IPL 2022: ಈ ಬಾರಿ ಒಂದೇ ತಂಡದಲ್ಲಿದ್ದಾರೆ ಕಿರಿಕ್ ಬಾಯ್ಸ್..!

Published : Mar 28, 2022, 02:17 PM IST
IPL 2022: ಈ ಬಾರಿ ಒಂದೇ ತಂಡದಲ್ಲಿದ್ದಾರೆ ಕಿರಿಕ್ ಬಾಯ್ಸ್..!

ಸಾರಾಂಶ

* ಐಪಿಎಲ್ ಟೂರ್ನಿಯಲ್ಲಿ ಈ ಬಾರಿ ಕಿರಿಕ್ ಆಟಗಾರರ ಮೇಲೆ ಎಲ್ಲರ ಚಿತ್ತ * ಈ ಹಿಂದೆ ಕಿತ್ತಾಡಿಕೊಂಡವರು, ಈಗ ಒಂದೇ ತಂಡದ ಪರ ಕಣಕ್ಕೆ * ಅಶ್ವಿನ್‌-ಬಟ್ಲರ್ ರನೌಟ್‌ ವಿವಾದ ಯಾರಾದರೂ ಮರೆಯಲು ಸಾಧ್ಯವಾ..?

ಬೆಂಗಳೂರು(ಮಾ.28): ಕ್ರಿಕೆಟ್ ಅಂದ್ರೆ ಕಿರಿಕ್. ಒಂದು ಪಂದ್ಯ ನಡೆದ್ರೆ ಅಲ್ಲಿ ಕಿರಿಕ್ ಇದ್ದೇ ಇರುತ್ತೆ. ಇಂಟರ್​ ನ್ಯಾಷನಲ್ ಮ್ಯಾಚ್​ಗಳಲ್ಲಿ ಕಿರಿಕ್ ಕಾಮನ್. ಕ್ರಿಕೆಟ್ ಫ್ಯಾನ್ಸ್​ ರೆಕಾರ್ಡ್​ಗಳನ್ನ ಮರೆಯಬಹುದು. ಆದ್ರೆ ಕ್ರಿಕೆಟರ್ಸ್ ಕಿತ್ತಾಡಿಕೊಂಡಿದ್ದನ್ನ ಮಾತ್ರ ಮರೆಯಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಕಿತ್ತಾಟಗಳು ಜಾಸ್ತಿ. ಆದ್ರೆ ಐಪಿಎಲ್ ಮತ್ತು ಡೊಮೆಸ್ಟಿಕ್ ಕ್ರಿಕೆಟ್​ನಲ್ಲಿ ಕಿರಿಕ್​ಗಳು ಕಮ್ಮಿ. ಆದ್ರೂ ಕಿರಿಕ್​ಗಳು ಆಗಿದ್ರೆ ಅವನ್ನ ಯಾರೂ ಮರೆತಿಲ್ಲ. ಈಗ ಐಪಿಎಲ್ (IPL) ಹಾಗೂ ಡೊಮೆಸ್ಟಿಕ್ ಕ್ರಿಕೆಟ್​ನಲ್ಲಿ ಕಿತ್ತಾಡಿಕೊಂಡ ಆಟಗಾರರು ಐಪಿಎಲ್​ನಲ್ಲಿ ಒಂದೇ ತಂಡ ಸೇರಿಕೊಂಡಿದ್ದಾರೆ. ಅಂದು ದುಷ್ಮನ್​ಗಳು, ಇಂದು ಟೀಮೆಂಟ್ಸ್ ಆಗಿದ್ದಾರೆ.

ಅಂದು ಮಂಕಡ್​ ರನೌಟ್ ಕಿರಿಕ್. ಇಂದು ರಾಯಲ್ಸ್​ನಲ್ಲಿ ಕಿರಿಕ್ ಬಾಯ್ಸ್​:

