೊತೆಗೆ ಮಹಿಳಾ ಬಿಗ್‌ಬ್ಯಾಶ್ ಲೀಗ್ ನಿರಂತರವಾಗಿ ಪ್ರತಿಭಾನ್ವಿತ ಆಟಗಾರ್ತಿಯರನ್ನು ರಾಷ್ಟ್ರೀಯ ತಂಡಕ್ಕೆ ಕಳುಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. 2017ರ ಸೆಮಿಫೈನಲ್ ಸೋಲಿನ ಬಳಿಕ ಆಸ್ಪ್ರೇಲಿಯಾ 42 ಏಕದಿನ ಪಂದ್ಯಗಳನ್ನಾಡಿದ್ದು 40ರಲ್ಲಿ ಗೆದ್ದಿದೆ. ಇದರಲ್ಲಿ ಸತತ 26 ಗೆಲುವುಗಳ ವಿಶ್ವ ದಾಖಲೆಯೂ ಇದೆ.
ವಿಶ್ವಕಪ್ ಫೈನಲ್‌ನಲ್ಲಿ ಗರಿಷ್ಠ ರನ್: ಅಲೀನಾ ಹೊಸ ದಾಖಲೆ!
ಏಕದಿನ ವಿಶ್ವಕಪ್‌ನ ಫೈನಲ್(ಪುರುಷ/ಮಹಿಳಾ)ನಲ್ಲಿ ಅತಿಹೆಚ್ಚು ರನ್(170) ಗಳಿಸಿದ ದಾಖಲೆಯನ್ನು ಆಸ್ಪ್ರೇಲಿಯಾದ ಅಲೀನಾ ಹೀಲಿ ಬರೆದಿದ್ದಾರೆ. ಈ ಪಟ್ಟಿಯಲ್ಲಿ ಆ್ಯಡಂ ಗಿಲ್‌ಕ್ರಿಸ್ಟ್(149, 2007), ನಥಾಲಿ ಶೀವರ್(148, 2022), ರಿಕಿ ಪಾಂಟಿಂಗ್(140, 2003) ಹಾಗೂ ವಿವ್ ರಿಚರ್ಡ್ಸ್(138, 1979) ನಂತರದ ಸ್ಥಾನಗಳಲ್ಲಿದ್ದಾರೆ.
ವಿಶ್ವಕಪ್‌ನಲ್ಲಿ 509 ರನ್: ಅಲೀಸಾ ವಿಶ್ವ ದಾಖಲೆ!
ಮಹಿಳಾ ಏಕದಿನ ವಿಶ್ವಕಪ್ ಆವೃತ್ತಿಯೊಂದರಲ್ಲಿ ಅತಿಹೆಚ್ಚು ರನ್ ಗಳಿಸಿದ ದಾಖಲೆಯನ್ನೂ ಅಲೀಸಾ ಹೀಲಿ ಬರೆದಿದ್ದಾರೆ. ಈ ವಿಶ್ವಕಪ್‌ನಲ್ಲಿ ಅವರು 509 ರನ್ ಕಲೆಹಾಕಿದರು. ಇದೇ ಟೂರ್ನಿಯಲ್ಲಿ ಆಸ್ಪ್ರೇಲಿಯಾದ ರೇಚಲ್ ಹೇಯ್‌್ನ$್ಸ 497 ರನ್ ಕಲೆಹಾಕಿದರು. ಇವರಿಬ್ಬರು 1997ರ ವಿಶ್ವಕಪ್‌ನಲ್ಲಿ 456 ರನ್ ಗಳಿಸಿದ್ದ ಆಸ್ಪ್ರೇಲಿಯಾದ ಡೆಬ್ಬಿ ಹಾಕ್ಲೇ ಅವರ ದಾಖಲೆಯನ್ನು ಮುರಿದರು.
ICC Women's World Cup: ಸೀವರ್ ಶತಕ ವ್ಯರ್ಥ, ಆಸ್ಟ್ರೇಲಿಯಾ 7ನೇ ಬಾರಿಗೆ ವಿಶ್ವ ಚಾಂಪಿಯನ್
ಪತಿ ಸ್ಟಾರ್ಕ್ ದಾಖಲೆ ಸರಿಗಟ್ಟಿದ ಅಲೀಸಾ!
