IPL 2022 ಮೊಹಮ್ಮದ್ ಶಮಿ ಬೌಲಿಂಗ್​​ಗೆ ಪೋರ್ನ್​ ​​ಸ್ಟಾರ್​ ಕ್ಲೀನ್ ಬೌಲ್ಡ್..!

Published : Apr 01, 2022, 05:56 PM IST
IPL 2022 ಮೊಹಮ್ಮದ್ ಶಮಿ ಬೌಲಿಂಗ್​​ಗೆ ಪೋರ್ನ್​ ​​ಸ್ಟಾರ್​ ಕ್ಲೀನ್ ಬೌಲ್ಡ್..!

ಸಾರಾಂಶ

* ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ತೋರುತ್ತಿರುವ ಮೊಹಮ್ಮದ್ ಶಮಿ * ಶಮಿ ಬೌಲಿಂಗ್ ಪ್ರದರ್ಶನಕ್ಕೆ ಪೋರ್ನ್​ ಸ್ಟಾರ್​​ ಫಿದಾ * ಗುಜರಾತ್ ಪರ ಈ ಸಲ ಐಪಿಎಲ್ ಆಡ್ತಿರೋ ಶಮಿ

ಬೆಂಗಳೂರು(ಏ.01): ಮೊಹಮ್ಮದ್ ಶಮಿ(Mohammed Shami). ಹುಟ್ಟಿದ್ದು ಉತ್ತರ ಪ್ರದೇಶದಲ್ಲಾದ್ರೂ ಡೊಮೆಸ್ಟಿಕ್ ಕ್ರಿಕೆಟ್ ಆಡಿದೆಲ್ಲಾ ಬೆಂಗಾಲ್​​ನಲ್ಲಿ. ಈಗ ಟೀಂ ಇಂಡಿಯಾ ಕಾಯಂ ಸದಸ್ಯ. ಪರ್ಸನಲ್ ಲೈಫ್​ನಲ್ಲಿ ಒಂದು ವಿವಾದವಾಗಿದ್ದು ಬಿಟ್ಟರೆ, ಈ ಬೆಂಗಾಳಿ ಫಾಸ್ಟ್ ಬೌಲರ್ ವೃತ್ತಿ ಜೀವನದಲ್ಲಿ ಒಂದೇ ಒಂದು ವಿವಾದವನ್ನೂ ಮಾಡಿಕೊಂಡಿಲ್ಲ. ತಾನಾಯಿತು ತನ್ನ ಬೌಲಿಂಗ್ ಆಯ್ತು ಅನ್ನೋ ಹಾಗೆ ಇದ್ದಾರೆ. ಈಗಲೂ ಮೂರು ಫಾಮ್ಯಾಟ್​​ನಲ್ಲಿ ಶಮಿಗೆ ಪರ್ಮನೆಂಟ್ ಪ್ಲೇಸ್ ಇದೆ. ಶಮಿ, ಸ್ವಿಂಗ್ ಮಾಸ್ಟರ್ ಎಂದೇ ಫೇಮಸ್. ಹೊಸ ಬಾಲ್ ಇರಲಿ, ಹಳೆ ಬಾಲ್ ಇರಲಿ. ಸ್ವಿಂಗ್ ಮಾಡೋದ್ರಲ್ಲಿ ಎಕ್ಸ್​ ಫರ್ಟ್​. 

