* ಪಂಜಾಬ್ ಕಿಂಗ್ಸ್ ಪರ ಸ್ಲಾಗ್ ಓವರ್‌ನಲ್ಲಿ ಮಿಂಚುತ್ತಿದ್ದಾರೆ ಆರ್ಶದೀಪ್ ಸಿಂಗ್
* 16 ರಿಂದ 20 ಓವರ್ಗಳಲ್ಲಿ ಮಾರಕ ದಾಳೀ ನಡೆಸುತ್ತಿದ್ದಾರೆ ಯುವ ವೇಗಿ
* 23 ವರ್ಷದ ಅರ್ಶದೀಪ್ ಭಾರತದ ಭರವಸೆಯ ಸ್ಲಾಗ್ ಓವರ್ ಸ್ಪೆಷಲಿಸ್ಟ್ ಅಗಬಲ್ಲರು
ಮುಂಬೈ(ಮೇ.03): ಐಪಿಎಲ್ (IPL 2022), ವಿಶ್ವದ ಜನಪ್ರಿಯ ಟಿ20 ಲೀಗ್ ಅನ್ನಿಸಿಕೊಂಡ್ರೂ ಈ ಟೂರ್ನಿಗೆ ಬಗ್ಗೆ ಒಂದು ಅಪವಾದವಿದೆ. ಇದು ಬ್ಯಾಟರ್ಗಳ ಕ್ರೀಡೆ. ಇಲ್ಲಿ ಬೌಲರ್ಸ್ ಮ್ಯಾಜಿಕ್ ಕಮ್ಮಿ. ಬ್ಯಾಟರ್ಗಳ ರೋರಿಂಗ್ ಹೆಚ್ಚು. ಬೌಲರ್ಗಳ ಮಾರಣ ಹೋಮ ನಡೆಯುತ್ತೆ. ಅದ್ರಲ್ಲೂ ಕೊನೆಯ ಐದು ಓವರ್ ಅಂದ್ರೆ ಸ್ಲಾಗ್ ಓವರ್ಗಳಲ್ಲಿ ಬೌಲರ್ಸ್ಗೆ ದೊಡ್ಡ ಚಾಲೆಂಜ್ ಇರುತ್ತೆ. 16 ರಿಂದ 20 ಓವರ್ಗಳಲ್ಲಿ ಬೇಕಾಬಿಟ್ಟಿ ದಂಡಿಸಿಕೊಂಡು ಸರಾಗವಾಗಿ ರನ್ ಬಿಟ್ಟು ಕೊಡ್ತಾರೆ.
ಇಂತಹ ಬ್ಯಾಟರ್ಗಳ ನೆಚ್ಚಿನ ಕ್ರೀಡೆಯಲ್ಲಿ ಬೌಲರ್ ಓಬ್ಬ ಸಕ್ಸಸ್ ಸಾಧಿಸೋದು ನಿಜಕ್ಕೂ ಸುಲಭವಲ್ಲ. ಆತ ನಿಜಕ್ಕೂ ಎಂಟೆದೆಯ ಬೌಲರ್ ಆಗಿರಬೇಕು. ಅದ್ರಲ್ಲೂ ಸ್ಲಾಗ್ ಓವರ್ಗಳಲ್ಲಿ ಯಶಸ್ವಿಯಾಗೋದಂತೂ ಇನ್ನೂ ಕಠಿಣ. ಅಂತರದಲ್ಲಿ ಪಂಜಾಬ್ ಕಿಂಗ್ಸ್ (Punjab Kings) ತಂಡದ ಓರ್ವ ಬೌಲರ್ ಸ್ಲಾಗ್ನಲ್ಲಿ ಅದ್ಭುತ ದಾಳಿ ಮೂಲಕ ಗಮನ ಸೆಳೆಯುತ್ತಿದ್ದಾರೆ. ಈ ವರೆಗೆ ನಡೆದ ಎಲ್ಲಾ ಪಂದ್ಯಗಳಲ್ಲಿ ಕರಾರುವಕ್ ಬೌಲಿಂಗ್ ಮಾಡಿ ಬ್ಯಾಟರ್ಗಳ ಆರ್ಭಟಕ್ಕೆ ಫುಲ್ ಸ್ಟಾಪ್ ಹಾಕಿದ್ದಾರೆ. ನಿಜಕ್ಕೂ ಬೌಲರ್ ಅಂದ್ರೆ ಹೀಗಿರ್ಬೇಕು. ಸ್ಲಾಗ್ ಓವರ್ಗಳಲ್ಲಿ ಈತನಂತೆ ರನ್ಗೆ ಕಡಿವಾಣ ಹಾಕಬೇಕು ಎಂದು ಫ್ಯಾನ್ಸ್ ಮಾತನಾಡಿಕೊಳ್ತಿದ್ದಾರೆ. ಅಂದಹಾಗೇ ಆ ಸ್ಲಾಗ್ ಓವರ್ ಸ್ಪೆಶಲಿಸ್ಟ್ ಮತ್ಯಾರು ಅಲ್ಲ, ಆತನೇ ಪಂಜಾಬ್ ತಂಡದ ಅರ್ಶದೀಪ್ ಸಿಂಗ್ (Arshdeep Singh).