2019ರ ಐಪಿಎಲ್​ನಲ್ಲಿ ರವಿಚಂದ್ರನ್ ಅಶ್ವಿನ್ (Ravichandran Ashwin) ಪಂಜಾಬ್ ಕಿಂಗ್ಸ್ ಕ್ಯಾಪ್ಟನ್ ಆಗಿದ್ದರು. ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಜೋಸ್ ಬಟ್ಲರ್ (Jos Buttler) ಅವರನ್ನ ಮಂಕಡ್ ರನೌಟ್​ ಮಾಡಿದ್ರು. ನಾನ್​​ಸ್ಟ್ರೈಕ್​​ನಲ್ಲಿದ್ದ ಜೋಸ್​ ಬಟ್ಲರ್​, ಅಶ್ವಿನ್ ಬಾಲ್ ಎಸೆಯಲು ಮುನ್ನವೇ ಕ್ರೀಸ್​​ ಬಿಟ್ಟಿದ್ದರು. ಇದನ್ನ ಗಮನಿಸಿದ ಅಶ್ವಿನ್ ಬಾಲ್ ಎಸೆಯದೇ ವಿಕೆಟ್​​​ ಎಗರಿಸಿ ರನೌಟ್​​ಗಾಗಿ ಅಂಪೈರ್​​​ಗೆ ಮನವಿ ಮಾಡಿದ್ರು. ಥರ್ಡ್​ ಅಂಪೈರ್​ ಔಟ್​ ಎಂದು ತೀರ್ಪು ನೀಡಿದ್ರು. ರೂಲ್ಸ್ ಪ್ರಕಾರ ಬ್ಯಾಟ್ಸ್​​ಮನ್, ಬೌಲರ್ ಬೌಲ್ ಹಾಕೋಕು ಮುನ್ನವೇ ಕ್ರೀಸ್​​​ ಬಿಡುವಂತಿಲ್ಲ. ಇದನ್ನ ಎನ್​ಕ್ಯಾಶ್ ಮಾಡಿಕೊಂಡ ಅಶ್ವಿನ್​, ಮಂಕಡ್ ಅಸ್ತ್ರ ಬಳಸಿ ಬಟ್ಲರ್​ ಅವರನ್ನ ಔಟ್ ಮಾಡಿದ್ರು.

ಅಶ್ವಿನ್ ಔಟ್​ ಮಾಡೋಕು ಮುನ್ನ ಬಟ್ಲರ್​​​,​​​​​ ವಾರ್ನ್​ ಮಾಡಿ ಕ್ರೀಡಾಸ್ಫೂರ್ತಿ ಮೆರೆಯಬಹುದಿತ್ತು. ಆದ್ರೆ ಅಶ್ವಿನ್ ಹಾಗೆ ಮಾಡಲಿಲ್ಲ. ಬಟ್ಲರ್ ಔಟಾದ್ಮೇಲೆ ಅಶ್ವಿನ್ ವಿರುದ್ಧ ವಾಗ್ದಾಳಿ ನಡೆಸಿದ್ರು. ಅಶ್ವಿನ್​ರ ಈ ರನೌಟ್​​ಗೆ ಕ್ರಿಕೆಟಿಗರು ಸೇರಿದಂತೆ ಅಭಿಮಾನಿಗಳು ಅಸಮಾಧಾನ ಹೊರಹಾಕಿ ಭಾರೀ ಟೀಕೆ ಮಾಡಿದ್ದರು. ಪಂದ್ಯದ ಮುಗಿದ ಬಳಿಕ ಎರಡು ತಂಡದ ಪ್ಲೇಯರ್ಸ್​ ಶೇಕ್​​​ಹ್ಯಾಂಡ್​​ ಮಾಡುವ ಸಮಯದಲ್ಲಿ ಬಟ್ಲರ್​​ ಕೈಕುಲುಕಲು ಅಶ್ವಿನ್ ಬಂದಾಗ, ಬಟ್ಲರ್ ನಿರಾಕರಿಸಿದ್ರು. ಇದರಿಂದ ಅಶ್ವಿನ್​ಗೆ ಶೇಪ್ ಔಟ್ ಆಯ್ತು. ಈ ಸಲ ಬಟ್ಲರ್ ಅವರನ್ನ ರಾಜಸ್ತಾನ ರಾಯಲ್ಸ್ (Rajasthan Royals) ರಿಟೈನ್​​ ಮಾಡಿಕೊಂಡಿದೆ. ಪ್ಲೇಯರ್ಸ್ ಬಿಡ್​ನಲ್ಲಿ ಆರ್. ಅಶ್ವಿನ್ ಅವರನ್ನ 5 ಕೋಟಿ ಕೊಟ್ಟು ರಾಯಲ್ಸ್ ಖರೀದಿಸಿದೆ. ಈ ಸಲದ ಐಪಿಎಲ್​ನಲ್ಲಿ ಈ ಇಬ್ಬರು ಆಟಗಾರರು ರಾಜಸ್ಥಾನದಲ್ಲಿ ಆಡಬೇಕು. ಅಂದು ಕಿತ್ತಾಡಿಕೊಂಡು ದುಷ್ಮನ್​ಗಳಾಗಿದ್ದ ಪ್ಲೇಯರ್ಸ್​, ಇಂದು ಫ್ರಾಂಚೈಸಿಗಳಿಗಾಗಿ ಒಂದಾಗಿ ಆಡ್ತಾರಾ ಅನ್ನೋ ಪ್ರಶ್ನೆ ಉದ್ಭವಿಸಿದೆ.

