IPL 2022 ಫೈನಲ್​ನಲ್ಲಿ ಆರ್​ಸಿಬಿ ಫ್ಯಾನ್ಸ್ ಸಪೋರ್ಟ್​ ಯಾರಿಗೆ ಗೊತ್ತಾ..?

Published : May 29, 2022, 05:04 PM IST
IPL 2022 ಫೈನಲ್​ನಲ್ಲಿ ಆರ್​ಸಿಬಿ ಫ್ಯಾನ್ಸ್ ಸಪೋರ್ಟ್​ ಯಾರಿಗೆ ಗೊತ್ತಾ..?

ಸಾರಾಂಶ

* ಐಪಿಎಲ್‌ ಫೈನಲ್‌ನಲ್ಲಿ ಪ್ರಶಸ್ತಿಗಾಗಿಂದು ರಾಜಸ್ಥಾನ ರಾಯಲ್ಸ್‌-ಗುಜರಾತ್ ಟೈಟಾನ್ಸ್ ಮುಖಾಮುಖಿ * ಈಗಾಗಲೇ ಐಪಿಎಲ್‌ ಕಪ್‌ ರೇಸ್‌ನಿಂದ ಹೊರಬಿದ್ದಿರುವ ಆರ್‌ಸಿಬಿ ಫ್ಯಾನ್ಸ್‌ ಸಪೋರ್ಟ್‌ ಯಾರಿಗೆ ಗೊತ್ತಾ? * ನಾಲ್ವರು ಆಟಗಾರರಿಗಾಗಿ ಈ ತಂಡವನ್ನು ಬೆಂಬಲಿಸಲಿದ್ದಾರೆ ಆರ್‌ಸಿಬಿ ಫ್ಯಾನ್ಸ್  

ಅಹಮದಾಬಾದ್(ಮೇ.29)​: ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್ ಟೈಟನ್ಸ್ (Rajasthan Royals vs Gujarat Titans)​ ಫೈನಲ್ ಫೈಟ್​ಗೆ ಕೆಲವೇ ಗಂಟೆ ಮಾತ್ರ ಬಾಕಿ. ಸೂಪರ್ ಸಂಡೇ ಯಾರ ಪಾಲಿಗೆ ಅನ್ನೋ ಕುತೂಹಲ ಕ್ರಿಕೆಟ್ ಅಭಿಮಾನಿಗಳಿಗೆ ಇದ್ದೇ ಇದೆ. ಜೊತೆಗೆ ಫೈನಲ್​ನಲ್ಲಿ ಫ್ಯಾನ್ಸ್ ಸಪೋರ್ಟ್​ ಯಾರಿಗೆ ಅನ್ನೋ ಪ್ರಶ್ನೆಯೂ ಎದ್ದಿದೆ. ಬೇರೆ ಟೀಮ್ಸ್ ಫ್ಯಾನ್ಸ್ ಯಾರಿಗೆ ಸಪೋರ್ಟ್​ ಮಾಡ್ತಾರೋ ಬಿಡ್ತಾರೋ ಗೊತ್ತಿಲ್ಲ ಕಂಡ್ರಿ. ಆದರೆ ನಮ್ಮ RCB ರಾಯಲ್ ಫ್ಯಾನ್ಸ್ ಸಪೋರ್ಟ್​ ಮಾತ್ರ ರಾಜಸ್ಥಾನಕ್ಕೆ ರಾಯಲ್ಸ್​ಗೆ. ಅವರೇ ಏಕೆ, ಕರ್ನಾಟಕದ ಕ್ರಿಕೆಟ್ ಫ್ಯಾನ್ಸ್ ಬೆಂಬಲವೂ ಪಿಂಕ್ ಆರ್ಮಿ ಪಡೆಗೆ ಸಿಗಲಿದೆ.

ಕ್ವಾಲಿಫೈಯರ್​ನಲ್ಲಿ ಸೋಲಿಸಿದ್ದವರನ್ನ ಬೆಂಬಲಿಸುತ್ತಿರುವುದೇಕೆ?:

ಈ ಪ್ರಶ್ನೆ ನಿಮ್ಮನ್ನ ಕಾಡದೆ ಇರದು. ಟೈಟನ್ಸ್ ಬಿಟ್ಟು ರಾಜಸ್ಥಾನ ರಾಯಲ್ಸ್​​ ತಂಡಕ್ಕೇಕೆ ಆರ್​ಸಿಬಿ (RCB) ಫ್ಯಾನ್ಸ್ ಸಪೋರ್ಟ್​ ಮಾಡ್ತಾರೆ. ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳು ಸಹ ರಾಜಸ್ಥಾನಕ್ಕೇಕೆ ಬೆಂಬಲ ನೀಡ್ತಾರೆ. ಕ್ವಾಲಿಫೈಯರ್​​-2ನಲ್ಲಿ RCBಯನ್ನ ರಾಯಲ್ಸ್ ಸೋಲಿಸಿದ್ದರಿಂದ ರೆಡ್ ಆರ್ಮಿಗೆ ಫೈನಲ್ ಟಿಕೆಟ್ ಮಿಸ್ ಆಗಿದ್ದು. ಆದ್ರೂ ಪಿಂಕ್ ಆರ್ಮಿಗೆ ಬೆಂಬಲ ನೀಡ್ತಿರೋದ್ಯಾಕೆ ಅನ್ನೋ ಪ್ರಶ್ನೆ ಕಾಡದೆ ಇರದು. ಅದಕ್ಕೂ ಬಲವಾದ ಕಾರಣ  ಇದೆ ಕಂಡ್ರಿ.

