GT vs RR ಯಾರಾಗ್ತಾರೆ ಈ ಸಲದ IPL ಚಾಂಪಿಯನ್​..?

By Suvarna NewsFirst Published May 29, 2022, 5:59 PM IST
Highlights

* ಐಪಿಎಲ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ

* ಪ್ರಶಸ್ತಿಗಾಗಿಂದು ಬಲಿಷ್ಠ ರಾಜಸ್ಥಾನ ರಾಯಲ್ಸ್-ಗುಜರಾತ್ ಟೈಟಾನ್ಸ್ ಮುಖಾಮುಖಿ

* ಐಪಿಎಲ್‌ನಲ್ಲಿ ಇತಿಹಾಸ ಬರೆಯಲು ಸಜ್ಜಾದ ಉಭಯ ತಂಡಗಳು

ಅಹಮದಾಬಾದ್(ಮೇ.29)​: ಕಳೆದ ಎರಡು ತಿಂಗಳಿಂದ ಬೌಂಡರಿ-ಸಿಕ್ಸರ್​ಗಳ ರಸದೌತಣ ನೀಡಿದ್ದ ಕಲರ್ ಫುಲ್ ಟೂರ್ನಿ IPL​​ಗೆ ಇಂದು ಅದ್ದೂರಿ ತೆರೆ ಬೀಳ್ತಿದೆ. ಸಂಜೆ 6.30ರಿಂದ 7.20ರವರೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಮ್ಯೂಸಿಕ್ ಮಾಂತ್ರಿಕ ಎ ಆರ್​​ ರೆಹಮಾನ್​ ತಂಡದಿಂದ 50 ನಿಮಿಷಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, 7.30ಕ್ಕೆ ಟಾಸ್​. ರಾತ್ರಿ 8ರಿಂದ ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ (Rajasthan Royals vs Gujarat Titans) ನಡುವೆ ಫೈನಲ್ ಫೈಟ್ ಆರಂಭವಾಗಲಿದೆ. ಬರೋಬ್ಬರಿ 1.25 ಲಕ್ಷ ಪ್ರೇಕ್ಷಕರ ಸಮ್ಮುಖದಲ್ಲಿ ಫೈನಲ್ ನಡೆಯಲಿದೆ.

2008ರ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದ ತಂಡ ರಾಜಸ್ಥಾನ ರಾಯಲ್ಸ್‌ ಬರೋಬ್ಬರಿ 14 ವರ್ಷಗಳ ಬಳಿಕ ಫಸ್ಟ್ ಟೈಮ್​ ಫೈನಲ್ ಪ್ರವೇಶಿಸಿದೆ. 14 ವರ್ಷಗಳಿಂದ ಕಪ್ ಬರ ಎದುರಿಸುತ್ತಿರುವ ರಾಯಲ್ಸ್, ಮತ್ತೊಮ್ಮೆ ಚಾಂಪಿಯನ್ ಆಗಲು ಎದುರು ನೋಡ್ತಿದೆ. ಆದರೆ ಇದೇ ಮೊದಲ ಬಾರಿಗೆ IPL ಆಡುತ್ತಿರುವ ಗುಜರಾತ್ ಟೈಟಾನ್ಸ್ ಸಹ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ತಾವಾಡಿದ ಮೊದಲ ಸೀಸನ್​ನಲ್ಲಿ ಟ್ರೋಫಿ ಗೆದ್ದ ಸಾಧನೆಯನ್ನ ರಾಜಸ್ಥಾನ ಮಾಡಿತ್ತು. ಆ ದಾಖಲೆ ಸರಿಗಟ್ಟಲು ಗುಜರಾತ್ ರೆಡಿಯಾಗಿದೆ. ಹಾಗಾಗಿ ಈ ಸಲ ಯಾರೇ ಕಪ್ ಗೆದ್ದರೂ ಇತಿಹಾಸ ನಿರ್ಮಾಣವಾಗಲಿದೆ.

