RCB ಪರ ಪ್ಲಾಫ್​ ಶೋ, ಬೇರೆ ಫ್ರಾಂಚೈಸಿ ಪರ ತ್ರಿಮೂರ್ತಿಗಳ ಸೂಪರ್ ಶೋ..!

Published : Mar 28, 2022, 01:36 PM ISTUpdated : Mar 28, 2022, 01:37 PM IST
RCB ಪರ ಪ್ಲಾಫ್​ ಶೋ, ಬೇರೆ ಫ್ರಾಂಚೈಸಿ ಪರ ತ್ರಿಮೂರ್ತಿಗಳ ಸೂಪರ್ ಶೋ..!

ಸಾರಾಂಶ

* 15ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಆರ್‌ಸಿಬಿ ಮಾಜಿ ಆಟಗಾರರ ಶೈನಿಂಗ್ * ಕೆಕೆಆರ್ ವಿರುದ್ದ ಮಾರಕ ದಾಳಿ ನಡೆಸುತ್ತಿರುವ ಉಮೇಶ್ ಯಾದವ್ * ಸಿಎಸ್‌ಕೆ ಪರ ಮಿಂಚಲು ರೆಡಿಯಾದ ಮೋಯಿನ್ ಅಲಿ

ವರದಿ -ಮಾಗುಂಡಯ್ಯ ಪಟ್ಟೇದ್,  ಏಷ್ಯಾನೆಟ್ ಸುವರ್ಣನ್ಯೂಸ್​

ಬೆಂಗಳೂರು(ಮಾ.28): ಆರ್​ಸಿಬಿಗೆ (RCB) ಐಪಿಎಲ್ ಟ್ರೋಫಿಯಂತೂ ಮರೀಚಿಕೆಯಾಗಿದೆ. 14 ವರ್ಷಗಳಿಂದ ಒಮ್ಮೆಯೂ ಕಪ್ ಗೆಲ್ಲದ ಹಣೆಪಟ್ಟಿ ಕಟ್ಟಿಕೊಂಡಿದೆ. ನಿಜಕ್ಕೂ ಕೆಂಪಂಗಿ ಪಡೆ ಕಲರ್​ಫುಲ್ ಟೂರ್ನಿಯ ಮೋಸ್ಟ್ ಅನ್​​ಲಕ್ಕಿ ಟೀಂ​​​. ಬರೀ ತಂಡ ಮಾತ್ರವಲ್ಲ, ಈ ಫ್ರಾಂಚೈಸಿ ಪರ ಆಡಿದ ಆಟಗಾರರಿಗೂ ಅದೃಷ್ಟ ಕೈಕೊಟ್ಟಿದೆ. ಆದ್ರೆ ಆರ್​ಸಿಬಿ ಪರ ಕಮಾಲ್​ ಮಾಡದ ಪ್ಲೇಯರ್ಸ್​ ಬೇರೆ ಫ್ರಾಂಚೈಸಿಗೆ ಕಾಲಿಟ್ಟು ಸಕ್ಸಸ್​ ಕಂಡಿದ್ದಾರೆ. ಅನೇಕ ಆಟಗಾರರ ವಿಚಾರದಲ್ಲಿ ಅದು ಪ್ರೂವ್ ಆಗಿದೆ. 

RCB ಯಿಂದ ಕಿಕೌಟಾದ ಉಮೇಶ್​​ ಕೆಕೆಆರ್ ಪರ ಕಮಾಲ್​
 
2018ರಲ್ಲಿ ಶರವೇಗಿ ಉಮೇಶ್​​ ಯಾದವ್​ರನ್ನ (Umesh Yadav) ಆರ್​ಸಿಬಿ 4.2 ಕೋಟಿ ನೀಡಿ ಖರೀದಿಸಿತ್ತು. ಆದ್ರೆ ಉಮೇಶ್ ಯಾದವ್ ನಿರೀಕ್ಷೆ ಹುಸಿಗೊಳಿಸಿದ್ರು. ಎರಡು ಆವೃತ್ತಿಗಳಲ್ಲಿ ದುಬಾರಿಯಾದ್ರು. ವಿಕೆಟ್ ಬೇಟೆಗಿಂತ ದಂಡಿಸಿಕೊಂಡಿದ್ದೇ ಹೆಚ್ಚು. ಎಳ್ಳಷ್ಟು ಉಪಯೋಗವಿಲ್ಲದ ಶರವೇಗಿಯನ್ನ 2020ರಲ್ಲಿ ಕೈಬಿಡ್ತು. ಹೀಗೆ ಆರ್​ಸಿಬಿಗೆ ಬೇಡವಾದ ಬೌಲರ್ ಪ್ರಸಕ್ತ ಐಪಿಎಲ್​​ನಲ್ಲಿ (Indian Premier League) ಮಿಂಚಿ ದಾಳಿ ಮೂಲಕ ಸುದ್ದಿಯಲ್ಲಿದ್ದಾರೆ.