ಆ 7 ಆಟಗಾರರಿಗಾಗಿ ರಾಯಲ್ಸ್​​​ಗೆ ಜೈ ಅಂತಿದ್ದಾರೆ:

ಇದೊಂದೇ ರೀಸನ್​ನಿಂದ ಫೈನಲ್​ನಲ್ಲಿ ರಾಜಸ್ಥಾನ ರಾಯಲ್ಸ್​​ಗೆ RCB ಫ್ಯಾನ್ಸ್​ ಸಪೋರ್ಟ್​ ಮಾಡಲಿದ್ದಾರೆ. ಹೌದು, ರಾಯಲ್ಸ್ ಟೀಮ್​ನಲ್ಲಿ ನಾಲ್ವರು ಕನ್ನಡಿಗರಿದ್ದಾರೆ. ದೇವದತ್ ಪಡಿಕ್ಕಲ್ (Davdutt Padikkal)​, ಪ್ರಸಿದ್ಧ್ ಕೃಷ್ಣ, ಕರುಣ್ ನಾಯರ್ ಮತ್ತು ಕೆಸಿ ಕಾರ್ಯಪ್ಪ ಇದ್ದು, ಅದರಲ್ಲಿ ಪಡಿಕ್ಕಲ್ ಹಾಗೂ ಕೃಷ್ಣ ಟ್ರಂಪ್ ಕಾರ್ಡ್​ ಪ್ಲೇಯರ್ಸ್. ಕರುಣ್​-ಕಾರ್ಯಪ್ಪ ಒಂದೆರಡು ಪಂದ್ಯ ಆಡಿ ಬೆಂಚ್ ಕಾಯ್ತಿದ್ದಾರೆ. ಈ ನಾಲ್ವರಿಗಾಗಿ ಕರ್ನಾಟಕ ಕ್ರಿಕೆಟ್ ಫ್ಯಾನ್ಸ್​ ಇಂದು ರಾಯಲ್ಸ್​ ತಂಡಕ್ಕೆ ಸಪೋರ್ಟ್​ ಮಾಡಲಿದ್ದಾರೆ.

IPL Final ಕನ್ನಡದಲ್ಲಿ ವೇಗಿ ಪ್ರಸಿದ್ಧ್ ಕೃಷ್ಣ ಮಾತು, ಫೈನಲ್ ಫೈಟ್ ಗೇಮ್ ಪ್ಲಾನ್ ಬಹಿರಂಗ!

ಇನ್ನು ರಾಜಸ್ಥಾನ ತಂಡದಲ್ಲಿ ಆರ್​ಸಿಬಿ ಮಾಜಿ ಪ್ಲೇಯರ್ಸ್ ಸಹ ಇದ್ದಾರೆ. ಯುಜವೇಂದ್ರ ಚಹಲ್, ಶಿಮ್ರೋನ್ ಹೆಟ್ಮೆರ್, ನವ್​​ದೀಪ್ ಸೈನಿ, ಪಡಿಕ್ಕಲ್, ಕರುಣ್ ಈ ಹಿಂದೆ RCB ಪರ ಆಡಿದ್ದರು. RCBಯಲ್ಲಿ ಆಡುವಾಗಲಾದ್ರೂ ಐಪಿಎಲ್ ಟ್ರೋಫಿ ಗೆಲ್ಲಲಿಲ್ಲ. ರಾಜಸ್ಥಾನದಲ್ಲಾದ್ರೂ ಕಪ್ ಗೆಲ್ಲಿ ಅಂತ ರಾಯಲ್ಸ್​ಗೆ ಸಪೋರ್ಟ್​ ಮಾಡ್ತಿದ್ದಾರೆ RCBಯ ರಾಯಲ್ ಫ್ಯಾನ್ಸ್.

ಇನ್ನು ಜೋಸ್ ಬಟ್ಲರ್ (Jos Buttler) ಬ್ಯಾಟಿಂಗ್​ಗೆ ಎಲ್ಲರೂ ಫಿದಾ ಆಗಿದ್ದಾರೆ. ಸಂಜು ಸ್ಯಾಮ್ಸನ್ ಕೇರಳ ಪ್ಲೇಯರ್​. ನಮ್ಮ ಸೌತ್ ಇಂಡಿಯನ್ ಕ್ಯಾಪ್ಟನ್ ಒಬ್ಬ ಐಪಿಎಲ್ ಟ್ರೋಫಿ ಹಿಡಿಯಲಿ ಅನ್ನೋ ಆಸೆಯೂ ಇದೆ. ಈ ಎಲ್ಲಾ ರೀಸನ್​ನಿಂದ ರೆಡ್ ಆರ್ಮಿ ಫ್ಯಾನ್ಸ್ ಬೆಂಬಲ ರಾಜಸ್ಥಾನ ರಾಯಲ್ಸ್​​ಗೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

100 ಸಿಕ್ಸರ್ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ, ಸೌತ್ ಆಫ್ರಿಕಾಗೆ 176 ರನ್ ಟಾರ್ಗೆಟ್
ಕೆಲವೇ ದಿನದಲ್ಲಿ ಸ್ಮೃತಿ ಮಂಧನಾ ಮದುವೆ ಆಘಾತದಿಂದ ಹೊರಬಂದಿದ್ದೇಗೆ? 3 ವರ್ಷ ಹಿಂದೆ ಹೇಳಿದ್ದ ಟಿಪ್ಸ್