IPL 2022 ಬ್ರ್ಯಾಂಡ್ ಸಿಎಸ್​ಕೆ ಅಲ್ಲ, ಬ್ರ್ಯಾಂಡ್ ಎಂಎಸ್ ಧೋನಿ..!

By Suvarna News  |  First Published Apr 27, 2022, 4:09 PM IST

* ವಯಸ್ಸು ನಲವತ್ತಾದರೂ ಇನ್ನೂ ಖದರ್ ಉಳಿಸಿಕೊಂಡಿರುವ ಮಹೇಂದ್ರ ಸಿಂಗ್ ಧೋನಿ

* ಧೋನಿ ಆಟ ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಾರೆ ಅಭಿಮಾನಿಗಳು

* ಚೆನ್ನೈ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯವನ್ನು ಬರೋಬ್ಬರಿ 8.3 ಮಿಲಿಯನ್ ಮಂದಿ ವೀಕ್ಷಣೆ


ಬೆಂಗಳೂರು(ಏ.27): ಬ್ರ್ಯಾಂಡ್ ಅಂದರೆ ಆ ಹೆಸರಿನಲ್ಲಿ ಒಂದು ಗತ್ತಿದೆ, ಅದು ಎಲ್ಲರಿಗೂ ಗೊತ್ತಿರುತ್ತೆ. ಇದು ಜಸ್ಟ್ ಕೆಜಿಎಫ್ ಮೂವಿ ಡೈಲಾಗ್ ಮಾತ್ರವಲ್ಲ, ಇಡೀ ಐಪಿಎಲ್​ ಅನ್ನು ಹಿಡಿದಿಟ್ಟಿರೋ ಬ್ರ್ಯಾಂಡ್. ಹೌದು, ಕಲರ್ ಫುಲ್ ಟೂರ್ನಿಯಲ್ಲಿ ಆಟಕ್ಕೆ ಬೆಲೆ ಇಲ್ಲ. ಇಲ್ಲಿ ಬ್ರ್ಯಾಂಡ್​ಗೆ ಮಾತ್ರ ಬೆಲೆ. ಕೆಎಲ್ ರಾಹುಲ್ (KL Rahul), ಜೋಸ್ ಬಟ್ಲರ್​ ಎರೆಡೆರಡು ಸೆಂಚುರಿಗಳನ್ನ ಸಿಡಿಸಿದ್ರು. ರಾಹುಲ್ ತೆವಾಟಿಯಾ, ಡೇವಿಡ್ ಮಿಲ್ಲರ್ ಕೊನೆ ಬಾಲ್​ನಲ್ಲಿ ಸಿಕ್ಸ್ ಬಾರಿಸಿ ಪಂದ್ಯಗಳನ್ನ ಗೆಲ್ಲಿಸಿದ್ದಾರೆ. ಆದ್ರೆ ಆ ಪಂದ್ಯಗಳನ್ನ ಯಾರೂ ನೋಡಲಿಲ್ಲ. ಆ ಮ್ಯಾಚ್​ಗಳಿಗೆ ರೇಟಿಂಗ್ ಸಹ ಬರಲಿಲ್ಲ. ಆದ್ರೆ ಐಪಿಎಲ್​ನಲ್ಲಿ ಒಂದು ಬ್ರ್ಯಾಂಡ್ ಇದೆಯಲ್ಲಾ. ಆ ಬ್ರ್ಯಾಂಡ್​ ಕ್ರೀಸಿನಲ್ಲಿದ್ದರೆ, ಲಕ್ಷಾಂತರ ಮಂದಿ ಟಿವಿ ಮುಂದೆ ಕೂತು ಬಿಡ್ತಾರೆ. ಆ ಬ್ರ್ಯಾಂಡೇ ಮಹೇಂದ್ರ ಸಿಂಗ್ ಧೋನಿ(Mahendra Singh Dhoni).

