1 ರನ್ ಗೆ 8 ಲಕ್ಷ..! ಮುಂಬೈ ಇಂಡಿಯನ್ಸ್ ಗೆ ಸಖತ್ ದುಬಾರಿಯಾದ ಇಶಾನ್ ಕಿಶನ್!

Published : Apr 27, 2022, 04:48 PM IST
1 ರನ್ ಗೆ 8 ಲಕ್ಷ..! ಮುಂಬೈ ಇಂಡಿಯನ್ಸ್ ಗೆ ಸಖತ್ ದುಬಾರಿಯಾದ ಇಶಾನ್ ಕಿಶನ್!

ಸಾರಾಂಶ

ಈ ಬಾರಿಯ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಪಾಲಿನ ದುಬಾರಿ ಖರೀದಿ ಇಶಾನ್ ಕಿಶನ್. 15.25 ಕೋಟಿ ರೂಪಾಯಿಗೆ ಇಶಾನ್ ಕಿಶನ್ ಮುಂಬೈ ತಂಡದ ಪಾಲಾಗಿದ್ದ ಈವರೆಗೂ ಆಡಿದ 8 ಪಂದ್ಯಗಳಿಂದ 191 ರನ್ ಬಾರಿಸಿದ್ದಾರೆ. ಅದರ್ ಅರ್ಥ ಲೀಗ್ ನಲ್ಲಿ ಅವರು ಬಾರಿಸಿದ ಪ್ರತಿ 1 ರನ್ ಗೆ ಮುಂಬೈ ತಂಡ 8 ಲಕ್ಷ ರೂಪಾಯಿ ವೆಚ್ಚ ಮಾಡಿದೆ.

ಮುಂಬೈ (ಏ.27): ಈವರೆಗೂ ಐಪಿಎಲ್ ನಲ್ಲಿ (IPL) ಯಾವ ತಂಡ ಕೂಡ ಸತತ 8 ಪಂದ್ಯಗಳಲ್ಲಿ ಸೋಲು ಕಂಡ ಉದಾಹರಣೆಯೇ ಇಲ್ಲ. ಅಂಥದ್ದರಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ( Mumbai Indians ) ತಂಡ ಅಂಥದ್ದೊಂದು ಅವಮಾನಕ್ಕೆ ತುತ್ತಾಗಿದೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ನೊಂದಿಗೆ ಮ್ಯಾಚ್ ನ ಪ್ರತಿಯೊಂದು ವಿಭಾಗದಲ್ಲೂ ಸೋಲು ಕಂಡಿರುವ ಮುಂಬೈ ಈಗಾಗಲೇ ಪ್ಲೇ ಆಫ್  (Play Off)  ರೇಸ್ ನಿಂದ ಹೊರಬಿದ್ದ ಮೊದಲ ತಂಡ ಎನಿಸಿಕೊಂಡಿದೆ.

ಇಲ್ಲಿಯವರೆಗೂ ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಗಳಲ್ಲಿ ಇರುತ್ತಿದ್ದ ಮುಂಬೈ ಇಂಡಿಯನ್ಸ್ ತಂಡಕ್ಕೆ ಈ ಬಾರಿ ಅಂಕಪಟ್ಟಿಯಲ್ಲಿ ಕೆಳಸ್ಥಾನದಲ್ಲಿರುವ ಅನುಭವವಾಗುತ್ತಿದೆ. ಹರಾಜಿನಲ್ಲಿ ಕೋರ್ ಟೀಮ್ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಹಳ ಶ್ರಮವಹಿಸಿದ್ದ ಮುಂಬೈ ಇಂಡಿಯನ್ಸ್, ಆರಂಭಿಕ ಆಟಗಾರ ಇಶಾನ್ ಕಿಶನ್ (Ishan Kishan) ಅನ್ನು ದೊಡ್ಡ ಮೊತ್ತಕ್ಕೆ ಖರೀದಿ ಮಾಡಿತ್ತು. 2022ರ ಐಪಿಎಲ್ ಹರಾಜಿನ ಅತ್ಯಂತ ದುಬಾರಿ ಆಟಗಾರನಾಗಿದ್ದವವರು ಇಶಾನ್ ಕಿಶನ್. ಅದರೆ, ಅವರಿಗೆ ಕೊಟ್ಟ ಹಣಕ್ಕೆ ತಕ್ಕೆ ಮೌಲ್ಯಯುತ ಪ್ರದರ್ಶನ ಇಶಾನ್ ಕಿಶನ್ ಅವರಿಂದ ದಾಖಲಾಗಿಲ್ಲ. ಎಡಗೈ ಬ್ಯಾಟ್ಸ್ ಮನ್ ಇವರೆಗೂ ಆಡಿದ್ದ ಎಂಟು ಪಂದ್ಯಗಳಿಂದ 28.43ರ ಸರಾಸರಿಯಲ್ಲಿ ಕೇವಲ 199 ರನ್ ಬಾರಿಸಿದ್ದಾರೆ.

