IPL 2022 ಆರ್ ಸಿಬಿ ವಿರುದ್ಧ ಟಾಸ್ ಗೆದ್ದ ಲಕ್ನೋ, ಬೌಲಿಂಗ್ ಆಯ್ಕೆ

Published : Apr 19, 2022, 07:05 PM ISTUpdated : Apr 19, 2022, 07:12 PM IST
IPL 2022 ಆರ್ ಸಿಬಿ ವಿರುದ್ಧ ಟಾಸ್ ಗೆದ್ದ ಲಕ್ನೋ, ಬೌಲಿಂಗ್ ಆಯ್ಕೆ

ಸಾರಾಂಶ

ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ನಿಟ್ಟಿನಲ್ಲಿ ಮಹತ್ವವಾಗಿರುವ ಪಂದ್ಯದಲ್ಲಿ ಟಾಸ್ ಗೆಲುವು ಕಂಡಿರುವ ಲಕ್ನೋ ತಂಡ ಬೌಲಿಂಗ್ ಆಯ್ದುಕೊಂಡಿದೆ. ಎರಡೂ ತಂಡಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಮುಂಬೈ (ಏ.19): ರನ್ ರೇಟ್ ಆಧಾರದಲ್ಲಿ ಅಂಕಪಟ್ಟಿಯಲ್ಲಿ ಭಿನ್ನ ಸ್ಥಾನಗಳಲ್ಲಿರುವ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡಗಳು 15ನೇ ಆವೃತ್ತಿಯ ಐಪಿಎಲ್ ನ (IPL 2022) 31ನೇ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ನಾಯಕ ಕೆಎಲ್ ರಾಹುಲ್ (KL Rahul) ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಡಿ ವೈ ಪಾಟೀಲ್ ಸ್ಟೇಡಿಯಂನಲ್ಲಿ (DY Stadium) ಪಂದ್ಯ ನಡೆಯಲಿದೆ. ಈ ಮೈದಾನದಲ್ಲಿ ನಡೆದ ಆಡಿದ ಎರಡೂ ಪಂದ್ಯಗಳನ್ನು ಎಲ್ ಎಸ್ ಜಿ ಗೆದ್ದಿದ್ದರೆ, ಆರ್ ಸಿಬಿ (RCB) ತಂಡ ಆಡಿದ 3 ಪಂದ್ಯಗಳಲ್ಲಿ 2 ಸೋಲು, ಒಂದು ಗೆಲುವು ಕಂಡಿದೆ. ಎರಡೂ ತಂಡಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
    
ಲಕ್ನೋ ಸೂಪರ್ ಜೈಂಟ್ಸ್ ಪ್ಲೇಯಿಂಗ್ ಇಲೆವೆನ್: ಕೆಎಲ್ ರಾಹುಲ್(ನಾಯಕ), ಕ್ವಿಂಟನ್ ಡಿ ಕಾಕ್(ವಿ.ಕೀ), ಮನೀಶ್ ಪಾಂಡೆ, ಮಾರ್ಕಸ್ ಸ್ಟೋನಿಸ್, ದೀಪಕ್ ಹೂಡಾ, ಆಯುಷ್ ಬಡೋನಿ, ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್, ದುಷ್ಮಂತ ಚಮೀರಾ, ಅವೇಶ್ ಖಾನ್, ರವಿ ಬಿಷ್ಣೋಯಿ

ಆರ್ ಸಿಬಿ ಪ್ಲೇಯಿಂಗ್ ಇಲೆವೆನ್: ಫಾಫ್ ಡು ಪ್ಲೆಸಿಸ್(ನಾಯಕ), ಅನುಜ್ ರಾವತ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಸುಯಶ್ ಪ್ರಭುದೇಸಾಯಿ, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್(ವಿ.ಕೀ), ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್‌ವುಡ್, ಮೊಹಮ್ಮದ್ ಸಿರಾಜ್

ಅಂಕಪಟ್ಟಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿದೆ.  ಎರಡೂ ತಂಡಗಳು ಆಡಿರುವ 6 ಪಂದ್ಯಗಳಿಂದ 4 ಗೆಲುವು ಹಾಗೂ 2 ಸೋಲು ಕಂಡಿದೆ. ಆದರೆ, ರನ್ ರೇಟ್ ಲೆಕ್ಕಾಚಾರದಲ್ಲಿ ಸ್ಥಾನಗಳಲ್ಲಿ ವ್ಯತ್ಯಾಸವಾಗಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿದ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನು ಕಳೆದ ಮೂರು ಪಂದ್ಯಗಳಲ್ಲಿ ಎರಡೂ ತಂಡಗಳು ಕ್ರಮವಾಗಿ 2 ಗೆಲುವು ಹಾಗೂ 1 ಸೋಲು ಕಂಡಿದೆ.