ಬಲಿಷ್ಠ ಚೆನ್ನೈಗೆ ಖೆಡ್ಡಾ ತೋಡಿದ ಶರವೇಗಿ 

ಯಾವ ವೇಗಿಯನ್ನ ಆರ್​​ಸಿಬಿ ಕಡೆಗಣಿಸಿತೋ ಅದೇ ವೇಗಿಯನ್ನ ಈ ಬಾರಿ ಆಕ್ಷನ್​ನಲ್ಲಿ ಕೆಕೆಆರ್​​ (Kolkata Knight Riders) ತಂಡ 1 ಕೋಟಿ ರೂಪಾಯಿ ನೀಡಿ ತೆಕ್ಕೆಗೆ ಹಾಕಿಕೊಳ್ತು. ಆಡಿದ ಮೊದಲ ಪಂದ್ಯದಲ್ಲೇ ಉಮೇಶ್​ ಮ್ಯಾಚ್​ ವಿನ್ನಿಂಗ್​ ಪರ್ಫಾಮೆನ್ಸ್​ ನೀಡಿದ್ದಾರೆ. ಟೂರ್ನಿಯ  ಮೊದಲ ಪಂದ್ಯದಲ್ಲಿ  ಡೆಲ್ಲಿ ದಾಳಿ ಮೂಲಕ ಹಾಲಿ ಚಾಂಪಿಯನ್​​​ ಚೆನ್ನೈಗೆ ಖೆಡ್ಡಾ ತೋಡಿದ್ರು. ನಾಲ್ಕು ಓವರ್​ ಬೌಲಿಂಗ್​ ಮಾಡಿದ ಉಮೇಶ್​​ ಯಾದವ್​ 5.00ರ ಎಕಾನಮಿಯಲ್ಲಿ 20 ರನ್​ಗೆ 2 ವಿಕೆಟ್​ ಕಬಳಿಸಿ ಮಿಂಚಿದ್ರು. ಇನ್ನು ಈ ಇನ್ನಿಂಗ್ಸ್​​ನಲ್ಲಿ 15 ಡಾಟ್​ ಮಾಡಿ ಗಮನ ಸೆಳೆದ್ರು.

ಆರ್​ಸಿಬಿ ತೊರೆದ ಬಳಿಕ ವ್ಯಾಟ್ಸನ್​​​-ಅಲಿಗೆ ಖುಲಾಯಿಸ್ತು ಅದೃಷ್ಟ

ಇನ್ನು ಬರೀ ಉಮೇಶ್​ ಯಾದವ್​ ಮಾತ್ರವಲ್ಲ, ಇನ್ನಿಬ್ಬರು ಆಟಗಾರರಿಗೂ ಆರ್​ಸಿಬಿ ಟೀಂ​ ತೊರೆದ ಬಳಿಕ ಅದೃಷ್ಟ ಕೈಹಿಡಿದಿದೆ. ಅವರೆಂದರೆ ಶೇನ್​ ವ್ಯಾಟ್ಸನ್​ ಹಾಗೂ ಮೋಯಿನ್ ಅಲಿ(Moeen Ali). ಇಬ್ಬರು ಒಂದು ಟೈಮ್​​​ನಲ್ಲಿ ಆರ್​ಸಿಬಿ ಜೆರ್ಸಿ ತೊಟ್ಟಿದ್ರು. ಆದ್ರೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನಿಸಿಕೊಂಡ್ರು. ಮುಂದೆ ಇವರೇ ಚೆನ್ನೈ ಸೇರಿಕೊಂಡು ರನ್​ ಹೊಳೆ ಹರಿಸಿದ್ರು. ವ್ಯಾಟ್ಸನ್​ ಶತಕ ಸಿಡಿಸಿ 2018 ರಲ್ಲಿ ಸಿಎಸ್​​ಕೆ ಚಾಂಪಿಯನ್​​ಗೆ ಕಾರಣರಾದ್ರೆ, ಅಲಿ ಕಳೆದೆರಡು ಆವೃತ್ತಿಗಳಿಂದ ಯೆಲ್ಲೋ ಆರ್ಮಿಯಲ್ಲಿ ರನ್​ ಹೊಳೆ ಹರಿಸ್ತಿದ್ದಾರೆ.

IPL 2022 PBKS vs RCB ಕನ್ನಡಿಗ ಮಾಯಾಂಕ್ ನೇತೃತ್ವದ ಪಂಜಾಬ್ ಎದುರು ಆರ್ ಸಿಬಿಗೆ ಸೋಲು!

ಮೋಯಿನ್ ಅಲಿ ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ (Chennai Super Kings) ತಂಡದ ಪರ ಮೂರನೇ ಗರಿಷ್ಠ ಸ್ಕೋರರ್‌ ಎನಿಸಿದ್ದರು. 15 ಇನಿಂಗ್ಸ್‌ಗಳಲ್ಲಿ ಮೋಯಿನ್ ಅಲಿ 357 ರನ್‌ ಬಾರಿಸಿದ್ದಾರೆ. ಋತುರಾಜ್ ಗಾಯಕ್ವಾಡ್‌ ಹಾಗೂ ಫಾಫ್ ಡು ಪ್ಲೆಸಿಸ್‌ ಬಳಿಕ ಮೋಯಿನ್ ಅಲಿ ಚೆನ್ನೈ ಸೂಪರ್‌ ಕಿಂಗ್ಸ್ ಪರ ಮೂರನೇ ಗರಿಷ್ಠ ಸ್ಕೋರರ್‌ ಎನಿಸಿದ್ದಾರೆ. ಸ್ಪೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿರುವ ಮೋಯಿನ್ ಅಲಿ ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 19 ಸಿಕ್ಸರ್ ಚಚ್ಚಿದ್ದರು. 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?