ಅರ್ಶದೀಪ್ ಸಿಂಗ್ ಸ್ಲಾಗ್ ಓವರ್ ಪಂಟರ್:
ಯೆಸ್, ಪಂಜಾಬ್ ಕಿಂಗ್ಸ್ ತಂಡದ ಯುವ ಬೌಲರ್ ಅರ್ಶದೀಪ್ ಸಿಂಗ್ ಸ್ಲಾಗ್ ಸ್ಪೆಶಲಿಸ್ಟ್ ಆಗಿ ಹೊರಹೊಮ್ಮಿದ್ದಾರೆ. ಪ್ರಸಕ್ತ ಸೀಸನ್ನಲ್ಲಿ ಯಾವಗೆಲ್ಲಾ ಡೆತ್ ಓವರ್ಸ್ನಲ್ಲಿ ದಾಳಿಗಿಳಿದಿದ್ದಾರೋ ಆವಾಗಲೆಲ್ಲಾ ಪರಿಣಾಮಕಾರಿ ಸ್ಪೆಲ್ ಮಾಡಿದ್ದಾರೆ. ಘಟನಾನುಘಟಿ ಬ್ಯಾಟರ್ಗಳು ಈತನ ಬೌಲಿಂಗ್ನಲ್ಲಿ ರನ್ ಗಳಿಸಲು ಫೇಲಾಗಿದ್ದಾರೆ. ಬರೀ ರನ್ ಕಡಿಣವಾಣ ಮಾತ್ರವಲ್ಲದೇ, ವಿಕೆಟ್ ಬೇಟೆಯಲ್ಲೂ ಸೈ ಅನ್ನಿಸಿಕೊಂಡಿದ್ದಾರೆ. ಯಸ್, ಇದು ನಿಮಗೆ ಅಚ್ಚರಿ ಅನ್ನಿಸಿದ್ರೂ ಸತ್ಯ. 16 ರಿಂದ 20ನೇ ಓವರ್‌ನಲ್ಲಿ ಖ್ಯಾತ ಬೌಲರ್ಸ್ಗಳೇ ಮನಬಂದಂತೆ ಚಚ್ಚಿಸಿಕೊಂಡಿದ್ದಾರೆ. ಆದ್ರೆ 23 ವರ್ಷದ ಅರ್ಶದೀಪ್ ಮಾತ್ರ ಅವರಿಗೆ ತದ್ವಿರುದ್ಧ. ಅಂತರಾಷ್ಟ್ರೀಯ ಪಂದ್ಯವಾಡಿದ ಅನುಭವವಿಲ್ಲದಿದ್ರೂ ಸ್ಟಾರ್ ಬೌಲರ್ಗಳನ್ನೇ ಮೀರಿಸಿದ್ದಾರೆ. ಈವರೆಗೆ ಆಡಿದ 9 ಪಂದ್ಯಗಳನ್ನ ಆಡಿದ್ದು, ಅದರಲ್ಲಿ ಸ್ಲಾಗ್ನಲ್ಲಿ 10 ಓವರ್ ಬೌಲಿಂಗ್ ಮಾಡಿದ್ದು ಬರೀ 66 ರನ್ ಅಷ್ಟೇ ಬಿಟ್ಟುಕೊಟ್ಟಿದ್ದಾರೆ. ಇದು ಪ್ರಸಕ್ತ ಐಪಿಎಲ್ನ ಸ್ಲಾಗ್ ಓವರ್ಗಳಲ್ಲಿ ಅರ್ಶದೀಪ್ ಬಿಟ್ಟುಕೊಟ್ಟ ಅತೀ ಕಮ್ಮಿ ರನ್ ಆಗಿದೆ. ಇನ್ನು ರನ್ಗೆ ಕಡಿವಾಣ ಮಾತ್ರವಲ್ಲ, 2 ವಿಕೆಟ್ ಕೂಡ ಪಡೆದು ಸೈ ಅನ್ನಿಸಿಕೊಂಡಿದ್ದಾರೆ.
