IPL 2022 ಟಾಸ್ ಗೆದ್ದ ಕೋಲ್ಕತಾಗೆ ಆರಂಭಿಕ ಯಶಸ್ಸು, ಪಂಜಾಬ್ 3 ವಿಕೆಟ್ ಪತನ!

Published : Apr 01, 2022, 08:10 PM ISTUpdated : Apr 01, 2022, 08:17 PM IST
IPL 2022 ಟಾಸ್ ಗೆದ್ದ ಕೋಲ್ಕತಾಗೆ ಆರಂಭಿಕ ಯಶಸ್ಸು, ಪಂಜಾಬ್ 3 ವಿಕೆಟ್ ಪತನ!

ಸಾರಾಂಶ

ಪಂಜಾಬ್ ಕಿಂಗ್ಸ್ ಹಾಗೂ ಕೋಲ್ಕತಾ ನಡುವಿನ ಪಂದ್ಯ ಟಾಸ್ ಗೆದ್ದ ಕೋಲ್ಕತಾ ನೈಟ್ ರೈಡರ್ಸ್ ಬೌಲಿಂಗ್ ಆಯ್ಕೆ ಮೂರು ವಿಕೆಟ್ ಕಳೆದುಕೊಂಡ ಪಂಜಾಬ್ ಕಿಂಗ್ಸ್

ಮುಂಬೈ(ಏ.01): ಐಪಿಎಲ್ 2022 ಟೂರ್ನಿಯ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಲೀಗ್ ಪಂದ್ಯ ಆರಂಭದಲ್ಲೇ ಕುತೂಹಲ ಸೃಷ್ಟಿಸಿದೆ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಕೋಲ್ಕತಾ ನೈಟ್ ರೈಡರ್ಸ್  ಮೇಲುಗೈ ಸಾಧಿಸಿದೆ. ಬ್ಯಾಟಿಂಗ್ ಇಳಿದ ಪಂಜಾಬ್ ಕಿಂಗ್ಸ್ ಆರಂಭದಲ್ಲೇ ನಾಯಕ ಮಯಾಂಕ್ ಅಗರ್ವಾಲ್ ವಿಕೆಟ್ ಕಳೆದುಕೊಂಡಿತು.

ಆದರೆ ಭಾನುಕಾ ರಾಜಪಕ್ಸೆ ಸ್ಫೋಟಕ ಬ್ಯಾಟಿಂಗ್ ಪಂಜಾಬ್ ತಂಡದ ರನ್ ವೇಗ ಹೆಚ್ಚಿಸಿತು. ಕೇವಲ 9 ಎಸೆತದಲ್ಲಿ 3 ಬೌಂಡರಿ ಹಾಗೂ 3 ಸಿಕ್ಸರ್ ಮೂಲಕ 31 ರನ್ ಸಿಡಿಸಿ ಔಟಾದರು. ಇತ್ತ ಶಿಖರ್ ಧವನ್ 16 ರನ್ ಸಿಡಿಸಿ ಔಟಾದರು. ಲಿಯಾಮ್ ಲಿವಿಂಗ್ ಸ್ಟೋನ್ ಹಾಗೂ ರಾಜ್ ಬಾವಾ ಕೆಕೆಆರ್ ತಂಡಕ್ಕೆ ಆಸರೆಯಾಗಿದ್ದಾರೆ. 

IPL 2022 ಮೊಹಮ್ಮದ್ ಶಮಿ ಬೌಲಿಂಗ್​​ಗೆ ಪೋರ್ನ್​ ​​ಸ್ಟಾರ್​ ಕ್ಲೀನ್ ಬೌಲ್ಡ್..!

ಕೋಲ್ಕತಾ ನೈಟ್ ರೈಡರ್ಸ್ ಪ್ಲೇಯಿಂಗ್ 11
ಅಜಿಂಕ್ಯ ರಹಾನೆ, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ(ನಾಯಕ), ನಿತೀಶ್ ರಾಣಾ, ಸ್ಯಾಮ್ ಬಿಲ್ಲಿಂಗ್ಸ್, ಆ್ಯಂಡ್ರೆ ರಸೆಲ್, ಸುನಿಲ್ ನರೈನ್, ಟಿಮ್ ಸೌಥಿ, ಶಿವಂ ಮಾವಿ, ಉಮೇಶ್ ಯಾದಾವ್, ವರುಣ್ ಚಕ್ರವರ್ತಿ

ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ 11
ಮಯಾಂಕ್ ಅಗರ್ವಾಲ್(ನಾಯಕ), ಶಿಖರ್ ಧವನ್, ಲಿಯಾಮ್ ಲಿವಿಂಗ್‌ಸ್ಟೋನ್, ಬಾನುಕ ರಾಜಪಕ್ಸ, ಒಡೆನ್ ಸ್ಮಿತ್, ಶಾರುಖ್ ಖಾನ್, ಹರ್ಪ್ರೀತ್ ಬ್ರಾರ್, ರಾಜ್ ಬಾವ, ಕಾಗಿಸೋ ರಬಡಾ, ಅರ್ಶದೀಪ್ ಸಿಂಗ್, ರಾಹುಲ್ ಚಹಾರ್

IPL 2022: ಆಯುಷ್ ಬದೋನಿ ರಾತ್ರೋ ರಾತ್ರಿ ಹೀರೋ ಆಗಿದ್ದೇಗೆ..?