Latest Videos

ಫಾರ್ ದ ಫಸ್ಟ್ ಟೈಮ್ ಬರೋಬ್ಬರಿ ಒಂದು ಲಕ್ಷ ಪ್ರೇಕ್ಷಕರ ಎದುರು IPL ಫೈನಲ್ ಮ್ಯಾಚ್ ನಡೆಯುತ್ತಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂ (Narendra Modi) ಗುಜರಾತ್​ಗೆ ತವರು ಸ್ಟೇಡಿಯಂ. ಆದರೆ ಟೈಟಾನ್ಸ್​ ಇಲ್ಲಿ ಒಂದೂ ಪಂದ್ಯ ಆಡಿಲ್ಲ, ಪ್ರಾಕ್ಟೀಸ್ ಸಹ ಮಾಡಿಲ್ಲ. ಹಾಗಾಗಿ ಈ ಸ್ಟೇಡಿಯಂನಲ್ಲಿ ಆಡಿದ ಅನುಭವ ಗುಜರಾತ್​ಗೆ ಇಲ್ಲ. ಆದ್ರೆ ಭಾರೀ ಪ್ರೇಕ್ಷಕರ ಬೆಂಬಲ ಟೈಟಾನ್ಸ್​​​ಗೆ ಸಿಗಲಿದೆ. ಇನ್ನು ಇಂದು ಯಾರೇ ಫೈನಲ್ ಮ್ಯಾಚ್ ಗೆದ್ದರೂ ಭಾರತೀಯ ನಾಯಕನೊಬ್ಬ IPL ಕಪ್ ಗೆದ್ದ ಸಾಧನೆ ಮಾಡಲಿದ್ದಾನೆ.

ಸಂಜುಗೆ ಫಸ್ಟ್ ಫೈನಲ್​, ಪಾಂಡ್ಯಗೆ 5ನೇ ಫೈನಲ್​:

ಸಂಜು ಸ್ಯಾಮ್ಸನ್ (Sanju Samson) ಫಸ್ಟ್ ಟೈಮ್ IPL ಫೈನಲ್ ಆಡ್ತಿದ್ದಾರೆ. ಈ ಹಿಂದೆ ಕೆಕೆಆರ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಪರ ಆಡಿದ್ದರೂ ಫೈನಲ್ ಆಡಿಲ್ಲ. ಕ್ಯಾಪ್ಟನ್ ಆಗಿ ರಾಜಸ್ಥಾನ ರಾಯಲ್ಸ್ ತಂಡವನ್ನು ಫೈನಲ್​ಗೇರಿಸಿದ್ದಾರೆ. ಇನ್ನು ಟೈಟಾನ್ಸ್​ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) 5ನೇ ಸಲ IPL ಫೈನಲ್ ಆಡ್ತಿದ್ದಾರೆ. ಕಳೆದ 4 ಸಲವೂ ಮುಂಬೈ ಇಂಡಿಯನ್ಸ್ ಪರ ಆಟಗಾರನಾಗಿ ಫೈನಲ್ ಆಡಿದ್ದ ಹಾರ್ದಿಕ್, ಆ ನಾಲ್ಕೂ ಬಾರಿಯೂ ಟ್ರೋಫಿ ಎತ್ತಿ ಹಿಡಿದಿದ್ದರು. ಹಾಗಾಗಿ ಫೈನಲ್ ಆಡಿದ ಅನುಭವ ಸಂಜುಗಿಂತ ಹಾರ್ದಿಕ್‌ ಪಾಂಡ್ಯಗೆ ಹೆಚ್ಚಿದೆ.

ತವರಿನ ಪ್ರೇಕ್ಷಕರ ಬೆಂಬಲ, ಅದ್ಭುತ ಫಾರ್ಮ್​:

ಲೀಗ್​ನಲ್ಲಿ 14ರಲ್ಲಿ 10 ಗೆದ್ದು ಪಾಯಿಂಟ್ ಟೇಬಲ್​ನಲ್ಲಿ ಟಾಪ್​ನಲ್ಲಿದ್ದ ಗುಜರಾತ್ ಟೈಟಾನ್ಸ್, ಕ್ವಾಲಿಫೈಯರ್​​-1ರಲ್ಲಿ ಇದೇ ರಾಜಸ್ಥಾನ ಸೋಲಿಸಿ, ಫೈನಲ್​ಗೆ ಬಂದಿದೆ. ಟೀಮ್​​​ನಲ್ಲಿ ಸ್ಟಾರ್ ಪ್ಲೇಯರ್ಸ್ ಇಲ್ಲದಿದ್ದರೂ ಇರೋರೇ ಸ್ಟಾರ್​ ಪ್ಲೇಯರ್ಸ್ ರೀತಿ ಆಡ್ತಿದ್ದಾರೆ. ಇದೇ ಗುಜರಾತ್​ ಪ್ಲಸ್ ಪಾಯಿಂಟ್​. ಲೋ ಆರ್ಡರ್​ ಬ್ಯಾಟಿಂಗ್​ ಸ್ಟ್ರಾಂಗ್ ಆಗಿರೋದ್ರಿಂದ ಈಸಿಯಾಗಿ ಸೋಲಿಸಲು ಸಾಧ್ಯವಿಲ್ಲ. ಲೀಗ್​ನಲ್ಲಿ ರಾಯಲ್ಸ್ ತಂಡವನ್ನ ಎರಡು ಸಲ ಸೋಲಿಸಿದ ಆತ್ಮವಿಶ್ವಾಸ ಬೇರೆ. ಅಲ್ಲಿಗೆ ಟೈಟಾನ್ಸ್ ಫೇವರಿಟ್ ಅಂತ ಹೇಳೋದು ಬಿಟ್ಟು ಬೇರೆ ದಾರಿ ಇಲ್ಲ.

