IPL 2022: 14 ವರ್ಷಗಳ ವನವಾಸ ಅಂತ್ಯ. ಈ 5 ಕಾರಣಗಳಿಂದ ಈ ಸಲ ಕಪ್ ಗೆದ್ದೇ ಗೆಲ್ಲುತ್ತೆ ಆರ್‌ಸಿಬಿ..!

Published : Apr 19, 2022, 05:06 PM IST
IPL 2022: 14 ವರ್ಷಗಳ ವನವಾಸ ಅಂತ್ಯ. ಈ 5 ಕಾರಣಗಳಿಂದ ಈ ಸಲ ಕಪ್ ಗೆದ್ದೇ ಗೆಲ್ಲುತ್ತೆ ಆರ್‌ಸಿಬಿ..!

ಸಾರಾಂಶ

* ಚೊಚ್ಚಲ ಐಪಿಎಲ್ ಟ್ರೋಫಿಯ ಕನವರಿಕೆಯಲ್ಲಿದೆ ಆರ್‌ಸಿಬಿ * 14 ವರ್ಷಗಳಿಂದಲೂ ಐಪಿಎಲ್ ಟ್ರೋಫಿ ಗೆಲ್ಲಲು ವಿಫಲವಾಗಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು * ಈ ಬಾರಿ ಆರ್‌ಸಿಬಿ ಐಪಿಎಲ್ ಟ್ರೋಫಿ ಗೆಲ್ಲಲು ಇದೆ ಸುವರ್ಣಾವಕಾಶ

ಬೆಂಗಳೂರು(ಏ.19): ಈ ಸಲ ಕಪ್​ ನಮ್ದೇ (E Sala Cup Namde), ಈ ಸಲ ಕಪ್​​​ ನಮ್ದೇ, ಈ ಸಲ ಕಪ್​ ನಮ್ದೇ. ಹೀಗಂತ ಪ್ಲೇಯರ್ಸ್​, ಫ್ಯಾನ್ಸ್ 14 ವರ್ಷದಿಂದ ಅಂದಿದ್ದೇ ಬಂತು, ಆದ್ರೆ ಈವರೆಗೆ ಕಪ್​​​​​​ ಮಾತ್ರ ಆರ್​ಸಿಬಿಯದ್ದಾಗಿಲ್ಲ. ಹಾಗಂತ ಕೆಂಪಂಗಿ ಸೈನ್ಯ ಕುಗ್ಗಿಲ್ಲ. ಇಂದಲ್ಲ ನಾಳೆ, ಕಪ್​​ ಗೆದ್ದೇ ತೀರುವ ಹುಮ್ಸಸ್ಸಿನಲ್ಲಿದೆ. ಪ್ರತಿ ಸಲದಂತೆ ಈ ಬಾರಿನೂ  ಕಪ್​ ಗೆಲ್ಲುವ ಛಲದೊಂದಿಗೆ RCB ಅಖಾಡಕ್ಕೆ ಧುಮುಕಿದೆ. 6ರಲ್ಲಿ ನಾಲ್ಕು ಗೆದ್ದು ಅದನ್ನು ನಿಜವಾಗಿಸುವತ್ತ ಹೆಜ್ಜೆ ಇಟ್ಟಿದೆ. ಇನ್ನೂ ಈ ಸಲ ಆರ್​ಸಿಬಿ ಹಿಂದಿನಂತಿಲ್ಲ. ಕಂಪ್ಲೀಟ್ಲಿ ಬದಲಾಗಿದೆ. ಹೊಸ ಕ್ಯಾಪ್ಟನ್ ಎಂಟ್ರಿ  ಬಳಿಕ, ಹೊಸ ಎನರ್ಜಿ ಬಂದಿದೆ. ಹೀಗಾಗಿ ಈ ಸಲ RCB ಕಪ್​ ಗೆದ್ದೇ ಗೆಲ್ಲುತ್ತೆ ಅನ್ನೋ ಹೊಸ ಆಶಾಭಾವ ಮೂಡಿದೆ. ಜೊತೆಗೆ ಈ ಐದು ಕಾರಣಗಳು ಖಂಡಿತ RCB ಚೊಚ್ಚಲ ಟ್ರೋಫಿ ಎತ್ತಿ ಹಿಡಿಯಲು ನೆರವಾಗಲಿವೆ.