ಆ ಎರಡು ತಂಡಗಳ ಪಂದ್ಯವನ್ನ ವೀಕ್ಷಿಸಿದವರ ಸಂಖ್ಯೆ ಎಷ್ಟು ಗೊತ್ತಾ..?:

Tap to resize

Latest Videos

ಈ ಸೀಸನ್ ಐಪಿಎಲ್​ನಲ್ಲಿ ತೀರ ಕಳಪೆ ಪ್ರದರ್ಶನ ನೀಡಿ, ಲೀಗ್​ನಿಂದಲೇ ಹೊರಬೀಳಲು ರೆಡಿಯಾಗಿರುವ ತಂಡಗಳೆಂದರೆ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಮತ್ತು ಮುಂಬೈ ಇಂಡಿಯನ್ಸ್ (Mumbai Indians). ಈ ಎರಡು ಟೀಮ್ಸ್ ಏಪ್ರಿಲ್​ 21ರಂದು ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಿದ್ದವು. ಕೊನೆ 4 ಬಾಲ್​ನಲ್ಲಿ ಸಿಎಸ್​ಕೆ ಗೆಲುವಿಗೆ 16 ರನ್ ಬೇಕಿತ್ತು. ಕ್ರೀಸಿನಲ್ಲಿದ್ದ ಎಂಎಸ್ ಧೋನಿ, ಬೌಂಡ್ರಿ, ಸಿಕ್ಸರ್​ಗಳನ್ನ ಸಿಡಿಸಿ ಪಂದ್ಯ ಗೆಲ್ಲಿಸಿದ್ರು. ಆ ಪಂದ್ಯದ ವೀಕ್ಷಕರ ಸಂಖ್ಯೆ ಈ ಐಪಿಎಲ್​ನಲ್ಲೇ ಅತ್ಯಧಿಕ. ಪಾಯಿಂಟ್ ಟೇಬಲ್​ನಲ್ಲಿ ಕೊನೆ ಸ್ಥಾನದಲ್ಲಿದ್ದರೂ ವೀವರ್​ಶಿಪ್​​​ನಲ್ಲಿ ಮಾತ್ರ ಈ ಪಂದ್ಯ ದಾಖಲೆ ಬರೆದಿದೆ.

8 ಮಿಲಿಯನ್​ಗೂ ಹೆಚ್ಚು ಮಂದಿಯಿಂದ ಪಂದ್ಯ ವೀಕ್ಷಣೆ:

ಯೆಸ್, ಚೆನ್ನೈ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯವನ್ನು ಅಂದು ಬರೋಬ್ಬರಿ 8.3 ಮಿಲಿಯನ್ ಅಂದರೆ 83 ಲಕ್ಷ ಮಂದಿ ಹಾಟ್ ಸ್ಟಾರ್​​ನಲ್ಲಿ ವೀಕ್ಷಿಸಿದ್ದಾರೆ. ಇನ್ನು ಸಿಎಸ್​ಕೆ ಹಾಗೂ ಆರ್​​ಸಿಬಿ ಪಂದ್ಯವನ್ನ 82 ಮಂದಿ ವೀಕ್ಷಿಸಿದ್ದರೆ, ಮೊನ್ನೆ ಚೆನ್ನೈ-ಪಂಜಾಬ್ ಮ್ಯಾಚನ್ನು 81 ಲಕ್ಷ ಮಂದಿ ನೋಡಿದ್ದಾರೆ. ಇದು ಬರೀ ಹಾಟ್ ಸ್ಟಾರ್​ನಲ್ಲಿ ಮಾತ್ರ. 80 ಲಕ್ಷಕ್ಕೂ ಅಧಿಕ ಪಂದ್ಯ ವೀಕ್ಷಿಸಿರುವ ಮೂರು ಪಂದ್ಯಗಳೂ ಸಿಎಸ್​ಕೆ ಆಡಿದ್ದು ಅನ್ನೋದೇ ವಿಶೇಷ. ಮುಂಬೈ-ಆರ್​ಸಿಬಿ ವಿರುದ್ಧದ ಸಿಎಸ್​ಕೆ ಗೆದ್ದರೆ, ಪಂಜಾಬ್ ವಿರುದ್ಧ ಸೋತಿತ್ತು. ಆದರೆ ಈ ಮೂರು ಪಂದ್ಯಗಳೂ ರೋಚಕವಾಗಿ ಅಂತ್ಯಗೊಂಡಿದ್ದವು. 

ಮೂರು ಮ್ಯಾಚ್​​ನಲ್ಲೂ ಕೊನೆಯವರೆಗೂ ಕ್ರೀಸಿನಲ್ಲಿದ್ದ ಮಹಿ:

ಪಂದ್ಯಗಳು ರೋಚಕವಾಗಿ ಅಂತ್ಯಗೊಂಡಿದ್ದರಿಂದ ಹೆಚ್ಚು ಮಂದಿ ವೀಕ್ಷಿಸಿಲ್ಲ. ಎಂಎಸ್ ಧೋನಿ ಅನ್ನೋ ಬ್ರ್ಯಾಂಡ್ ಮೈದಾನದಲ್ಲಿದ್ದ ಕಾರಣಕ್ಕೆ ಇಷ್ಟು ಮಂದಿ ಪಂದ್ಯ ವೀಕ್ಷಿಸಿದ್ದಾರೆ. ಹೌದು, ನಿಮಗೆ ಆಶ್ಚರ್ಯವಾದ್ರೂ ಇದು ನಿಜ. ಮುಂಬೈ ವಿರುದ್ಧ ಧೋನಿಯೇ ಮ್ಯಾಚ್ ಫಿನಿಶ್ ಮಾಡಿದ್ದು. ಇನ್ನು ಆರ್​ಸಿಬಿ 217 ರನ್ ಬೆನ್ನಟ್ಟಿ 193 ರನ್​ ಗಳಿಸಿ ಪಂದ್ಯ ಸೋತಿತು. ಇದಕ್ಕೆ ಕಾರಣ ಧೋನಿ ಮಾಸ್ಟರ್ ಮೈಂಡ್. ಇನ್ನು ಪಂಜಾಬ್ ಕಿಂಗ್ಸ್ ವಿರುದ್ಧ ಧೋನಿ ಒಂದು ಬೌಂಡ್ರಿ, ಒಂದು ಸಿಕ್ಸ್ ಬಾರಿಸಿ ಸಿಡಿಯುವ ಮುನ್ಸೂಚನೆ ನೀಡಿದ್ದರು. ಆದ್ರೆ 12 ರನ್ ಗಳಿಸಿ ಔಟಾಗೋ ಮೂಲಕ ಪಂಜಾಬ್ 11 ರನ್​ನಿಂದ ರೋಚಕವಾಗಿ ಗೆದ್ದಿತು. ಧೋನಿ ಕ್ರೀಸಿನಲ್ಲಿದ್ದರೆ ಪಂದ್ಯ ಗೆಲ್ಲಿಸುತ್ತಾರೆ ಅನ್ನೋ ಭರವಸೆಯಿಂದ ಹೆಚ್ಚು ಮಂದಿ ಪಂದ್ಯ ವೀಕ್ಷಿಸಿದ್ದಾರೆ. ಇದೇ ಧೋನಿ ತಾಕತ್ತು.

IPL 2022: ರಾಜಸ್ಥಾನ ರಾಯಲ್ಸ್ ಎದುರು ಹರ್ಷಲ್‌ ಪಟೇಲ್ ಈ ರೀತಿ ಮಾಡಿದ್ದು ಸರಿನಾ..?

ನಿವೃತ್ತಿಯಾದ್ರೂ ಧೋನಿ ಬ್ರ್ಯಾಂಡ್ ಕಮ್ಮಿಯಾಗಿಲ್ಲ:

ಧೋನಿ ವಯಸ್ಸು 40. ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿಯಾಗಿದೆ. ಡೊಮೆಸ್ಟಿಕ್ ಕ್ರಿಕೆಟ್ ಸಹ ಆಡ್ತಿಲ್ಲ. ಆಡ್ತಿರೋದು ಐಪಿಎಲ್ ಮಾತ್ರ. ಆದ್ರೂ ಧೋನಿ ಖದರ್ ಕಮ್ಮಿಯಾಗಿಲ್ಲ. ಬ್ರ್ಯಾಂಡ್ ವ್ಯಾಲ್ಯೂ ಇಳಿದಿಲ್ಲ. ಸಿಎಸ್​ಕೆ 8ರಲ್ಲಿ 6 ಪಂದ್ಯ ಸೋತಿದೆ. ಪ್ಲೇ ಆಫ್ ಕನಸು ಸಹ ನುಚ್ಚುನೂರಾಗಿದೆ. ಆದ್ರೆ ಸಿಎಸ್​ಕೆ ಆಡೋ ಪಂದ್ಯ ನೋಡೋರ ಸಂಖ್ಯೆ ಮಾತ್ರ ಕಮ್ಮಿಯಾಗಿಲ್ಲ. ಯಾಕಂದ್ರೆ ಎಂಎಸ್ ಧೋನಿ ಅನ್ನೋ ಬ್ರ್ಯಾಂಡ್. ಅದಕ್ಕೆ ನಾವ್ ಮೊದಲೇ ಹೇಳಿದ್ದು. ಆ ಹೆಸರಿನಲ್ಲಿ ಒಂದು ಗತ್ತಿದೆ. ಅದು ಎಲ್ಲರಿಗೂ ಗೊತ್ತಿರುತ್ತೆ ಅಂತ.

click me!