IPL 2022: ಶ್ರೇಯಸ್ ಅಯ್ಯರ್‌ಗೆ ವಿನೂತನವಾಗಿ ಮದುವೆ ಪ್ರಪೋಸ್ ಮಾಡಿದ ಕ್ಯೂಟ್ ಅಭಿಮಾನಿ..!

ಏನನ್ನು ನಿರೀಕ್ಷೆ ಮಾಡಬಹುದು? : ಸಂಜೆಯ ಪಂದ್ಯಗಳಲ್ಲಿ ಸಾಮಾನ್ಯವಾಗಿ ತಂಡಗಳು ಚೇಸಿಂಗ್ ಗೆ ಆದ್ಯತೆ ನೀಡಿವೆ. ಆದರೆ, ಕಳೆದ ಎರಡು ಸಂಜೆಯ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಚೆನ್ನೈ, ಆರ್ ಸಿಬಿ ತಂಡವನ್ನು ಸೋಲಿಸಿದ್ದು ಮೊದಲ ಪಂದ್ಯವಾಗಿದ್ದರೆ, ಗುಜರಾತ್ ಟೈಟಾನ್ಸ್ ತಂಡ ರಾಜಸ್ಥಾನ ರಾಯಲ್ಸ್ ತಂಡವನ್ನು 37 ರನ್ ಗಳಿಂದ ಸೋಲಿಸಿದ್ದು 2ನೇ ಪಂದ್ಯವಾಗಿತ್ತು. ಎರಡೂ ಬಾರಿಯ ಚೇಸಿಂಗ್ ಮಾಡುತ್ತಿದ್ದ ತಂಡ ದೊಡ್ಡ ಮೊತ್ತದ ಗುರಿಯನ್ನು ಪಡೆದುಕೊಂಡಿದ್ದವು.

IPL 2022: 14 ವರ್ಷಗಳ ವನವಾಸ ಅಂತ್ಯ. ಈ 5 ಕಾರಣಗಳಿಂದ ಈ ಸಲ ಕಪ್ ಗೆದ್ದೇ ಗೆಲ್ಲುತ್ತೆ ಆರ್‌ಸಿಬಿ..!

ನಿಮಗಿದು ಗೊತ್ತೇ?

* ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಆಡೋದು ಅಂದ್ರೆ ಜೇಸನ್ ಹೋಲ್ಡರ್ ಗೆ ಇನ್ನಿಲ್ಲದ ಖುಷಿ. ಆರ್ ಸಿಬಿ ವಿರುದ್ಧ ಆಡಿದ ಐದು ಇನ್ನಿಂಗ್ಸ್ ಗಳ ಪೈಕಿ ಮೂರು ಬಾರಿ ಪಂದ್ಯವೊಂದರಲ್ಲಿ 2 ಹಾಗೂ ಅದಕ್ಕಿಂತ ಹೆಚ್ಚಿನ ವಿಕೆಟ್ ಉರುಳಿಸಿದ್ದಾರೆ. ಆರ್ ಸಿಬಿ ವಿರುದ್ಧ ಆಡಿದ ಐದು ಇನ್ನಿಂಗ್ಸ್ ಗಳಿಂದ 9 ವಿಕೆಟ್ ಉರುಳಿಸಿದ ಸಾಧನೆ ಇವರದಾಗಿದೆ

* ಗ್ಲೆನ್ ಮ್ಯಾಕ್ಸ್ ವೆಲ್ ನಾಲ್ಕು ಟಿ20 ಇನ್ನಿಂಗ್ಸ್ ಗಳಲ್ಲಿ ಎರಡು ಬಾರಿ ಕೆಎಲ್ ರಾಹುಲವ ವಿಕೆಟ್ ಉರುಳಿಸಿದ್ದಾರೆ. ರಾಹುಲ್ ಗೆ ಎಸೆದ 18 ಎಸೆತಗಳಲ್ಲಿ ಮ್ಯಾಕ್ಸ್ ವೆಲ್ ಕೇವಲ 20 ರನ್ ನೀಡಿದ್ದಾರೆ.

* ಲಕ್ನೋ ಸೂಪರ್ ಜೈಂಟ್ಸ್ (8.61) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (7.86) ಐಪಿಎಲ್ 2022 ಅಲ್ಲಿ ಪವರ್ ಪ್ಲೇ ಅವಧಿಯಲ್ಲಿ ಅತ್ಯಂತ ಕೆಟ್ಟ ಹಾಗೂ ಮೂರನೇ ಅತೀ ಕೆಟ್ಟ ಎಕಾನಮಿ ರೇಟ್ ಹೊಂದಿರುವ ತಂಡಗಳಾಗಿವೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!
IPL 2026 ಮಿನಿ ಹರಾಜು: 2 ಕೋಟಿ ಮೂಲ ಬೆಲೆ ಹೊಂದಿದ 5 ಸ್ಟಾರ್ ಆಟಗಾರರಿವರು!