ರೀಸನ್​​​-1 - ಡುಪ್ಲೆಸಿಸ್ ಜೀನಿಯಸ್ & ಅನುಭವಿ ಕ್ಯಾಪ್ಟನ್​:

ಫಾಫ್ ಡು ಪ್ಲೆಸಿಸ್ RCBಗೆ ಎಂಟ್ರಿ ಕೊಡ್ತಿದ್ದಂತೆ ಕಪ್​ ಕನಸು ಚಿಗುರೊಡೆದಿದೆ. ಯಾಕಂದ್ರೆ ಪ್ಲೆಸಿಸ್​​ ಜೀನಿಯಸ್ ಕ್ರಿಕೆಟರ್​ ಮತ್ತು ಅನುಭವಿ ಕ್ಯಾಪ್ಟನ್​​. ದಕ್ಷಿಣ ಆಫ್ರಿಕಾ ಕಂಡ ಯಶಸ್ವಿ ನಾಯಕ. ದಕ್ಷಿಣ ಆಫ್ರಿಕಾ ಪರ ನಾಯಕನಾಗಿ 115 ಪಂದ್ಯಗಳಲ್ಲಿ 70 ಗೆಲ್ಲಿಸಿದ್ದಾರೆ. ನಾಲ್ಕು ಬಾರಿ ಚಾಂಪಿಯನ್ ಆಗಿರೋ ಚೆನ್ನೈ ತಂಡದಲ್ಲಿ ಹಿಂದೆ ಆಡಿ ಕೂಲೆಸ್ಟ್​​ ಬ್ರೈನ್​ ಧೋನಿ ಗರಡಿಯಲ್ಲಿ ಪಳಗಿದ್ದಾರೆ. ಸದ್ಯ ಈ ಅನುಭವ ಪ್ಲೆಸಿಸ್​​ ಕೈಹಿಡಿತಿದೆ. ನಾಯಕನಾಗಿ ಆರ್​ಸಿಬಿಗೆ ಪ್ರಶಸ್ತಿ ಗೆಲ್ಲಿಸಿಕೊಟ್ರು ಅಚ್ಚರಿಯೇನಿಲ್ಲ.

ರೀಸನ್​​​-2- ಯಂಗ್​ಸ್ಟರ್ಸ್​ ಘರ್ಜನೆ: 

ಇನ್ನು ಯಂಗ್​ಸ್ಟರ್ಸ್​ಗಳಾದ ಅನೂಜ್​​ ರಾವತ್​​​, ಶಹಬಾಜ್​​​ ಅಹ್ಮದ್​​​ ಹಾಗೂ ಸುಯಾಶ್​ ಪ್ರಭುದೇಸಾಯಿ ಇಂಪ್ರೆಸ್ಸಿವ್​​ ಆಟವಾಡ್ತಿದ್ದಾರೆ. ಇದು RCB ಬ್ಯಾಟಿಂಗ್​ ವಿಭಾಗಕ್ಕೆ ಹೊಸ ಚೈತನ್ಯ ತುಂಬಿದೆ. ಇನ್ನುಳಿದ ಪಂದ್ಯಗಳಲ್ಲೂ ಈ ಯಂಗ್​ಸ್ಟರ್ಸ್​ ಘರ್ಜಿಸಿದ್ರೆ, ಆರ್​ಸಿಬಿಗೆ ಕಪ್​ ಮಿಸ್ಸಾಗೋ ಮಾತೇ ಇಲ್ಲ.

ICC T20 World Cup: ಮ್ಯಾಚ್‌ ಫಿನಿಶರ್‌ ಪಾತ್ರಕ್ಕೆ ಯಾರು ಹಿತವರು ಈ ನಾಲ್ವರಲ್ಲಿ..?

ರೀಸನ್​​​-3- ಹಸರಂಗ ಸ್ಪಿನ್​ ಮ್ಯಾಜಿಕ್​.ಎದುರಾಳಿ ಶೇಕ್​​..:

ಆಕ್ಷನ್​​​ನಲ್ಲಿ 10.75 ಕೋಟಿಗೆ ವನಿಂದು ಹಸರಂಗರನ್ನ RCB ಖರೀದಿಸಿತ್ತು. ಆ ನಂಬಿಕೆಯನ್ನ ಲೆಗ್​​ ಬ್ರೇಕರ್​ ಉಳಿಸಿಕೊಂಡಿದ್ದು, ವಿಕೆಟ್ ಸರಮಾಲೆ ಕಟ್ಟಿದ್ದಾರೆ. ಈವರೆಗೆ 11 ವಿಕೆಟ್​ ಕಬಳಿಸಿ ಸ್ಪಿನ್​ ಕೈಚಳಕ ತೋರಿದ್ದಾರೆ. ಇದು ರಿಪೀಟ್ ಆದ್ರೆ ಎದುರಾಳಿ ಪಡೆ ಶೇಕ್ ಆಗಿ, ಆರ್‌ಸಿಬಿ ಕಪ್​ ಎತ್ತಿ ಹಿಡಿದು ಶೈನ್ ಆಗಲಿದೆ.

