* ಮುಂಬೈ ಇಂಡಿಯನ್ಸ್ ಪರ ಮಿಂಚಿನ ಪ್ರದರ್ಶನ ತೋರಿದ ಕುಮಾರ್ ಕಾರ್ತಿಕೇಯ
* 9 ವರ್ಷದಿಂದ ಆಡಿ ಬೆಳೆದ ಮನೆಗೆ ಈವರೆಗೆ ಕಾಲಿಟ್ಟಿಲ್ಲ ಕುಮಾರ್ ಕಾರ್ತಿಕೇಯ
* ಐಪಿಎಲ್ನಲ್ಲಿ ಆಡಿದ ಬಳಿಕ ಮನೆಗೆ ಮರಳಿ ಹೋಗಲು ನಿರ್ಧರಿಸಿದ್ದಾರೆ
ಬೆಂಗಳೂರು(ಮೇ.03): ಯಾರಿಗೂ ಗೊತ್ತಿರದ, ಕಿವಿಗೂ ಬೀಳದ ಹೊಸ ಹೆಸರುಗಳು ಐಪಿಎಲ್ನಲ್ಲಿ ಕೇಳಿ ಬರ್ತಿವೆ. ಮುಂಬೈ ತಂಡದ ತಿಲಕ್ ವರ್ಮಾ, ಲಖನೌದ ಆಯುಶ್ ಬದೋನಿ ಹೆಚ್ಚು ಸುದ್ದಿಯಲ್ಲಿದ್ದಾರೆ. ಈಗ ಈ ಲಿಸ್ಟ್ಗೆ ಮತ್ತೊಂದು ಹೆಸರು ಸೇರ್ಪಡೆಯಾಗ್ತಿದೆ. ಆ ಹೆಸರೇ ಕುಮಾರ್ ಕಾರ್ತಿಕೇಯ (Kumar Kartikeya).
24 ವರ್ಷದ ಕಾರ್ತಿಕೇಯ, ಬೇಸಿಕಲಿ ಲೆಫ್ಟ್ ಆರ್ಮ್ ಬೌಲರ್. ಮಧ್ಯಪ್ರದೇಶದ ಪರ ಡೊಮೆಸ್ಟಿಕ್ನಲ್ಲಿ ಛಾಪು ಮೂಡಿಸಿದ್ದಾನೆ. ಇಷ್ಟಾದ್ರು ಈ ಎಡಗೈ ವೇಗಿಯ ಹೆಸರು ಯಾರೊಬ್ಬರಿಗೂ ಗೊತ್ತಿರ್ಲಿಲ್ಲ. ಯಾವಾಗ ಮುಂಬೈ ಇಂಡಿಯನ್ಸ್ ತಂಡವನ್ನ ಸೇರಿದ್ರೋ, ಆಗ ಕಾರ್ತಿಕೇಯ ಹೆಸರು ಸ್ವಲ್ಪ ಮಟ್ಟಿಗೆ ನೋಟಿಸ್ ಆಗಿತ್ತು. ರಾಜಸ್ಥಾನ ರಾಯಲ್ಸ್ (Rajasthan Royals) ವಿರುದ್ಧ ಡೆಬ್ಯು ಪಂದ್ಯದಲ್ಲಿ 1 ವಿಕೆಟ್ ಪಡೆಯುತ್ತಿದ್ದಂತೆ ಕಾರ್ತಿಕೇಯ ಹೆಸರು ಮತ್ತಷ್ಟು ಪ್ರಜ್ವಲಿಸಿತು. ಈಗ ತಾನೇ ಐಪಿಎಲ್ ಲೋಕಕ್ಕೆ ಅಂಬೆಗಾಲಿಟ್ಟಿರೋ ಮಧ್ಯಪ್ರದೇಶ ವೇಗಿಯ ಕ್ರಿಕೆಟ್ ಲೈಫ್ ಒಂದು ಸ್ಪೂರ್ತಿ. ಆ ಇಂಟ್ರೆಸ್ಟಿಂಗ್ ಕಥೆಯನ್ನ ನಾವೀಗ ಹೇಳ್ತೀವಿ ಕೇಳಿ.
