IPL 2022 ಟಾಸ್ ಗೆದ್ದ ಗುಜರಾತ್ ಟೈಟಾನ್ಸ್, ಬ್ಯಾಟಿಂಗ್ ಆಯ್ಕೆ

Published : May 03, 2022, 07:05 PM ISTUpdated : May 03, 2022, 07:17 PM IST
IPL 2022 ಟಾಸ್ ಗೆದ್ದ ಗುಜರಾತ್ ಟೈಟಾನ್ಸ್, ಬ್ಯಾಟಿಂಗ್ ಆಯ್ಕೆ

ಸಾರಾಂಶ

ಟಾಸ್ ಗೆದ್ದು ಚೇಸಿಂಗ್ ಆಯ್ಕೆ ಮಾಡಿಕೊಳ್ಳುವ ಟ್ರೆಂಡ್ ನಡುವೆ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ಪಂಜಾಬ್ ಕಿಂಗ್ಸ್ ವಿರುದ್ಧ ಟಾಸ್ ಗೆಲುವು ಸಾಧಿಸಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.  

ಮುಂಬೈ (ಮೇ.3): ಐಪಿಎಲ್ ಗೆ ಪಾದಾರ್ಪಣೆ ಮಾಡಿದ ವರ್ಷದಲ್ಲಿಯೇ ಅದ್ಭುತ ಪ್ರದರ್ಶನ ನೀಡುವ ಮೂಲಕ ಪ್ಲೇ ಆಫ್ ಹಾದಿಯಲ್ಲಿ ಗುಜರಾತ್ ಟೈಟಾನ್ಸ್ (Gujarat Titans) ತಂಡ ಇಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (Punjab Kings) ತಂಡವನ್ನು ಎದುರಿಸಲಿದೆ. ಟಾಸ್ ಗೆದ್ದಿರುವ ಗುಜರಾತ್ ಟೈಟಾನ್ಸ್  ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ. ಪಂದ್ಯಕ್ಕಾಗಿ ಪಂಜಾಬ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಟೀಮ್ ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.  ಹಾರ್ದಿಕ್‌ ಪಾಂಡ್ಯ (Hardik Pandya) ನಾಯಕತ್ವದ ಗುಜರಾತ್‌ ಆಡಿರುವ 9 ಪಂದ್ಯಗಳಲ್ಲಿ 8ರಲ್ಲಿ ಗೆಲುವು ಸಾಧಿಸಿದ್ದು, ಇನ್ನೊಂದು ಗೆಲುವು ಸಾಧಿಸಿದರೆ ಈ ಆವೃತ್ತಿಯಲ್ಲಿ ಪ್ಲೇ-ಆಫ್‌ಗೆ ಲಗ್ಗೆ ಇಟ್ಟ ಮೊದಲ ತಂಡ ಎನಿಸಿಕೊಳ್ಳಲಿದೆ. ಯಾವುದೇ ಆಟಗಾರನನ್ನು ಹೆಚ್ಚಾಗಿ ಅವಲಂಬಿಸದೇ ಸಂಘಟಿತ ಪ್ರದರ್ಶನ ನೀಡುತ್ತಿರುವುದು ತಂಡದ ಯಶಸ್ಸಿನ ರಹಸ್ಯ. ಗುಜರಾತ್ ಟೈಟಾನ್ಸ್ ತಂಡದ ಪರ ಪ್ರತಿಯೊಬ್ಬರು ಒಂದಿಲ್ಲೊಂದು ಪಂದ್ಯದ ಗೆಲುವಿನಲ್ಲಿ ಮಹತ್ವದ ಪಾತ್ರ ನಿಭಾಯಿಸಿದ್ದಾರೆ

ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ ಇಲೆವೆನ್: ವೃದ್ಧಿಮಾನ್ ಸಹಾ(ವಿ.ಕೀ), ಶುಭಮನ್ ಗಿಲ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ(ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಅಲ್ಜಾರಿ ಜೋಸೆಫ್, ಪ್ರದೀಪ್ ಸಾಂಗ್ವಾನ್, ಲಾಕಿ ಫರ್ಗುಸನ್, ಮೊಹಮ್ಮದ್ ಶಮಿ

ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್: ಮಯಾಂಕ್ ಅಗರ್ವಾಲ್ (ನಾಯಕ), ಶಿಖರ್ ಧವನ್, ಜಾನಿ ಬೈರ್‌ಸ್ಟೋ, ಭಾನುಕಾ ರಾಜಪಕ್ಸೆ, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿ.ಕೀ), ರಿಷಿ ಧವನ್, ಕಗಿಸೊ ರಬಾಡ, ರಾಹುಲ್ ಚಾಹರ್, ಅರ್ಶ್‌ದೀಪ್ ಸಿಂಗ್, ಸಂದೀಪ್ ಶರ್ಮಾ