ರೀಸನ್​​​-4  ರಣಕಲಿ ಡಿಕೆ ವೀರಾವೇಶ:

ಒಂದು ಟೈಮ್​​ನಲ್ಲಿ RCB ಅಂದ್ರೆ ಕೊಹ್ಲಿ, ಎಬಿಡಿ ಅನ್ನುವಂತಾಗಿತ್ತು. ಆದ್ರೀಗ RCBಯಲ್ಲಿ ಡಿಕೆ ಹೆಸರು ಪ್ರತಿಧ್ವನಿಸ್ತಿದೆ. ಮ್ಯಾಚ್​ ವಿನ್ನರ್​​​​​​, ಫಿನಿಶರ್​ ಆಗಿ ರನ್​​ ಹೊಳೆ ಹರಿಸ್ತಿದ್ದಾರೆ. 207ರ ಸ್ಟ್ರೈಕ್​ರೇಟ್​​​ನಲ್ಲಿ  197 ರನ್​​ ಕಲೆಹಾಕಿದ್ದಾರೆ. ಡಿಕೆ ಆರ್ಭಟ ಸದ್ಯ ಆರ್​ಸಿಬಿ ವಿಕ್ಟರಿ ಕೇಕೆಗೆ ಕಾರಣವಾಗ್ತಿದೆ. ಒಂದು ವೇಳೆ ತಮಿಳ್​ ಮಗನ್​ ಈ ಸಿಂಹಘರ್ಜನೆ ಮುಂದುವರಿದ್ರೆ 14 ವರ್ಷದ ಆರ್​ಸಿಬಿ ಟ್ರೋಫಿ ಬರ ನೀಗೋದ್ರಲ್ಲಿ ಯಾವುದೇ ಸಂದೇಹವಿಲ್ಲ.

ರೀಸನ್​​​-5 ಫವರ್​ಫುಲ್​​​​​ ಬ್ಯಾಟಿಂಗ್​​ & ಬೌಲಿಂಗ್ ಲೈನ್​ಅಪ್​​:

ಇನ್ನು ಕಳೆದ ಬಾರಿಗೆ ಹೋಲಿಸಿದ್ರೆ ಈ ಸಲ RCB  ತಂಡ ಫವರ್​​ಫುಲ್​​​ ಬ್ಯಾಟಿಂಗ್ ಮತ್ತು ಬೌಲಿಂಗ್​​ ಪಡೆಯನ್ನ ಹೊಂದಿದೆ. ಬ್ಯಾಟಿಂಗ್​​ನಲ್ಲಿ ಪ್ಲೆಸಿಸ್​​​, ಕೊಹ್ಲಿ, ಮ್ಯಾಕ್ಸ್​ವೆಲ್​​ ಎದುರಾಳಿಯನ್ನ ಡೆಸ್ಟ್ರಾಯ್​ ಮಾಡಿದ್ರೆ, ಬೌಲಿಂಗ್​​ನಲ್ಲಿ ಹರ್ಷಲ್​​ ಪಟೇಲ್​​​, ಜೋಶ್​ ಹೆಜಲ್​ವುಡ್​​, ಸಿರಾಜ್​ ವಿಕೆಟ್ ಬೇಟೆಯಾಡ್ತಿದ್ದಾರೆ. ಇದರಿಂದಾಗಿ ಸಾಂಘಿಕ ಪ್ರದರ್ಶನ ಮೂಡಿ ಬರ್ತಿದೆ. ಇದು ಹೀಗೆ ಮುಂದುವರಿದಿದ್ದೇ ಆದಲ್ಲಿ ಆರ್​ಸಿಬಿಯ 14 ವರ್ಷದ ಕಪ್​ ವನವಾಸ ಕೊನೆಗೊಂಡು, ಚೊಚ್ಚಲ ಟ್ರೋಫಿಯನ್ನ ಎತ್ತಿ ಹಿಡಿಯಲಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?