2019ರ ಏಕದಿನ ವಿಶ್ವಕಪ್‌ನಲ್ಲಿ ಆಸ್ಪ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ 27 ವಿಕೆಟ್ ಕಬಳಿಸಿ ಟೂರ್ನಿಯ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಪಾತ್ರರಾಗಿದ್ದರು. 2022ರ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಅವರ ಪತ್ನಿ ಅಲೀಸಾ ಹೀಲಿ 509 ರನ್ ಕಲೆಹಾಕಿ, ಟೂರ್ನಿಯ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ವಿಶ್ವಕಪ್‌ನಲ್ಲಿ ಅಲೀಸಾ 9 ಪಂದ್ಯಗಳಲ್ಲಿ ತಲಾ 2 ಅರ್ಧಶತಕ, ಶತಕ ಬಾರಿಸಿದರು. ಪ್ರಮುಖವಾಗಿ ಸೆಮಿಫೈನಲ್, ಫೈನಲ್‌ನಲ್ಲಿ ಅದ್ಭುತ ಶತಕಗಳನ್ನು ಬಾರಿಸಿ ಆಸ್ಪ್ರೇಲಿಯಾ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಆಸೀಸ್ ವಿಶ್ವಕಪ್ ಇತಿಹಾಸ
07 ವಿಶ್ವಕಪ್: ಆಸ್ಪ್ರೇಲಿಯಾ ಮಹಿಳಾ ತಂಡ 9 ಏಕದಿನ ವಿಶ್ವಕಪ್ ಫೈನಲ್‌ಗಳಲ್ಲಿ ಆಡಿದ್ದು 7ರಲ್ಲಿ ಚಾಂಪಿಯನ್ ಆಗಿದೆ.
05 ವಿಶ್ವಕಪ್: ಆಸ್ಪ್ರೇಲಿಯಾ ಮಹಿಳಾ ತಂಡ 5 ಬಾರಿ ಐಸಿಸಿ ಟಿ20 ವಿಶ್ವಕಪ್ ಟ್ರೋಫಿಯನ್ನು ಗೆದ್ದಿದೆ.
12 ವಿಶ್ವಕಪ್ ಜಯ: ಮಹಿಳಾ ಕ್ರಿಕೆಟ್ ಈ ವರೆಗೂ ಒಟ್ಟು 19 ವಿಶ್ವಕಪ್(ಏಕದಿನ ಹಾಗೂ ಟಿ20) ಟೂರ್ನಿಗಳಿಗೆ ಸಾಕ್ಷಿಯಾಗಿದ್ದು ಈ ಪೈಕಿ 12ರಲ್ಲಿ ಆಸ್ಪ್ರೇಲಿಯಾ ಚಾಂಪಿಯನ್ ಆಗಿದೆ.
06 ವಿಶ್ವಕಪ್: ಆಸ್ಪ್ರೇಲಿಯಾ ಪುರುಷರ ತಂಡ ಒಟ್ಟು 6 ವಿಶ್ವಕಪ್(5 ಏಕದಿನ, 1 ಟಿ20) ಟ್ರೋಫಿಗಳನ್ನು ಗೆದ್ದಿದೆ.
ವರ್ಷ ನಾಯಕಿ
1978 ಮಾರ್ಗರೆಟ್ ಜೆನ್ನಿಂಗ್ಸ್
1982 ಶರೊನ್ ಟ್ರೆಡಿಯಾ
1988 ಲಿನ್ ಲಾರ್ಸೆನ್
1997 ಬೆಲಿಂಡಾ ಕ್ಲಾರ್ಕ್
2005 ಬೆಲಿಂಡಾ ಕ್ಲಾರ್ಕ್
2013 ಜೊಡಿ ಫೀಲ್ಡ್ಸ್
2022 ಮೆಗ್ ಲ್ಯಾನಿಂಗ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.