ಏನನ್ನಾದ್ರು ಸಾಧಿಸುವ ಛಲದಿಂದ ಕುಟುಂಬ ತೊರೆದ ಯುವವೇಗಿ:
ಯಸ್, ನಮ್ಮ ಕಣ್ಣ ಮುಂದೆ ಅನೇಕ ಕ್ರಿಕೆಟರ್ಸ್ ಬಡತನ ಮೆಟ್ಟಿ ನಿಂತು ದೊಡ್ಡ ಸಾಧನೆ ಮಾಡಿದ್ದನ್ನ ನೀವೆಲ್ಲರೂ ನೋಡಿದ್ದೀರಾ. ಅಂತೆಯೇ ಈ ಕಾರ್ತಿಕೇಯ ಕ್ರಿಕೆಟ್ನಲ್ಲಿ ಏನನ್ನಾದರೂ ಸಾಧಿಸಲೇಬೇಕು ಅನ್ನುವ ಛಲದಿಂದ 2014ರಲ್ಲೇ ಮನೆ ತೊರೆದಿದ್ದಾರೆ. 9 ವರ್ಷದಿಂದ ಆಡಿ ಬೆಳೆದ ಮನೆಗೆ ಈವರೆಗೆ ಕಾಲಿಟ್ಟಿಲ್ಲ. ಕುಟುಂಬದವರು ಮನೆಗೆ ಬಾ ಎಂದ್ರೂ ಆ ಕಡೆಗೆ ಒಮ್ಮೆಯೂ ತಿರುಗಿ ನೋಡಿಲ್ಲ. ಈ ಸತ್ಯವನ್ನು ವೇಗಿ ಕುಮಾರ್ ಕಾರ್ತಿಕೇಯ ಈಗ ಬಿಚ್ಚಿಟ್ಟಿದ್ದಾರೆ.
IPL 2022 ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ ಕ್ಯಾಪ್ಟನ್ಸಿ ತೊರೆದಿದ್ದು ಸ್ವನಿರ್ಧಾರ ಅಲ್ವಾ..?
'ನಾನು ಕಳೆದ ಒಂಭತ್ತು ವರ್ಷದಿಂದ ಮನೆಗೆ ಹೋಗಿಲ್ಲ. ಜೀವನದಲ್ಲಿ ಏನನ್ನಾದರೂ ಸಾಧಿಸಿದ ಬಳಿಕವೇ ಹೋಗಲು ನಿರ್ಧರಿಸಿದ್ದೇ. ತಂದೆ-ತಾಯಿ ಆಗಾಗ ಪೋನ್ ಮಾಡಿ ಕರೆಯುತ್ತಿದ್ದರು. ಆದರೂ ಹೋಗಲಿಲ್ಲ. ಕೊನೆಗೆ ಐಪಿಎಲ್ನಲ್ಲಿ ಆಡಿದ ಬಳಿಕ ಮನೆಗೆ ಮರಳಿ ಹೋಗಲು ನಿರ್ಧರಿಸಿದ್ದೇನೆ.’ಎಂದು ಮುಂಬೈ ಇಂಡಿಯನ್ಸ್ (Mumbai Indians) ತಂಡದ ವೇಗಿ ಕುಮಾರ್ ಕಾರ್ತಿಕೇಯ ಹೇಳಿದ್ದಾರೆ.
ಮುಂಬೈ ತಂಡದ ಕಾಯಂ ಆಟಗಾರನಾಗ್ತಾರಾ ಕಾರ್ತಿಕೇಯ:
ಕೊನೆಗೂ 9 ವರ್ಷದ ಬಳಿಕ ಹುಟ್ಟಿದ ಊರಿಗೆ ತೆರಳು ಕಾರ್ತಿಕೇಯ ಸಜ್ಜಾಗಿದ್ದು ನಿಜಕ್ಕೂ ಖುಷಿಯ ವಿಚಾರ.ಈಗ ತಾನೇ ಕಲರ್ಫುಲ್ ಟೂರ್ನಿಗೆ ಧುಮುಕಿರೋ ಈ ಯಂಗ್ ಬೌಲರ್ ಸಿಕ್ಕ ಅವಕಾಶಗಳನ್ನ ಸಮರ್ಥವಾಗಿ ಬಳಸಿಕೊಳ್ಳಬೇಕಿದೆ. ಇನ್ನುಳಿದ ಪಂದ್ಯಗಳಲ್ಲಿ ಅದ್ಭುತ ಆಟವಾಡಿದ್ರೆ, ಮುಂಬೈ ತಂಡದ ಕೀ ಬೌಲರ್ ಆಗಿ ರೂಪಗೊಳ್ಳಬಹುದು. ಅಂತಹದೊಂದು ಪ್ರದರ್ಶನವನ್ನ 20 ಲಕ್ಷದ ಬೌಲರ್ ನೀಡ್ತಾರಾ ? ಇಲ್ಲ ಹೀಗೆ ಬಂದು ಹಾಗೇ ಮರೆಯಾಗ್ತಾರಾ ಅನ್ನೋದನ್ನ ಕಾದು ನೋಡಬೇಕು.