
ಮುಂಬೈ(ಮೇ.12): 15ನೇ ಸೀಸನ್ ಐಪಿಎಲ್ (IPL 2022) ಮುಗಿತಾ ಬರ್ತಿದೆ. ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್ ಗೆಲ್ಲಲು ಬೌಲರ್ಗಳ ಮಧ್ಯೆ ಫೈಟ್ ಬಿದ್ದಿದೆ. ಟೀಂ ಇಂಡಿಯಾದಿಂದ (Team India) ಡ್ರಾಪ್ ಆಗಿ ಅವಮಾನ ಅನುಭವಿಸಿದ್ದ ಕುಲ್ಚಾ ಜೋಡಿ ಈ ಸಲ ಪರ್ಪಪ್ ಕ್ಯಾಪ್ ಗೆಲ್ಲೋ ರೇಸ್ನಲ್ಲಿದೆ. ಯುಜವೇಂದ್ರ ಚಹಲ್ ಮತ್ತು ಕುಲ್ದೀಪ್ ಯಾದವ್ ವಿಕೆಟ್ಗಳ ಮೇಲೆ ವಿಕೆಟ್ ಪಡೆದು ಈ ಸೀಸನ್ನಲ್ಲಿ ಗರಿಷ್ಠ ವಿಕೆಟ್ ಟೇಕರ್ ಎನಿಸಿಕೊಳ್ಳಲು ಹೋರಾಟ ನಡೆಸ್ತಿದ್ದಾರೆ. ಆದ್ರೆ ಈ ಇಬ್ಬರ ನಡುವೆ ಮತ್ತೊಬ್ಬ ಸ್ಪಿನ್ನರ್ ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದರೂ ಆತನ ಸಾಧನೆ ಮಾತ್ರ ಯಾರ ಕಣ್ಣಿಗೂ ಕಾಣ್ತಿಲ್ಲ. ಆತನೇ ಸುನಿಲ್ ನರೇನ್ (Sunil Narine).
ಜಸ್ಟ್ 5ರ ಎಕಾನಮಿಯಲ್ಲಿ ನರೇನ್ ಬೌಲಿಂಗ್:
ಟಿ20 ಕ್ರಿಕೆಟ್ನಲ್ಲಿ ಪಂದ್ಯ ಟೈ ಆದ್ರೆ ಸೂಪರ್ ಓವರ್ ನಡೆಸಲಾಗುತ್ತೆ. ಆ ಸೂಪರ್ ಓವರ್ನಲ್ಲಿ ಬ್ಯಾಟರ್ಗಳು ರನ್ ಹೊಳೆಯನ್ನೇ ಹರಿಸ್ತಾರೆ. ಆದ್ರೆ ಅದೇ ಸೂಪರ್ ಓವರ್ನಲ್ಲಿ ಮೇಡನ್ ಮಾಡಿರೋ ಏಕೈಕ ಬೌಲರ್ ಅಂದ್ರೆ ಅದು ವೆಸ್ಟ್ ಇಂಡೀಸ್ನ ಸುನಿಲ್ ನರೇನ್. ಹೌದು, ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಮೇಡನ್ ಸೂಪರ್ ಓವರ್ ಮಾಡಿದ್ದಾರೆ ಸುನಿಲ್. ಈ ಮೂಲಕ ಸೂಪರ್ ಓವರ್ನಲ್ಲಿ ಮೇಡನ್ ಮಾಡಿರೋ ವಿಶ್ವದ ಏಕೈಕ ಬೌಲರ್ ಎನಿಸಿಕೊಂಡಿದ್ದಾರೆ.
IPL 2022: ಚೆನ್ನೈ ಫ್ರಾಂಚೈಸಿ ಜೊತೆ ಕಿರಿಕ್ ಮಾಡಿಕೊಂಡ್ರಾ ರವೀಂದ್ರ ಜಡೇಜಾ?