ಶಮಿ ಬೌಲಿಂಗ್​​ಗೆ ಅಮೆರಿಕಾದ ಪೋರ್ನ್​ ಸ್ಟಾರ್​​ ಫಿದಾ:

ಮೊನ್ನೆ ಸೋಮವಾರ ಐಪಿಎಲ್​ನಲ್ಲಿ ಲಖನೌ ಸೂಪರ್ ಜೈಂಟ್ಸ್ (Lucknow Super Giants) ಮತ್ತು ಗುಜರಾತ್ ಟೈಟಾನ್ಸ್ (Gujarat Titans) ಮುಖಾಮುಖಿಯಾಗಿದ್ದವು. ಗುಜರಾತ್ ಪರ ಈ ಸಲ ಐಪಿಎಲ್ ಆಡ್ತಿರೋ ಶಮಿ, ಲಕ್ನೋ ಕ್ಯಾಪ್ಟನ್ ರಾಹುಲ್ ಸೇರಿದಂತೆ ಮೂವರನ್ನ ಔಟ್ ಮಾಡಿದ್ರು. ಅಂದು ಶಮಿ ಸ್ವಿಂಗ್ ಬೌಲಿಂಗ್​​ಗೆ ಲಖನೌ ಮಾತ್ರ ಕ್ಲೀನ್ ಬೌಲ್ಡ್ ಆಗಲಿಲ್ಲ. ಲಕ್ನೋ ಮಾತ್ರ ಪಂದ್ಯ ಸೋಲಲಿಲ್ಲ. ಅಂದಿನ ಶಮಿ ಬೌಲಿಂಗ್​​​ಗೆ ಅಮೆರಿಕಾದ ಪೋರ್ನ್​ ಸ್ಟಾರ್​ ಕೂಡ ಕ್ಲೀನ್ ಬೌಲ್ಡ್ ಆಗಿದ್ದಾಳೆ. ಬೆಂಗಾಳಿ ಬೌಲರ್ ಇನ್​​ಸ್ವಿಂಗ್​​ಗೆ ಮನ ಸೋತು ಟ್ವೀಟರ್​ನಲ್ಲಿ ಟ್ವೀಟ್ ಸಹ ಮಾಡಿದ್ದಾಳೆ.

ಅಂದು 4 ಓವರ್ ಬೌಲಿಂಗ್ ಮಾಡಿದ ಶಮಿ, 25 ರನ್ ಬಿಟ್ಟುಕೊಟ್ಟು 3 ವಿಕೆಟ್ ಪಡೆದಿದ್ದರು. ಎರಡು ಕ್ಲೀನ್ ಬೌಲ್ಡ್ ಸಹ ಮಾಡಿದ್ದರು. ಅತ್ಯಂತ ಶ್ರೇಷ್ಠ  ನಿರ್ವಹಣೆ ಮೊಹಮ್ಮದ್ ಶಮಿ ಅಂತ ಅಮೆರಿಕಾದ ಕೆಂಡ್ರ ಲಸ್ಟ್​ ಟ್ವೀಟ್ ಮಾಡಿದ್ದಾಳೆ. 43 ವರ್ಷದ ಪೋರ್ನ್​ ಸ್ಟಾರ್​(Porn Star),  ಕೆಕೆಆರ್ ತಂಡದ ಅಭಿಮಾನಿಯೂ ಆಗಿದ್ದು, ಕೆಕೆಆರ್​ ಲಾಂಛನದ ಟೀ ಶರ್ಟ್​ ಧರಿಸಿದ ಚಿತ್ರವನ್ನೂ ಪ್ರಕಟಿಸಿ ಗಮನ ಸೆಳೆದಿದ್ದಾಳೆ.

ಪೋರ್ನ್​ ಸ್ಟಾರ್ ಟ್ವೀಟ್​ ಶಮಿ ಫುಲ್ ಟ್ರೋಲ್:

ಅಮೆರಿಕದ ನೀಲಿ ಚಿತ್ರಗಳ ನಟಿ ಕೆಂಡ್ರ ಲಸ್ಟ್(Kendra Lust). ಈಕೆಯ ಗಂಡ ಪೊಲೀಸ್ ಆಫೀಸರ್​. ಶಮಿ ಬೌಲಿಂಗ್​​ಗೆ ಫಿದಾ ಆಗಿ ಕೆಂಡ್ರ ಲಸ್ಟ್ ಟ್ವೀಟ್ ಮಾಡುತ್ತಿದಂತೆ ಶಮಿ ಫುಲ್ ಟ್ರೋಲ್ ಆಗ್ತಿದ್ದಾರೆ. ನೆಟ್ಟಿಗರು ವಿವಿಧ ಮೀಮ್ಸ್​ ಮೂಲಕ ಶಮಿ ಕಾಲೆಳೆದಿದ್ದಾರೆ. ಹಾಗೆ ಕೆಂಡ್ರ ಲಿಸ್ಟ್​​ಗೆ ಕ್ರಿಕೆಟ್ ಮತ್ತು ಐಪಿಎಲ್ (IPL) ಬಗ್ಗೆ ಇರೋ ಆಸಕ್ತಿ ಬಗ್ಗೆಯೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕೆಲವರಂತೂ ಕೆಂಡ್ರ ಲಿಸ್ಟ್​ ಈಗ ಮೊಹಮ್ಮದ್ ಶಮಿ ಪ್ರೀತಿಯಲ್ಲಿ ಬಿದ್ದಿದಾಳೆ ಎಂದು ಅನೇಕರು ಕಾಮೆಂಟ್ ಹಾಕಿದ್ದಾರೆ. ಆಕೆಯ ಒಂದೇ ಒಂದು ಟ್ವೀಟ್​ನಿಂದ ಶಮಿ ಫುಲ್ ಟ್ರೋಲ್ ಆಗ್ತಿದ್ದಾರೆ.

ಶಮಿಗೂ ಕೆಂಡ್ರ ಲಿಸ್ಟ್​​ಗೂ ಹೇಗೆ ಪರಿಚಯ ಗೊತ್ತಾ..?:

ಮೊಹಮ್ಮದ್ ಶಮಿ ಟೀಂ ಇಂಡಿಯಾದ (Team India) ಲವರ್ ಬಾಯ್, ಅವರ ಬೌಲಿಂಗ್​ಗೆ ಫಿದಾ ಆಗದವರೇ ಇಲ್ಲ. ಭಾರತದ ಪರ ಶಮಿ ಆಡುವಾಗಲೂ, ಕೆಕೆಆರ್ ಪರ ಆಡುವಾಗಲೂ ಕೆಂಡ್ರ ಲಸ್ಟ್ ಟ್ವೀಟ್ ಮಾಡಿದ್ದಾಳೆ. ಹಾಗೆ ಈಗ ಟೈಟನ್ಸ್ ಪರ ಆಡುವಾಗಲೂ ಟ್ವೀಟ್ ಮಾಡಿದ್ದಾಳೆ ಅಷ್ಟೆ. ಈ ಇಬ್ಬರಿಗೆ ಒಬ್ಬರಿಗೊಬ್ಬರ ಪರಿಚಯ ಇದ್ಯಾ ಅನ್ನೋದು ಮಾತ್ರ ಗೊತ್ತಿಲ್ಲ. ಆದ್ರೂ ಕೆಂಡ್ರ ಲಸ್ಟ್​ನ ಒಂದೇ ಒಂದು ಟ್ವೀಟ್​ಗೆ ಶಮಿ ಮಾತ್ರ ಟ್ರೋಲ್ ಮೇಲೆ ಟ್ರೋಲ್ ಆಗ್ತಿರೋದಂತೂ ಸುಳ್ಳಲ್ಲ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Mock Auction: 30.5 ಕೋಟಿ ರೂಪಾಯಿ ದಾಖಲೆ ಮೊತ್ತಕ್ಕೆ ಕೆಕೆಆರ್‌ಗೆ ಕ್ಯಾಮರೂನ್‌ ಗ್ರೀನ್‌!
ಐಪಿಎಲ್ ಹರಾಜು ಇತಿಹಾಸದಲ್ಲೇ ಟಾಪ್ 6 ದುಬಾರಿ ಆಟಗಾರರಿವರು!