ಮಾರ್ಚ್ 30 ರಂದು ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೋಲ್ಕತಾ  ರೋಚಕ ಗೆಲುವು ಕಂಡಿತ್ತು. ಬೌಲರ್‌ಗಳ ಆಲ್ರೌಂಡ್‌ ಪ್ರದರ್ಶನದ ನೆರವಿನಿಂದ ರಾಯಲ್‌ ಚಾಲೆಂಜ​ರ್‍ಸ್ ಬೆಂಗಳೂರು ತಂಡ 15ನೇ ಆವೃತ್ತಿಯ ಐಪಿಎಲ್‌ನಲ್ಲಿ ಮೊದಲ ಗೆಲುವು ಸಾಧಿಸಿದೆ. ಬುಧವಾರ ಕೋಲ್ಕತಾ ನೈಟ್‌ರೈಡ​ರ್‍ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆರ್‌ಸಿಬಿ 3 ವಿಕೆಟ್‌ ಜಯ ಪಡೆದು ಖಾತೆ ತೆರೆಯಿತು. ಮೊದಲು ಫೀಲ್ಡ್‌ ಮಾಡಿದ ಆರ್‌ಸಿಬಿ, ಕೆಕೆಆರ್‌ ತಂಡವನ್ನು 18.5 ಓವರಲ್ಲಿ 128 ರನ್‌ಗೆ ನಿಯಂತ್ರಿಸಿತು. ಆ್ಯಂಡ್ರೆ ರಸೆಲ್‌ 25 ರನ್‌ ಗಳಿಸಿ ತಂಡದ ಪರ ಗರಿಷ್ಠ ರನ್‌ ಕಲೆಹಾಕಿದ ಬ್ಯಾಟರ್‌ ಎನಿಸಿದರು. ಆರ್‌ಸಿಬಿ ಪರ ವಾನಿಂಡು ಹಸರಂಗ 4, ಆಕಾಶ್‌ ದೀಪ್‌ 3, ಹರ್ಷಲ್‌ ಪಟೇಲ್‌ 2 ವಿಕೆಟ್‌ ಕಿತ್ತರು. ಸುಲಭ ಗುರಿ ಬೆನ್ನತ್ತಿದ ಆರ್‌ಸಿಬಿ 17 ರನ್‌ಗೆ 3 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ವಿಲ್ಲಿ(18), ರುಥರ್‌ಫೋರ್ಡ್‌(28), ಶಾಬಾಜ್‌(27) ಹೋರಾಟ ನಡೆಸಿದರು. ಕೊನೆಯಲ್ಲಿ ಹರ್ಷಲ್‌ ಹಾಗೂ ಕಾರ್ತಿಕ್‌ ತಂಡವನ್ನು ಗೆಲುವಿನ ದಡ ಸೇರಿಸಿದರು.

ಚಾಂಪಿಯನ್‌ ಚೆನ್ನೈಗೆ ಸತತ 2ನೇ ಸೋಲು
ಟಿ20 ತಜ್ಞರನ್ನೆಲ್ಲಾ ಒಟ್ಟುಗೂಡಿಸಿ ತಂಡ ಕಟ್ಟಿರುವ ಲಖನೌ ಸೂಪರ್‌ಜೈಂಟ್ಸ್‌ ಸ್ವಲ್ಪ ತಡವಾದರೂ ತನ್ನ ಸಾಮರ್ಥ್ಯವನ್ನು ತಾನಾಡಿದ 2ನೇ ಪಂದ್ಯದಲ್ಲಿ ಪ್ರದರ್ಶಿಸಿದೆ. ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್‌್ಸ ನೀಡಿದ 211 ರನ್‌ಗಳ ಬೃಹತ್‌ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿ 6 ವಿಕೆಟ್‌ಗಳ ಗೆಲುವು ಸಂಪಾದಿಸುವುದರೊಂದಿಗೆ ಐಪಿಎಲ್‌ನಲ್ಲಿ ಮೊದಲ ಬಾರಿಗೆ ಗೆಲುವಿನ ಸಂಭ್ರಮ ಆಚರಿಸಿದೆ. ಚೆನ್ನೈ ಐಪಿಎಲ್‌ ಇತಿಹಾಸದಲ್ಲೇ ಮೊದಲ ಬಾರಿಗೆ ಆವೃತ್ತಿಯೊಂದರಲ್ಲಿ ಮೊದಲೆರಡು ಪಂದ್ಯಗಳನ್ನು ಸೋತು ನಿರಾಸೆ ಅನುಭವಿಸಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಮತ್ತಷ್ಟು ಪಾತಾಳಕ್ಕೆ ಕುಸಿದ ಟೀಂ ಇಂಡಿಯಾ!
ವಿರಾಟ್ ಕೊಹ್ಲಿಯಲ್ಲ, ಈ ಆಟಗಾರ ಹೆಚ್ಚು ಹಾರ್ಡ್‌ ವರ್ಕ್ ಮಾಡುವ ಆಟಗಾರ ಎಂದ ಯಶಸ್ವಿ ಜೈಸ್ವಾಲ್!