ಬರೋಡದಲ್ಲಿ ಕಿತ್ತಾಡಿಕೊಂಡವರು, ಲಕ್ನೋದಲ್ಲಿ ಒಂದಾಗ್ತಾರಾ..?:

ಡೊಮೆಸ್ಟಿಕ್ ಕ್ರಿಕೆಟ್​ನಲ್ಲಿ ಬರೋಡ ಪರ ಆಡುವ ಕೃನಾಲ್ ಪಾಂಡ್ಯ (Krunal Pandya) ಮತ್ತು ದೀಪಕ್ ಹೂಡಾ (Deepak  Hooda) ಕಳೆದ ವರ್ಷ ಕಿತ್ತಾಡಿಕೊಂಡಿದ್ದರು. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಗೆ ಅಭ್ಯಾಸ ನಡೆಸುವ ವೇಳೆ ಈ ಇಬ್ಬರು ನೆಟ್ಸ್​ನಲ್ಲೇ ಜಗಳ ಆಡಿದ್ದರು. ಬಯೋಬಬಲ್ ತೊರೆದಿದ್ದ ಆಲ್​ರೌಂಡರ್​ ಹೂಡಾ, ಕ್ಯಾಪ್ಟನ್ ಕೃನಾಲ್ ಬಗ್ಗೆ ಸಾಲು ಸಾಲು ಟೀಕೆ ಮಾಡಿ ಬರೋಡ ಕ್ರಿಕೆಟ್ ಸಂಸ್ಥೆಗೆ ಮೇಲ್ ಮಾಡಿದ್ದರು. ಜೊತೆಗೆ ಮತ್ತೆ ಬರೋಡ ಪರ ಆಡೋಲ್ಲ ಅಂತಲೂ ಹೇಳಿ ಬರೋಡಗೆ ಗುಡ್ ಬೈ ಹೇಳಿದ್ದರು.

RCB ಪರ ಪ್ಲಾಫ್​ ಶೋ, ಬೇರೆ ಫ್ರಾಂಚೈಸಿ ಪರ ತ್ರಿಮೂರ್ತಿಗಳ ಸೂಪರ್ ಶೋ..!

ಈಗ ಈ ಇಬ್ಬರು ಆಲ್​ರೌಂಡರ್​ಗಳು ಈಗ ಲಖನೌ ಸೂಪರ್ ಜೈಂಟ್ಸ್ ತಂಡದಲ್ಲಿದ್ದಾರೆ. ಈ ಇಬ್ಬರು ಲಖನೌ ಟೀಂ ಸೇರಿಕೊಳ್ತಿದ್ದ ಹಾಗೆ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ (Virender Sehwag) ಟ್ವೀಟ್ ಮಾಡಿ ಇಬ್ಬರ ಕಾಲೆಳೆದಿದ್ದಾರೆ. ಹೂಡಾ ಮತ್ತು ಕೃನಲ್ ಉತ್ತಮ ಜೋಡಿ. ಡಿವೈಡೆಡ್​ ಬೈ ಬರೋಡಾ, ಯುನೈಟೆಡ್​ ಬೈ ಲಕ್ನೋ ಎಂದು ಬರೆದುಕೊಂಡಿದ್ದರು. ಬರೋಡದಲ್ಲಿ ಕಿತ್ತಾಡಿಕೊಂಡಿದ್ದವರು, ಲಕ್ನೋದಲ್ಲಿ ಒಂದಾಗ್ತಾರಾ..? ಅನ್ನೋ ಪ್ರಶ್ನೆಗೆ ಈ ಐಪಿಎಲ್​ನಲ್ಲಿ ಉತ್ತರ ಸಿಗಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?