ಐಪಿಎಲ್‌ನಲ್ಲಿ ಕೆಕೆಆರ್ (Kolkata Knight Riders) ಪರ ಆಡುತ್ತಿರುವ ಸುನಿಲ್ ನರೇನ್ ಅದ್ಭುತವಾಗಿ ಬೌಲಿಂಗ್ ಮಾಡ್ತಿದ್ದಾರೆ. ಆದರೆ ಕೆಕೆಆರ್ 12 ಪಂದ್ಯಗಳಿಂದ ಕೇವಲ ಐದನ್ನು ಗೆದ್ದಿದೆ. ಹಾಗಾಗಿ ನರೇನ್ ಸಾಧನೆ ಯಾರ ಕಣ್ಣಿಗೆ ಕಾಣ್ತಿಲ್ಲ. 12 ಮ್ಯಾಚ್ನಿಂದ 8 ವಿಕೆಟ್ ಪಡೆದು ನರೇನ್ ನಿರಾಸೆ ಮೂಡಿಸಿರಬಹುದು. ಆದ್ರೆ 5ರ ಎಕಾನಮಿಯಲ್ಲಿ ರನ್ ನೀಡಿದ್ದಾರೆ. ಈ ಸೀಸನ್ ಐಪಿಎಲ್‌ನಲ್ಲಿ ಇಷ್ಟು ಕಡಿಮೆ ಎಕಾನಮಿಯಲ್ಲಿ ಯಾರೊಬ್ಬರೂ ಬೌಲಿಂಗ್ ಮಾಡಿಲ್ಲ. ಈ ಸಾಧನೆಗೆ ನರೇನ್ಗೆ ಹ್ಯಾಟ್ಸ್ ಅಪ್ ಹೇಳಲೇಬೇಕು. ಸುನೀಲ್ ನರೇನ್ ಈ ಸೀಸನ್ ಐಪಿಎಲ್‌ನಲ್ಲಿ 12 ಪಂದ್ಯಗಳಿಂದ 48 ಓವರ್ ಬೌಲಿಂಗ್ ಮಾಡಿದ್ದಾರೆ. 5.22ರ ಎಕಾನಮಿಯಲ್ಲಿ ರನ್ ನೀಡಿ 8 ವಿಕೆಟ್ ಪಡೆದಿದ್ದಾರೆ. 48 ಓವರ್ನಿಂದ ಅವರು ನೀಡಿರೋ ರನ್ 251.
ಐಪಿಎಲ್‌ನಲ್ಲಿ ಎಲ್ಲಾ ಸ್ಲಾಟ್ನಲ್ಲೂ ಬ್ಯಾಟಿಂಗ್ ಮಾಡಿರುವ ಏಕೈಕ ಆಟಗಾರ:
33 ವರ್ಷದ ನರೇನ್ ಕೇವಲ ಸ್ಪಿನ್ನರ್ ಮಾತ್ರವಲ್ಲ, ಅದ್ಭುತ ಬ್ಯಾಟರ್ ಕೂಡ. ಯಾವುದೇ ಕ್ರಮಾಂಕದಲ್ಲೂ ಬ್ಯಾಟಿಂಗ್ ಮಾಡೋ ತಾಕತ್ತು ಈ ವಿಂಡೀಸ್ ಪ್ಲೇಯರ್ಗಿದೆ. ಐಪಿಎಲ್‌ನಲ್ಲಿ ಎಲ್ಲಾ ಕ್ರಮಾಂಕದಲ್ಲೂ ಬ್ಯಾಟಿಂಗ್ ಮಾಡಿರುವ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ. ಆದರೆ ಈ ಸೀಸನ್ನಲ್ಲಿ ಮಾತ್ರ ಯಾಕೋ ಅವರ ಬ್ಯಾಟ್ ಸೈಲೆಂಟ್ ಆಗಿದೆ. ಟಿ20 ಕ್ರಿಕೆಟ್ನಲ್ಲಿ ಸಿಕ್ಕ ಸಿಕ್ಕ ಬೌಲರ್ಗಳನ್ನ ದಂಡಿಸೋ ಬ್ಯಾಟರ್ಗಳು, ನರೇನ್ ಎದುರು ಸೈಲೆಂಟ್ ಆಗಿ ಹೋಗಿದ್ದಾರೆ. ಇದೇ ಸುನಿಲ್ ನರೇನ್ ತಾಕತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.