IPL 2022 ಫೈನಲ್​ನಲ್ಲಿ ಆರ್​ಸಿಬಿ ಫ್ಯಾನ್ಸ್ ಸಪೋರ್ಟ್​ ಯಾರಿಗೆ ಗೊತ್ತಾ..?

ಲೀಗ್ ಸೋಲಿನ ಸೇಡನ್ನು ಫೈನಲ್​ನಲ್ಲಿ ತೀರಿಸಿಕೊಳ್ಳುತ್ತಾ ರಾಯಲ್ಸ್‌:

ಟೈಟಾನ್ಸ್ ವಿರುದ್ಧ ಲೀಗ್​ನಲ್ಲಿ ಎರಡು ಮ್ಯಾಚ್ ಸೋತಿದ್ದ ರಾಯಲ್ಸ್, ಆ ಸೇಡನ್ನ ಫೈನಲ್​ನಲ್ಲಿ ತೀರಿಸಿಕೊಳ್ಳಲು ಎದುರು ನೋಡ್ತಿದೆ. ಆರು ಮಂದಿ ಬ್ಯಾಟರ್ಸ್, ಐವರು ಪಕ್ಕಾ ಬೌಲರ್ಸ್​. ಇದೇ ರಾಜಸ್ಥಾನ ಸ್ಟ್ರೆಂಥ್. ಜೋಸ್ ಬಟ್ಲರ್​ ಅದ್ಭುತ ಫಾರ್ಮ್​, ಬೌಲರ್​ಗಳ ಕರಾರುವಕ್ ಬೌಲಿಂಗ್​ ರಾಯಲ್ಸ್ ತಂಡವನ್ನ ಬಲಿಷ್ಠಗೊಳಿಸಿದೆ. ಗರಿಷ್ಠ ರನ್ ಸರದಾರ ಬಟ್ಲರ್​, ಪರ್ಪಲ್ ಕ್ಯಾಪ್ ಮತ್ತು ಗರಿಷ್ಠ ವಿಕೆಟ್ ಟೇಕರ್ ಚಹಲ್, ಆರೆಂಜ್ ಕ್ಯಾಪ್ ಗೆಲ್ಲಲಿದ್ದು, ಅವರೇ ಇಂದು ಟ್ರಂಪ್ ಕಾರ್ಡ್​ ಪ್ಲೇಯರ್ಸ್. 

ಟ್ರೋಫಿ ಗೆದ್ದು ವಾರ್ನ್​ಗೆ ಅರ್ಪಿಸುತ್ತಾ ರಾಜಸ್ಥಾನ:

2008ರಲ್ಲಿ ಆಸ್ಟ್ರೇಲಿಯಾದ ಶೇನ್ ವಾರ್ನ್​, ರಾಜಸ್ಥಾನಕ್ಕೆ ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲಿಸಿ ಕೊಟ್ಟಿದ್ದರು. ಈ ಐಪಿಎಲ್​ಗೂ ಮುನ್ನ ವಾರ್ನ್​ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಇಂದು ಟ್ರೋಫಿ ಗೆದ್ದು ವಾರ್ನ್​ಗೆ ಅರ್ಪಿಸಲು ರಾಯಲ್ಸ್ ಎದುರು ನೋಡುತ್ತಿದೆ. ಇಂದು ಗೆದ್ದ ತಂಡ ಟ್ರೋಫಿ ಜೊತೆ 20 ಕೋಟಿ ಪಡೆದ್ರೆ, ರನ್ನರ್ ಅಪ್ 13 ಕೋಟಿ ಪಡೆಯಲಿದೆ. ಇಂದು ಮಳೆ ಬಂದರೆ ಮೀಸಲು ದಿನವಾದ ನಾಳೆ ಫೈನಲ್ ಫೈಟ್ ನಡೆಯಲಿದೆ.

click me!