ನಾವೂ ಕೂಡ ಮೊದಲು ಬೌಲಿಂಗ್ ಮಾಡಬೇಕು ಎಂದು ಬಯಸಿದ್ದೆವು. ಆಡಿದ 10 ಪಂದ್ಯಗಳಲ್ಲಿ 8 ರಲ್ಲಿ ಟಾಸ್ ಸೋತಿದ್ದೇನೆ. ನಾವು ಉತ್ತಮವಾಗಿ, ಆಕ್ರಮಣಕಾರಿಯಾಗಿ ಕ್ರಿಕೆಟ್ ಆಡುತ್ತಿದ್ದೇವೆ. ಆದರೆ, ಪ್ರಮುಖ ಸಂದರ್ಭದಲ್ಲಿ ಎಡವಿ ಸೋಲು ಕಾಣುತ್ತಿದ್ದೇವೆ. ಪಂದ್ಯದ ಪ್ರಮುಖ ಸಂದರ್ಭದಲ್ಲಿ ಎಚ್ಚರಿಕೆಯ ಆಟವಾಡುವಲ್ಲಿ ಯಶ ಕಂಡರೆ, ಗೆಲುವು ನಮ್ಮದಾಗುವುದು ಖಚಿತ. ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಮಾಯಾಂಕ್ ಅಗರ್ವಾಲ್, ಪಂಜಾಬ್ ಕಿಂಗ್ಸ್ ತಂಡದ ನಾಯಕ

ಇಬ್ಬನಿ ಹೆಚ್ಚಿನ ಸಮಸ್ಯ ಉಂಟು ಮಾಡುವುದಿಲ್ಲ ಎನ್ನುವ ಕಾರಣಕ್ಕಾಗಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದೇವೆ. ನಮ್ಮ ಆಟದಲ್ಲಿ ನಾವು ಅದ್ಭುತವಾಗಿ ನಿರ್ವಹಣೆ ತೋರಿದ್ದೇವೆ. ಹಾಗಂತ ಸುಮ್ಮನೆ ಕೂರುವಂತಿಲ್ಲ. ಹಲವು ಬಾರಿ ಪಂದ್ಯದ ಕೊನೆಯ ಹಂತದಲ್ಲಿ ಗೆಲುವು ಕಂಡಿದ್ದೇವೆ. ಬೌಲಿಂಗ್ ಮಾಡಲು ನಾನು ಸಮರ್ಥನಾಗಿದ್ದೇನೆ. ಆದರೆ, ತಂಡ ಉತ್ತಮ ನಿರ್ವಹಣೆ ತೋರುತ್ತಿರುವ ಕಾರಣ, ನಾನು ಬೌಲಿಂಗ್ ಗೆ ಆತುರ ಪಡುತ್ತಿಲ್ಲ.ಕೆಲವೊಂದು ಪಂದ್ಯದಲ್ಲಿ ಬೌಲಿಂಗ್ ಮಾಡದೇ ಇರುವುದನ್ನು ಅನಂದಿಸುತ್ತೇನೆ.
ಹಾರ್ದಿಕ್ ಪಾಂಡ್ಯ, ಗುಜರಾತ್ ಟೈಟಾನ್ಸ್ ನಾಯಕ

GT vs PBKS: ಗುಜರಾತ್ ಎದುರು ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾದ ಪಂಜಾಬ್ ಕಿಂಗ್ಸ್

ನಿಮಗಿದು ಗೊತ್ತೇ?
* ಗುಜರಾತ್ ಟೈಟಾನ್ಸ್ ತಂಡ ಹಾಲಿ ಐಪಿಎಲ್ ನಲ್ಲಿ ಕೊನೇ ಓವರ್ ನಲ್ಲಿ ಐದು ಬಾರಿ ಚೇಸ್ ಮಾಡಿ ಗೆಲುವು ಕಂಡಿದೆ. ಅದರಲ್ಲೂ ಎರಡು ಗೆಲುವುಗಳು ಕೊನೆ ಎಸೆತದಲ್ಲಿ ಬಂದಿದೆ. 2018ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ 2019ರಲ್ಲಿ ರಾಜಸ್ಥಾನ ರಾಯಲ್ಸ್ ತಂಡಗಳು ಮಾತ್ರವೇ ಒಂದೇ ಆವೃತ್ತಿಯಲ್ಲಿ ಕೊನೇ ಓವರ್ ನಲ್ಲಿಯೇ ಗರಿಷ್ಠ ಪಂದ್ಯಗಳನ್ನು ಗೆದ್ದ ಸಾಧನೆ ಮಾಡಿದ್ದವು.

IPL 2022: ಟೀಂ​ ಇಂಡಿಯಾಗೆ ಸಿಕ್ಕೇ ಬಿಟ್ಟ ಸ್ಲಾಗ್​ ಓವರ್ ಸ್ಪೆಶಲಿಸ್ಟ್​..!

* ವೃದ್ಧಿಮಾನ್ ಸಾಹ ಈವರೆಗೂ ಐಪಿಎಲ್ ನ ಪವರ್ ಅವಧಿಯ ಆಟದಲ್ಲಿ 142.18ರ ಸರಾಸರಿಯಲ್ಲಿ 91 ರನ್ ಬಾರಿಸಿದ್ದಾರೆ. ಒಮ್ಮೆಯೂ ಅವರು ವಿಕೆಟ್ ಒಪ್ಪಿಸಿಲ್ಲ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸೈಲೆಂಟ್ ಆದ ಸೌತ್ ಆಫ್ರಿಕಾ , 74 ರನ್‌ಗೆ ಆಲೌಟ್ ಮಾಡಿ 101 ರನ್ ಗೆಲುವು ದಾಖಲಿಸಿದ ಭಾರತ
100 ಸಿಕ್ಸರ್ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ, ಸೌತ್ ಆಫ್ರಿಕಾಗೆ 176 ರನ್ ಟಾರ್ಗೆಟ್