ಕಳೆದ ಆರು ಪಂದ್ಯಗಳಲ್ಲಿ ಫ್ಲಾಪ್ ಶೋ: ಇಶಾನ್ ಕಿಶನ್ ಈ ಬಾರಿ ಐಪಿಎಲ್ ನಲ್ಲೂ ಸತತ ಎರಡು ಅರ್ಧಶತಕದ ಇನ್ನಿಂಗ್ಸ್ ಮೂಲಕ ಆರಂಭಿಸಿದರು. ಡೆಲ್ಲಿ ಕ್ಯಾಪಿಟಲ್ಸ್  (Delhi Capitals) ವಿರುದ್ಧದ ಮೊದಲ ಪಂದ್ಯದಲ್ಲಿ ಸೂಪರ್ ನಿರ್ವಹಣೆ ತೋರಿದ್ದ ಇಶಾನ್ ಕಿಶನ್ 48 ಎಸೆತಗಳಲ್ಲಿ 81 ರನ್ ಸಿಡಿಸಿದ್ದರು. 11 ಬೌಂಡರಿ ಹಾಗೂ 2 ಸಿಕ್ಸರ್ ಇದರಲ್ಲಿ ಸಿಡಿಸಿದ್ದರು. ಆ ಬಳಿಕ ನಡೆದ ರಾಜಸ್ಥಾನ ರಾಯಲ್ಸ್ (Rajasthan Royals) ವಿರುದ್ಧದ ಪಂದ್ಯದಲ್ಲಿ ಮಿಂಚಿದ್ದ ಇಶಾನ್ ಕಿಶನ್, 43 ಎಸೆತಗಳಲ್ಲಿ 54 ರನ್ ಬಾರಿಸಿದ್ದರು. ಆದರೆ, ಆ ಬಳಿಕ ಆಡಿದ 6 ಪಂದ್ಯಗಳಲ್ಲಿ ಕ್ರಮವಾಗಿ 14, 26, 3, 13, 0 ಮತ್ತು 8 ರನ್ ಬಾರಿಸಿದ್ದಾರೆ. ಅಂದರೆ, ಟೂರ್ನಿ ಕಳೆದಂತೆ ಇಶಾನ್ ಕಿಶನ್ ಫಾರ್ಮ್ ನಲ್ಲೂ ಇಳಿಕೆಯಾಗಿದೆ.

IPL 2022: ಎಂಟು ಸೋಲಿನ ಬೆನ್ನಲ್ಲೇ ಭಾವನಾತ್ಮಕ ಸಂದೇಶ ರವಾನಿಸಿದ ರೋಹಿತ್ ಶರ್ಮಾ

ಇಶಾನ್ ಕಿಶನ್ ಬಾರಿಸುವ 1 ರನ್ ಗೆ 7.66 ಲಕ್ಷ: ಇಶಾನ್ ಕಿಶನ್ ಅವರನ್ನು ಮುಂಬೈ ಇಂಡಿಯನ್ಸ್ ತಂಡ ಖರೀದಿ ಮಾಡಿರುವ ಮೊತ್ತ ಹಾಗೂ ಅವರು ಈವರೆಗೂ ಬಾರಿಸಿರುವ ರನ್ ಗಳನ್ನು ಲೆಕ್ಕ ಹಾಕಿದರೆ, 2022 ಐಪಿಎಲ್ ನಲ್ಲಿ ಅವರು ಬಾರಿಸಿದ ಪ್ರತಿ ರನ್ ಗೆ ಅಂದಾಜು 7.66 ಲಕ್ಷ ರೂಪಾಯಿ ಪಡೆದುಕೊಳ್ಳುತ್ತಿದ್ದಾರೆ. ಪ್ರತಿ ರನ್ ಗೆ 8 ಲಕ್ಷ ರೂಪಾಯಿ ಪಡೆದುಕೊಳ್ಳುವ ಇಶಾನ್ ಕಿಶನ್, ಮುಂಬೈ ಇಂಡಿಯನ್ಸ್ ಪಾಲಿಗೆ ದುಬಾರಿಯಾಗಿರುವುದಂತೂ ಸತ್ಯ. 

IPL 2022: ಮುಂಬೈ ಪ್ಲೇ ಆಫ್ ಕನಸು ಭಗ್ನ, ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆದ ಮೀಮ್ಸ್‌ಗಳಿವು..!

ಗುಜರಾತ್ ಲಯನ್ಸ್ ವಿರುದ್ಧ ಆಡುವ ಮೂಲಕ ಐಪಿಎಲ್ ಗೆ ಪದಾರ್ಪಣೆ ಮಾಡಿದ್ದ ಇಶಾನ್ ಕಿಶನ್, 2018ರ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡ ಇವರನ್ನು6.2 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. 2020 ಐಪಿಎಲ್ ಇಶಾನ್ ಕಿಶನ್ ಪಾಲಿಗೆ ಜಾಕ್ ಪಾಟ್ ಎನಿಸಿತ್ತು. ಈ ಟೂರ್ನಿಯಲ್ಲಿ ಆಡಿದ 14 ಪಂದ್ಯಗಳಿಂದ 516 ರನ್ ಬಾರಿಸಿದ್ದ ಇಶಾನ್ ಕಿಶನ್, ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಗರಿಷ್ಠ ರನ್ ಪೇರಿಸಿದ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದರು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಸ್ಮೃತಿ ಮಂಧನಾ ಮದುವೆ ಮುರಿದ ಬಳಿಕ ಟೀಮ್‌ ಇಂಡಿಯಾ ಆಟಗಾರ್ತಿಯರ ಮಹಾ ನಿರ್ಧಾರ!