ಅರ್ಶದೀಪ್ಗೆ ಟೀಂ ಇಂಡಿಯಾದಲ್ಲಿ ಚಾನ್ಸ್ ಸಿಗುತ್ತಾ..?:
ಐಪಿಎಲ್ನಲ್ಲಿ ಅರ್ಶದೀಪ್ ಸಿಂಗ್ ರ ಇಂಪ್ರೆಸ್ಸಿವ್ ದಾಳಿ ನೋಡಿದೋರಿಗೆಲ್ಲಾ ಈ ಪ್ರಶ್ನೆ ಖಂಡಿತ ಕಾಡಿರುತ್ತೆ. ಇಂತಹ ಟ್ಯಾಲೆಂಟ್ ಬೌಲರ್ಗೆ ಟೀಂ ಇಂಡಿಯಾ ಸ್ಥಾನ ನೀಡಬೇಕು. ಆಗ ಭಾರತ ತಂಡದ ಬೌಲಿಂಗ್ ವಿಭಾಗ ಮತ್ತಷ್ಟ್ರ ಸಾಂಗ್ ಆಗಲಿದೆ ಅನ್ನೋ ಟಾಕ್ಸ್ ಕೇಳಿ ಬರ್ತಿದೆ. ಕ್ರಿಕೆಟ್ ಎಕ್ಸ್ಫರ್ಟ್ಸ್ ಸೇರಿದಂತೆ ಅಭಿಮಾನಿಗಳು ಲೆಫ್ಟಿ ಬೌಲರ್ ಪರ ಬ್ಯಾಟ್ ಬೀಸ್ತಿದ್ದಾರೆ.
IPL 2022: ಈತನಿಗೆ ಕುಟುಂಬಕ್ಕಿಂತ ಕ್ರಿಕೆಟ್ ಆಟವೇ ದೊಡ್ಡದಾಯ್ತು..!
ಸದ್ಯ ಮೆನ್ ಇನ್ ಬ್ಲೂ ಪಡೆಯಲ್ಲಿ ಬುಮ್ರಾ ಬಿಟ್ರೆ ಮತ್ತೊಮ್ಮ ಸ್ಲಾಗ್ ಓವರ್ ಸ್ಪೆಶಲಿಸ್ಟ್ ಇಲ್ಲ. ಇದು ತಂಡದ ಹಿನ್ನೆಡೆಗೆ ಕಾರಣವಾಗ್ತಿದೆ. ಈ ವರ್ಷಾಂತ್ಯದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಈ ವೇಳೆಗಾದ್ರು ಅರ್ಶದೀಪ್ಗೆ ತಂಡದಲ್ಲಿ ಚಾನ್ಸ್ ಕೊಟ್ರೆ ರೋಹಿತ್ ಪಡೆಯ ನಸೀಬು ಬದಲಾಗಲಿದೆ. ಅದೃಷ್ಟ ಬದಲಿಸೋ ತಾಕತ್ತು, ಕೆಪಾಸಿಟಿ ಕೂಡ ಪಂಜಾಬಿ ಬೌಲರ್ಗಿದೆ. ಸೆಲೆಕ್ಟರ್ಸ್ ಮುಂಬರೋ ದಕ್ಷಿಣ ಆಫ್ರಿಕಾ ಟಿ20 ಸರಣಿಯಲ್ಲಾದ್ರು ಸ್ಲಾಗ್ ಓವರ್ ಸ್ಪೆಷಲಿಸ್ಟ್ಗೆ ಮಣೆ ಹಾಕ್ತಾರಾ ಅನ್ನೋದನ್ನ ಕಾದು ನೋಡಬೇಕು.